ದೃಷ್ಠಿ ವರ್ಗ ಹೋಮ

4.6

ಮಧ್ಯರಾತ್ರಿ ಗೌಡ್ರ ಫೋನ್ ಬಂತೆಂದರೆ ಯಾವುದೋ ಸ್ಮಶಾನದಿಂದಲೇ.
ಕೂಡಲೇ ಗಾಡಿ ಏರಿ ಅಲ್ಲಿ ಹೋದರೆ ಜೋರಾಗಿ ಹೋಮ ನಡೆಯುತಿತ್ತು.
ಅದಕ್ಕೂ ಜೋರಾಗಿತ್ತು ಗೌಡರ ಅಳು.
'ಮುಹೂರ್ತ ಮೀರಿ ಹೋಗುತ್ತಿದೆ.ನೀವು ಹೀಗೆ ಅಳುತ್ತಿದ್ದರೆ ಬೆಂಕಿ ಹೊತ್ತಿಸುವುದು ಹೇಗೆ?'ಎಂದು ಶ್ರೀಶ್ರೀಶ್ರೀ(ಒಟ್ಟು ೨೨ಶ್ರೀ)ಜ್ಯೋತಿಷಿ ಹೇಳುತ್ತಿದ್ದರು.ಓಡಿ ಹೋಗಿ ಗೌಡ್ರಿಗೂ ೨೨ಶ್ರೀಗೂ ಅಡ್ಡಬಿದ್ದೆ.ಗೌಡ್ರು ಅಳು ನಿಲ್ಲಿಸಿದರು.
'ಇವನೇ ಏನ್ರೀ, ಗ ಅಕ್ಷರದಿಂದ ಸುರುವಾಗುವ ಗಮಾರ'ಅಂದರು ೨೨ಶ್ರೀಗಳು.'ಗಮಾರ ಅಲ್ಲ ಸಾರ್,ಗಣೇಶ'ಅಂದೆ.
"ಸರಿ,ಸರಿ,ನೋಡು,ಶನಿ ಗೌಡರ ೮ನೇ ಮನೆಯಲ್ಲಿ ನಿಂತು ೩ನೇ ಮನೆ ಕಡೆ ವಕ್ರವಾಗಿ ನೋಡುತ್ತಿದ್ದಾನೆ.ಅದಕ್ಕೇ ಇಷ್ಟೆಲ್ಲಾ ನಡೆಯಿತು.ಈಗ'ದೃಷ್ಠಿ ವರ್ಗ'ಹೋಮದ ಮೂಲಕ ಶನಿ ದೃಷ್ಠಿಯನ್ನು ನಿನ್ನ ಕಡೆಗೆ ಹಾಯಿಸುತ್ತೇನೆ.ನೀನು ಗೌಡರ ಹಿಂದೆ ನಿಂತು ಈ ದರ್ಬೆಯಿಂದ ಅವರ ಬೆನ್ನನ್ನು ಮುಟ್ಟಿಕೊಂಡಿರು"ಎಂದರು.ಶನಿ ದೃಷ್ಠಿಯನ್ನಾದರೂ ಸಹಿಸಬಹುದು,ಗೌಡ್ರ ವಕ್ರದೃಷ್ಟಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಸುಮ್ಮನೆ ಹಿಂದೆ ಹೋಗಿ ಅವರು ಹೇಳಿದಂತೆ ನಿಂತೆ.
೨೨ಶ್ರೀಗಳು ಯಾಗದ ನಡುನಡುವೆ ಮೊಬೈಲ್ನಲ್ಲಿ ಮಾತನಾಡುವಾಗ ಗೌಡರ ಬಳಿ ಕೇಳಿದೆ'ಸಾರ್,ಮನೆಯಲ್ಲಿ ಹೆಂಡತಿ ಮಕ್ಕಳು ನನ್ನನ್ನೇ ನಂಬಿದ್ದಾರೆ.ಈ ಯಾಗದಿಂದ ನನಗೇನೂ ತೊಂದರೆಯಿಲ್ಲವೇ?'
