ಮೌನ ಅಭಿಮಾನಿ

4.5

ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ.


'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್ನಾಗಿತ್ತು.'ಮೋಹನ ರಾಗದ ಬಗ್ಗೆಯೂ ಲೇಖನಗಳು ಮೋಹಕವಾಗಿತ್ತು.(ನನ್ನ ಮಗ ಸಂಗೀತ ಜೂನಿಯರ್ ಪರೀಕ್ಷೆಗೆ ಕಟ್ಟಿದಾಗ ಸಂಗೀತಕ್ಕೆ ಸಂಬಂಧಿಸಿದ ಕೆಲ ಪುಸ್ತಕಗಳನ್ನು ತಂದಿದ್ದೆ.ಅವುಗಳಲ್ಲಿ ಇಂಗ್ಲೀಷ್ ಗ್ರಾಮರ್ ಕಲಿಸಿದಂತೆ ಸಂಗೀತ ಪಾಠಗಳಿತ್ತು.)ಆ ದಿನದಿಂದ ಬೇರೆ ರಾಗಗಳ ಬಗ್ಗೆ ಅವರ ಲೇಖನ ಬರುವುದನ್ನು ಕಾಯುತ್ತಿದ್ದೇನೆ ಅಷ್ಟೆ. ಪ್ರತಿಕ್ರಿಯೆ ಬರೆಯುವ ಗೋಜಿಗೆ ಹೋಗಲಿಲ್ಲ.


ಪತ್ರಿಕೆ,ವಾರಪತ್ರಿಕೆ,ಟಿ.ವಿ.,ರೇಡಿಯೋ,ಸಿನೆಮಾದಲ್ಲೂ ಹಲವು ವಿಷಯಗಳು ಮೆಚ್ಚಿಗೆಯಾಗುತ್ತದೆ.ನಾವು ಒಂದು ಲೇಖನ/ಕಾರ್ಯಕ್ರಮವನ್ನು ಮೆಚ್ಚಿ ಪತ್ರ ಬರೆದಿದ್ದು ಇದೆಯೋ? ಈಗ ಪತ್ರಿಕೆ,ವಾರಪತ್ರಿಕೆಗಳಲ್ಲಿ ಕೊನೇ ಪುಟಕ್ಕೆ ಮಾತ್ರ ಸೀಮಿತವಾಗಿದ್ದ ಸಿನೆಮಾ ವಿಷಯ ಪ್ರತಿ ಪುಟಗಳನ್ನು ಕಬಳಿಸುತ್ತಾ ಮೊದಲ ಪುಟಕ್ಕೂ ಆಗಮಿಸಿದೆ.


'ಚಂದನ' ಬಿಟ್ಟು ಉಳಿದ ಟಿ.ವಿ.ಯವರಿಗಂತೂ ಸಂಗೀತ,ಸಾಹಿತ್ಯ,ಹಾಸ್ಯವೆಲ್ಲಾ ಸಿನಿಮಾಕ್ಕೆ ಸಂಬಂಧಿಸಿದ್ದು ಮಾತ್ರ. ಕ್ರಿಕೆಟ್,ಸಿನೆಮಾ,ರಾಜಕೀಯದ ಅಭಿಮಾನಿಗಳು ಮಾತ್ರ ಕಾರ್ಯತಹ ಅಭಿಮಾನ ತೋರಿಸುವರು.ನಮ್ಮದೇನಿದ್ದರೂ ಕೇವಲ ಮೌನಾಭಿಮಾನ.


ಮೆಚ್ಚುಗೆ ನುಡಿ ನಮ್ಮ ಹೃದಯದಲ್ಲಿರುತ್ತದೆ.ನಾಲಗೆಗೆ ಬರುವುದಿಲ್ಲ. ತಮ್ಮ ತಮ್ಮ ಮನೆಯಲ್ಲಿ ಇನ್ನೂ ಅಧ್ವಾನ.ಹೃದಯದಲ್ಲಿ ಮೆಚ್ಚುಗೆ,ಬಾಯಲ್ಲಿ ಕಿಡಿನುಡಿ .......

