ಚುರ್ಮುರಿ - ೧೭

2
೬೩) ಬೆಂಗಳೂರು ಟ್ರಾಫಿಕ್ ಪೋಲಿಸ್ ಸ್ಲೋಗನ್ 'Follow traffic rules' ಅದನ್ನ ಬೆಂಗಳೂರಿನವರು ಅರ್ಥ ಮಾಡಿಕೊಂಡಿರುವುದು 'Follow terrific rules'. ೬೪) ಸಿನೆಮಾ ಥಿಯೇಟರ್ ಬಳಿ ಅವನು ಪಾರ್ಕಿಂಗ್ ಮಾಡಲು ಜಾಗ ಹುಡುಕುತ್ತಾ ಕೊನೆಗೆ ಒಂದು ತೆಂಗಿನಮರದ ಬಳಿ ಕಾರನ್ನು ನಿಲ್ಲಿಸಿ ಅಲ್ಲಿದ್ದ ಕಾವಲುಗಾರನಿಗೆ ತೆಂಗಿನಕಾಯಿ ಬಿದ್ದರೆ ನೋಡಿ ಎಂದಾಗ ಅವನು ಆಗಲಿ ಎಂದನು!. ೬೫) ಅರೇನ್ಜಡ್ ರೇಡಿಯೋ ಬಟನ್, ಲವ್ ಚೆಕ್ ಬಾಕ್ಸ್. ೬೬) ಅವನು ಜೆರಾಕ್ಸ್ ಅಂಗಡಿಗೆ ಹೋಗಿ ೭೫ ಪುಟಗಳನ್ನು ಜೆರಾಕ್ಸ್ ಮಾಡಲು ಹೇಳಿದನು, ಅಂಗಡಿಯವನು ೧೦೦ ಪುಟದ ಒಳಗೆ ಮಾಡಿದರೆ ೧ ರೂ ೧೦೦ರ ಮೇಲೆ ಮಾಡಿಸಿದರೆ ೭೫ ಪೈಸೆ ಅಂದಾಗ ಅವನು ಹಾಗಿದ್ದರೆ ಮೊದಲ ೨೫ ಕಾಪಿಗಳನ್ನು ಮತ್ತೊಮ್ಮೆ ಜೆರಾಕ್ಸ್ ಮಾಡಿ ಎಂದನು. ೬೭) ಅವಳು ಮೊದಲ ಮಳೆಯಲ್ಲಿ ನೆನೆಯಬೇಕೆಂದು ಬೇರೆ ಬಟ್ಟೆ ಹಾಕಿಕೊಂಡು ಹೊರಗೆ ಬರುವ ವೇಳೆಗೆ ಮೋಡಗಳೆಲ್ಲಾ ಮಾಯವಾಗಿ ರವಿಯು ಆಗಸವನ್ನು ಆಕ್ರಮಿಸಿದ್ದ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

66: ಅವನು ಬುದ್ಧಿವಂತ!! ಚುರುಮುರಿ ಗರಿಗರಿಯಾಗಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೬೩ ೬೪ ೬೭... ಗೂಡಾರ್ಥ ಹೊಂದಿದ್ದು ಅರ್ಥಾವತ್ತಾಗಿಯೂ ವಿನೋದಾತ್ಮಕಾವಾಗಿಯೂ ಇದ್ದವು.. ಬಹು ಹಿಡಿಸಿದವು... ಈ ಮಧ್ಯೆ ನೀವ್ 'ಎಲೆ ಮರಿ ಚಿಕ್ಕು' ಆಗಿದ್ದಾಂಗಿತ್ತು .....:())) ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರವಾಗಿಲ್ಲ ! ಮದುವೆ ಮುಗಿಸಿ ಬಂದರು ಚುರುಮುರಿ ಗರಿಗರಿಯಾಗಿದೆ *** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಧನ್ಯವಾದ ಪಾರ್ಥವ್ರೆ...ಬೇಸಗೆಯಲ್ವಾ ಅದ್ಕೆ ಇರ್ಬೇಕು !