ಗಣೇಶ ರವರ ಬ್ಲಾಗ್

ಲಾಲ್ ಬಾಗ್ ಫ್ಲವರ್ ಶೋ- ೨೦೧೩

ಹೂವೇ ಹೂವೇ..ಹೂವೇ ಹೂವೆ..ನಿನ್ನೀ ಅಂದಕೆ ..........
ಕಾಗದದ ಹೂವಿನಿಂದ ಗುಲಾಬಿಯವರೆಗೆ ಹೂವಿನ ಅಂದವೇ ಅಂದ. ಲಾಲ್ ಬಾಗ್ ಗಾಜಿನ ಮನೆ ತುಂಬಾ ರಾಶಿ ರಾಶಿ ಹೂಗಳು.
ಎಂಟ್ರಿ ಫೀ ಐವತ್ತಾದರೇನು ನೂರಾದರೇನು, ಬಿಸಿಲಾದರೇನು ಮಳೆಯಾದರೇನು..ಹೊರಟೇ ಬಿಡುವೆ.
ಆದರೆ ತಾಪತ್ರಯ-೧. ಬೆಂಗಳೂರು ಟ್ರಾಫಿಕ್. ೨. ಪಾರ್ಕಿಂಗ್ ೩. ಜನಸಂದಣಿ.
ಕಳೆದ ವರ್ಷ ಫ್ಲವರ್ ಶೋಗೆ ಸಂಜೆ ಹೋಗಿದ್ದೆ. ಅಂದಾಜು ಒಂದು ಕಿ.ಮೀ ದೂರದಲ್ಲಿ ವಾಹನ ಪಾರ್ಕ್ ಮಾಡಿ, ನಡೆಯುತ್ತಾ ಬರಬೇಕಾಯಿತು. :(  ಜನಸಂದಣಿಯದ್ದು ನನಗೆ ಚಿಂತೆ ಇಲ್ಲ. ರಶ್‌ಗೆ ಹೆದರಿ, ನನ್ನಾಕೆ ನನ್ನ ಕೈಬಿಡದೇ ಜತೆಯಲ್ಲಿ ಬರುವುದು ಆವಾಗಲೇ. :) ಈ ಸಲ ಎಷ್ಟು ಕೇಳಿದರೂ ಒಪ್ಪಲಿಲ್ಲ. "ರಶ್, ಬರುವುದಿಲ್ಲ. ಮಗಳನ್ನು ಕರಕೊಂಡು ಹೋಗಿ" ಎಂದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಹೀಗೊಂದು ಪಿಕ್ನಿಕ್..

ಇನ್‌ಸ್ಟೆಂಟ್ ತಿನಿಸುಗಳಂತೆ ದಿಡೀರ್ ಒಂದು ಸಣ್ಣ ಪಿಕ್ನಿಕ್ ಇಟ್ಟುಕೊಳ್ಳಬೇಕು‍, ಅಂತಹ ಪ್ರಸಂಗ ಬಂದರೆ, ಬೆಂಗಳೂರೊಳಗೆ ಬೆಸ್ಟ್  ಸ್ಥಳ "ಓಂಕಾರ ಹಿಲ್ಸ್". ಸಿಟಿಯೊಳಗೇ ಉತ್ತರಹಳ್ಳಿಯಿಂದ ಕೆಂಗೇರಿ ಮಾರ್ಗದಲ್ಲಿದೆ. ಹುಡುಕಲು ಕಷ್ಟವೇನಿಲ್ಲ. ದೂರದಿಂದಲೇ ದೇವಸ್ಥಾನದ ಗೋಪುರಗಳು ಕಾಣಿಸುತ್ತದೆ. ಇದೇನು ೫-೬ ಗೋಪುರಗಳು ಕಾಣಿಸುತ್ತಿದೆಯಲ್ಲಾ ಅಂತ ಯೋಚಿಸುವುದರೊಳಗೇ ನೀವು ದೇವಸ್ಥಾನದ ಬಳಿ ತಲುಪುವಿರಿ. ಬೆಟ್ಟ ಹತ್ತುವ ಕಷ್ಟವೇನಿಲ್ಲ. ಮಾರ್ಗ ಚೆನ್ನಾಗಿದೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳವಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಬೆಂಗಳೂರು ಸುತ್ತಾ ಮುತ್ತಾ