fair and lovelyನೋ ಸ್ನೋವನ್ನೋ ಹಚ್ಚಿ 'ಇದ್ದುದರಲ್ಲೇ'ಸಿಂಗರಿಸಿ ಹೊರಟ ಮಗಳ ಸೌಂದರ್ಯ ಮೆಚ್ಚಿಗೆಯಾದರೂ...ಹೇಳುವುದು-"ಸುಮಾರು ಅರ್ಧ ಘಂಟೆಯಿಂದ ನೋಡುತ್ತಿದ್ದೇನೆ.ಮೇಕಪ್ ಮುಗೀತಾನೇ ಇಲ್ಲಾ..ನೀನು ಕಾಲೇಜಿಗೆ ಹೋಗುವುದಾ?ಫ್ಯಾಷನ್ ಶೋಗಾ?"


ನಾವು just pass ಆಗಿರುವುದು ಗೊತ್ತಿದೆ.ಮಗ ೯೦% ಆಸುಪಾಸಿನಲ್ಲಿ ಮಾರ್ಕ್ ತೆಗೆದುಕೊಳ್ಳುತ್ತಿರುವ ಬಗ್ಗೆ ಹೆಮ್ಮೆಯಿದೆ..."ಸಂಸ್ಕೃತದಲ್ಲಿ ಮಾರ್ಕ್ಸ್ ನೋಡು..ಏನು ಓದುತ್ತಾನೋ ಕಪಿ.ನಿಮ್ಮಮ್ಮನ ಹತ್ತಿರವೇ sign ಹಾಕಿಸಿಕೊ ಹೋಗು"ಎನ್ನುತ್ತೇವೆ.


ತಂದೆಯವರ ಕಾಲು ಬಿದ್ದು ಆಶೀರ್ವಾದ ಪಡಕೊಂಡು ಕೆಲಸಕ್ಕೆ ಹೊರಡಬೇಕು ಅಂದುಕೊಳ್ಳುತ್ತೇವೆ..."ಗ್ಯಾಸ್ ಬುಕ್ ಮಾಡಿದಿರಾ? ಒಂದು ವಾರದಿಂದ ಹೇಳುತ್ತಿದ್ದೇನೆ.ಅದೊಂದು....."ಎಂದು ಮುಖಗಂಟಿಕ್ಕಿಕೊಂಡು ಹೋಗುತ್ತೇವೆ.


ಕೆಲಸದಿಂದ ಬರುವಾಗ ಒಂದು ಮೊಳ ಮಲ್ಲಿಗೆ ತೆಗೆದುಕೊಂಡು ನಮ್ಮಷ್ಟೇ ದುಡಿದು ದಣಿದಿರುವ ಹೆಂಡತಿಗೆ ಕೊಡುವ ಮನಸ್ಸು........ಬ್ಯಾಗ್ ಅವಳ ಮೇಲೆ ಬಿಸಾಕಿ 'ತಲೆ ಸಿಡೀತಾ ಇದೆ.Tea ಆಗಿದ್ಯಾ..ಇಲ್ಲಾ tea ಪುಡಿ ತರಬೇಕಷ್ಟೆಯಾ?'ಕೊಂಕು ನುಡೀತೇವೆ ಯಾಕೆ?ಮದುವೆಗೆ ಮೊದಲು ನೂರಾರು ಬಾರಿ ಹೇಳುತ್ತಿದ್ದ'I LOVE YOU' ಗೋಡ್ರೇಜ್ನೊಳಗೆ ಭದ್ರವಾಗಿಟ್ಟಿರುತ್ತೇವೆ.ಯಾಕೆ ನಾಲಗೆಗೆ ಬರುವುದಿಲ್ಲಾ?


