ಗಣೇಶ ರವರ ಬ್ಲಾಗ್

ಕ ಕಾ ಕಿ ಕೀ ಕೋಕಂ ಅಹಾ!

 ಕೋಕಂ ಕುಡಿಯಿರಿ, ಕೋಲಾ ಬಿಡಿ ಅಂತ ಕಳೆದ ಬೇಸಿಗೆಯಲ್ಲಿ ಹೇಳಿದ್ದೆ. ಕೆಲವರಾದರೂ ಪ್ರಾರಂಭಿಸಿರಬಹುದು ಅಂದುಕೊಳ್ಳುತ್ತೇನೆ. ಆ ಲೇಖನ ಬರೆದಾಗ ನನ್ನ ಬಳಿ ೫ನೇ ಕಣ್ಣು (ಶ್ರೀಧರ್‌ಜಿ ಹೇಳಿದ ಕ್ಯಾಮರಾ ಕಣ್ಣು) ಇಲ್ಲದಿದ್ದುದರಿಂದ ಫೋಟೋಗಳನ್ನು ಹಾಕಿರಲಿಲ್ಲ.
ಈ ಬೇಸಿಗೆ ರಜೆಯಲ್ಲಿ  ಘಟ್ಟ ಅಥವಾ ಘಟ್ಟದ ಕೆಳಗೆ, ನೆಂಟರ ಮನೆಗೆ ಹೋಗಿದ್ದೀರಿ ಅಂದ್ರೆ ಅಲ್ಲಿ ಬಿಸಿಲಿಗೆ ಒಣ ಹಾಕಿದ ಕೋಕಂ (  http://www.timeswellness.com/article/7/20101211201012101607102743646e4b9 )ಸಿಪ್ಪೆಗಳು ಕಾಣಿಸಬಹುದು. ಕಂಡರೆ ಬಿಡಬೇಡಿ. ಒಂದು ಚೀಲ ತುಂಬಾ ತುಂಬಿ ಹಿಂದಕ್ಕೆ ಬರುವಾಗ ತೆಗೆದುಕೊಂಡು ಬನ್ನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಸೆಕೆ ಸೆಕೆ ತಾಳೆನು ಈ ಸೆಕೆಯಾ..

ಬೇಸಿಗೆ ರಜಾ ಬಂತೆಂದರೆ ನಾಸ್ಟಾ, ಊಟ, ನಿದ್ರೆಗೆ ಮಾತ್ರ ಮನೆಯಲ್ಲಿ ಅಟೆಂಡೆನ್ಸ್ ಕೊಟ್ಟು, ಉಳಿದಂತೆ ಆಟದ ಮೈದಾನದಲ್ಲೇ ನನ್ನ ಮತ್ತು ಗೆಳೆಯರ ವಾಸ್ತವ್ಯ--ಅಂದ ಕಾಲತ್ತಿಲ್ಲ್ :)
ಸಂಜೆ ಸುತ್ತುಮುತ್ತಲಿನ ಗೇರು,ಮಾವು, ನೇರಳೆ, ನಾಣಿಲೆ ಮರಗಳಿಗೆ ಧಾಳಿ ಮಾಡಿ, ಹೊಟ್ಟೆ ತುಂಬಿಸಿ, ಸಮೀಪದ ಲೈಬ್ರೇರಿಗೆ ನುಗ್ಗಿ, ಅಲ್ಲಿನ ಬಾಗಿಲು ಮುಚ್ಚುವವರೆಗೆ ಕಾರ್ಟೂನ್ ಇತ್ಯಾದಿ ಪುಸ್ತಕ ಓದಿ, ನಂತರ ಮನೆಗೆ ಹಿಂತಿರುಗುತ್ತಿದ್ದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಬಿಗ್ ಬಾಸ್ ಮತ್ತು ಫಿಂಗರ್ ಚಿಪ್ಸ್-೨