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಸಪ್ತಗಿರಿಯವ್ರೆ ಎಲೆ ಮರಿ ಚಿಕ್ಕು' ಆಗಿದ್ದಾಂಗಿತ್ತು :) :) ಆಗಲೇಬೇಕಿತ್ತು !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು ಅವರೆ, ಸಂಪದಕ್ಕೆ ವಾಪಸ್ ಬರ್ತಾ ಒಳ್ಳೇ ಗರಮಾ ಗರಮ್.... ಚುರುಮುರಿಯೊಂದಿಗೆ ವಾಪಸ್ ಬಂದಿದ್ದೀರ. :)) <<ಅವಳು ಮೊದಲ ಮಳೆಯಲ್ಲಿ ನೆನೆಯಬೇಕೆಂದು ಬೇರೆ ಬಟ್ಟೆ ಹಾಕಿಕೊಂಡು ಹೊರಗೆ ಬರುವ ವೇಳೆಗೆ ಮೋಡಗಳೆಲ್ಲಾ ಮಾಯವಾಗಿ ರವಿಯು ಆಗಸವನ್ನು ಆಕ್ರಮಿಸಿದ್ದ.>> ಪರವಾಗಿಲ್ಲ ಚಿಕ್ಕೂ ಈಗ ಬೆವರಿನಲ್ಲಿ ನೆನೆಯುತ್ತಾಳೆ ;)) ೬೫) ಅರೇನ್ಜಡ್ ರೇಡಿಯೋ ಬಟನ್, ಲವ್ ಚೆಕ್ ಬಾಕ್ಸ್. ‍ಇದು ಮಾತ್ರ ನಮ್ಮ ಜಮಾನದವ್ರಿಗೆ ಅರ್ಥ ಆಗಿಲ್ಲ; ಸ್ವಲ್ಪ ಬಿಡಿಸಿ ಹೇಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ರೀಧರವ್ರೆ ಪರವಾಗಿಲ್ಲ ಚಿಕ್ಕೂ ಈಗ ಬೆವರಿನಲ್ಲಿ ನೆನೆಯುತ್ತಾಳೆ :) :) :) +೧ ೬೫) ರೇಡಿಯೋ ಬಟನ್ ಸೆಲೆಕ್ಟ್ ಮಾಡಿದ್ರೆ ಬೇರೆ ಆಪ್ಶನ್ ಇರಲ್ಲ. ಅದೇ ಚೆಕ್ ಬಾಕ್ಸ್ ಆದ್ರೆ ಚೆಕ್/ಅನ್ಚೆಕ್ ಮಾಡ್ಬಹುದು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿವೆ ಮದುವೆ ಮನೆಯಲ್ಲಿ ಕಂಡ ದ್ಱುಶ್ಯ ಬರೀಬೇಕಿತ್ತು ... ಉದಾ: ಅಡುಗೆಯ‌ವನು ಒಬ್ಬರ‌ ಎಲೆಗೆ ಬ‌ಡಿಸಿದ ತೆಳ್ಳನೆ ಸಾರು ಪ‌ಕ್ಕದ‌ಲ್ಲಿ ಕುಳಿತಿದ್ದ ಮ‌ತ್ತೊಬ್ಬರಿಗೆ ತ‌ಲುಪಿ, ಅದು ಅವ‌ರಿಗೆ ಅರಿವಾಗ‌ದೆ ಕ‌ಲಿಸಿಕೊಂಡು ತಿಂದು ಸ‌ಕ‌ತ್ತಾಗಿದೆ ಅಂದ್ರು ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಭಲ್ಲೆಯವ್ರೆ <ಅಡುಗೆಯ‌ವನು ಒಬ್ಬರ‌ ಎಲೆಗೆ ಬ‌ಡಿಸಿದ ತೆಳ್ಳನೆ ಸಾರು ಪ‌ಕ್ಕದ‌ಲ್ಲಿ ಕುಳಿತಿದ್ದ ಮ‌ತ್ತೊಬ್ಬರಿಗೆ ತ‌ಲುಪಿ, ಅದು ಅವ‌ರಿಗೆ ಅರಿವಾಗ‌ದೆ ಕ‌ಲಿಸಿಕೊಂಡು ತಿಂದು ಸ‌ಕ‌ತ್ತಾಗಿದೆ ಅಂದ್ರು> ಇದು ಸಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