ತಾನೇ ೨-೩ ಖಾಯಿಲೆಯಿಂದ ಬಳಲುತ್ತಿದ್ದರೂ ಮಗ 'ತಲೆಸಿಡಿತಾ ಇದೆ'ಎಂದು ಹೇಳಿದ್ದ ಮಾತು ಕಿವಿಗೆ ಬಿದ್ದಕೂಡಲೇ 'ತಲೆ ನೋವಾ ಮಗನೇ. ಹಣೆಗೆ ವಿಕ್ಸ್ ಹಚ್ಚುತ್ತೇನೆ'ಎಂದ ತಾಯಿಗೆ 'ಏನೂ ಬೇಡ.ನೀನು ಸುಮ್ಮನಿದ್ದರೆ ಸಾಕು.'ಎನ್ನುತ್ತೇವೆ. "ಅಮ್ಮಾ,ನಿನ್ನ ಸೇವೆನೇ ನಾನು ಮಾಡಬೇಕು,ಅದು ಬಿಟ್ಟು ನಿನ್ನ ಹತ್ತಿರ ನಾನು ಕೆಲಸ ಮಾಡಿಸುವುದೇ" ಎಂಬ ಮಾತು ಹೃದಯಕ್ಕೂ ಬಾಯಿಗೂ ನಡುವೆ ಎಲ್ಲೋ ಕಟ್ ಆಗುತ್ತದೆ. ತಾಯಿಯನ್ನು ಹೃದಯದಲ್ಲಿ ಅತೀ ಪೂಜ್ಯ ಭಾವನೆಯಿಂದ ನೋಡುವೆವು.ಅವರ ಆರೋಗ್ಯ,ಆಹಾರ,ವಿಹಾರದ ಬಗ್ಗೆ ಗಮನಿಸುವುದೇ ಇಲ್ಲ. ನಾವು ಯಾಕೆ ಹೀಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವು ಯಾಕೆ ಹೀಗೆ ಅಂತ ಕೇಳುವ ಜೊತೆಗೆ ನಾನು ಯಾಕೆ ಹೀಗೆ ಅಂತ ಕೇಳಿ.. ಹಾಗು ಉತ್ತಮ ಲೇಕನಗಳಿಗೆ ಪ್ರತಿಕ್ರೀಯೆ ಬರೆಯಲು ಸುರು ಹಚಿಕೊಳ್ಳಿ, ನಾನು ಪ್ರಯತ್ನಿಸುತ್ತಿದೇನೆ .. :))
ಸಂಪದದಲ್ಲಿ ಈಚೆಗೆ ಕನ್ನಡ ಭಾಷೆ ಬಗ್ಗೆ ಚರ್ಚೆಗೆ ಸಿಕ್ಕ ಪ್ರತಿಕ್ರೀಯೆಗಳು ಬೇರೆ ವಿಷಯಗಳಿಗೆ ಸಿಗ್ತಾಇಲ್ಲ ಅಂತ ನನ್ನ ಅನಿಸಿಕೆ. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೋಶನ್ ರವರೆ,
ಮೊದಲಿಗೆ 'ನಾನು ಯಾಕೆ ಹೀಗೆ?'ಎಂದೇ ಬರೆದಿದ್ದೆ.ಮೇಲೆ ಬರೆದಿದ್ದುದರಲ್ಲಿ ಅರ್ಧ ನನ್ನ,ಉಳಿದರ್ಧ ಅಕ್ಕಪಕ್ಕದವರ ವರ್ತನೆ ನೋಡಿ ಬರೆದಿದ್ದು.ಹಾಗಿರುವಾಗ ನಾನು ಎನ್ನುವುದು ತಪ್ಪಾಗುವುದಲ್ವಾ?
ಉತ್ತಮ ಲೇಖನಗಳಿಗೆ ಪ್ರತಿಕ್ರಿಯೆ ತಾವು ಬರೆಯುತ್ತಿರುವಿರಿ.ನಾವು(ನು) ಸುರುಹಚ್ಚಿಕೊಳ್ಳಬೇಕಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಬ್ಬರೀ ಹೇಳಿದ್ರಿ ಗುರುಗಳ. ನಿಮ್ಮ ಲೇಖನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸೋದು ಮುಖ್ಯ ಅಂತ ತಿಳಿಸಿದ್ರಿ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಬ್ಬರೀ ಹೇಳಿದ್ರಿ ಗುರುಗಳ. ನಿಮ್ಮ ಲೇಖನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸೋದು ಮುಖ್ಯ ಅಂತ ತಿಳಿಸಿದ್ರಿ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯರೆ,
ತಾವು ಬರೆದಿರುವ ವಿಷಯ ನಿಜವಾಗಿಯೂ ಚಿಂತನಾರ್ಹವಾಗಿದೆ. ಆದರೆ ದಿನನಿತ್ಯದ ಜಂಜಾಟದ ಬದುಕಿನಲ್ಲಿ ಇವೆಲ್ಲ ಸಾಧ್ಯವಿಲ್ಲ. ಅಪರೂಪಕ್ಕೊಮ್ಮೆ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸಿ ಮೆಚ್ಹುಗೆಯನ್ನೊ/ಕ್ರತಜ್ನತೆಯನ್ನೊ ವ್ಯಕ್ತಪಡಿಸಬಹುದು ಆಗ ಅದೊಂದು ವಿಶೇಷವೆನಿಸುತ್ತದೆ. ಬದಲಾಗಿ ಎಲ್ಲ ಸಮಯದಲ್ಲಿ ಮಾಡಹೋದರೆ ಕೆಲವೇ ದಿನದಲ್ಲಿ ಅದೊಂದು ಯಾಂತ್ರಿಕ ಕ್ರಿಯೆಯಾಗಿ ಸಪ್ಪೆಯೆನಿಸಿಬಿಡುತ್ತದೆ. ಅಲ್ಲವೇ?
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್ ಸರ್,
>ದಿನನಿತ್ಯದ ಬದುಕಿನಲ್ಲಿ ಇವೆಲ್ಲಾ ಸಾಧ್ಯವಿಲ್ಲ.
-ಸಾಧ್ಯವಿದೆ. ಪ್ರಯತ್ನಿಸಿ ನಂತರ ತಿಳಿಸಿ.

