ತರಕಾರಿ ಮಾರುವವಳು ಮತ್ತು ನಾನು

4.666665

ತರಕಾರಿ ಮಾರುವವಳು ಮತ್ತು ನಾನು


ಅಮ್ಮ  ಕೈಯ ತೋರಿ ಹೇಳಿದಳು
'ಅಲ್ಲಿ ಹೋಗಿ ತಾ'
ಎಡವುತ್ತ ನಡೆದು ಹೋದೆ
"ಏನು ಬೇಕು ಪುಟ್ಟಾ?"
ಕೇಳಿದಳು ಅವಳು
ತರಕಾರಿ ಮಾರುವವಳು
"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ
"ಅಯ್ಯೊ ನನ್ನ ಬಂಗಾರ"
ಉಲಿದಳು ಆಕೆ ಜೊತೆಗೆ ಒಂದು ಸೇಬು
'ತಿನ್ನು ಪುಟ್ಟು' ಎಂದು


        (2)


"ಏನು ಬೇಕೊ ಹುಡುಗ"
ಅವಳ ಮುಖದಲ್ಲಿ ಎಂತದೊ ನಗು
ನನ್ನ ದ್ವನಿಯಲ್ಲಿ ಎಂತದೊ ಬಿಂಕ
"ಕೊತ್ತಂಬರಿ ಸೊಪ್ಪು ಕೊಡಿ .."
ಕೈಗೆ ಕೊಡುತ್ತ ಕೇಳಿದಳು
"ಏನು ಓದುತ್ತಿರುವೆ ?"
"ನಾನು ಸ್ಕೂಲು ಓದುತ್ತಿರುವೆ"
ಪೆದ್ದು ಉತ್ತರಕ್ಕೆ ಗಹಗಹಿಸಿ ನಕ್ಕಳು
ಅವಳ ಕೈ ನೋಡಿದೆ
ಸೇಬು ಏನು ಕೊಡಲಿಲ್ಲ.         (3)

"ಏನು ಬೇಕು ನಿಮಗೆ"
ಕಣ್ಣಿನಲ್ಲಿಯೆ ಕೇಳಿದಳು
ಕೆನ್ನೆಯಲ್ಲಿ ಎಂತದೊ ಓಕುಳಿ ಬಣ್ಣ
"ಕೊತ್ತಂಬರಿ ಸೊಪ್ಪು ಕೊಡಿ"
ಆಗಿನ್ನು ಒಡೆದ ನನ್ನ ಗಂಡು ದ್ವನಿ
ಕೊಡುವಾಗ ಕೈಬೆರಳು ತಗುಲಿತೇನೊ
ಎಂತದೊ ಪುಳಕ ನನ್ನಲ್ಲಿ
 ಎಂತದೊ ನಡುಕ
ಅವಳ ಕೆಂಪು ತುಟಿಯಲ್ಲಿ                (4)

'ಸ್ವಲ್ಪ ಅಂಗಡಿಗೆ ಹೋಗಿ ಬರಲಾರಿರೇನು"
ಮನದನ್ನೆಯ ಕೋರಿಕೆ
ತರಕಾರಿ ಮಾರುವವಳ ಎತ್ತಲೊ ನೋಟ
"ಇದೇನು ಸೊಪ್ಪು ಹೀಗಿದೆ
ಬಿಸಲಿಗೆ ಎಲ್ಲ ಬಾಡಿದೆ"
ನನ್ನ ಕಿರಿಕಿರಿ
"ಅದು ಈಗ ಹಾಗೆ"
ಅವಳ ಅಲಕ್ಷ ದ್ವನಿ.               (5)

ಮಗಳ ಕೈಹಿಡಿದು ಅಂಗಡಿಗೆ ಹೋದೆ
"ಹೇಗಮ್ಮ ಕೊತ್ತಂಬರಿ ಸೊಪ್ಪು
ಕೊಡು ಎರಡು ರುಪಾಯಿಗೆ" 
ಅವಳ ಬಳಿ ಕೇಳಿದೆ , ನಿರ್ಲಕ್ಷ ನೋಟ
"ಚಿಲ್ಲರೆ   ಕೊಡಿ ಅಂಕಲ್  ಇಲ್ಲವೆಂದರೆ
ಕೊತ್ತಂಬರಿ ಸೊಪ್ಪು ಇಲ್ಲ"
ತರಕಾರಿಯವಳ ಅಹಂಕಾರ
ನನ್ನೊಳಗೆ ನನ್ನತನದ ಅಹಾಕಾರ                     (6)

