'' ಚುಟುಕುಗಳು 19 ''

4

ಬದುಕಿನ ಅನೇಕ ಪ್ರಶ್ನೆಗಳಿಗೆ

ಉತ್ತರಗಳೇ ಇರುವುದಿಲ್ಲ

ಹಾಗೆಯೆ ಅನೇಕ ಸಮಸ್ಯೆಗಳಿಗೆ 

ಪರಿಹಾರಗಳೂ ಇರುವುದಿಲ್ಲ

ಪರಿಹಾರವಿಲ್ಲದ ಪ್ರಶ್ನೆ  ಸಮಸ್ಯೆಗಳಿಗೆ 

ತಲೆ ಕೆಡಿಸಿಕೊಂಡು ಕೂಡ್ರಬಾರದು

ಜೀವನವೊಂದು ನಿರಂತರ ಜಂಗಮ

     *** 

ದುಃಖದ ಎದೆತುಂಬಿ

ಉಕ್ಕಿ ಹರಿದಾಗ ಸಂದ 

ಕ್ಷಣ ಕ್ಷಣವೂ ಅನನ್ಯ

ಕಣ್ಣೀರಿಗೆ ದುಃಖ ಮರೆಸುವ

ಅದೆಂತಹ ಶಕ್ತಿಯಿದೆ ?

     ***

ಹುಟ್ಟಿದ ಮನೆ ಕೊಟ್ಟ  ಮನೆ 

ಎಂಬ ಬೇಧವಿಲ್ಲ ಹೆಣ್ಣಿಗೆ

ಸ್ವದೇಶ ಪರದೇಶವೆಂಬ 

ಬೇಧವಿಲ್ಲ ಭೂಮಿಗೆ

ಹೆಣ್ಣು ಭೂಮಿ ಎಲ್ಲ ಒಂದೆ

ಆಕೆ ವಸುಂಧರೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಷ್ಟವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಸ್ವತಿಚಂದ್ರ ರವರಿಗೆ ವಂದನೆಗಳು
ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸರ್, ಬದುಕಿನ ಹಲವಾರು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ ನಮ್ಮ ಸಾಮರ್ಥ್ಯದ ಮಟ್ಟಿಗಾದರೂ.
ದು:ಖ ಪರಿಹಾರದ ಕಣ್ಣೀರು, ದು:ಖವಾದಾಗ ತಾನೇ ತಾನೇ ಬಂದು ದು:ಖ ಶಮನವಾಗಿಸುವ ಕಣ್ಣೀರು..........ಹೆಣ್ಣು ಎಲ್ಲಿಯೂ ಸಲ್ಲುವ ಧರಿತ್ರಿ ತುಂಬ ಚನ್ನಾದ ಸಾಹಿತ್ಯ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಕ್ಷ್ಮೀಕಾಂತ ಇಟ್ನಾಳ ರವರಿರೆ ವಂದನೆಗಳು
" ಚುಟುಕುಗಳು 19 "ನೇ ಭಾಗವನ್ನು ಸಹ ಮೆಚ್ಚಿದ್ದೀರಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪಾಟೀಲರೆ,
ಪರಿಹಾರವಿಲ್ಲದ ಪ್ರಶ್ನೆಗಳು ಈ ಜಗತ್ತಿನಲ್ಲಿ ಹುಟ್ಟೇ ಇಲ್ಲ. ಆದರೆ, ಪರಿಹಾರ ನಮಗೆ ಗೊತ್ತಿಲ್ಲದೇ ಇರಬಹುದು. ಭಗವಂತನ ನಿಯಮದಲ್ಲಿ ಪರಿಹಾರ ಮೊದಲು, ನಂತರ ಸಮಸ್ಯೆ! ಸ್ವಲ್ಪ ಆಲೋಚಿಸಿ ನೋಡಿ.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕಾಶ ಮರಸಿಂಹಯ್ಯ ನವರಿಗೆ ವಂದನೆಗಳು
ಈ ಚುಟುಕುಗಳ ಕುರಿತು ನಿಮ್ಮ ಅಭಿಪ್ರಾಯ ಓದಿದೆ. ಒಂದು ರೀತಿಯಿಂದ ನಿಮ್ಮ ಅಭಿಪ್ರಾಯ ಸರಿ, ಆದರೆ ನಾವು ನಮ್ಮ ಸುತ್ತ ಮುತ್ತಲಿನ ಸಮಾಜ ಜನರು ಮತ್ತು ಪರಿಸರವನ್ನು ಕಂಡು ನಾನು ಆ ರೀತಿ ದಾಖಲಿಸಿದೆ. ಧೃಢ ನಿಶ್ಚಯದವರಿಗೆ ಆತ್ನ ವಿಶ್ವಾಸವಿರುವವರಿಗೆ ಧೈರ್ಯಶಾಲಿ ಗಳ ಕುರಿತು ಹೇಳಬಹುದಾದರೆ ತಮ್ಮ ಅಭಿಪ್ರಾಯ ಸರಿ, ಆದರೆ ಅವಕಾಶವಂಚಿತರಿಗೆ ದುರ್ಬಲ ಮನಸ್ಥಿತಿಯವರಿಗೆ ಬರುವ ಪ್ರಶ್ನೆಗಳು ಪರಿಹಾರ ವಿಲ್ಲದವಾಗುತ್ತವೆ. ಆ ಯೋಚನಾ ಧಾಟಿಯ ಕಾರಣವಾಗಿ ನಾನು ಹಾಗೆ ದಾಖಲಿಸಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪಾಟೀಲರೆ
ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ. ಆದರೆ, ಸಕಾರಾತ್ಮಕ ಚಿಂತನೆಯಲ್ಲಿ ಆತ್ಮ ಸ್ತೈರ್ಯ ಹೆಚ್ಚುವ ಬಗೆಗೆ ನನ್ನ ವಿಚಾರ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕಾಶ ನರಸಿಂಹಯ್ಯನವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, <<< ಸಕಾರಾತ್ಮಕ ಚಿಂತನೆಯಲ್ಲಿ ........ನನ್ನ ವಿಚಾರ >>> ಎನ್ನುವ ತಮ್ಮ ಅನಿಸಿಕೆ ಸರಿ, ಆ ವಿಚಾರ ಧಾರೆಯನ್ನು ಎಲ್ಲ ಜನ ಸಾಮಾನ್ಯರು ಅನುಸರಿಸಿದರೆ ಸಮಸ್ಯೆಗಳು ಅವರ ಹತ್ತಿರ ಸುಳಿಯವು, ಹಾಗೆಯೆ ನಾನು ತಮಗೆ ಈ ಮೊದಲು ಬರೆದ ಪ್ರತಿಕ್ರಿಯೆಯಲ್ಲಿ ತಮ್ಮ ಹೆಸರನ್ನು ಅಪ್ಪಾಗಿ ಬೆರಳಚ್ಚು ಮಾಡಿದ್ದೇನೆ ಕ್ಷಮೆಯಿರಲಿ, ಧನ್ಯವ಻ದಗಳು.