>ಅಪರೂಪಕೊಮ್ಮೆ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಬಹುದು.
-ಪ್ರತಿಯೊಂದು ಕ್ರಿಯೆಗೆ ಬೇಡ.ಮೆಚ್ಚುಗೆಯಾದುದನ್ನು ಕೂಡಲೆ ವ್ಯಕ್ತಪಡಿಸಿ.

>ಎಲ್ಲಾ ಸಮಯದಲ್ಲಿ ಮಾಡಹೋದರೆ ಕೆಲವೇ ದಿನದಲ್ಲಿ ಯಾಂತ್ರಿಕ ಕ್ರಿಯೆಯೆನಿಸಿ ಸಪ್ಪೆಯಾಗಬಹುದು.
- 'ಅಭಿಮಾನಿ ದೇವರು'ಶಬ್ದ ಯಾಂತ್ರಿಕ ಕ್ರಿಯೆ ಅನಿಸುತಿತ್ತೆ?
-ಸಪ್ಪೆಯಾಗುತ್ತಾ ಸಾಗುವ ಯಾಂತ್ರಿಕ ಜೀವನ ಸುಖಮಯವಾಗುವುದು.
ವಂದನೆಗಳು.ನಿಮ್ಮ ಫೊಟೊ ಸುಂದರವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೊಡ್ಡ ಕಿವಿ ಸಣ್ಣ ಕಣ್ಣಿರುವ ಗಣೇಶ ,
ಸರಿಯಾಗಿ ನೋಡು...
ಮೀಸೆ ಕೂಡ ಚೆನ್ನಾಗಿದೆ ಅಲ್ವಾ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುರಳಿ,
ನಿಮ್ಮ ನಗೂ ಚೆನ್ನಾಗಿದೆ.ಹೆಸರಿನಂತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

