ಚೀಟಿ ಮಹಾತ್ಮೆ..

0

ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ ಮುಖ ಐದೇ ಸೆಕೆಂಡುಗಳಲ್ಲಿ ಜೀರೋಗೆ ಇಳಿದಿರುತ್ತಿತ್ತು. ಬಹಳ ಟಫ್ ಇರಬೇಕು.


ಮೇಲ್ವಿಚಾರಕರು ನನ್ನ ಬಳಿ ಬಂದಾಗ ನಗುತ್ತಾ ಪ್ರಶ್ನೆಪತ್ರಿಕೆ ತೆಗೆದುಕೊಂಡೆ. ಪೂರ್ತಿ ತಯಾರಾಗಿ ಬಂದವರಿಗೆ ಯಾವುದೇ ಭಯವಿರುವುದಿಲ್ಲ . ಪ್ರಶ್ನೆ ಪತ್ರಿಕೆ ಮೇಲೆ ಕಣ್ಣಾಡಿಸುವ ಮೊದಲು ಪ್ಯಾಂಟ್‌ನ ಎಡಕಿಸೆಗೆ ಕೈಹಾಕಿ ಚೀಟಿ ತೆಗೆದು ಪ್ರಶ್ನೆ ಪತ್ರಿಕೆಯ ಅಡಿಯಲ್ಲಿ ಇಟ್ಟು ನೋಡಿಕೊಂಡು ಬರೆಯಲು ಆರಂಭಿಸಿದೆ.


ಒಂದೆರಡು ಪ್ರಶ್ನೆಗೆ ಉತ್ತರಿಸಿದ ಮೇಲೆ ಡೌಟು ಬಂದು ನೋಡಿದಾಗ ಚೀಟಿ social ಪರೀಕ್ಷೆಗೆ ಬರಕೊಂಡು ಬಂದುದು! ಅವಸರದಲ್ಲಿ ಹಿಂದಿನ ದಿನದ ಪ್ಯಾಂಟೇ ಹಾಕಿಕೊಂಡು ಬಂದಿದ್ದೆ. ಇನ್ನೇನು ಮಾಡುವುದು? ಅದನ್ನೇ ಬರಕೊಂಡು ಹೋದೆ. ಫಲಿತಾಂಶ ಬಂದಾಗ socialಗಿಂತ ಸೈನ್ಸ್‌ನಲ್ಲೇ ಮಾರ್ಕ್ಸ್ ಜಾಸ್ತಿ ಸಿಕ್ಕಿತ್ತು! (ತೂಕದ ಲೆಕ್ಕದಲ್ಲಿ ಮಾರ್ಕ್ಸ್ ಕೊಡುವ ಅಧ್ಯಾಪಕರ ಕೈಗೆ ನನ್ನ ಉತ್ತರ ಪತ್ರಿಕೆ ಸಿಕ್ಕಿರಬೇಕು).


ಆಗಿನಿಂದ ನನಗೂ ಚೀಟಿಗೂ ಅಂಟಿದ ನಂಟು ಬಿಟ್ಟು ಹೋಗೇ ಇಲ್ಲ. ಯಾವುದೇ ಕೆಲಸವಿರಲಿ, ಎಲ್ಲಿಗಾದರೂ ಹೋಗುವುದೇ ಇರಲಿ, ಮೊದಲ ಕೆಲಸ ಆದಿನದ ಕೆಲಸ, ಪರ್ಚೇಸ್, ಇತ್ಯಾದಿ ಬಗ್ಗೆ ಚೀಟಿ ಬರೆದಿಡುವುದು. ಕಿಸೆಯಲ್ಲಿ ಕಾಸಿಲ್ಲದಿದ್ದರೂ ಪರವಾಗಿಲ್ಲ, ಚೀಟಿ ಇಲ್ಲದೇ ಎಲ್ಲೂ ಹೋಗುವುದಿಲ್ಲ.