ಮೊಮ್ಮಗುವಿನ ಜೊತೆ ಅಂಗಡಿಯ ದಾರಿ
"ಕೊತ್ತಂಬರಿ ಸೊಪ್ಪು ಕೊಡಮ್ಮ"
ಎನ್ನುವ ಮುಂಚೆಯೆ ಕಾಡಿದ ಕೆಮ್ಮು
ನುಡಿದರೆ ನಡುಗುವ ದ್ವನಿ, ಜೊತೆಗೆ ದಮ್ಮು
"ಬೆಳಗಿನ ಚಳಿಯಲ್ಲಿ ಮನೆಯಲ್ಲಿ
ಬೆಚ್ಚಗಿರಬಾರದೆ ತಾತ"
ತರಕಾರಿಯವಳ ದ್ವನಿಯಲ್ಲಿ ಎಂತದೊ ಕುಹಕ.
ಉತ್ತರಿಸದೆ ಹೊರಟೆ ನಾನು ಮನೆಗೆ
"ಕೈ ಬಿಡು ತಾತ ಈ ದಾರಿ ನನಗೆ ಹೊಸತೆ"
ಮೊಮ್ಮಗುವಿನ ನಗುವಿನ ಜಳಕ.


ಬದಲಾಗುತ್ತ ಸಾಗಿದೆ 
ಈ ಜಗದ ರೀತಿಯೆ ಹೀಗೆ
ತರಕಾರಿ ಮಾರುವವಳ ಮಾತಿನ ಹಾಗೆ .
===========================