lkanil ಹೇಳೋದು ನಿಜ. ಎಲ್ಲದಕ್ಕೂ ಹೊಗಳಿದರೆ ಅದರ ಬೆಲೆ ಕಮ್ಮಿಯಾಗುತ್ತೆ. ನಮ್ಮಕ್ಕನ ಬಾಯಲ್ಲಿ "ಚೆನ್ನಾಗಿದೆ" ಅನ್ನಿಸಿಕೊಳ್ಳುವುದಕ್ಕೆ ತಿಪ್ಪರಲಾಗ ಹಾಕಬೇಕು! ಆದರೆ, ಅವಳ ಒಂದು ಚೆನ್ನಾಗಿದೆ ನೂರು ನೋಬಲ್ ಪ್ರಶಸ್ತಿಗೆ ಸಮಾನ. ಮಕ್ಕಳಿಗೆ ಬೆನ್ನು ತಟ್ಟುವುದರ ಜೊತೆಗೆ ಆಗಾಗ ತಲೆಗೂ ತಟ್ಟುವಂತೆ ತಿಳಿ ಹೇಳಬೇಕು. ಇಲ್ಲದಿದ್ದರೆ, ಬಹಳ ಬೇಗ ನಮ್ಮ ತಲೆ ಮೇಲೆ ಕೂರ್ತಾವೆ ಅವು ;-)

ಅಂದಾಗೆ, ಗಣೇಶ ಅವರೆ, ನಿಮ್ಮ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಮರೆತಿಲ್ಲ :-) ನಿಮ್ಮ ಮನಸ್ಸಿಗೆ ಅನ್ನಿಸಿದ್ದು ಬರೆದಿದ್ದೀರ. ಅದು ಸರಿ. ಬಹು ಸಮಯ, number of hits ನೋಡಿದರೆ ಎಷ್ಟು ಜನಕ್ಕೆ ನಮ್ಮ ಲೇಖನ ಕಣ್ಣು ಹಾಯಿಸುವಷ್ಟು ಇಷ್ಟವಾಯಿತು ಅಂತ ತಿಳಿಯುತ್ತೆ. ಈ ಜೆಟ್ ಯುಗದಲ್ಲಿ ಅದರಿಂದಲೇ ಖುಷಿ ಪಟ್ಟುಕೋಬೇಕು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾ,
ಮಕ್ಕಳಿಗೆ ತಪ್ಪು ಮಾಡಿದಾಗ ಹೊಡೆದ ಹಾಗೆ,ಸರಿ ದಾರಿಯಲ್ಲಿದ್ದಾಗ ಹೊಗಳುವುದನ್ನೂ ಮರೀಬೇಡಿ ಎಂದಿದ್ದೆ.ಅದನ್ನೇ ನೀವು ಉಲ್ಟಾ ಹೇಳಿದಿರಿ-'ಬೆನ್ನು ತಟ್ಟುವಂತೆ ಆಗಾಗ ತಲೆಗೂ ತಟ್ಟುವಂತೆ ತಿಳಿ ಹೇಳಬೇಕು'. ನಿಮ್ಮ ಮಾತು ಸರಿ. ಇನ್ನು ತಲೆ ಮೇಲೆ ಕೂರೋ ವಿಷಯ-ತಲೆ ಮೇಲೆ ನಮ್ಮ ಮಕ್ಕಳು,ಹೃದಯದಲ್ಲಿ ತಂದೆ,ತಾಯಿ,ಅತ್ತೆ,ಮಾವ,ಪಕ್ಕದಲ್ಲಿ ಗಂಡ/ಹೆಂಡತಿ, ಜೀವನ ಸಾಗಲಿ.
ಆದರೆ ನಿಮ್ಮ ಅಕ್ಕನ ರೀತಿ ಮೀನಾಮೇಷ ಎಣಿಸಿ ಪ್ರೀತಿಸುವ ಹೊತ್ತಿಗೆ ಮಕ್ಕಳು ಬೆಳೆದು ಗರಿಬಿಚ್ಚಿ ದೂರಕ್ಕೆ ಹಾರಿ ಹೋಗಿರುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ,

ನನ್ನಂತಹವರಿಗೂ ಒಬ್ಬ ಮೌನಿ ಅಭಿಮಾನಿ ಇರುವುದು ಕೇಳಿ ನನಗೆ ನಿಜವಾಗಿಯೂ ಸಂತೋಷವಾಯಿತು :) ಮೋಹನರಾಗದ ಬಗ್ಗೆಯ ಲೇಖನಗಳ ಬಗ್ಗೆ ಒಳ್ಳೆ ಮಾತಾಡಿದ್ದೀರಿ. ಹೀಗೆ ನಾಕಾರು ಜನಕ್ಕೆ ಉಪಯೋಗವಾಗುವ ಹಾಗಿದ್ದರೆ, ಕೆಲವಾದರೂ ಪ್ರಮುಖ ರಾಗಗಳ ಬಗ್ಗೆ ನಾನು ಬರೆಯಬಲ್ಲೆ. ಬರೆಯುತ್ತೇನೆ. (ಒಂದಲ್ಲ ಒಂದು ದಿನ ;೦)