ಲಾಲ್‌ಬಾಗ್ ಸೆಕ್ಯುರಿಟಿ -
ಸ್ವಾತಂತ್ರ್ಯ ದಿನಾಚರಣೆ ದಿನ ಹತ್ತಿರ ಬಂದ ಹಾಗೆ ಭಯೋತ್ಪಾದನೆಯ ಭೀತಿ. ದೇವಾಲಯ, ಸರ್ಕಾರಿ ಕಟ್ಟಡಗಳು, ಐತಿಹಾಸಿಕ ಸ್ಥಳಗಳು..., ಎಲ್ಲದರ ರಕ್ಷಣೆಯ ಜವಾಬ್ದಾರಿ ಜಾಸ್ತಿಯಾಗುವುದು. ಸುಮಾರು ೨೪೦ ಎಕ್ರೆ ವಿಸ್ತೀರ್ಣದ ಲಾಲ್ ಬಾಗ್‌ನ ಸೆಕ್ಯುರಿಟಿಯದ್ದೇ ದೊಡ್ಡ ಸಮಸ್ಯೆ. ರಾಜಕಾರಣಿಗಳ ರಕ್ಷಣೆಗೇ ಪೋಲೀಸರು ಸಾಕಾಗುವುದಿಲ್ಲ, ಇನ್ನು ತೋಟ ಕಾಯಲು ಎಲ್ಲಿಂದ ತರುವುದು. ಸೆಕ್ಯುರಿಟಿಯನ್ನು ಪ್ರೈವೇಟ್‌ಗೆ ಕೊಟ್ಟರೆ ಎಂಟ್ರಿ ಫೀಸ್ ಜಾಸ್ತಿ ಮಾಡುವರು. ಆದ್ದರಿಂದ ತೋಟದ ಸೆಕ್ಯುರಿಟಿ ಪೂರ್ತಿ "ಡಾಗ್ ಸ್ಕ್ವಾಡ್"ಗೆ ವಹಿಸಲಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಾಲಾ ಸರೋವರ್ ಹಾಗೂ..

ಚಿತ್ರವನ್ನು ಗಮನವಿಟ್ಟು ನೋಡಿ...


ಇದರಲ್ಲೇನಿದೆ ವಿಶೇಷ? ಮಳೆಗಾಲದಲ್ಲಿ ಎಲ್ಲಾ ರಸ್ತೆ ಬದಿ ಮೋರಿಗಳು ಹೀಗೇ ಇರುವುದು ಅಂದಿರಾ..?
 ಇದು ಇರುವ ಸ್ಥಳ- ಲಕ್ಷಾಂತರ ಮಂದಿ ಭೇಟಿ ನೀಡುವ ಲಾಲ್‌ಬಾಗ್ ಬಂಡೆ ಮೇಲೆ :(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಮ್ಯಾಂಗೋ ಮೇಳ

1980-85ರ ಸಮಯದಲ್ಲಿ ನೆಂಟರಿಷ್ಟರೊಡನೆ ಬೆಂಗಳೂರು ಸುತ್ತಾಟ ಅಂದರೆ- ಕಬ್ಬನ್ ಪಾರ್ಕ್, ವಿಧಾನ ಸೌಧ, ಲಾಲ್ ಬಾಗ್ ತೋರಿಸುವುದು. ಸ್ವಲ್ಪ ಹಿರಿಯರಾದರೆ- ಬಸವನಗುಡಿ, ಗವಿಗಂಗಾಧರೇಶ್ವರ ಟೆಂಪ್‌ಲ್; ವಿಜ್ಞಾನದಲ್ಲಿ ಆಸಕ್ತಿ ಉಳ್ಳವರಾದರೆ ಮ್ಯೂಸಿಯಂ ರೋಡಲ್ಲಿರುವ ಮ್ಯೂಸಿಯಂಗಳು ; ಕನ್ನಡ/ಹಿಂದಿ ಸಿನೆಮಾಸಕ್ತರಾದರೆ ಕೆಂಪೇಗೌಡ ರೋಡ್‌ನ ಥಿಯೇಟರ್‌ಗಳ ಮುಂದೆ ಕ್ಯೂ ನಿಲ್ಲುವುದು ;

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

Pages

Subscribe to RSS - ಗಣೇಶ ರವರ ಬ್ಲಾಗ್