ಜೆ.ಪಿ.ಪಾರ್ಕ್

5

ಸೆಂಟ್ರಲ್ ಜೈಲ್ ಪಾರ್ಕ್ ಬಗ್ಗೆ ಹಿಂದೆ ಬರೆದಿದ್ದೆ. ಈಸಲ ಜೆ.ಪಿ.ಪಾರ್ಕ್

 

ಸುತ್ತೋಣ ಬನ್ನಿ.

ಮತ್ತಿಕೆರೆ ಸಮೀಪವಿರುವ ಚೌಡೇಶ್ವರಿ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ನೇರ ಬಸ್‌ಗಳಿವೆ.

 

 

 ಇದು ಬಸ್ನಿಲ್ದಾಣ ಎಂದರೆ ನಂಬುವಿರಾ?

ಇದರ ಹಿಂಬದಿಯಲ್ಲೇ ಜೆ.ಪಿ.ಪಾರ್ಕ್ ಇದೆ. ಗೇಟ್ ಬಳಿಯಲ್ಲೇ   ಸುಂದರ ಕಾರಂಜಿ ಇದೆ.ಒಳಗೆ ಫ್ಲಡ್‌ಲೈಟ್ ವ್ಯವಸ್ಥೆಯಿರುವ ಆಟದ ಮೈದಾನ, ಹೂಗಿಡಗಳು, ಮರಗಳು, 

 

 

 ಪ್ರಾಣಿಗಳು(ನಿಜವಲ್ಲ)

ಮಕ್ಕಳಿಗೆ ಆಡಲು ಜಾರುಬಂಡಿ.., ವಿವಿಧ ಔಷಧೀ ಗಿಡಗಳ ವನ, ಕೊಳ,ಎಲ್ಲಾ ಇದೆ. ಹಾವಿನ ಮರಿ ಸಹ ಸಿಕ್ಕಿತ್ತು. ಜನರಿಗೆ ಜಾಗ್ರತೆ ಹೇಳುವುದರಲ್ಲಿ ಅದರ ಫೋಟೋ ತೆಗೆಯಲಾಗಲಿಲ್ಲ.

ರಾಕೇಶ್ ಶೆಟ್ರು  http://www.sampada.net/blog/rakesh-shetty/01/06/2009/20931  busy ಇದ್ದರು. ಮಾತನಾಡಿಸಲಾಗಲಿಲ್ಲ. :)

ವಿನಯಗಾಗಿ ಇನ್ನೆರಡು ಚಿತ್ರ-

 

 
 
 

 

-ಗಣೇಶ.

 

 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

[quote]ರಾಕೇಶ್ ಶೆಟ್ರು http://www.sampada.net/blog/rakesh-shetty/01/06/2009/20931 busy ಇದ್ದರು. ಮಾತನಾಡಿಸಲಾಗಲಿಲ್ಲ. :) [/quote]

ಅಯ್ಯೋ ಗಣೇಶಣ್ಣ,

ನೀವ್, ನಮ್ಮ ಏರಿಯ ಕಡೆ ಬಂದಿದ್ದಿರಾ ಅಂತ ಗೊತ್ತಾಗಿದ್ರೆ ಓಡೋಡಿ ನಿಮ್ನ ನೋಡೋಕೆ ಬರ್ತಿದ್ದೆ :)

ಎಮ್ಮೆಗಳಿಗಿಂತ ಮುಂಚೆ ಸಿಗುವ 'ಎತ್ತು'ಗಳು ಇನ್ನು ನೈಜವಾಗಿ ಕಾಣುತ್ತವೆ ಅಲ್ವಾ? ಅದರ ಫೋಟೋ ಹಾಕಿಲ್ಲ ,ಇನ್ನು ಹುಲಿ,ಸಿಂಹ,ಮಕ್ಕಳು,ರೈತರು,ಕೋತಿಗಳು ಎಲ್ಲ ನಿಮ್ಮ ಕೈಗೆ ಸಿಗಲಿಲ್ಲವಾ ? ;)

ಫೋಟೋಗಳು ಚೆನ್ನಾಗಿವೆ :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್,
>>>ಅಯ್ಯೋ ಗಣೇಶಣ್ಣ,ನೀವ್, ನಮ್ಮ ಏರಿಯ ಕಡೆ ಬಂದಿದ್ದಿರಾ ಅಂತ ಗೊತ್ತಾಗಿದ್ರೆ ಓಡೋಡಿ ನಿಮ್ನ ನೋಡೋಕೆ ಬರ್ತಿದ್ದೆ
-ನಿಮ್ಮ ಪ್ರೀತಿಗೆ ತುಂಬಾ ತುಂಬಾ thanks, ಧನ್ಯವಾದಗಳು, ನನ್ನಿ.