ನೀವು ಹೇಳಿದ ಮಾತಲ್ಲಿ ನಿಜ ಇದೆ. ಎಷ್ಟೋ ಬಾರಿ ನಾನೂ ಏನಾದರೂ ಟಿಪ್ಪಣಿ ಬರೆಯಬೇಕೆಂದುಕೊಂಡರೂ, ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಸ್ವಲ್ಪ ಸೋಮಾರಿಯಾಗಿಬಿಡುತ್ತೇನೆ.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನಂತಹವರಿಗೂ ಒಬ್ಬ ಮೌನಿ ಅಭಿಮಾನಿ ಇರುವುದು ಕೇಳಿ ನನಗೆ ನಿಜವಾಗಿಯೂ ಸಂತೋಷವಾಯಿತು

ಹಂಸನಂದಿಯವ್ರೆ ..
ಹಿಂಗಂದ್ರೆ ಹೆಂಗೆ... ಇಲ್ಲೂ ಒಬ್ಬ ನಿಮ್ಮ ಅಭಿಮಾನಿ ಇದಾನೆ.

ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಡುವಷ್ಟು ( ನಾನು ನನ್ನನ್ನು ನಿಮ್ಮೊಂದಿಗೆ compare ಮಾಡ್ಕೊಳ್ತಾ ಇಲ್ಲ... ಅದು ಸಾಧ್ಯವೂ ಇಲ್ಲ) ಚೆನಾಗಿ ಬರೀತಿರಿ.