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿನ್ನೆ ಸಂಕ್ರಾಂತಿಯ ದಿವಸ ಈ‍ ಟಿ.ವಿ. ಕನ್ನಡದಲ್ಲಿ ಕಂಬಾರರ ಸನ್ಮಾನ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಅದರಲ್ಲಿ ಕೆ. ಎಸ್. ನರಸಿಂಹಸ್ವಾಮಿಯವರು ಮಗು ಹೊದ್ದುಕೊಂಡ ದುಪ್ಪಟಿಯನ್ನು ನಿದ್ದೆಗಣ್ಣಿನಲ್ಲಿ ಒದ್ದು ಒದ್ದು ಹಾಕುತ್ತಿದ್ದರೆ ಅದರಮ್ಮ ಅದನ್ನು ಸರಿಪಡಿಸುತ್ತಲೇ ಇರುತ್ತಾಳೆ. ಇದನ್ನು ಕವಿ ನಾವು ಸಾಮಾನ್ಯರು ಜಗದ ನಿಯಮಗಳನ್ನು ಒದೆಯುತ್ತಿರುತ್ತೇವೆ; ಜಗದ ತಾಯಿ ಅದನ್ನು ಸರಿಪಡಿಸುತ್ತಿರುತ್ತಾಳೆ; ಎನ್ನುವುದರೊಂದಿಗೆ ಹೋಲಿಸಿದ್ದಾರೆ. ನಿಮ್ಮ ಈ ಕವನ ಒಂದು ಸಾಮಾನ್ಯ ವಿಷಯವನ್ನು ಹೀಗೆ ಅಸಾಮಾನ್ಯವಾಗಿಸಿದೆ. ನಿಮ್ಮ ವಿಭಿನ್ನ ದ್ರುಷ್ಠಿಕೋನಕ್ಕೆ ಅಭಿನಂದನೆಗಳು ಪಾರ್ಥ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಹ್ ಪಾರ್ಥ ..!!! ಸುಪರ್..!!!! ತರಕಾರಿ ಮಾರುವವಳನ್ನು ಮಾನದ೦ಡವಾಗಿಟ್ಟುಕೊ೦ಡು ಜೀವನವೆನ್ನುವುದನ್ನು ಎಷ್ಟು ಚೆನ್ನಾಗಿ ನಿರೂಪಿಸಿದ್ದೀರಿ,ಅದ್ಭುತ.ಅಭಿನ೦ದನೆಗಳು..ನನಗೆ ಶಬ್ದ ಚಮತ್ಕಾರಕ್ಕಿ೦ತ ಅರ್ಥಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುವ ಈ ರೀತಿಯ ಕವನಗಳು ತು೦ಬಾ ಇಷ್ಟ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುರಾಜರೆ ತಮ್ಮ ಪ್ರತಿಕ್ರಿಯೆಗೆ ವಂದನೆಗಳು ನನಗು ಅದೇನೊ ಶಬ್ದಗಳ ಬಳುಕಿನ ರೀತಿಯ ಪದ್ಯಗಳನ್ನು ಬರೆಯಲು ಬರುವುದೆ ಇಲ್ಲ ನೇರ ಸರಳ ಪದಗಳ ಕವನಗಳೆ ಮೆಚ್ಚುಗೆ ಅನಿಸುತ್ತೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.ಶ್ರೀಧ‌ರ್ ಬಂಡ್ರಿಯವರೆ ನಿಜ ಪ್ರತಿ ಅನುಭವ ಸಹ ನಮ್ಮ ದ್ಱುಷ್ಟಿಯನ್ನು ಅವಲಂಬಿಸಿದೆ. ಒಂದೆ ಘಟನೆ ಸುತ್ತಲಿದ್ದವರ ಮೇಲೆ ವಿಭಿನ್ನ ಪರಿಣಾಮ ಬೀರಬಲ್ಲದು ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಕವನ...!! ತರಕಾರಿ ಮಾರುವವಳ ಮಾತಲ್ಲಿ ಬದಲಾಗುವ ಜೀವನ ಹ0ತಗಳನ್ನು ಸೊಗಸಾಗಿ ನಿರೂಪಿಸಿದ್ದೀರಿ... ಇದೇ ಪ್ರಸ0ಗವನ್ನು ಸ್ವಲ್ಪ ಬದಲಾಯಿಸಿ ಅ0ದರೆ, ಕೊಳ್ಳುವವನ ಮಾತಲ್ಲಿಯೂ ಹೇಳಬಹುದು... ಅದೂ ಸ್ವಾರಸ್ಯಕರವಾಗಿರುತ್ತೆ... :)) ಒಳ್ಳೆಯ ಕವಿತೆಗಾಗಿ ಅಭಿನ0ದನೆಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಪ್ರಸನ್ನರೆ ಕವಿತೆ ಬರೆಯಲು ನನಗೆ ಕಷ್ಟ ಬರಿ ಪ್ರಯತ್ನವಷ್ಟೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನದ "ಮಜಲು" ಗಳನ್ನು ತಿಳಿಸುವ ನಿಮ್ಮ ಕವನ ಸೊಗಸಾಗಿ ಮೂಡಿ ಬಂದಿದೆ .....