ಚಿಗರೆಗಣ್ಣಿಯ ಸಿಟ್ಟು

4
ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲಿ ಬಿಡದೇ ನೋಡಿದಳು ಚಿಗರೆಗಣ್ಣಿ! ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ): ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್ ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ | ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ ರಮಣಪದವೀ ಸಾರಂಗಾಕ್ಷ್ಯಾ ಸಶಂಕಿತ*ಮೀಕ್ಷಿತಾ || -ಹಂಸಾನಂದಿ ಕೊ: ಕಡೆಯ ಸಾಲಿನಲ್ಲಿ ಸಶಂಕಿತಮೀಕ್ಷಿತಾ ಎಂಬುದಕ್ಕೆ ನಿರಂತರಮೀಕ್ಷಿತಾ ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅನುವಾದದಲ್ಲಿ ಎರಡೂ ಅರ್ಥಗಳನ್ನು ತಂದಿದ್ದೇನೆ. ಕೊ.ಕೊ: ಮೂಲದಲ್ಲಿ, ನಲ್ಲನು ಒಂದೆಡೆ ನಿಲ್ಲುವನಲ್ಲ, ಹಾಗೇ ಒಬ್ಬಳಲ್ಲೇ (ಪದ್ಯದ ನಾಯಕಿಯೊಬ್ಬಳಲ್ಲೇ)ಮನವನ್ನಿಡುವನಲ್ಲ ಎನ್ನುವ ಎರಡೂ ಭಾವಗಳು ಕಂಡುಬರುತ್ತಿವೆ. ಅನುವಾದದಲ್ಲಿ ಅದು ಅಷ್ಟು ಚೆನ್ನಾಗಿ ತೋರಿಬಂದಿಲ್ಲದಿದ್ದರೆ ಅದು ನನ್ನ ಅನುವಾದದ ಮಿತಿ ಅಷ್ಟೇ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲಿ ಬಿಡದೇ ನೋಡಿದಳು ಚಿಗರೆಗಣ್ಣಿ! ------------------------------- ಹಂಸಾ ನಂದಿ ಅವ್ರೆ ಪ್ರೇಮಿಗಳ ದಿನಾಚರಣೆ ಸಂದರ್ಭದಲಿ ಅರ್ಥ ಪೂರ್ಣ ಕವನದ ಭಾವಾನುವಾದವನ್ ಬಹಳ ಸೊಗಸಾಗಿ ಮಾಡಿದೀರಾ.. ಸಂಸ್ಕೃತ ಕುರಿತು ಅಷ್ಟಾಗಿ ಗೊತ್ತಿಲ್ಲ ಆದರೆ ನಿಮ್ಮ ಅನುವಾದ ಹಿಡಿಸಿತು... ವಂದನೆಗಳು..............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಸಪ್ತಗಿರಿವಾಸಿ ಮತ್ತೆ ಪಾರ್ಥಸಾರಥಿ ಅವರಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕೊ.ಕೊ: ಮೂಲದಲ್ಲಿ, ನಲ್ಲನು ಒಂದೆಡೆ ನಿಲ್ಲುವನಲ್ಲ, ಹಾಗೇ ಒಬ್ಬಳಲ್ಲೇ (ಪದ್ಯದ ನಾಯಕಿಯೊಬ್ಬಳಲ್ಲೇ)ಮನವನ್ನಿಡುವನಲ್ಲ ಎನ್ನುವ ಎರಡೂ ಭಾವಗಳು ಕಂಡುಬರುತ್ತಿವೆ. ಅನುವಾದದಲ್ಲಿ ಅದು ಅಷ್ಟು ಚೆನ್ನಾಗಿ ತೋರಿಬಂದಿಲ್ಲದಿದ್ದರೆ ಅದು ನನ್ನ ಅನುವಾದದ ಮಿತಿ ಅಷ್ಟೇ." ಮೂಲ‌ದ‌ಲ್ಲಿ ಬ‌ಹುನಾಯ‌ಕಿಪ್ರಿಯ‌ ಎಂಬ‌ ಅರ್ಥ ಸೂಸಿದ‌ರೂ, ಇಂದಿನ‌ ಬ‌ದ‌ಲಾದ‌ ಮೌಲ್ಯಗ‌ಳ‌ ಕಾಲ‌ಕ್ಕೆ ನೀವು ಬ‌ರೆದುದೇ ಸ‌ರಿ. ಚಿಗ‌ರೆಗ‌ಣ್ಣಿ ಪ‌ದ‌ ಇಷ್ಟವಾಯಿತು. ನೀವು ಈಗಾಗ‌ಲೇ ಓದಿಲ್ಲವಾದರೆ http://www.amazon.co...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್ ಅವರೆ, ಈ ಪುಸ್ತಕವನ್ನು ನೋಡಿರಲಿಲ್ಲ! ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. -ಹಂಸಾನಂದಿ

ಪುಸ್ತಕ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿದೆ. ನಾನು ವಿದ್ಯಾ ಅರ್ಥಿಯಾಗಿದ್ದಾಗ ನನ್ನ ಮೆಚ್ಚಿನ ಪುಸ್ತಕವಾಗಿತ್ತು. ಇನ್ನೆಲ್ಲೂ ಸಿಗದಿದ್ದರೆ ಹೇಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.