ಪುಣ್ಯಕೋಟಿ ಎಂಬ ಹುಲಿಯು.....

0

   ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು.


ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು. ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು ತಂದೆಯೊಂದಿಗೆ ನೋಡಿ ಮಲಗುವ ಮಕ್ಕಳೂ ಇದ್ದಾರೆ.


ಪುಣ್ಯಕೋಟಿ ಕತೆಯನ್ನು ನಾನು ನನ್ನ ಮಗಳಿಗೆ ನೂರಾರು ಬಾರಿ ಹೇಳಿರಬಹುದು.ಪ್ರತೀ ಬಾರಿಯೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದಳು.ಪ್ರಥಮ ಬಾರಿಗೆ ಕತೆ ಹೇಳಿದಾಗ ಎಲ್ಲಾ ಹೇಳಿ "ಹುಲಿ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟಿತು"ಎಂದು ಹೇಳಿ ಮಲಗಿಸಿದ್ದೆ.


ಆದರೆ ನಂತರದ ದಿನ ಅವಳಿಗೆ ಸಮಾಧಾನವಿರಲಿಲ್ಲ."ಯಾಕೆ ಹುಲಿ ಬೆಟ್ಟದಿಂದ ಹಾರಿತು? ಪುಣ್ಯಕೋಟಿ ಆಗ ಏನು ಮಾಡಿತು?.."ಇತ್ಯಾದಿ ಪ್ರಶ್ನೆ ಕೇಳುತ್ತಿದ್ದಳು. ಅವಳಿಗೆ ಪುಣ್ಯಕೋಟಿ,ಕರುವಿನ ಮೇಲೆ ಇದ್ದಷ್ಟೇ ಪ್ರೀತಿ'ಹುಲಿ' ಮೇಲೂ ಬರಲು ಶುರುವಾಯಿತು.ಆದ್ದರಿಂದ ಅದು ಸಾಯುವುದು ಅವಳಿಗೆ ಬೇಕಿರಲಿಲ್ಲ. ಮಗಳಿಗೆ ಬೇಕಾಗಿ ಕತೆಯ ಮುಕ್ತಾಯವನ್ನು ಬದಲಾಯಿಸಿದೆ- 'ಪುಣ್ಯಕೋಟಿಯ ಸತ್ಯವನ್ನು ಮೆಚ್ಚಿ ಹುಲಿ-"ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು" ಎಂದು ಹೇಳಿ...ಬೆಟ್ಟದಿಂದ ಇಳಿದು ದೂರ ಹೋಯಿತು'  ಎಂದೆ...ಉಹೂಂ..ಮಗಳಿಗೆ ಸಮಾಧಾನವಾಗಲಿಲ್ಲ.ಇನ್ನಷ್ಟು ಪ್ರಶ್ನೆಗಳು..


ಮಾರನೆಯ ದಿನ ಪುನಃ ಕತೆಯ ಮುಕ್ತಾಯ ಬದಲಾಯಿಸಿದೆ- 'ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ..."ಇನ್ನು ಮೇಲೆ ನಾನು ಯಾವ ಪ್ರಾಣಿಯನ್ನೂ ತಿನ್ನುವುದಿಲ್ಲ.ನಾನು ನೀನು ಗೆಳೆಯರಾಗಿರುವ ಎಂದಿತು.ಪುಣ್ಯಕೋಟಿ,ಕರು ಹುಲಿ ದಿನವೂ ಸಂಜೆ ಆಟವಾಡುತ್ತಿದ್ದವು'ಎಂದೆ. ಮಗಳಿಗಾದ ಖುಶಿ ಈಗಲೂ ನಾನು ಮರೆಯಲಾರೆ.


ದೇವೇಗೌಡರೂ ಸಹ ತನ್ನ ಮಕ್ಕಳಿಗಾಗಿ ಪುಣ್ಯಕೋಟಿ(ಕರ್ನಾಟಕ)ಕತೆಯನ್ನು ಹೇಗೇಗೋ ತೆಗೆದುಕೊಂಡು ಹೋಗುತ್ತಿದ್ದಾರೆ.ಹೇಗೆ ಮುಕ್ತಾಯವಾಗುವುದೋ?


(ಕತೆಗೆ ಒಪ್ಪುವಂತಹ ಪುಣ್ಯಕೋಟಿ ಹುಲಿಯ ಚಿತ್ರ ಕೊಟ್ಟ ಪಾಲಚಂದ್ರರಿಗೆ ನನ್ನಿ) -ಗಣೇಶ.


