ಇದು ಬರಿ ಓಳಲ್ಲೋ ಅಣ್ಣಾ !

0

ಮೂರ್ಖರ ಜಗತ್ತಿಗೆ ಸ್ವಾಗತ. ದಡ್ಡರ ದುನಿಯಾಗೆ ವೆಲ್‌ಕಮ್‌.

ಇದು ದಡ್ಡರ ಜಗತ್ತು. ದಡ್ಡರಿಂದ ದಡ್ಡರಿಗಾಗಿ ಎಂಬುದು ನಮ್ಮ ಸದ್ಯದ ಸ್ಲೋಗನ್‌. ಸುತ್ತಮುತ್ತ ದಡ್ಡರನ್ನು ನೋಡಿದಾಗೆಲ್ಲ, ಅರೆ, ಇಂಥ ಜನರು ತುಂಬ ಇದ್ದಾರಲ್ಲವೆ? ಎಂದು ಅನ್ನಿಸಿದ್ದರಿಂದ, ಈ ಬ್ಲಾಗ್‌ ಪ್ರಾರಂಭಿಸುತ್ತಿದ್ದೇವೆ. ದಡ್ಡರಿಗೆ ದಡ್ಡರೆಂದು ನೇರವಾಗಿ ಹೇಳಲಾಗದ ಸಂದರ್ಭಗಳು ಬಹಳಷ್ಟಿರುವುದರಿಂದ, ಈ ಬ್ಲಾಗ್‌ ಮೂಲಕ ಅವರಿಗೆ ಇನ್ನಷ್ಟು ಹತ್ತಿರವಾಗಲು ಈ ಗುಂಪು ಪ್ರಯತ್ನಿಸುತ್ತಿದೆ.

ಪ್ರತಿಯೊಂದು ಅಧ್ಯಾಯದಲ್ಲೂ ಒಬ್ಬೊಬ್ಬ ದಡ್ಡನ ಓಳನ್ನು ಹೇಳುತ್ತ ಹೋಗುತ್ತೇವೆ. ಆತ ನಮ್ಮ ನಿಮ್ಮ ನಡುವೆ ಯಾರು ಬೇಕಾದರೂ ಆಗಬಹುದು. ಅಥವಾ ನಾವೇ ಹಾಗಿರಬಹುದು. ಹೀಗಾಗಿ, ಇಲ್ಲಿ ಬರೆದ ವಿಷಯವನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಿಲ್ಲ. ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳಬಹುದು. ನಿಮಗೆ ಗೊತ್ತಿರುವ ವಿಷಯಗಳನ್ನೂ ಸೇರಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಮುಂದಿನ ಬರಹಗಳಲ್ಲಿ ವಿವರಿಸಲಾಗುವುದು.

ಬನ್ನಿ. ಓಳು ಜಗತ್ತಿನ ಗೋಳು ಕೇಳಿ. ಸಾಧ್ಯವಾದರೆ, ನೀವೂ ಓಳಿಡಿ.

- ಗಾಂಪರ ಗುಂಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಗಾಂಪರ ಗುಂಪಿಗೆ ಸ್ವಾಗತ.

ನಮ್ಮ ಗಾಂಪರ ರಂಪವೂ ನಿಮ್ಮ ಓಳು ಜಗತ್ತಿನ ಗೋಳಿನ ಜೊತೆ ಇನ್ಮುಂದೆ ಸೇರಲು ತೀರ್ಮಾನ ತೆಗೆದುಕೊಂಡಿದೆ.

ಮುಂದುವರೆಸಿ. ಬೇಕಾದ ಸಪೋರ್ಟ್ ಸಿಗುತ್ತದೆ.

ಗಾಂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.