ಪ್ಯಾಂಟ್‌ನ ಎಡಕಿಸೆಯಲ್ಲಿ ಮನೆಯಾಕೆ ತರಲು ಹೇಳಿದ ಐಟಮ್‌ಗಳ ಲಿಸ್ಟ್. ಬಲಕಿಸೆಯಲ್ಲಿ ನನಗೆ ಬೇಕಾದದ್ದು. ಶರ್ಟ್‌ ಕಿಸೆಯಲ್ಲಿ ಆಫೀಸ್‌ಗೆ ಸಂಬಂಧಿಸಿದ ಚೀಟಿ. ನನ್ನ ಬಲಕಿಸೆಯ ಚೀಟಿಯ ಖರ್ಚುಗಳೆಲ್ಲಾ ಆಫೀಸಿನ ಲೆಕ್ಕದಲ್ಲಿ ಹೋಗುತ್ತದೆ. ಕಾಫಿ, ಊಟ ಇತ್ಯಾದಿಗಳೆಲ್ಲಾ ಆಫೀಸ್ ಕಸ್ಟಮರ್‌ಗಳು ನೋಡಿಕೊಳ್ಳುವರು. ಸಹೋದ್ಯೋಗಿಗಳ ಬೈಕ್, ಕಾರುಗಳಿರುವುದೇ ನನಗಾಗಿ..


ಇನ್ನು ಎಡಕಿಸೆಯ ಚೀಟಿ ಶೆಟ್ಟರ ಅಂಗಡಿಗೆ ಕೊಟ್ಟರೆ ಆಯಿತು. ಪಾಪದ ಜನ. ರೆಗ್ಯುಲರ್ ಕಸ್ಟಮರ್ ಎಂದು ಹನ್ನೊಂದು ರೂಪಾಯಿಯ ತೆಂಗಿನಕಾಯಿ ನನಗೆ ಎಂಟು ರೂ.ನಂತೆ ಲೆಕ್ಕ ಬರೆಯುವರು. ಕೊನೆಗೆ ೫೨೫೦/೫೩೦೦ ರೂ. ಆದಾಗ ಲೆಕ್ಕ ಒಪ್ಪಿಸುವರು. ಪೈಸೆ-ಪೈಸೆ ಚಕ್ ಮಾಡಿ, ೫೦೦೦ ರೂ.ಗೆ ರೌಂಡ್ ಮಾಡಿ, ಪಕ್ಕದ ಎಟಿಎಮ್‌ನಿಂದ, ಜತೆಯಲ್ಲಿರುವಾತನ(ಆಫೀಸ್ ಕಸ್ಟಮರ್) ಕಾರ್ಡ್‌ನಿಂದ ತೆಗೆಸಿ ಕೊಡುವೆನು.


ಅಂದಹಾಗೆ ಇನ್ನೊಂದು ಚೀಟಿಯಿತ್ತು. ಸಂಪದ ಸಮ್ಮಿಲನಕ್ಕೆ ಬರಲು ತಯಾರಿ ಮಾಡಿದ್ದು. ಒಂದ್ನಿಮಿಷ...ಸಿಕ್ಕಿತು. ನೀವೆಲ್ಲಾ ನನ್ನ ಫ್ರೆಂಡ್ಸ್ ಅಲ್ವಾ.. ಹೇಳುತ್ತೇನೆ.ಅದರಲ್ಲಿ-


೧. ಮಂಜು (೧/೧೨), .


೨. ನಾವಡರು(೩/೧೨)


೩. ಸಿ.ಪಿ.ಯು., ಮಾನಿಟರ್, ಗೋಣಿಚೀಲ (೫/೧೨)


೪. ರೂಟ್ ಮ್ಯಾಪ್


೫. ಲಕ್ಷ್ಮಿಚೇ. ಮಂಗಳೀಬೇರು.(೪/೧೨)


೬. ಹಾಡಿನ ಸಿ.ಡಿ., ಮಾತ್ರೆಗಳು(೫/೧೨)


೭.


೮.


ಅರ್ಥವಾಗಿರಬಹುದು. ಇಲ್ಲದಿದ್ದರೆ ಮುಂದಿನ ಪ್ರತಿಕ್ರಿಯೆಯಲ್ಲಿ ವಿವರಿಸುವೆನು.


-ಗಣೇಶ.