'ಭಯ ಬೀಳಬೇಡ.ನಿನಗೆ ಉತ್ತಮ ಭವಿಷ್ಯ ಕಾದಿದೆ.'ಎಂದು ಹೇಳಿ ಮೌನವಾದರು.ಹರಕೆಯ ಕುರಿ ನೆನಪಾಗಿ ಕಣ್ಣು ಕತ್ತಲಾಯಿತು.
ಎಚ್ಚರವಾದಾಗ ಗೌಡರ ಮನೆಯಲ್ಲಿದ್ದೆ(ಎಷ್ಟನೆಯ ಮನೆಯೋ?).ಪಕ್ಕದಲ್ಲಿ ಮುಗುಳ್ನಗುತ್ತಾ ಗೌಡರಿದ್ದರು.'ಕರ್ನಾಟಕದ ಮುಖ್ಯಮಂತ್ರಿಗೆ ನಮಸ್ಕಾರ'ಎಂದ್ರು.ತಿರುಗಿ ನೋಡಿದರೆ ಯಡಿಯೂರಪ್ಪನವರು ಎಲ್ಲೂ ಕಾಣಿಸಲಿಲ್ಲ.
'ನೀನೆ ಕಣಪ್ಪಾ, ಮುಖ್ಯಮಂತ್ರಿ'ಎಂದು, ನಾನು ಚೇತರಿಸಿಕೊಳ್ಳುವ ಮೊದಲೇ "ನನಗೀಗ ಅರ್ಜೆಂಟ್ ದೆಹಲಿಗೆ ಹೋಗಬೇಕು.ನಾನು ಹೇಳಿದಂತೆ ಮಾಡು.ಪ್ರಶ್ನೆ ಕೇಳಬೇಡ.ಎಲ್ಲಾ ಪಕ್ಷದವರನ್ನು ಒಪ್ಪಿಸಿಯಾಗಿದೆ.ಇನ್ನು ೮-೧೦ ತಿಂಗಳು ನೀನು ಮುಖ್ಯಮಂತ್ರಿಯಾಗಿರು.ನಿನ್ನನ್ನು ಎಮ್.ಎಲ್.ಏನೋ.,ಎಮ್.ಎಲ್.ಸೀನೋ ಮಾಡುವೆ.ಮುಂದೆ ನನ್ನ ಮಗ ಮುಖ್ಯಮಂತ್ರಿಯಾಗುವವರೆಗೆ ನನ್ನ ನಂಬಿಗಸ್ತ ಒಬ್ಬ ಆ ಪ್ಲೇಸ್ನಲ್ಲಿ ಇರಬೇಕು"ಎಂದು ಮೊಬೈಲ್ ಕಿವಿಗಿಟ್ಟುಕೊಂಡು ಹೊರಟೇಬಿಟ್ಟರು.ಬಿ.ಜೆ.ಪಿ.,ಕಾಂಗೈಯವರು ಒಪ್ಪಿದ್ದಾರಾ ಎಂದು ಕೇಳಲು ಹೊರಟವನು ಗೌಡರ ತಾಕತ್ತಿನ ಅರಿವಾಗಿ ಸುಮ್ಮನಾದೆ.
