ಗಣೇಶ ರವರ ಬ್ಲಾಗ್

ಬಡ್ಡಿಯಪ್ಪನವರೊಂದಿಗೆ..(ವಾಕಿಂಗ್ ನ್ಯೂಸ್-೨)

ವಾಕಿಂಗ್ ನ್ಯೂಸ್ ( http://sampada.net/blog/%E0%B2%B5%E0%B2%BE%E0%B2%95%E0%B2%BF%E0%B2%82%E0... )ನ ಮುಂದುವರಿದ ಭಾಗ. ಅದರ ಕೊನೆಯ ವಾಕ್ಯ- "ರಾಯರೇ...ನಮಸ್ತೇ.."ಸ್ವರ ಕೇಳಿ ಕುರ್ಚಿಯಿಂದ ಬೀಳುವುದು ಬಾಕಿ! ಕತ್ತೆತ್ತಿ ಮೇಲೆ ನೋಡಿದೆ...ಮಾತೇ..ಬರಲಿಲ್ಲಾ..
ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಪ್ತಗಿರಿವಾಸಿ-"... ಬಂದವರು ಕರೆದವರು ಅವರಲ್ಲ ತಾನೇ? ಮಾ.ಮು...!.." ಎಂದು ಬರೆದಿದ್ದರು. ನಿಜ ಬಂದವರು ಮಾ.ಮು!
ನಾನು : ಬಡ್ಡಿಯಪ್ಪನವರು! ತಾವು ಇಲ್ಲಿ....!?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಫ್ಲಾಟ್ ಕೊಳ್ಳುವ ಮುನ್ನ ...

ಬೆಂಗಳೂರಲ್ಲಿ ಸೈಟುಗಳ ಬೆಲೆ ಗಗನಕ್ಕೇರುತ್ತಿರುವಾಗ, ಸೈಟು ತೆಗೆದುಕೊಂಡು ಮನೆಕಟ್ಟಿಸುವುದು ಗಗನ ಕುಸುಮವೇ ಸರಿ. ಗಗನ ಚುಂಬೀ ಕಟ್ಟಡಗಳಲ್ಲಿ ಪುಟ್ಟ ೨/೩ ಬೆಡ್‌‍ರೂಮ್ ಫ್ಲಾಟನ್ನು, ಗಳಿಸಿ ಉಳಿಸಿದ ಹಣಕ್ಕೆ ಬ್ಯಾಂಕ್ ಲೋನ್ ಹಣ ಸೇರಿಸಿ, ಕೊಳ್ಳುವುದು ಮಾತ್ರ ಈ ಕಾಲದಲ್ಲಿ ಸಾಧ್ಯ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಕೆರೆಯ ಕೊಲೆ

ಕೆಲವು ಕೆರೆಗಳು ಬೇಸಿಗೆ ಕಾಲದಲ್ಲಿ ಬತ್ತಿ, ಪುನಃ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಲಾರಿಗಟ್ಟಲೆ ಕಸ ಕಡ್ಡಿ ಮಣ್ಣು, ಕೆಡವಿದ ಮನೆಗಳ ತ್ಯಾಜ್ಯಗಳನ್ನು ಕೆರೆಯಲ್ಲಿ ತುಂಬುವುದಿದೆಯಲ್ಲಾ- ಅದು ಕೆರೆಯ ಕೊಲೆ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ವಾಕಿಂಗ್ ನ್ಯೂಸ್!

ಒಂದೇ ಒಂದು "ದಿನಪತ್ರಿಕೆ" ಮನೆಗೆ ತರಿಸದಿದ್ದರೂ, ಎಲ್ಲಾ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ ನನಗೆ ಮುಂಜಾನೆಯೇ ಗೊತ್ತಿರುವುದು! ಮುಂಜಾನೆ ವಾಕಿಂಗ್‌ನ ಲಾಭವಿದು!