>>>ಎಮ್ಮೆಗಳಿಗಿಂತ ಮುಂಚೆ ಸಿಗುವ 'ಎತ್ತು'ಗಳು ಇನ್ನು ನೈಜವಾಗಿ ಕಾಣುತ್ತವೆ ಅಲ್ವಾ? ಅದರ ಫೋಟೋ ಹಾಕಿಲ್ಲ
-ಎತ್ತುಗಳ ಎದುರಿಗೆ ಫೋಟೋ ತೆಗೆಯುವವರ ಸಂತೆಯೇ ಇತ್ತು.
ಏನೇ ಹೇಳಿ ರಾಕೇಶ್, ಅಷ್ಟು ಸುಂದರ ಪಾರ್ಕ್-ವಾಕ್ ಮಾಡೋವರು,ಬೆಂಚಲ್ಲಿ ಕುಳಿತವರು ಎಲ್ಲ್ಲಾ ಚಂದ. :)
ಗೇಟು ಹೊರಗೇ ವಾಕ್ ಮಾಡಿ ಬಂದವರು ಮೋರಿ ವಾಸನೆ ಹೀರಿಕೊಂಡು ಮಸಾಲ್ ಪುರಿ etc ...ತಿನ್ನೋ ಚಂದಾ..ಆಹಾ..ಚಂದಕ್ಕಿಂತ ಚಂದ.

>>ಇನ್ನು ಹುಲಿ,ಸಿಂಹ,ಮಕ್ಕಳು,ರೈತರು,ಕೋತಿಗಳು ಎಲ್ಲ ನಿಮ್ಮ ಕೈಗೆ ಸಿಗಲಿಲ್ಲವಾ ?
-ನನ್ನ s'sung E250 (ಫಾರೈನ್ :) ) ಕ್ಯಾಮರಾಕ್ಕಿಂತ ನಮ್ಮ ಪಾಲಚಂದ್ರರ ಕ್ಯಾಮರಾ ಕರಾಮತ್ತು ತೋರಿಸಲಿ ಎಂದು ಬಿಟ್ಟಿದ್ದೇನೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್, >>ಎಮ್ಮೆಗಳಿಗಿಂತ ಮುಂಚೆ ಸಿಗುವ 'ಎತ್ತು'ಗಳು ಇನ್ನು ನೈಜವಾಗಿ ಕಾಣುತ್ತವೆ ಅಲ್ವಾ? -ಕಳೆದ ರವಿವಾರ ಲಾಲ್‌ಬಾಗ್ ಹೂಗಳನ್ನು ನೋಡಲು ಹೋಗುವುದು ಎಂದಿದ್ದೆ. ಕಳೆದ ವರ್ಷ ಹೋಗಿ, ಜನರ ನೂಕು ನುಗ್ಗಲಿನಲ್ಲಿ- ಹೂವು ಬೇಡ,ಏನೂ ಬೇಡ, ಒಮ್ಮೆ ಹೊರಹೋದರೆ ಸಾಕು- ಒದ್ದಾಡಿದ್ದು ನೆನಪಾಯಿತು. ಹಾಗೇ ಲಾಲ್‌ಬಾಗ್‌ಗೆ ಸರಿಸಾಟಿಯಾದ ಜೆ.ಪಿ.ಪಾರ್ಕ್‌ಗೆ ಪುನ: ಹೋದೆ. ಎತ್ತಿನ ಗತ್ತು ಮೊಬೈಲ್‌ನಲ್ಲಿ ಸೆರೆಹಿಡಿದೆ- ಮರಿ ಬಿದಿರು(ಕಣಿಲೆ)- ವಾಚ್‌ಬರ್ಡ್ಸ್- -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೊಗಳೂ ಚೆನ್ನಾಗಿವೆ ಯಾವೂರು ಅಂತ ತಿಳಿಲಿಲ್ಲ..
ನಿಜವಾದ ಎಮ್ಮೆ ಗಳು ಅನ್ಕಂಬಿಟ್ಟೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೆ,
ಇದು ಬೆಂಗಳೂರಿನಲ್ಲಿರುವುದು. ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣ(ಮೆಜೆಸ್ಟಿಕ್)ದಿಂದ ಅಲ್ಲಿಗೆ ಹೆಚ್ಚಂದರೆ ೧೦ ಕಿ.ಮೀ. ದೂರ. ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಕ್ಕಾಗಿ, ಮತ್ತಿಕೆರೆಗೆ ಬಂದು ಅಲ್ಲಿಂದ ಎಡಕ್ಕೆ ಒಂದರ್ಧ ಕಿ.ಮೀ.ದೂರದಲ್ಲಿದೆ.
ಮೇಲೆ ಹೇಳಿದ್ದಲ್ಲದೇ, ನವಗ್ರಹ ವನ, ರಾಶಿವನ, ನಕ್ಷತ್ರವನ, bamboo ಗಾರ್ಡನ್, ಪಾಮ್ ಗಾರ್ಡನ್, ಸಾವಿರಾರು ಔಷಧೀ ಸಸ್ಯಗಳು, ಹೂವಿನ ಗಿಡಗಳು, ಮರಗಳು(ಕೆಲ ವರ್ಷದಲ್ಲಿ ಕಾಡು ನೋಡಲು ಜೆ.ಪಿ. ಪಾರ್ಕ್ಗೆ ಹೋಗಬೇಕು. ಅಷ್ಟು ಮರಗಳಿವೆ!)... ಇನ್ನೂ ಇದೆ. ಮಳೆ ಬರುವ ಅಂದಾಜಿದ್ದುದರಿಂದ ಜಾಸ್ತಿ ನೋಡಿಲ್ಲ. ಬಾಕಿ ರಾಕೇಶ್ ಶೆಟ್ಟ್ರು ಹೇಳಿಯಾರು.

