'ಚುಟುಕುಗಳು' (12)

4

ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12

ಜೀವನ ಒಂದು

ಸಂಕೀರ್ಣ ಕೋಟೆ

ಮುಗಿಯದ ಚಕ್ರವ್ಯೂಹ

ಅದು ದಾರಿ ಬಿಟ್ಟು

ಕೊಡುವುದು

ಅಸಮಾನ್ಯ ಶೂರರಿಗೆ

ಧೀರರಿಗೆ

ಈ ಜೀವನ ಗೆಲ್ಲಲು

ಅನೇಕರು ರಕ್ತತರ್ಪಣ

ಕೊಟ್ಟು ನೆಲಕ್ಕೊರಗಿದ್ದಾರೆ

***

ಅಂಗವಿಕಲರೂ

ಸುಂದರ ದಾಂಪತ್ಯ

ನಡೆಸಬಲ್ಲರು

ವಿಕಲತೆ

ನೋಡುವ ಕಣ್ಣುಗಳಲ್ಲಿದೆಯೆ

ಹೊರತು ಪ್ರೀತಿಸುವ

ಹೃದಯಗಳಲ್ಲಿ ಅಲ್ಲ

***

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

"ವಿಕಲತೆ ನೋಡುವ ಕಣ್ಣುಗಳಲ್ಲಿದೆಯೆ ಹೊರತು ಪ್ರೀತಿಸುವ ಹೃದಯಗಳಲ್ಲಿ ಅಲ್ಲ" +1 ಹಿರಿಯರೇ ಅನ್ಯಥಾ ಭಾವಿಸದಿದ್ದರೆ ನಾ ಒಂದು ಕೇಳುವೆ... ಅದೊಮ್ಮೆ ನೀವು ಮತ್ತು ಇನ್ನೊಬ್ಬ ಹಿರಿಯರಾದ ಪಾಟೀಲ್ರು ಒಂದೇ ಸಿಸ್ಟಂ ಉಪಯೋಗಿಸುವುದು ಅಂತ ಹೇಳಿದ್ದೀರಿ.. ಆದಾಗಲೇ ಪಾಟೀಲರು ಬಹು ಚುಟುಕಗಳನ್ನು ಬರೆದಿರುವುದರಿಂದ, ಈ ಚುಟುಕವನ್ನು ಅವರು(ಪಾಟೀಲರು) ಬರೆದು ಮತ್ತು ನೀವು ಆಕಾಸ್ಮಾತ್ತಾಗಿ ನಿಮ್ಮ ಲಾಗ್ ಇನ್ ಐ ಡಿ ಮೂಲಕ ಸೇರಿಸಿದಿರಾ? ಈ ಹೊರತಾಗಿ ಚುಟುಕ ಅಪಾರ ಅರ್ಥ ಹೊಂದಿದೆ.. ಮತ್ತು ಅರ್ಥಪೂರ್ಣವಾಗಿದೆ...ಹಿಡಿಸಿತು.... ೨ ನೇ ಚುಟುಕ ಅಂತ್ಯ ನನಗೆ ಸೌಂದರ್ಯ ನೋಡುಗರ ಕಣ್ಣಲಿದೆ ಎಂಬ ಆಂಗ್ಲ ಉಕ್ತಿ ನೆನ್‌ಪಿಸ್ತು...!! ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಅವರೆ ನಮಸ್ಕಾರಗಳು ಖಂಡಿತವಾಗಿ ನಿಮ್ಮ ಅನಿಸಿಕೆ ಸರಿ,ಅವಸರದಲ್ಲಿ ಅವರ ಪೆನ್ ಡ್ರೈವ್ ನಿಂದ ಕಾಪಿ ಮಾಡಿ ಸಂಪದಕ್ಕೆ ಹಾಕುವಾಗ ಅವರ ಹೆಸರಿಗೆ ಲಾಗ್ ಇನ್ ಆಗದೆ ಈ ಅಚಾತುರ್ಯ ವಾಯಿತು, ಎಷ್ಟಾದರೂ ಕಾಗೆ ಕಾಗೆಯೆ ಹೊರತು ಕೋಗಿಲೆ ಆಗಲು ಸಾದ್ಯವೆ? ವಿಶಯ ಗಮನಕ್ಕೆ ಬಂದಾಕ್ಷಣ ಪಾಟೀಲರ ಹೆಸರನ್ನು ಮೇಲೆ ಸೇರಿಸಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಮತರೆ ಇಂತವೆಲ್ಲ ಆಗುತ್ತೆ ಬಿಡಿ ಅವಸರದಲ್ಲಿ ನಾನು ಒಮ್ಮೆ ಬೇರೆ ಐಡಿಯಲ್ಲಿ ಹಾಕಿ ನಗುವಿಗೆ ಒಳಗಾಗಿದ್ದೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಅವರೆ, ತಮ್ಮ ಹಾಗೂ ಶ್ರೀಧರ ಬಂಡ್ರಿ .ಸಪ್ತಗಿರಿ ಮತ್ತು ಪಾಟೀಲರ ಪ್ರತಿಕ್ರಿಯೆಗಳಿಂದ ನನ್ನ ಕ್ಷೋಭೆ ಗೊಂಡ ಮನಸ್ಸಿಗೆ ಕೊಂಚ ಸಮಾಧಾನ ವಾಯಿತು. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ ರಮೇಶ ಕಾಮತರಿಗೆ ವಂದನೆಗಳು ' ಚುಟುಕುಗಳ ' ಕುರಿತು ನಿಮ್ಮ ಪ್ರತಿಕ್ರಿಯೆ ಓದಿದೆ, ಈ ಅಚಾತುರ್ಯ ಎಲ್ಲರಿಗೂ ಆಗುವಂತಹುದೆ, ನೀವು ಬಹಳ ಸೂಕ್ಷ್ಮ ಮತಿಗಳು ನನಗೆ ಗೊತ್ತು, ಆದರೆ <<< ಎಷ್ಟಾದರೂ .........ಆಗಲು ಸಾಧ್ಯವೆ ? >>> ಎಂದು ನೀವು ಬರೆದುದನ್ನು ನೋಡಿ ವಿಷಾದ ವಾಯಿತು. ನೀವು ಅಷ್ಟು ಬೇಸರಪಟ್ಟುಕೊಳ್ಳಬೇಕಾದ ಪ್ರಮೇಯವಿಲ್ಲ. ನೀವು ಆ ವಿಷಾದ ರಾಗದಿಂದ ಹೊರಬನ್ನಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರಿಗೆ ನಮಸ್ಕಾರಗಳು ತಾವು ಬರೆದ ಸಮಾಧಾನದ ನುಡಿಗಳಿಂದ ವಿಕ್ಷಿಪ್ತ ಗೊಂಡ ಮನಸ್ಸು ತಿಳಿಯಾಯಿತು. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು ' ಚುಟುಕುಗಳ ' ಕುರಿತು ನಿಮ್ಮ ಪ್ರತಿಕ್ರಿಯೆ ಓದಿದೆ, ಈ ಬಗ್ಗೆ ಕಾಮತರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ್ದೇನೆ. ಇದು ತಾಂತ್ರಿಕ ದೋಷದಿಂದಾದುದು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೆ ಅನ್ಯಥ ಭಾವಿಸದಿರಿ... ನೀವೆನೂ ಸಾಮನ್ಯರಲ್ಲ , ಅಪರೂಪದ ಛಿತ್ರ ಮತ್ತು ಮಾಹಿತಿ ನೀಡುವಿರಿ.. ಅವರು(ಪಾಟೀಲರು) ಕವನ ಕ್ಛೆತ್ರ್ದಲ್ಲಿ ನೀವ್ ಈ ಛಿತ್ರ ಬರಹ ಕ್ಛೆತ್ರದಲಿ ಪ್ರವೀಣರು... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು ಕಾಮತರಿಗೆ ನೀವು ಬರೆದ ಪ್ರತಿಕ್ರಿಯೆ ಓದಿದೆ, ಅವರು ಒಳ್ಳೆಯ ಬರಹಗಾರರು ಕೂಡ, ಅವರು ಕವನ ಲೇಖನಗಳನ್ನು ಬರೆಯಬಲ್ಲ ಸಾಮರ್ಥ್ಯ ಅವರಿಗಿದೆ, ಬರೆಯಲು ಮನಸು ಮಾಡೆಬೇಕಷ್ಟೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಭಿಮಾನದ ಮಾತಿಗೆ ನನ್ನ ನಮನಗಳು ಸಪ್ತಗಿರಿ ಅವರೆ. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ಕೋಡುವಳ್ಳಿಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಮತ್ ಸರ್ ಮತ್ತು ಹನುಮಂತ ಪಾಟೀಲ್ ಸರ್, ಯಾರು ಪ್ರಕಟಿಸಿದರೇನು, ಕವಿತೆಗಳು ಒಳ್ಳೆಯ ಸಂದೇಶವನ್ನು ಸಾರುತ್ತಿವೆ. ಇಬ್ಬರೂ ಹಿರಿಯರಿಗೆ ವಂದನೆಗಳು, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಶ್ರೀಧರ ಅವರೆ,ಪಾಟೀಲರ ಚುಟುಕು ಗಳಾಗಲಿ,ಕವನಗಳಾಗಲಿ ಅರ್ಥಪೂರ್ಣವಾಗಿರುತ್ತವೆ. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.