' ಚುಟುಕುಗಳು_7

4
ಅದೃಷ್ಟವೆಂಬುದು ಒಂದು ಮುಚ್ಚಿದ ಬಾಗಿಲು ಅದು ತಂತಾನೆ ತೆರೆದು ಕೊಳ್ಳುವುದಿಲ್ಲ ಹಾಗೆಯೆ ನಿಂತರೆ ಜೀವನ ಪೂರ್ತಿ ನಿಂತೇ ಇರಬೇಕು ತೆರೆಯುವುದೊ ಬಿಡುವುದೋ ಅದು ಕಾಯುವವನ ಮರ್ಜಿಗೆ ಬಿಟ್ಟದ್ದು *** ಏ ! ದುಂಬಿ ಏಕೆ ಸುಮ್ಮನೆ ಸುತ್ತುತಿರುವೆ ? ಅದು ಬರಿ ಕಾಗದದ ಹೂವು ಅದಕೆಲ್ಲಿದೆ ಬಣ್ಣ ಪರಿಮಳ ಪರಾಗ ? ನಿನ್ನದು ಬರಿ ವ್ಯರ್ಥ ಕಸರತ್ತು ***
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರೇ ಮೊದಲನೆಯದು ಸಖತ್..... . ಸಖತ್++.... ಚುಟುಕಗಳಲ್ಲಿ ನಿಮ್ಮ ಆಸಕ್ತಿ ಉಂಟಾಗಿದ್ದು ಹೇಗೆ?... ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಓದಿದೆ, ಕೆಲವು ಅಭಿಪ್ರಾಯ ಮಂಡನೆಗೆ ಚುಟುಕುಗಳೇ ಯೋಗ್ಯ ಎನಿಸಿದರೆ ಇನ್ನು ಹಲವಕ್ಕೆ ನೀಳ್ಗವನ ಶೈಲಿಯೆ ಯೋಗ್ಯ ಎನಿಸುತ್ತೆ, ಹಲವರನ್ನು ಬಿಟ್ಟರೆ ನೀಳ್ಗವನ ಓದುವವರ ಸಂಖ್ಯೆ ಕಡಿಮೆ, ಅದೂ ಅಲ್ಲದೆ ನನಗೆ ಈ ಚುಟುಕು ಪ್ರಾಕಾರ ಹೊಸದಲ್ಲ ನಾನೂರು ಚಿಲ್ಲರೆ ಚುಟುಕು ಮತ್ತು ಹನಿಗವನಗಳ ಸಂಗ್ರಹವೊಂದು ಅಚ್ಚಿನಮನೆಯಲ್ಲಿ ಬಿದ್ದಿದೆ ಅದಕ್ಕೆಯಾವಾಗ ಮುಕ್ತಿಯೋ ಗೊತ್ತಿಲ್ಲ. ನನಗೆ ಚುಟಕುಗಳನ್ನು ಬರೆಯಲು ದಿನಕರ ದೇಸಾಯಿ, ಎಂ.ಅಕಬರ್ ಅಲಿ, ಚದುರಂಗರು ಪ್ರೇರಣೆ. ಕಳೆದ ಶತಮಾನದ ಆರನೆ ದಶಕದಲ್ಲಿ ಕರ್ಮವೀರ, ಪ್ರಜಾಮತ ಮತ್ತು ಜನಪ್ರಗತಿ ಮುಂತಾದ ವಾರ ಪತ್ರಿಕೆ ಗಳಲ್ಲಿ ದೇಸಾಯಿ ಮತ್ತು ಅಲಿ ಯವರ ಚುಟುಕುಗಳನ್ನು ಆಸಕ್ತಿಯಿಂದ ಓದುತ್ತಿದ್ದೆ, 1968 ‍ 69 ರಲ್ಲಿ ನನ್ನ ನಿರುದ್ಯೋಗ ಪರ್ವದ ಸಂಧರ್ಭದಲ್ಲಿ ' ನಲ್ಲೆ ಯೊಂದಿಗೆ ಅನುಸಂಧಾನ ' ವೆಂಬ ಸುಮಾರು ಐವತ್ತರ ಹತ್ತಿರ ಚುಟುಕುಗಳನ್ನು ಬರೆದಿದ್ದೆ, ಹೀಗಾಗಿ ಈ ಪ್ರಾಕಾರದ ಜೊತೆಗೆ ನನಗೆ ಬಹಳ ವರ್ಷಗಳ ಒಡನಾಟವಿದೆ. ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ- ಕಿರಿಯನೊಬ್ಬನ ಕುತೂಹಲಕಾರಿ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಿಸಿರುವಿರಿ... ಅನಂತ ಧನ್ಯವಾದಗಳು... ತಮ್ಮ ಆ ಚುಟುಕಗಳ ಪುಸ್ತಕ ಶೀಘ್ರ ಹೊರ ಬರಳ.. ನಮ್ಮ ಕೈ ಸೇರಲಿ.. ಅದು ಸಿದ್ಧವಾದಾಗ ತಿಳಿಸಿ ನಾವ್ ಕೊಂಡು ಓದುವೆವು >>>ನಿಮ್ಮ ಕಾಲದಲ್ಲೂ ನಿರುದ್ಯೊಗ ಪರ್ವ ಇತ್ತು ಅಂತ ಕೇಳಿ ಅಚ್ಚರಿ ಆಯ್ತು... ನನಗೆ ಗೊತ್ತಿರುವ ಹಾಗೆ ನಾ ಕೇಳಿರುವ ಹಾಗೆ- ಕೆಲ ಹಿರಿಯರು ಹೇಳುತ್ತ್ತಿದ್ದುದು- ಆ ಕಾಲಕ್ಕೆ ೩-೪ ತರಗತಿ ಪಾಸು ಮಾಡಿದರೂ ಒಳ್ಳೊಳ್ಲೆ ಹುದ್ಧೆ ಸಿಗುತ್ತಿತ್ತು ಅಂತ.... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು ನಿಮ್ಮ ಮರುಪ್ರತಿಕ್ರಿಯೆ ಓದಿದೆ, ನೀವು ದಾಖಲಿಸಿದಂತೆ 3‍_ ೪ ತರಗತಿ ಓದಿದರೂ ಒಳ್ಳೊಳ್ಳೆ ಹುದ್ದೆ ಸಿಗುತ್ತಿತ್ತು ಎಂಬುದು ಉತ್ಪ್ರೇಕ್ಷೆ. ಯಾರೋ ಬೆರಳೆಣಿಕೆ ಯವರಿಗೆ ಅಟೆಂಡರೋ ಪ್ಯೂನೊ ಅಂತ ಕೆಲಸ ಸಿಕ್ಕಿರ ಬಹುದು, ಸ್ವಾತಂತ್ರ ಪೂರ್ವದಲ್ಲಿ ನೀವು ದಾಖಲಿಸಿದ ರೀತಿ ಇದ್ದಿರ ಬಹುದೇನೋ . ನಮ್ಮ ಕಾಲಕ್ಕೆ ಕೆಲಸ ಸಿಗುವುದು ಬಹಳ ದುರ್ಲಭವಿತ್ತು. ನಾನು ಈ ಕೆಲಸ ಪಡೆಯಲು ಏಳು ವರ್ಷ ಕಾಯ ಬೇಕಾಯ್ತು. ಅಲ್ಲಿಯ ವರೆಗೆ ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ದಿನಕ್ಕೆ ಎರಡೂ ಕಾಲು ರೂಪಾಯಿಗಳಿಗೆ ಕೆಲಸ ಮಾಡಿದ್ದೂ ಉಂಟು ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.