ಫಿಂಗರ್ ಚಿಪ್ಸ್ ಬಗ್ಗೆ ಆಸಕ್ತಿ ತೋರಿಸಿದ ಸುಮ ನಾಡಿಗ್ ಹಾಗೂ ನೀಳಾದೇವಿಯವರಿಗೂ, ಮುಂದಿನ  ಕಂತಿಗೆ ಕಾತರದಿಂದಿರುವ ಹೆಬ್ಬಾರರಿಗೂ, ಇಟ್ನಾಳರಿಗೂ ಧನ್ಯವಾದಗಳು.
 ಈ ಫಿಂಗರ್ ಚಿಪ್ಸ್ ಮಾಡುವುದು ಬಹಳ ಅಂದ್ರೆ ಬಹಳ ಸುಲಭ-
-ಚೆನ್ನಾಗಿ ತೊಳೆದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಉದ್ದಕ್ಕೆ ಸಣ್ಣದಾಗಿ ಕತ್ತರಿಸಿ.
  - ಕತ್ತರಿಸಿದ ತುಂಡುಗಳನ್ನು ನೀರು ತುಂಬಿದ ಪಾತ್ರೆಯಲ್ಲಿ ಹಾಕಿಡಿ.
-ನೀರಿಂದ ತೆಗೆದ ಆಲೂಗಡ್ಡೆ ಕಡ್ಡಿಗಳ ಮೇಲೆ ಸ್ವಲ್ಪ ಉಪ್ಪು ಮಿಕ್ಸ್ ಮಾಡಿ ಇಡಿ.
-ಒಂದು ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಬಿಸಿಯಾಗಲು ಇಡಿ.
ಎಣ್ಣೆ ಬಿಸಿಯಾಗುವ ತನಕ (ಮಗಳು ನೋಡಿಕೊಳ್ಳುತ್ತಾಳೆ) ನಾವು ಬಿಗ್ ಬಾಸ್ ನೋಡೋಣ ಬನ್ನಿ :

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಿಗ್ ಬಾಸ್ ಮತ್ತು ಫಿಂಗರ್ ಚಿಪ್ಸ್

                  
" ಆಲೂಗಡ್ಡೆ ಇದೆಯೇನೇ..?"
" ಇದೆಯಲ್ವಾ ನಿನ್ನೆ ತಾನೆ ನೀವೇ ತಂದದ್ದು "
" ಹೌದಲ್ವಾ , ದೊಡ್ಡ ದೊಡ್ಡ 5 ಆಲೂಗಡ್ಡೆಯನ್ನು ತೊಳೆದಿಡು ಫಿಂಗರ್ ಚಿಪ್ಸ್ ಮಾಡುತ್ತೇನೆ "
" ಬೇಡಾ "
" !!!"
ಏನೋ ಕಳೆದ ಬಾರಿ ಕೇಸರಿ ಬಾತ್ ಮಾಡಲು ಹೋಗಿ ಊರ್ಣಿ ಬಾತ್ ಆಯಿತು. ಒಂದೇ ಒಂದು ತಪ್ಪು ಮಾಡಿದ್ದಕ್ಕೆ ನಳಪಾಕ ತಜ್ಞನಿಗೆ  ಅವಮಾನ ಮಾಡುವುದೇ!?
" ತೆಂಡೂಲ್ಕರ್ ರನ್ ಹೊಡೆಯುವುದನ್ನು ಮರೆತರೂ ತಂಡದಲ್ಲಿಟ್ಟುಕೊಳ್ಳುತ್ತಾರೆ ..... ನಾನು ಮಾಡಿದ ಒಂದೇ ಒಂದು ತಪ್ಪಿಗೆ  ಔಟಾ ? "

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಹೊಸ ರುಚಿ-"ಉರ್ಣಿ ಬಾತ್"

ಬೇಕಿರುವ ಸಾಮಾಗ್ರಿ : ರವೆ, ಸಕ್ಕರೆ, ತುಪ್ಪ, ಏಲಕ್ಕಿ, ಸ್ವಲ್ಪ ಕೇಸರಿ ಕಲರ್.


ತಯಾರಿಸುವ ವಿಧಾನ : ಮೊದಲಿಗೆ ರವೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ನೀರು ಹಾಕಿ, ಕುದಿಸಿ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

Pages

Subscribe to RSS - ಗಣೇಶ ರವರ ಬ್ಲಾಗ್