೨೨-೧೨-೨೦೧೧...ಪಾಲಚಂದ್ರರು ಕೊಟ್ಟ ಹುಲಿ ಯಾಕೋ ತಪ್ಪಿಸಿಕೊಂಡಿದೆ. :)


-ಗಣೇಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಗಣೇಶ್,

ಕತೆ ಎಂದಿಗೂ ಮಕ್ಕಳನ್ನು ಮೋಡಿ ಮಾಡಿಯೇ ಮಾಡುತ್ತದೆ.ಮೊದಲ ಬಾರಿ ಇಷ್ಟವಾಗುವ ಹಾಗೆ ಹೇಳಿ ಬರಸೆಳೆಯಬೇಕಷ್ಟೇ! :D
ಒಂದು ಹೊಸಬಗೆಯ ಪರ್ ಸ್ಪೆಕ್ಟಿವ್ ಕೊಟ್ಟಿದ್ದೀರಿ ಕತೆಯ ಮುಕ್ತಾಯವನ್ನ ಕರ್ನಾಟಕದ ರಾಜಕಾರಣಕ್ಕೆ ಹೋಲಿಸಿ..
ಆಸಕ್ತಿಕರವಾಗಿದೆ.

ಪುಣ್ಯಕೋಟಿ ಎಂಬುದು ಹುಲಿಯಲ್ಲ ಗೋವು.
ಚಂಡವ್ಯಾಘ್ರ ಅಂತ ಹುಲಿಯ ಹೆಸರು.

ಪ್ರೀತಿಯಿರಲಿ
ಸಿಂಧು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿಂಧು,
ಚಂಡವ್ಯಾಘ್ರ ಎಂಬ ಭಯಂಕರ ಹುಲಿಯು ಕತೆಯ ಕೊನೆಯಲ್ಲಿ ಪುಣ್ಯಕೋಟಿಯಾಯಿತು.
ಪ್ರೀತಿಯೊಂದಿಗೆ
ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಅಮ್ಮಾ ಹುಲಿ ಪಾಪ ಅಲ್ಲವಾ?" ಇದು ನನ್ನ ಮಗಳು ಕೇಳೊ ಪ್ರಶ್ನೆ

ಅವಳಿಗೆ ಕರುವಾಗಲಿ ಹಸುವಾಗಲಿ ಮುಖ್ಯವಲ್ಲ

ಹುಲಿ ಒಳ್ಳೆ ಹುಲಿ ಅದನ್ನು ಮನೇಲಿ ಇಟ್ಕೊಡು ಸಾಕ್ತೀನಿ ಅಂತಾಳೆ
ಅವಳಿಗೆ ಪುಣ್ಯಕೋಟಿ ಹಾಡು ಹೇಳು ಅಂದರೆ

"ಅಂಬಕೋಟಿ ಎಂಬ ಅಂಬ ತನ್ನ ಪಾಪುನ ...................."
ಅಂತ ಶುರು ಮಾಡುತ್ತಾಳೆ

http://thereda-mana.blogspot.com/

ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ ಹುಲಿ ಕಥೆ. ಎಲ್ರೂ ಏನಾದ್ರೂ ಬರ್ದು, ಅದಕ್ಕೆ ಸರಿಯಾದ ಫೋಟೋ ಹುಡ್ಕ್ತಾ ಇರ್ತಾರೆ. ನಾನು ಫೋಟೋ ತೆಗೆದು ಆರ್ಟಿಕಲ್ ಹುಡ್ಕ್ತಾ ಇರ್ತೀನಿ. ನಿಮ್ಮ ಕಥೆಗೆ ನನ್ನ ಫೋಟೋ,, ಆಟಾಡಿ ರೆಸ್ಟು ತೆಗೋತಾ ಇದೆ ಅಂತ ನಿಮ್ಮ ಮಗಳಿಗೆ ಹೇಳಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಆಟಾಡಿ ರೆಸ್ಟು ತೆಗೋತಾ ಇದೆ ಅಂತ ನಿಮ್ಮ ಮಗಳಿಗೆ ಹೇಳಿ
ಪಾಲಚಂದ್ರರೆ,
ಹುಲಿಯ ಚಿತ್ರ ನೋಡಿದವನೇ, ಹುಲಿ ಆಟವಾಡುವ ಮೂಡ್‌ನಲ್ಲಿದೆ... http://www.sampada.net/image/21438,
ಏರೋಪ್ಲೇನ್ ಚಿಟ್ಟೆ- ಒಂದು ಟೇಕ್ ಆಫ್‌ಗೆ ರೆಡಿಯಾಗಿದೆ,
http://www.sampada.net/blog/palachandra/13/06/2009/21460
ಇನ್ನೊಂದು ಪರ್ಫೆಕ್ಟ್ ಲ್ಯಾಂಡ್ ಆಗಿದೆ ಎಂದು ಪ್ರತಿಕ್ರಿಯೆ ನೀಡುವವನಿದ್ದೆ.
ನೋಡಿದರೆ ಹುಲಿ ಪುಣ್ಯಕೋಟಿ ಜತೆ ಆಟವಾಡಲು ಇಲ್ಲಿಗೇ ಬಂದಿದೆ!!
ಚಿತ್ರ ಒದಗಿಸಿದ್ದಕ್ಕೆ ನನ್ನಿ,
ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.