ಜಾಗಿಂಗ್ ಟ್ರಾಕ್(೪-೫ ಕಿ.ಮೀ) ಬಹಳ ಅಗಲವಾಗಿ ಚೆನ್ನಾಗಿದೆ.
ಬೆಂಗಳೂರಲ್ಲಿದ್ದವರು ಒಮ್ಮೆ ಹೋಗಿ ನೋಡಬೇಕಾದ ಸ್ಥಳ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಕ್ ಸುತ್ತಾಟದ ಸೇವೆ ಮಾಡ್ತಾ ಇರೋ ಹಾಗಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೊತೆಗೆ ಸುತ್ತಾಡಿಸುವ ಸೇವೆ..

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಪಾಲಚಂದ್ರರೆ,
ನೀವೂ ಬಂದಿದ್ರಾ? ಫೋಟೋ ತೆಗೆದಿಲ್ಲ ತಾನೆ? :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನು ಪಾರ್ಕಲ್ಲಿ ಬಾರಿ ಸುತ್ತಿದಿರಾ :D

ಅದ್ರು ಹೋಗಿ ಹೋಗಿ ಎಮ್ಮೆ ಫೋಟೋ ಹಾಕಿದಿರಲ್ಲ ಸರೀನಾ? :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,
>>ಅದ್ರು ಹೋಗಿ ಹೋಗಿ ಎಮ್ಮೆ ಫೋಟೋ ಹಾಕಿದಿರಲ್ಲ ಸರೀನಾ?
-ಫೋಟೋ ತೆಗೆಯಲು ಅವೆರಡೇ ನನಗೆ ಒಳ್ಳೆ ಪೋಸ್ ಕೊಟ್ಟದ್ದು. :( ಮರ ಹತ್ತುತ್ತಿರುವ ಎರಡು ಚಲುವಿಯರ ಫೋಟೋ ಸೇರಿಸಿದ್ದೇನೆ :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬರಹ ಓದಿ ನಂಗೆ ಎರಡು ವಿಷ್ಯ ತಿಳೀತು ೧- ನೀವು ಪಾರ್ಕು ಸುತೋದು ಜಾಸ್ತಿ: ) ರಾಕೇಶ್ ಶೆಟ್ರು ಇಲ್ಲಿಯೇ ಇರೋದು.. ೨- ಅಲ್ಲಿ ಅಸ್ತು ಉದ್ಧಾ ಜಾಗಿಂಗು ಟ್ರಾಕು ಇದೆ ಅಂತಲೋ ತಿಳೀತು, ನಾ ಒಮ್ಮೆ ಅಸ್ಟೇ ಅಲ್ಲಿ ಹೋಗಿದ್ದೆ ಪಾರ್ಕಿನ ಕೊನೆಗೆ ಹೋದಾಗ, ಅಲ್ಲಿ ಬರೀ ಯುವ ಪ್ರೆಮಿಗಲದೆ ಕಾರು-ಬಾರು:) ಪಾರ್ಕಿನ ನಿರ್ವಹಣೆ ಚೆನ್ನಾಗಿದೆ.. ಎತ್ತು ಆಕಳು ಅದು ಇದು ಎಲ್ಲವೂ ಗೊಂಬೆ ಮಾಡಿ ಇಕ್ಕವ್ರೆ.. ಫೋಟೋಗಳು ಚೆನ್ನಾಗಿವೆ.. ಮುಂದಿನ ನಿಮ್ಮ ಪಾರ್ಕ್ ಹಂಟ್ ಯಾವ್ದು ಡಾಕ್ಟರ್?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.