ಮೆಲ್ಲನೆ ಎದ್ದು ಕನ್ನಡಿಯಲ್ಲಿ ಮುಖ್ಯಮಂತ್ರಿ ಗತ್ತಿನಲ್ಲಿ ನೋಡಿದೆ.ಸಣಕಲ ಕಡ್ಡಿ ಕೌನ್ಸಿಲರ್ ಪಟ್ಟಕ್ಕೂ ಯೋಗ್ಯನಲ್ಲ ಎಂದು ಒಳ ಮನಸ್ಸು ಹೇಳಿತು.ಗೌಡ್ರು ಬೆಂಬಲಕ್ಕಿರುವಾಗ ನನಗ್ಯಾಕೆ ಚಿಂತೆ ಎಂದು ತಿರುಗಿದಾಗ ಗೋಣಿ ತುಂಬಾ ಪೇಪರುಗಳನ್ನು ತಂದು ಒಬ್ಬಾತ ಎದುರಿಗಿಟ್ಟು 'ಗೌಡ್ರು ಸೈನ್ ಹಾಕಲು ಹೇಳಿದ್ದಾರೆ'ಎಂದು ಹೇಳಿ ಹೋದ.ತೆಗೆದು ನೋಡಿದೆ.'ಷರತ್ತು ಪತ್ರಗಳು'ಬರೀ ಓದಲಿಕ್ಕೇ ಇನ್ನು ಮೂರುದಿನ ಬೇಕಾಗಬಹುದು.'ನನ್ನಿಂದಾಗದು,ನನ್ನಿಂದಾಗದು'ಎಂದು ಕಿರುಚಿದೆ.'ಪರವಾಗಿಲ್ಲಾ,ಸುಮ್ಮನೆ ಮಲಗಿ'ಎಂದಳು ನನ್ನಾಕೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಶ್ರೀಶ್ರೀಶ್ರೀ(ಒಟ್ಟು ೨೨ಶ್ರೀ)>> ಏನಿದು 22ರ ಮಹಿಮೆ? ನಿಂ ಗೌಡರನ್ನು ನೋಡಿ ಬಳ್ಳಾರಿ ರೆಡ್ಡಿಗಳೂ ದುಷ್ಟದೃಷ್ಟಿ ನಿವಾರಣಾ ಹೋಮ ಕೈಂಕರ್ಯ ನೆರವೇರಿಸಿಬಿಟ್ರಲ್ಲ.. ಶಭಾಶ್ ಗಣೇಶ್.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೇ ಎಡ್ಡೆ ಉಂಡು ಮಾರಾಯರೇ ಸ್ವಲ್ಪ ಹೊತ್ತು ಇನ್ನೂ ಜೊಂಪಿನಲ್ಲಿದ್ದಿದ್ದರೆ ನಮಗೆಲ್ಲಾ ಹೊಸ ಮುಖ್ಯ ಮಂತ್ರಿಯ ದರ್ಶನ ಭಾಗ್ಯ ಇರುತ್ತಿತ್ತು. ಛೆ !! ಅಣ್ಣಿಯವರಿಂದ ಒಂದು ದೊಡ್ಡ ತಪ್ಪಾಯಿತಲ್ಲಾ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

^^^ಅಣ್ಣಿಯವರು ...ಅನ್ತಾರೆ...ಅನ್ತಾರೆ... ಗೌಡರ ಹೋಮ ಸಿಕ್ಕಾಪಟ್ಟೆ ಪೇಮಸ್ ಆಗುತ್ತಿರುವುದರ ಒಳ ಗುಟ್ಟೇನು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡರ ಹೋಮ ಸಿಕ್ಕಾಪಟ್ಟೆ ಪೇಮಸ್ ಆಗುತ್ತಿರುವುದರ ಒಳ ಗುಟ್ಟೇನು? -ಕೋಮಲ್‌ನ ಕೇಳಬೇಕು :) ಗೋಪೀನಾಥ್ರೆ, ಯೆ ಅಣ್ಣಿ ಅಣ್ಣಿ ಕ್ಯಾ ಹೆ? ಪ್ರತಿಕ್ರಿಯೆ ನೀಡಿ ಮೆಚ್ಚಿದ ಪ್ರಸನ್ನ,ಗೋಪೀನಾಥ,ಕೃಷ್ಣಪ್ರಕಾಶ,ಅಂಬಿಕಾರವರಿಗೆ ನನ್ನಿ, -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೇ ಎನ್ರೀ ಕರ್ನಾಟಕದಲ್ಲಿದ್ದ ಕನ್ನಡದವರೂ ಅಂತೀರಾ ಅಣ್ಣಿ ಗೊತ್ತಿಲ್ವಾ? ಅತ್ತಿಗೆಯವರೂ...?