ಬರೀತಾ ಇರಿ... ಓದ್ತಾ ಇರ್ತೀನಿ.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತ್ರ್ಹ್ಅವರೆ,
ನಿಮ್ಮ ಪ್ರತಿಕ್ರಿಯೆ ಓದಿ ನನಗೆ ಬಹಳ ಸಂತೋಷವಾಯಿತು(ಹಂಸಾನಂದಿಯವರಿಗಿಂತಲೂ).
ನೀವು ಬರೆದ ಲೇಖನಗಳೂ,ಅದರಲ್ಲಿ 'ಭಾರತ ಎಂದರೆ ಏನು?'ಲೇಖನ ನನಗೆ ಬಹಳ ಇಷ್ಟವಾಗಿತ್ತು.ಚರ್ಚೆ ಅರ್ಧಕ್ಕೆ ನಿಂತಂತೆ ಅನಿಸಿತು.ನೀವು,ಮಹೇಶ್ ಉಳಿದವರು ಅದನ್ನು ಮುಂದುವರಿಸುವಿರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಬರಹ ಡಾ: ಗಣೇ ಸಣ್ಣ.... ಪ್ರತಿ ಸಾಲೂ ನಿಜವೇ..... ಇದು ಪ್ರತಿಯೊಬ್ಬರೂ 'ನ ಯಾಕೆ ಹೀಗೆ? ಅಂತ ಕೇಳಿ ಕೊಳ್ಳಲೇ ಬೇಕಾದ ಪ್ರಶ್ನೆ.... >>>>ಒಂದು ಬದಲಾವಣೆ ದೊಡ್ದದರಿಂದಲ್, ಚಿಕ್ಕ ಪುಟ್ಟ ಸಂಗತಿಗಳಿಂದಲೇ ಶುರು ಮಾಡಬಹುದು... ನಾ ನಾಳೆಯಿಂದ ಶುರು ಮಾಡುವೆ... ನನಗೂ ಏಕತಾನತೆ ಬೋರ್ ಆಗಿದೆ... ಇದಕೆ ಬಂದ ಪ್ರತಿಕ್ರಿಯೆಗಳೂ ಉತ್ತೆಜನಕಾರಿಯಾಗಿದ್ದವು... ಮುದ ನೀಡಿದವು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅವರ ಉತ್ತಮ ಬರಹಗಳಲ್ಲಿ ಇದೊಂದು ನನಗೆ ತುಂಬ ಸೇರಿತು. ಐದು ವರ್ಷ ಹಿಂದಿನ ರತ್ನವನ್ನು ಹೆಕ್ಕಿ ತೆಗೆದ ಸಪ್ತಗಿರಿಯವರಿಗೆ, ಅವರ ತಾಳ್ಮೆಗೆ ವಿಶೇಷ ಧನ್ಯವಾದಗಳು. ಅಭಿಮಾನಿಗಳಲ್ಲಿ ಬರೀ ಎರಡು ವಿಧ ಅಂದುಕೊಂಡಿದ್ದೆ ವ್ಯಕ್ತ ಪಡಿಸುವವರು ಮತ್ತು ವ್ಯಕ್ತ ಪಡಿಸದೆ ಮೌನವಾಗಿರುವವರು ಎಂದು. ಆದರೆ ಸಪ್ತಗಿರಿಯವರು ತಮ್ಮದೇ ಆದ ಆಭಿಮಾನಿ in action ಎಂಬ ಮೂರನೇಯ ವಿಧವನ್ನು ಮಾಡಿತೋರಿಸಿರುವರು ‍ . ಸಂಪದ, ಗಣೇಶರ ಮುಂತಾದವರ ಮೇಲಿನ ಅವರ ಅಭಿಮಾನ ಅಮೋಘವಾದದ್ದು. ಹೆಚ್ಚಿನವರು ಬರೀ ಮೆಚ್ಚುಗೆ ವ್ಯಕ್ತ ಪಡಿಸಿ ಸುಮ್ಮನಾದರೆ, ಅವರು ಅದಕ್ಕಿಂತಲೂ ಬಹಳ ಮುಂದೆ ಹೋಗಿ ತಮ್ಮ ಉತ್ಖನನದಿಂದ ಹೊಸ ಅಭಿಮಾನಿಗಳನ್ನು ಹುಟ್ಟಿಸಿಹಾಕುತ್ತಿದ್ದಾರೆ. ಸಪ್ತಗಿರಿವಾಸಿಗಳೇ, May your tribe increase!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮದೇ ಆದ ಆಭಿಮಾನಿ in action ಎಂಬ ಮೂರನೇಯ ವಿಧವನ್ನು ಮಾಡಿತೋರಿಸಿರುವರು ‍ . :))) ಸಂಪದ, ಗಣೇಶರ ಮುಂತಾದವರ ಮೇಲಿನ ಅವರ ಅಭಿಮಾನ ಅಮೋಘವಾದದ್ದು. ;() ಹೆಚ್ಚಿನವರು ಬರೀ ಮೆಚ್ಚುಗೆ ವ್ಯಕ್ತ ಪಡಿಸಿ ಸುಮ್ಮನಾದರೆ, ಅವರು ಅದಕ್ಕಿಂತಲೂ ಬಹಳ ಮುಂದೆ ಹೋಗಿ ತಮ್ಮ ಉತ್ಖನನದಿಂದ ಹೊಸ ಅಭಿಮಾನಿಗಳನ್ನು ಹುಟ್ಟಿಸಿಹಾಕುತ್ತಿದ್ದಾರೆ. :))))))))))) ಸಪ್ತಗಿರಿವಾಸಿಗಳೇ, May your tribe increase! ಶ್ರೀಕರ್ ಅವ್ರೆ, ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ತಮ್ಮ ಉತ್ಖನನದಿಂದ ಹೊಸ ಅಭಿಮಾನಿಗಳನ್ನು ಹುಟ್ಟಿಸಿಹಾಕುತ್ತಿದ್ದಾರೆ.>> <<ಸಪ್ತಗಿರಿವಾಸಿಗಳೇ, May your tribe increase!+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:()))))))))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಭಿಮಾನಿ in action ಸಪ್ತಗಿರಿವಾಸಿ, ಶ್ರೀಧರ್, ಶ್ರೀಕರ್ ಅವರಿಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.