65 .... ಅಂದ್ರೆ ಯಾರು ಯಾರನ್ನ ಲವ್ ಮಾಡಿದ್ದು ಅಂತ ತಿಳ್ಕೊಬೇಕಾದ್ರೆ 'ಡ್ರಾಪ್ ಡೌನ್ ಲಿಸ್ಟ್' ಅಂದ ಹಾಗಾಯ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು 65 ಯಾಕೋ ಅರ್ಥ ಆಗಲಿಲ್ಲ. ಉಳಿದ೦ತೆ ಚುರ್ಮುರಿ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಜಯಂತ್ ೬೫) ರೇಡಿಯೋ ಬಟನ್ ಸೆಲೆಕ್ಟ್ ಮಾಡಿದ್ರೆ ಬೇರೆ ಆಪ್ಶನ್ ಇರಲ್ಲ. ಅದೇ ಚೆಕ್ ಬಾಕ್ಸ್ ಆದ್ರೆ ಚೆಕ್/ಅನ್ಚೆಕ್ ಮಾಡ್ಬಹುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು ಸಕತ್ತಾಗಿದೆ !!! ನಿಮ್ಮದು ರೇಡಿಯೋ ಬಟನಾ..? ಚೆಕ್ ಬೋಕ್ಸಾ ...? :P ಭಲ್ಲೆಜಿ ನಿಮ್ಮ ಪ್ರತಿಕ್ರಿಯೇನೂ ಸೂಪರ್ !! ಡ್ರಾಪ್ ಡೌನ್ ಲಿಸ್ಟ್ ನಲ್ಲಿ ಒಂದನ್ನು ಸೆಲೆಕ್ಟ್ ಮಾಡಿ ಆಗಿದೆ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಕಾಮತವ್ರೆ ನಂದು ರೇಡಿಯೋ ಬಟನ್ ನಿಮ್ದು ಡ್ರಾಪ್ ಡೌನ್ ಅನ್ಸತ್ತೆ, ಬೈ ಟೂ ಕಾಫೀ ಅಂತ ಎಷ್ಟು ಜನಕ್ಕೆ ಕುಡ್ಸಿದೀರೋ??!!!!! ಭಲ್ಲೆಯವ್ರೆ ಒಳ್ಳೊಳ್ಳೆ ಐಡಿಯಾಗಳು ಹೊಳೆಯತ್ತೆ ನಿಮ್ಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದ್ಹನ್ಯವಾದಗಳು ಚಿಕ್ಕು ಮತ್ತು ಕಾಮತ್ ಅಲ್ಲಾ ಚಿಕ್ಕು, ಲೋಟ ಹಿಡಿದಿರುವವರು ನೀವು, ಕಾಮತರಿಗೆ ಬೈ‍ ಟೂ ಬಗ್ಗೆ ಹೇಳೋದೇ? ಒಂದು ಮಾತು ನಿಜ ... ಮದುವೆ ಆದ ಮೇಲೆ ನೋ ರೇಡಿಯೋ ಬಟನ್, ನೋ ಚೆಕ್ ಬಾಕ್ಸ್ ... ಮನೆಯವರು ಹೇಳಿದ್ದು 'ಪಾಪ್ ಅಪ್' ಆಗಿ ಬರುತ್ತೆ ... ನಿನಗೆ ಒಂದೇ ಆಪ್ಶನ್ ... "ಯಸ್ ಮ್ಯಾಮ್' ಬಟನ್ ಕ್ಲಿಕ್ ಮಾಡೋದು :‍)))))) ಜಸ್ಟ್ ಕಿಡ್ಡಿಂಗು :‍)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ರವರೆ, ಸೂಪರ್..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಭಾಗ್ವತವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.