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಗೋಪೀನಾಥರೆ, ಅಚ್ಚ ಸ್ವಚ್ಚ ಕನ್ನಡದಲ್ಲಿ ’ಆಂಟಿ’ ಅನ್ನಬಾರದೇ? :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣಿ ಕ ಮತಲಬ್ ಅ--ತ್ತಿ--ಗೆ ಅಣ್ಣಿ ಕ ಮತಲಬ್ ಅ--ತ್ತಿ--ಗೆ ಬೋಲೇ ತೋ, ಅಣ್ಣಿ ಕೋ ಆಜ ಕಲ್ ಕನ್ನಡ ಜೈಸಾ ಮಾನ ಜಾತಾ ಹೈ. [ಕನ್ನಡದಲ್ಲಿ ಅನುವಾದ: ಈಗೀಗ ಕನ್ನಡದಲ್ಲಿ ಅಣ್ಣಿಯೆನ್ದುಬಿಟ್ಟರೆ ಮಾನ ಹೋಗುತ್ತದೆ. ;) ]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅಣ್ಣಿ ಕ ಮತಲಬ್ ಅ--ತ್ತಿ--ಗೆ :) -ಸೂಪರ್. >>ಈಗೀಗ ಕನ್ನಡದಲ್ಲಿ ಅಣ್ಣಿಯೆನ್ದುಬಿಟ್ಟರೆ ಮಾನ ಜಾತಾ ಹೈ. :) ಜೈ ಗುರೂಜಿ, -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅವರೇ ಕನಸು ತುಂಬಾ ಚೆನ್ನಾಗಿದೆ. ತುಂಬಾ ದಿನಗಳ ನಂತರ ಬಹಳ ನಕ್ಕು ಆನಂದಿಸಿದೆ. ಹೀಗೇ ಬರೆಯುತ್ತಿರಿ. ಧನ್ಯವಾದಗಳು ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅವ್ರೆ ಕರುಣಾಡಿನ ಜನಕ್ಕೆಲ್ಲ 'ಅವರ' ಶಕ್ತಿ -ಸಾಮರ್ಥ್ಯ ಎಲ್ಲವೂ ಗೊತ್ತು ಹಾಗೆ ಅವರ ಯಂತ್ರ ಮಂತ್ರ -ತಂತ್ರ -ಕುತಂತ್ರ ಸಹಾ!! ಕನಿಸ್ತ ಬೆಂಬಲದಿಂದ ಪ್ರಧಾನಿ ಆಗಿದ್ದು ಸುಮ್ನೇನಾ? ಅಂತಿಪ್ಪ ಅವರು ಯ್ಜ್‌ಜ್ಞ ಮಾಡಿ ನಿಮ್ಮನ್ನು ಆಹ್ವಾನಿಸಿ ಧಿಡೀರ್ ಅಂತ ಮುಖ್ಯಮಂತ್ರಿ ಅದೂ ಏನೇನೂ ರಾಜಕೀಯ ಹಿನ್ನೆಲೆ ಮುನ್ನೆಲೆ ಬೆಂಬಲ ಇಲ್ಲದೇ:())) ನಿಮ್ದೂರಿ ಬಯಸದೇ ಬಂದ ಮಹಾ ಭಾಗ್ಯ ಅಂದ್ರೆ!! ಆದ್ರೆ ಆದ್ರೆ ಆದ್ರೆ ನಿಮ್ಗೆ ಎಚ್ಚರ ಆಗಿ ಎಲ್ಲ ....ತು...:)) ಛೇ ಛೇ!! ಈಗೀಗ 'ಯ ಡೀ' ಮಹಾಶಯರ 'ಆ ಕುರ್ಚಿಗಾಗಿ' ಮಾಡ್ತೀರೋ -ಆಡ್ತಿರೋ ಆಟ ನೋಡಿ -ಕೇಳಿ ತಲೆ ಚಿಟ್ ಹಿಡಿದಿದೆ ಮಾರಾಯ್ರೆ ..... ಹೌದು ೨೨ ಶ್ರೀ ಶ್ರೀ ಯಾಕೆ ಅಂತ ನನಗೂ ಗೋತಾಗಲಿಲ್ಲ.....??? :()))))))))))) 'ಇವನೇ ಏನ್ರೀ, ಗ ಅಕ್ಷರದಿಂದ ಸುರುವಾಗುವ ಗಮಾರ'ಅಂದರು ೨೨ಶ್ರೀಗಳು.'ಗಮಾರ ಅಲ್ಲ ಸಾರ್,ಗಣೇಶ'ಅಂದೆ. ನೀನು ಗೌಡರ ಹಿಂದೆ ನಿಂತು ಈ ದರ್ಬೆಯಿಂದ ಅವರ ಬೆನ್ನನ್ನು ಮುಟ್ಟಿಕೊಂಡಿರು"ಎಂದರು. :())))) ಶನಿ ದೃಷ್ಠಿಯನ್ನಾದರೂ ಸಹಿಸಬಹುದು,ಗೌಡ್ರ ವಕ್ರದೃಷ್ಟಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. :((((((( ೨೨ ಶ್ರೀಗಳು ಯಾಗದ ನಡುನಡುವೆ ಮೊಬೈಲ್ನಲ್ಲಿ ಮಾತನಾಡುವಾಗ ಗೌಡರ ಬಳಿ ಕೇಳಿದೆ'ಸಾರ್,ಮನೆಯಲ್ಲಿ ಹೆಂಡತಿ ಮಕ್ಕಳು ನನ್ನನ್ನೇ ನಂಬಿದ್ದಾರೆ.ಈ ಯಾಗದಿಂದ ನನಗೇನೂ ತೊಂದರೆಯಿಲ್ಲವೇ? :()))))) ' 'ಭಯ ಬೀಳಬೇಡ.ನಿನಗೆ ಉತ್ತಮ ಭವಿಷ್ಯ ಕಾದಿದೆ.'ಎಂದು ಹೇಳಿ ಮೌನವಾದರು.ಹರಕೆಯ ಕುರಿ ನೆನಪಾಗಿ ಕಣ್ಣು ಕತ್ತಲಾಯಿತು (((((((((( ಎಚ್ಚರವಾದಾಗ ಗೌಡರ ಮನೆಯಲ್ಲಿದ್ದೆ(ಎಷ್ಟನೆಯ ಮನೆಯೋ?).:)))))))))))))) ಪಕ್ಕದಲ್ಲಿ ಮುಗುಳ್ನಗುತ್ತಾ ಗೌಡರಿದ್ದರು.'ಕರ್ನಾಟಕದ ಮುಖ್ಯಮಂತ್ರಿಗೆ ನಮಸ್ಕಾರ'ಎಂದ್ರು.ತಿರುಗಿ ನೋಡಿದರೆ ಯಡಿಯೂರಪ್ಪನವರು ಎಲ್ಲೂ ಕಾಣಿಸಲಿಲ್ಲ :() 'ನೀನೆ ಕಣಪ್ಪಾ, ಮುಖ್ಯಮಂತ್ರಿ'ಎಂದು, ನಾನು ಚೇತರಿಸಿಕೊಳ್ಳುವ ಮೊದಲೇ "ನನಗೀಗ ಅರ್ಜೆಂಟ್ ದೆಹಲಿಗೆ ಹೋಗಬೇಕು.ನಾನು ಹೇಳಿದಂತೆ ಮಾಡು.ಪ್ರಶ್ನೆ ಕೇಳಬೇಡ.ಎಲ್ಲಾ ಪಕ್ಷದವರನ್ನು ಒಪ್ಪಿಸಿಯಾಗಿದೆ.ಇನ್ನು ೮-೧೦ ತಿಂಗಳು ನೀನು ಮುಖ್ಯಮಂತ್ರಿಯಾಗಿರು. ನನ್ನ ಮಗ ಮುಖ್ಯಮಂತ್ರಿಯಾಗುವವರೆಗೆ ನನ್ನ ನಂಬಿಗಸ್ತ ಒಬ್ಬ ಆ ಪ್ಲೇಸ್ನಲ್ಲಿ ಇರಬೇಕು"ಎಂದು ಮೊಬೈಲ್ ಕಿವಿಗಿಟ್ಟುಕೊಂಡು ಹೊರಟೇಬಿಟ್ಟರು.ಬಿ.ಜೆ.ಪಿ.,ಕಾಂಗೈಯವರು ಒಪ್ಪಿದ್ದಾರಾ ಎಂದು ಕೇಳಲು ಹೊರಟವನು ಗೌಡರ ತಾಕತ್ತಿನ ಅರಿವಾಗಿ ಸುಮ್ಮನಾದೆ. :((((((((((( ... .'ಷರತ್ತು ಪತ್ರಗಳು'ಬರೀ ಓದಲಿಕ್ಕೇ ಇನ್ನು ಮೂರುದಿನ ಬೇಕಾಗಬಹುದು.'ನನ್ನಿಂದಾಗದು,ನನ್ನಿಂದಾಗದು'ಎಂದು ಕಿರುಚಿದೆ. :())))))))))))))))))))))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.