ಹೆಸರು ಕೆಡಿಸಿ-ಹೆಸರುವಾಸಿಯಾಗಿ!!

3

೪೦ ವರ್ಷದಿಂದ ನಾನೂ ನಮ್ಮ ಕಂಪೆನಿಗೆ ಮಣ್ಣು ಹೊರುತ್ತಿದ್ದೇನೆ.
ನನಗಿಂತ ಸಣ್ಣವರೆಲ್ಲಾ ಬಾಸ್ ಗಳಾಗಿ ಬಂದು ಮೆರೆದು ಹೋದರು.ನಾನೂ ನಿವೃತ್ತನಾಗುವ
ಮೊದಲು 'ಬಾಸ್'ಖುರ್ಚಿ ಏರಬೇಕು.ಇದು ನನ್ನ ಆಸೆ ಅಲ್ಲ."ಐದು ಕೋಟಿ ಜನತೆಯ"(ಲ್ಲಿ ಒಬ್ಬರಾದ ನನ್ನಾಕೆಯ) ಆಸೆ.

ಯಡಿಯೂರಪ್ಪನವರು,ಅ'ಡಿ' ಒತ್ತು ಕೊಟ್ಟು,ಅಡ್ಡಿ ಆತಂಕಗಳನೆಲ್ಲಾ ನಿವಾರಿಸಿ ಮುಖ್ಯಮಂತ್ರಿಯಾದರು.ಇಷ್ಟು ಸುಲಭವೆಂದು ಗೊತ್ತಿದ್ದರೆ,ನಾನೂ ಕಂಪೆನಿ ಸೇರಿದ ಹೊಸದರಲ್ಲೇ ಮಾಡುತ್ತಿದ್ದೆ.
ಇಡೀ ಬೆಂಗಳೂರಲ್ಲಿ ಒಬ್ಬ,ಒಬ್ಬನೇ ಒಬ್ಬ ನ್ಯೂಮರಾಲಾಜಿಷ್ಟು ಸಿಗಬೇಕೆ?ಸಿಕ್ಕಿದವರೂ '೨-೩ತಿಂಗಳು ಬಿಟ್ಟು ಬನ್ನಿ.ಈವಾಗ ಬ್ಯುಸಿ'ಎಂದರು.
'ಎ'ಯಿಂದ 'z'ವರೆಗೆ ಯಾವುದಾದರೂ ಅಕ್ಷರ ಸೇರಿಸುವುದು,ಅಥವಾ ಬಿಡುವುದು.ಅಂಕಗಳನ್ನು ಕೂಡುವುದು,ಕಳೆಯುವುದು.ಜ್ಯೋತಿಷ್ಯದಷ್ಟು ಕಷ್ಟವಿಲ್ಲ ಬಿಡಿ.ನೋಟ್ ಬುಕ್ ಹಿಡಕೊಂಡು ಕುಳಿತೆ...
'ಗಾಣೇಶ'...'ಗಣ್ಣೇಶ'..'ಗಣ್ಣೈಶಾ'......
ತಥ್,ಇಷ್ಟು ಒಳ್ಳೆಯ ಗಣೇಶ ಹೆಸರನ್ನು ಹಾಳು ಮಾಡಲು ಹೊರಟಿದ್ದೇನಲ್ಲಾ.ರಾಜಕಾರಣಿಗಳು,ಸಿನೆಮಾದವರು,ಟಿ.ವಿ.ಯವರು ಬಿಡಿ.
ಮೊದಲೇ ಹೆಸರು ಕೆಡಿಸಿಕೊಂಡವರಿಗೆ, ಪುನಃ ಕೆಡಿಸಿಕೊಳ್ಳುವುದು ಕಷ್ಟವಿಲ್ಲ.
ಇದೇ ಹೆಸರಲ್ಲಿ 'ಬಾಸ್' ಆಗುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಯ್ರೇ , ತುಂಬ ಚೆನ್ನಾಗಿ ಬರ್ದಿದ್ದೀರಾ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಗೂ ಚೀಪ್ ಮಿನಿಸ್ಟರ್ ಆಗ್ಬೇಕು ಅನ್ನಿಸ್ತಾ ಇದೆ. ದಯವಿಟ್ಟು ಆ ನ್ಯೂಮರಲಾಜಿಸ್ಟ್ ಅಡ್ರೆಸ್ ಕೊಡ್ತೀರಾ ಸಾರ್.
ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದೆ ನಡೆಯುವ ಚುನಾವಣೆಯಲ್ಲಿ 'ಕಲಸು ಮೇಲೋಗರ' ಸರ್ಕಾರ
ಬಂದಾಗ ತಿಂಗಳಿಗೊಬ್ಬ ಮುಖ್ಯಮಂತ್ರಿ ಎಂದು ತೀರ್ಮಾನವಾಗಬಹುದು.ಆಗ ಪ್ರಯತ್ನಿಸಿ.
ಒಬ್ಬ ನ್ಯೂಮಾರಾಲಾಜಿಷ್ಟ್ ಅಲ್ಲ,ದಯವಿಟ್ಟು ಇಲ್ಲಿನ ಎಲ್ಲಾ ನ್ಯುಮಾರಾಲಾಜಿಷ್ಟ್
ರನ್ನು ನಿಮ್ಮೂರಿಗೆ ಕರೆಸಿ.ಇಲ್ಲವಾದರೆ ಇಲ್ಲಿನ ಎಲ್ಲರ ಸುಂದರ ಕನ್ನಡ ಹೆಸರು (ಯಡ್ಡಿಯೂರಪ್ಪ,ದೆವ್ವಪ್ಪ,ಸಿದ್ದರಮ್ಮಪ್ಪ..)ಹಾಳಾಗುವುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಡಿಯೂರಪ್ಪನವರು,ಅ'ಡಿ' ಒತ್ತು ಕೊಟ್ಟು,ಅಡ್ಡಿ ಆತಂಕಗಳನೆಲ್ಲಾ ನಿವಾರಿಸಿ ಮುಖ್ಯಮಂತ್ರಿಯಾದರು :()))))) >>>>> ಈಗ ಯ ಡಿ -ಮಾಜಿ! ಇಡೀ ಬೆಂಗಳೂರಲ್ಲಿ ಒಬ್ಬ,ಒಬ್ಬನೇ ಒಬ್ಬ ನ್ಯೂಮರಾಲಾಜಿಷ್ಟು ಸಿಗಬೇಕೆ? :(((( ಸಿಕ್ಕಿದವರೂ '೨-೩ತಿಂಗಳು ಬಿಟ್ಟು ಬನ್ನಿ.ಈವಾಗ ಬ್ಯುಸಿ'ಎಂದರು. :())))) 'ಎ'ಯಿಂದ 'z'ವರೆಗೆ ಯಾವುದಾದರೂ ಅಕ್ಷರ ಸೇರಿಸುವುದು,ಅಥವಾ ಬಿಡುವುದು.ಅಂಕಗಳನ್ನು ಕೂಡುವುದು,ಕಳೆಯುವುದು. :(((((((( >>>> ಗಣಣಶ್ ಹೇಗೆ? :()) ಇದು ಯಾವತ್ತೂ ಸಾಲುವ ಬರಹ... ಕಾರಣ- ? ಅಂದು - ಇಂದು- ಮುಂದೂ ಜನ ತಮ್ಮ ಹೆಸರು ಬದಲಾಯಿಸಿ 'ಅಧ್ರಸ್ತ' ಪರೀಕ್ಷಿಸುವರು...! ಆ ಬಗ್ಗೆ ಒಳ್ಳೆಯ ಬರಹವನ್ ಕೆಲವೇ ಸಾಲುಗಳಲಿ ಚೆನ್ನಾಗೇ ಹೇಳಿದ್ದೀರ.. :())))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.