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಣಿಶೆಟ್ರಿಗೆ ನನ್ನಿ. ಹಾಗೇ ಚೀಟಿಯ ವಿವರ ಈಗಲೇ ಹೇಳಿಬಿಡುತ್ತೇನೆ. (ದಯಮಾಡಿ ನನ್ನ ಹೆಸರು ಬಳಸಬೇಡಿ ಎಂದು ಮಂಜು/ನಾವಡರು ಜೋರುಮಾಡುವ ಮೊದಲು). ೧. ಮಂಜು (೧/೧೨) : ಡಿಸೆಂಬರ್ ಒಂದಕ್ಕೆ ಮಂಜುಗೆ ಫೋನ್ ಮಾಡಿ ಅವರ ಕಾರಲ್ಲಿ ನಾನೂ ಬರುತ್ತೇನೆ ಎನ್ನುವುದು. ಒಪ್ಪಿದರೆ, ಒಂದು ಸೀಟ್‌ಗೆ ರಘು ಇದ್ದರೂ, http://sampada.net/b... ಹಿಂದಿನ ಎರಡು ಸೀಟು ಖಾಲಿ ಇದೆಯಲ್ಲ.ಅದರಲ್ಲಿ ನಾನೂ,ನನ್ಹೆಂಡ್ತಿನೂ(+ ಡಿಕ್ಕಿಯಲ್ಲಿ ಗೋಣಿಚೀಲ) ಬರುತ್ತೇವೆ ಅನ್ನುವುದು. ಕಾರಲ್ಲಿ ಹೋಗುವಾಗ ನನಗೆ ಹಾಡು ಕೇಳಿಕೊಂಡು ಹೋಗುವುದೆಂದರೆ ಬಹಳ ಖುಷಿ. ಅದಕ್ಕೆ ಹಾಡಿನ ಸಿ.ಡಿ.ನೂ ತರುವೆ. ಭಜನೆಗಳು-ನಾನೇ ಹಾಡಿದ್ದು!. ೨. ನಾವಡರು (೩/೧೨) : ೩ನೇ ತಾರೀಕು,ನಾವಡರಿಗೆ ಫೋನ್ ಮಾಡಿ, ನನ್ನ, ಮನೆಯಾಕೆಯ, ಮಕ್ಕಳ, ಮೊಮಕ್ಕಳ, ನಕ್ಷತ್ರ, ರಾಶಿ, ಗೋತ್ರ ತಿಳಿಸಿ, ನಮ್ಮ ಹೆಸರಲ್ಲಿ ದೇವಿಗೆ ಅರ್ಚನೆ ಮಾಡಿಸಲು ತಿಳಿಸುವುದು. ಸಾಧ್ಯವಾದರೆ ಸಮೀಪದ ಶೃಂಗೇರಿಯಲ್ಲೂ ಅರ್ಚನೆ ಮಾಡಿಸಿ ಬರುವಾಗ ಪ್ರಸಾದ ತರಲು ಹೇಳುವುದು. ನಾವಡರು ಪಾಪದ ಜನ. ಒಳ್ಳೆಯವರು.. ೩. ಸಿ.ಪಿ.ಯು., ಮಾನಿಟರ್, ಗೋಣಿಚೀಲ (೫/೧೨) : ಸಮ್ಮಿಲನದಲ್ಲಿ ಕಂಪ್ಯೂಟರ್ ತಜ್ಞರೇ ತುಂಬಿರುವರು. ನನ್ನ ಕಂಪ್ಯೂಟರ್‌ನ ಪ್ರಾಬ್ಲೆಮ್‌ಗಳನ್ನೆಲ್ಲಾ ಇನ್ನೊಂದು ಪಟ್ಟಿ ಮಾಡಿಟ್ಟಿದ್ದೇನೆ. ಅದಿಲ್ಲ, ಇದಿಲ್ಲ ಎಂದು ಅವರು ತಪ್ಪಿಸಿಕೊಳ್ಳದಂತೆ ಸ್ವಿಚ್ ಬೋರ್ಡ್ ಸಹಿತ ಎಲ್ಲ ಬಿಚ್ಚಿಟ್ಟು, ಮಂಜು ಕಾರಿನ ಡಿಕ್ಕಿಯಲ್ಲಿ ಹಾಕಿ ತರುವೆನು. ಹಾಗೇ ಲಿನಕ್ಸ್ ಫ್ರೀ ಕೊಡುತ್ತಾರೆ ಅಂದು ಕೇಳಿದ್ದೆ. ಅದು ಎಷ್ಟು ದೊಡ್ಡದ್ದು ಅಂತ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ಒಂದು ಗೋಣಿಚೀಲನೂ ಇಟ್ಟುಕೊಳ್ಳುವೆ. ೪. ರೂಟ್ ಮ್ಯಾಪ್ : ಮಂಜು ಎಲ್ಲಾದರೂ ನಡು ದಾರಿಯಲ್ಲಿ ನಮ್ಮನ್ನು ಕಾರಿಂದ ಇಳಿಸಿದರೆ, ಮೀಟಿಂಗ್ ನಡೆಯುವ ಸ್ಥಳಕ್ಕೆ ನಡಕೊಂಡು ಹೋಗಲು ದಾರಿ ತಿಳಿದಿರಲಿ, ಎಂದು.. ೫. ಲಕ್ಷ್ಮಿಚೇ. ಮಂಗಳೀಬೇರು.