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಈ ೬ ಕಾಲಘಟ್ಟದ ನಿಮ್ಮ ವಿಶ್ಲೇಷಣೆಯ ಕವನ ಸರಳವೂ ಸುಂದರವೂ-ಅರ್ಥಪೂರ್ಣ-ಅನಂನ್ಯ-ವಿಭಿನ್ನವಾಗಿದ್ದು. ನಂಗೆ ಹಿಡಿಸಿತು... ಕಾಲನುಕ್ರಮವಾಗಿ ತರಕಾರಿಯವಳ ಮಾತು -ಹಾವ-ಭಾವ ಬದಲಾಗಿದ್ದನ್ನ ಬಹಳ ಸೊಗಸಾಗಿ ಹೇಳಿದೀರ.. ಕೈ ಸೋಕಿದಾಗ ಎಂಥದ್ದೋ ಪುಳಕ ನನ್ನಲಿ , ಕಂಪನ-ನಡುಕ ಅವಳ ತುಟಿಯಲಿ !! ಹೌದು ನಾ ಗಮನಿಸಿದ ಹಾಗೆ ಈ ಕವನದಲ್ಲಿ ನಿಮಗೆ(!) ಮಾತ್ರ ವಯಸ್ಸಯ್ತೆ? ತರಕಾರಿ ಮಾರವ ಹೆಂಗಸಿಗೆ 'ಎಜೂ' ಆಗಿದ್ದಂಗಿಲ್ಲ.... :)) ಶುಭ ದಿನ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಅದೇಕೊ ನಾನು ನಿಮ್ಮಿಂದ ಇದೆ ಪ್ರಶ್ನೆಯನ್ನೆ ನಿರೀಕ್ಷಿಸಿದ್ದೆ ಅಲ್ಲಿ ತರಕಾರಿ ಮಾರುವ ಹೆಣ್ಣು ಒಬ್ಬಳೆ ಅಂತ ನಾನು ಹೇಳಿಲ್ಲ ಅಲ್ಲದೆ ತರಕಾರಿಯವಳನ್ನು ಹೊರಜಗತ್ತಿಗೆ ಸಂಕೇತವಾಗಿ ಬಳಸಿದ್ದೇನೆ ಇಲ್ಲಿ ಜಗತ್ತು ಬದಲಾಗುತ್ತಿದೆ ಅಂತ ಹೇಳುತ್ತಿದ್ದರು ನಿಜವಾಗಿ ಬದಲಾಗುತ್ತಿರುವುದು ನಾನು (ಅಂದರೆ ಕವನದ ನಾನು) ನಾವು ಎಂದು ನಮ್ಮಲ್ಲಾಗುವ ಬದಲಾವಣೆಗಳನ್ನು ಗಮನಿಸುವುದೆ ಇಲ್ಲ ಹೊರಜಗತ್ತನ್ನು ಮಾತ್ರ ನೋಡುತ್ತಿರುತ್ತೇವೆ ಎನ್ನುವದನ್ನು ಹೇಳಲು ಕವನದಲ್ಲಿ ಪ್ರಯತ್ನಿಸಿದ್ದೇನೆ. ಈ ಉತ್ತರ ಮೊದಲೆ ಸಿದ್ದಪಡಿಸಿಕೊಂಡು ನಿಮ್ಮ ಪ್ರಶ್ನೆಗಾಗಿ ಕಾಯುತ್ತಿದ್ದೆ ‍:))) ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇಕೊ ನಾನು ನಿಮ್ಮಿಂದ ಇದೆ ಪ್ರಶ್ನೆಯನ್ನೆ ನಿರೀಕ್ಷಿಸಿದ್ದೆ >>>>? ಇಲ್ಲಿ ಜಗತ್ತು ಬದಲಾಗುತ್ತಿದೆ ಅಂತ ಹೇಳುತ್ತಿದ್ದರು ನಿಜವಾಗಿ ಬದಲಾಗುತ್ತಿರುವುದು ನಾನು (ಅಂದರೆ ಕವನದ ನಾನು) :))) ನಾವು ಎಂದು ನಮ್ಮಲ್ಲಾಗುವ ಬದಲಾವಣೆಗಳನ್ನು ಗಮನಿಸುವುದೆ ಇಲ್ಲ ಹೊರಜಗತ್ತನ್ನು ಮಾತ್ರ ನೋಡುತ್ತಿರುತ್ತೇವೆ ಎನ್ನುವದನ್ನು ಹೇಳಲು ಕವನದಲ್ಲಿ ಪ್ರಯತ್ನಿಸಿದ್ದೇನೆ. +೧ ಈ ಉತ್ತರ ಮೊದಲೆ ಸಿದ್ದಪಡಿಸಿಕೊಂಡು ನಿಮ್ಮ ಪ್ರಶ್ನೆಗಾಗಿ ಕಾಯುತ್ತಿದ್ದೆ ‍:))) >>>ಹೀಗೂ ಉಂಟೆ? ಅಂದ್ರೆ -ಅಲ್ಲಿಗೆ ನಾ- ನೀವು 'ಪರಸ್ಪರರ' ಮನದಲಿ ಮುಂದೆ ಏನು 'ಘಟಿಸಲಿದೆ-ಹೊಳೆಯಲಿದೆ' ಎನ್ನುವ 'ಸುಳಿವು ' ಅರಿಯುವ 'ಶಕ್ತಿ 'ಹೊಂದಿದ್ದೇವೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಮತ್ತು ಒಂದು ವಿಷ್ಯ ಹೇಳೋದು ಹೇಳಲಿಲ್ಲ ಪೂರ್ಣ ಕವನ ನನ್ನ ಮನದಲ್ಲಿ ಮೂಡುವುದಕ್ಕೆ ಕಾರಣ ನಿಮ್ಮ ಪ್ರತಿಕ್ರಿಯೆ !!! ನೀವು ನನ್ನ ಕಪ್ಪು ಬಿಳುಪು ಹಳೆ ಚಿತ್ರಕ್ಕೆ "ನನ್ನ ಬಂಗಾರು" ಅಂತ ಬರೆದಿದ್ದಿರಿ ಆ ಒಂದು ಪದದಿಂದ ಈ ಕವನ ಹುಟ್ಟಿತು ಅಂದರೆ ನಂಬುತ್ತೀರ‌ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನನ್ನ ಬಂಗಾರು" ಅಂತ ಬರೆದಿದ್ದಿರಿ, ಆ 'ಒಂದು' ಪದದಿಂದ ಈ ಕವನ 'ಹುಟ್ಟಿತು' ಅಂದರೆ ನಂಬುತ್ತೀರ‌? >>>>>ಹೀಗೂ ಉಂಟು(ಟೆ? -ಟ?):))) ಅಬ್ಬ !! ಇದಪ್ಪ ಶಾಕೂ ಅಂದ್ರೆ: ಮೊದಲೊಂದು ಶಾಕು ಕೊಟ್ಟು(ನೀವು ಈ ತರಹ ಕೇಳಬಹುದು ಅಂತ ನಾ ಮೊದಲೇ ಉತ್ತ ರೆಡಿ ಮಾಡಿ ಇಟ್ಟಿದ್ದೆ) ಈಗ ಮತ್ತೊಂದು ಶಾಕೂ !! >>>>ಅದೇನೋ ನಿಮ್ಮ ಆ ಹಳೆಯ ಚಿಕ್ಕ ಮಗುವಿನ ಫೋಟೋ ನೋಡುತ್ತಿದ್ದಂತೆ ನನ್ನ ಒಂದು ಫೋಟೋ ನೆನಪಿಗೆ ಬಂದು(ತಂದೆ ತಾಯಿ-ಮತ್ತು ನನ್ ಅಣ್ಣ-ತಂಗಿ-ಅಕ್ಕ (ಎಲ್ರೂ ಚಿಕ್ಕವರೆ ) ಒಟ್ಟಾಗಿ ಇಳಿದದ್ದು (ಆದರೆ ಆ ಫೋಟೋ ನಮ ಪಕ್ಕದ ಮನೆ ಹುಡುಗಿ ಅರಿದು ಹಾಕಿದಳು!!) ನಿಮ್ಮ ಫೋಟೋ ನೋಡಿ ನನಗೆ ತಲೆಯಲ್ಲಿ ಆ 'ನನ್ನ ಬಂಗಾರ ' ಅನ್ನೋ ಪದ ಹೊಳೆದು ಹಂಗೆ ಬರ್ದು ಸೇರ್ಸಿದೆ... ಚಿಕ್ಕವರಿದ್ದಾಗ ಎಲವೂ ಚೆನ್ನವೇ..(ಹಾಗಾದ್ರೆ ದೊಡವರದ್ ಮೇಲೆ?) :((( ಗುರುಗಳೇ ಅದೊಮ್ಮೆ ನಾ 'ಹುಡುಗರ' ಬಗ್ಗೆ ಬರ್ದೇ ಇಲ್ಲ ಅಂದದ್ದಕ್ಕೆ ಒಂದು ಕವನ ಬರದು ಹಾಕಿದ್ದೀರಿ (ಹೊರಡುವೆವು ನಾವ್ ಕಾಲೇಜಿಗೆ) ........ ನಾ ಈಗ ಊಹಿಸುತ್ತಿರ್ವಂತೆ ನೀವು ಇನ್ನಸ್ಟು ಶಾಕು ಕೊಡಲು ರೆಡಿ ಆಗಿದೀರ ಅನ್ಸುತ್ತೆ...! ಮತ್ತು ಕುತೂಹಲವೂ ಇದೆ ಮುಂದಿನ 'ಶಾಕು' ಏನಿರಬಹುದು ಅಂತ...:)))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಭಾವ ಹಾಗೆ ಬದುಕಿನ ದರ್ಶನ. ಇಷ್ಟವಾಯಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.