ಚದುರಿದ ಚಿಂತನೆಗಳು : (೪) ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ

0

 

 ಸನ್ಮಾನ್ಯ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ ಅನ್ನುತ್ತಿವೆ ಸುದ್ದಿ ಮಾಧ್ಯಮಗಳು. ಅವರಿಗೆ ನಮ್ಮದು ಒಂದು ಅಭಿನಂದನೆ ಇರಲಿ. 
 
 ಕರ್ನಾಟಕದ ಸಿದ್ದರಾಮನಹುಂಡಿ ಎಂಬ ಸಣ್ಣ ಗ್ರಾಮವೊಂದರಿಂದ ತೀರ ಸಾಮಾನ್ಯ ಕುಟುಂಬದಿಂದ , ಸಾಮಾನ್ಯನೊಬ್ಬರು , ಕುರುಬ ಕುಟುಂಬದವರೊಬ್ಬರು, ಹೆಜ್ಜೆ ಹೆಜ್ಜೆಯಾಗಿ ನಡೆದು ಹಲವು ಏಳು ಬೀಳುಗಳನ್ನು ದಾಟಿ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆಂದರೆ, ನಮ್ಮಲ್ಲಿನ ಪ್ರಜಾಪ್ರಭುತ್ವ  ವ್ಯವಸ್ಥೆ ಸಾಕಷ್ಟು ಶಕ್ತಿಯುತವಾಗಿದೆ ಅನ್ನಿಸುತ್ತೆ, ನಾವು ಆರಿಸಿಕೊಂಡಿರುವ ಪ್ರಜಾಪ್ರಭುತ್ವ ಸರಿಯಾದ ನಿರ್ಧಾರವೆಂದೆ ಅನ್ನಿಸುತ್ತೆ, ಬೇರೆ ಯಾವುದೆ ಪದ್ದತಿಯಲ್ಲು ಇದು ಸಾದ್ಯವಿಲ್ಲ ಎಂದೆ ಅನ್ನಿಸುತ್ತೆ. 
 
ನಮ್ಮಲ್ಲಿನ ಪ್ರಜಾಪ್ರಭುತ್ವ ಸಿದ್ದಾಂತದ ಬಗ್ಗೆ ಹಲವು ಟೀಕೆಗಳಿವೆ, ವ್ಯಥೆಗಳಿವೆ, ಗೊಣಗಾಟಗಳಿವೆ. ನಿಜ ಯಾವುದೆ ವ್ಯವಸ್ಥೆಯು ಪರಿಪೂರ್ಣವಾಗಿರಲು ಸಾದ್ಯವಿಲ್ಲ. ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲು ಹಲವು ಲೋಪಗಳಿರಬಹುದು. ಅವುಗಳಲ್ಲಿ ಅತಿಮುಖ್ಯವಾಗಿ ಕಾಡುವುದು ಅತಿಯಾದ ಸ್ವತಂತ್ರ್ಯ ಹಾಗು ದೇಶವನ್ನು ಕೊರೆಯುತ್ತಿರುವ ಭ್ರಷ್ಟಾಚಾರ. ಹಲವು ಗೋಜಲುಗಳ ಹೊರತಾಗಿಯು, ಭಾರತೀಯರು ಅಳವಡಿಸಿಕೊಂಡಿರುವ ಈ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿಯೆ ನಡೆದಿದೆ. ಹಾಗು ಇದೆ ವ್ಯವಸ್ಥೆಯನ್ನು ಉತ್ತಮ ಪಡಿಸುವ ದಿಕ್ಕಿನತ್ತ ನಾವೆಲ್ಲ ಚಿಂತಿಸಬೇಕಿದೆ. 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯನವರದು ಒಂದು ಉದಾಹರಣೆ ಮಾತ್ರ; ಆದರೆ ನಿಜಕ್ಕೂ ನಮ್ಮ ವ್ಯವಸ್ಥೆ ಇಂತಹವರನ್ನು ಬದುಕಲು ಬಿಡುತ್ತದೆಯೇ? ಕಾಲವೇ ಇದಕ್ಕೆ ಉತ್ತರ ಹೇಳಬೇಕು. ಏನೇ ಆಗಲಿ ಹಿಂದುಳಿದ ಪ್ರಾಂತದಿಂದ ಬಂದ ಸಾಮಾನ್ಯ ವ್ಯಕ್ತಿಗೆ ಸಾಮಾನ್ಯ ಜನರ ನಾಡಿ ತಿಳಿದಿರುತ್ತದೆ ಅದನ್ನರಿತು ಜನ ಮೆಚ್ಚುವಂತಹ ಆಡಳಿತವನ್ನು ಅವರು ನೀಡಲಿ ಎನ್ನುವುದೇ ಕನ್ನಡಿಗರೆಲ್ಲರ ಆಶಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.