(೪/೧೨) : ನನಗೆ ಮಾತನಾಡಲು ಕೊಟ್ಟ ಐದು ನಿಮಿಷ ಕಾಲಾವಕಾಶದಲ್ಲಿ, ಲಕ್ಷ್ಮೀ ಚೇಳು ಮತ್ತು ಮಂಗಳೀ ಬೇರಿನ ಬಗ್ಗೆ ೧೮೦ ನಿಮಿಷ ಮಾತನಾಡಲು ಇನ್ನೊಂದು ಚೀಟಿ ರೆಡಿ ಮಾಡಿದ್ದೇನೆ. ೬. ಹಾಡಿನ ಸಿ.ಡಿ., ಮಾತ್ರೆಗಳು(೫/೧೨) : ಹಾಡಿನ ಸಿ.ಡಿ. ಬಗ್ಗೆ ಮೇಲೆ ಹೇಳಿದ್ದೇನೆ. ಹಿಂದೆ ಹೋಗುವಾಗ ತಲೆನೋವು ಕಾರಣ ಹೇಳಿ ಮಂಜು ನಮ್ಮನ್ನು ಬಿಟ್ಟು ಹೋಗದಂತೆ ತಲೆನೋವಿನ ಮಾತ್ರೆಗಳನ್ನೂ ತರುವೆನು. ೭. ೮. ...ಇನ್ನು ನೆನಪಾದ ಹಾಗೆ ಬರೆದಿಟ್ಟುಕೊಳ್ಳಲು ಖಾಲಿ ಬಿಟ್ಟದ್ದು.. (ನೋಂದಾಯಿಸಿದ ಹಾಗೇ ನನ್ನ ಹೆಸರು ಕ್ಯಾನ್ಸಲ್ ಆಗುತ್ತಿದೆಯಲ್ಲಾ? ಯಾಕೆ? :) ) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಹಾಸ್ಯ ಬರಹ, ಕೊನೆಯಲ್ಲಿ ಹೇಳಿದ "(ನೋಂದಾಯಿಸಿದ ಹಾಗೇ ನನ್ನ ಹೆಸರು ಕ್ಯಾನ್ಸಲ್ ಆಗುತ್ತಿದೆಯಲ್ಲಾ? ಯಾಕೆ? :) )" ವಾಕ್ಯ ಓದಿ ಅಂತೂ ನಗು ತಡೆಯೋಕ್ಕೆ ಆಗ್ಲಿಲ್ಲ, ನಿಮ್ಮ ಚೀಟಿ ವ್ಯವಹಾರ ಭಾಳ ಜೋರಾಗಿದೆ ಮಾರಾಯ್ರೇ!! ಹೀಗೇ ಬರೀತಿರಿ ರೇಖಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ, ಸುಮ್ನೆ ನಿನ್ನೆ ರಾತ್ರಿ ಈ ಲೇಖನ ಹಾಕಿ ನನ್ನ ತಲೆಗೆ ರಾತ್ರಿಇಡೀ ಹುಳ ಬಿಟ್ಟಿರಿ! ರಾತ್ರಿ ಇಡೀ ನನ್ನ ಹೆಸರಿನ ಪಕ್ಕದ ೩/೧೨ ಬಗ್ಗೆ ಭಾರೀ ತಲೆಕೆಡಿಸ್ಕೊ೦ಡು, ಸರಿಯಾಗಿ ನಿದ್ರೆನೂ ಮಾಡಲಿಲ್ಲ. ಕೊನೆಗೆ ನನ್ನದೇ ದಾರಿಯಲ್ಲಿ ಯೋಚಿಸಿ, ೩ ನೇ ತಾರೀಕು ತಮ್ಮ ಸವಾರಿ ನಮ್ಮ ಕಡೆ ಚಿತ್ತೈಸಬಹುದೇನೋ ಎ೦ದು ಅರ್ಥೈಸಿಕೊ೦ಡು, ರಾತ್ರಿಯ ಕೊನೆಯ ಮೂರು ಘ೦ಟೆಗಳಕಾಲ ಚೆನ್ನಾಗಿ ನಿದ್ರೆ ಮಾಡಿದೆ! ಬೆಳಿಗ್ಗೆ ಬ೦ದು ಈ ಪ್ರತಿಕ್ರಿಯೆ ಓದಿ, ಮನಸಾರೆ ನಕ್ಕುಬಿಟ್ಟೆ ಅಲ್ಲಿನ “ ನಾವಡರು ಪಾಪದ ಜನ.. ಒಳ್ಳೆಯವರು“ ಎ೦ಬ ಸಾಲಿಗೆ! ಖುಷಿಯಾಯಿತು ಹಾಗೆಯೇ ಬೇಸರವೂ ಆಯಿತು! ಏಕೆ೦ದರೆ ನಮ್ಮಲ್ಲಿ ಎರಡು ರೀತಿಯ “ಪಾಪ“ ಗಳಿವೆ!! ಅದರಲ್ಲಿ ನಾನು ಯಾವ ವರ್ಗದವನೋ? ಹ.