ಅದು ಹೇಗೆ ಎಂದು ಹೇಳುತ್ತೇನೆ ಕೇಳಿ- ವಾಕಿಂಗ್ ಹೋಗುವಾಗ, ದೂರದಲ್ಲಿ ಪತ್ರಿಕೆ ಮನೆಮನೆಗೆ ಹಾಕುವ ಹುಡುಗ ಕಂಡರೆ, ಒಂದು ಗೇಟಿನ ಬಳಿ ನಿಲ್ಲುವೆ. "ಏನಿವತ್ತು ಇಷ್ಟು ತಡಾ?" ಎನ್ನುವಾಗ, ಆತ ಏನೋ ಕಾರಣ ಹೇಳಿ ಆ ಮನೆಯೊಳಗೆ ಎಸೆಯುವ ಪತ್ರಿಕೆ ನನ್ನ ಕೈಗೆ ಕೊಟ್ಟು ಹೋಗುವನು. ಅದನ್ನು ಪೂರ್ತಿ ಓದಿ ಮನೆಯೊಳಗೆ ಎಸೆದು ವಾಕಿಂಗ್ ಮುಂದುವರೆಸುವೆ. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಜಯನಗರ ನಾಲ್ಕನೇ ಬ್ಲಾಕ್ ಸುತ್ತಾಟ..

ಪಿ ಯು ಸಿ ನಂತರ ಇಂಜಿನಿಯರಿಂಗ್ ಇತ್ಯಾದಿ ಕೋರ್ಸ್‌ಗೆ ಸೇರಲು ಸಿ ಇ ಟಿ ಪರೀಕ್ಷೆ ಇದ್ದ ಹಾಗೇ, MBBS ನಂತರ PGಗೆ ಸೇರಲು ಆಲ್ ಇಂಡಿಯಾ ಲೆವೆಲ್‌ನಲ್ಲಿ NEET exam ಈ ಬಾರಿ ಹೊಸದಾಗಿ ಪ್ರಾರಂಭಿಸಿದ್ದಾರೆ. ಆದರೆ ಪ್ರೈವೇಟ್ ಕಾಲೇಜಿನವರು ಕೋರ್ಟ್ ಮೆಟ್ಟಲು ಹತ್ತಿ ತಡೆಯಾಜ್ಞೆ ತಂದರು. ಇನ್ನೂ ಇತ್ಯರ್ಥವಾಗದಿರುವುದರಿಂದ ಕರ್ನಾಟಕ PG CET ಪರೀಕ್ಷೆ ಬೆಂಗಳೂರಲ್ಲಿ ಕಳೆದ ರವಿವಾರ ನಡೆಯಿತು. ಸಂಡೆ ನನಗೂ ರಜೆ ಇದ್ದುದರಿಂದ ಜಯನಗರ ೪ನೇ ಟಿ ಬ್ಲಾಕ್‌ನಲ್ಲಿರುವ ಕಾಲೇಜ್‌ಗೆ ಮಗಳನ್ನೂ, ಅವಳ ಗೆಳತಿಯನ್ನು ಸಮೀಪದ ಇನ್ನೊಂದು ಕಾಲೇಜ್‌ನಲ್ಲಿ ಪರೀಕ್ಷೆ ಬರೆಯಲು ಬಿಟ್ಟು ಇನ್ನು ೪ ಗಂಟೆ ಹೇಗೆ ಟೈಮ್ ಪಾಸ್ ಮಾಡುವುದು ಎಂದು ಯೋಚಿಸುತ್ತಿದ್ದೆ. ಲಾಲ್ ಬಾಗ್, ರಾಗಿಗುಡ್ಡ ಎಲ್ಲಾ ಸುತ್ತಿದ್ದರು ಜಯನಗರದ ಪರಿಚಯ ಅಷ್ಟು ಇರಲಿಲ್ಲ. ಮೊದಲಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೋದೆ. ಚೆನ್ನಾಗಿಯೇ ಇದೆ. ಅದನ್ನೇ ಒಡೆದು ಹೊಸದಾಗಿ ಕಟ್ಟಲು ಸರ್ಕಾರ ಹೊರಟಿತ್ತು.

ಅಲ್ಲಿಂದ ನಂತರ ಜಯನಗರ ೪ನೇ ಬ್ಲಾಕ್ ಬಸ್ ಸ್ಟಾಂಡ್ ‌ಗೆ ಹೋಗಿ ಅಲ್ಲಿ ಮಹಡಿಯಲ್ಲಿರುವ ಮಾಲ್‌ಗೆ ನುಗ್ಗಿದೆ. ಟೈಮ್ ಪಾಸ್ ಮಾಡಲು ಸುತ್ತುತ್ತಿರುವಾಗ ಈ "ಧಾರೆಪುಳಿ" ( http://en.wikipedia.org/wiki/Carambola )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

Pages

Subscribe to RSS - ಗಣೇಶ ರವರ ಬ್ಲಾಗ್