ಹ.ಹ! ಒಟ್ಟಾರೆ ಖುಷಿ ಕೊಟ್ಟಿರಿ! ನನಗೇ ಅರಿವಿರದ ಹಾಗೆ ನನ್ನ ಮುಖದಲ್ಲೊ೦ದು“‘ಪಾಪ“‘ದ ಮುಗುಳ್ನಗು ಮೂಡಿದ್ದ೦ತೂ ಸುಳ್ಳಲ್ಲ!! ೩ ನೇ ತಾರೀಕು ನಕ್ಷತ್ರ ರಾಶಿ.... ಮರೀಬೇಡಿ! ಶಾರದಮ್ಮನಿಗೂ ಹೇಳ್ಬಿಡ್ತೀನಿ ಬೇಕಾದ್ರೆ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, >>>೩ ನೇ ತಾರೀಕು ನಕ್ಷತ್ರ ರಾಶಿ.... ಮರೀಬೇಡಿ! ಶಾರದಮ್ಮನಿಗೂ ಹೇಳ್ಬಿಡ್ತೀನಿ ಬೇಕಾದ್ರೆ... -ನನ್ನ (ಅವ)ಗುಣಗಳನ್ನು ಪಟ್ಟಿ ಮಾಡಿ ಹೇಳಿದ ಮೇಲೂ ೩ನೇ ತಾರೀಕಿಗೆ ಕರೆ ಮಾಡಲು ಮರೆಯದಿರಿ ಅನ್ನುತ್ತೀರಲ್ಲಾ! ನಿಮ್ಮಂತಹವರು ಇರುವುದರಿಂದಲೇ ಕಾಲದ ಕನ್ನಡಿ, ಕ್ಷಮಿಸಿ ಮಳೆ ಬರುತ್ತಿರುವುದು. ನಿಮ್ಮ ನಿದ್ರೆಗೆ ತೊಂದರೆ ಕೊಟ್ಟುದಕ್ಕೆ ಕ್ಷಮಿಸಿ, -ಗಣೇಶ. ಮೆಚ್ಚಿ ಪ್ರತಿಕ್ರಿಯೆ ನೀಡಿದ ಕವಿನಾಗರಾಜರಿಗೂ ನನ್ನಿ, -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-):-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆ ನೀಡಿ ಮೆಚ್ಚಿದ ರೇಖಾ, ಆಸುಹೆಗ್ಡೆ, ಗೋಪಾಲ್‌ರಿಗೆ ನನ್ನಿ, >>>೫. ಲಕ್ಷ್ಮಿಚೇ. ಮಂಗಳೀಬೇರು.(೪/೧೨) : ನನಗೆ ಮಾತನಾಡಲು ಕೊಟ್ಟ ಐದು ನಿಮಿಷ ಕಾಲಾವಕಾಶದಲ್ಲಿ, ಲಕ್ಷ್ಮೀ ಚೇಳು ಮತ್ತು ಮಂಗಳೀ ಬೇರಿನ ಬಗ್ಗೆ ೧೮೦ ನಿಮಿಷ ಮಾತನಾಡಲು ಇನ್ನೊಂದು ಚೀಟಿ ರೆಡಿ ಮಾಡಿದ್ದೇನೆ. -ಲಕ್ಷ್ಮೀಚೇಳಿನ ಬಗ್ಗೆ ನಮ್ಮ ದೇವರು ಬರೆದಿರುವರು : http://sampada.net/b... ಓದಿಕೊಳ್ಳಿ.. ೧೮೦ ನಿಮಿಷದಲ್ಲಿ ೧೦ ನಿಮಿಷ ಮೈನಸ್.. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬರಹ ಓದಿ, ಕೆಲ ಸಾಲುಗಳು ಯಾಕೆ ಹಾಕಿಲಾಲ್ ಅನ್ನಿಸಿತೆ? ಇಡೀ ಬರಹ ಹಿಡಿಸಿತು, ನಾ ಅದನೆ ಹಾಕಿದರೆ ಲೋಡು ಜಸ್ತಿಯಾಗ್ತೆ ಅದ್ಕೆ, ಚುಟುಕು ಪ್ರತಿಕ್ರಿಯೆ.. ಮೊದಲಿಂದ ಕೊನೆವರ್ಗೆ ಮತ್ತೆ ಪ್ರತಿಕ್ರಿಯೆ ಓದಿಯೂ ನಗೆ ಉಕ್ಕುತ್ತಲೇ ಇತ್ತು... l akchmi ಚೇಳು ಬಗ್ಗೆ ಇಲ್ಲಿ ಮಾಹಿತಿ sikkitu ನೀವು heluva modale !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅಣ್ಣ- ಅವರ ಗಮನ ಇತ್ತ ವಸಿ ಹರಿಯಲಿ ... :()))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಯವರೆ, ನನ್ನ ಈವತ್ತಿನ ವ್ಯವಹಾರದ ಚೀಟಿಯಲ್ಲಿ ಈ ಲೇಖನ ಇರಲಿಲ್ಲ. ನಾಳೆಯಿಂದ ನೀವು ನೆನಪಿಸಬೇಕಾಗಿಯೇ ಇಲ್ಲ. ಒಂದೊಂದಾದರೂ ಹಳೇ ಬರಹಗಳ ಓದುವೆ. ಪ್ರತಿಕ್ರಿಯೆ ನೀಡಿ ಮೆಚ್ಚಿ, ಪುನಃ ನೆನಪಿಸಿದ್ದಕ್ಕೆ ತುಂಬಾ ತುಂಬಾ ನನ್ನಿ. ನಾನು ಮಾಡಿದೆ ಎಂದು ನೀವು ಪರೀಕ್ಷೆಯಲ್ಲಿ ಹಾಗೆ ಮಾಡಬೇಡಿ. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:())) \\\\\\\\|||||||||/////////
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಬರಹದಿಂದ ಉತ್ತೇಜಿತರಾದ ಶಿಷ್ಯರು ಚೀಟಿಯೊಂದಿಗೆ ಪರೀಕ್ಷೆ ಬರೆಯಲು ಹೋಗುತ್ತಾರೇನೋ ಎಂಬ ಅನುಮಾನ ನನಗಿದೆ. (ಕ್ಶಮಿಸಿ -ತಮಾಷೆಗೆ) ಆದಿತ್ಯಾದಿ ಗ್ರಹಾಃ ಸರ್ವೇ ಸನಕ್ಷತ್ರಾಃ ಸರಾಶಯಃ | ಕುರ್ವಂತು ಪ್ರೇರಣಂ ನಿತ್ಯಂ ಪರೀಕ್ಷಾಯಾಂ ವಿಶೇಷತಃ || ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಜುಂಡ ಅವ್ರೆ- ಆ ಶ್ಲೋಕದ ಅರ್ಥ ಏನು?.... ವಿವರಿಸುವಿರ? \\\\\\\\\\||||||||||||//////////
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಕ್ಷತ್ರಗಳು ಮತ್ತು ರಾಶಿಗಳ ಸಹಿತ ಸೂರ್ಯಾದಿ ಎಲ್ಲಾ ಗ್ರಹಗಳು ನಿತ್ಯವೂ, ವಿಶೇಷವಾಗಿ ಪರೀಕ್ಷೆಯಲ್ಲಿ ಪ್ರೇರಣೆಯನ್ನು ನೀಡಲಿ. ಮೊದಲನೆಯ ಸಾಲು ಹಳೆಯದು. ಎರಡನೆಯ ಸಾಲು ಡಬ್ಬಿಂಗ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಜುಂಡ ಅವ್ರೆ- ನನ್ನ ಕೋರಿಕೆಯಂತೆ ಶ್ಲೋಕದ ಅರ್ಥವನ್ನು ಸರಳವಾಗಿ ಹೇಳಿರುವಿರಿ.. ಶುಭವಾಗಲಿ.. ನನ್ನಿ \\\\\\|||||||||||||//////
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.