ಗಣೇಶ ರವರ ಬ್ಲಾಗ್

ಉಚಿತ ಪುಸ್ತಕ!

ಪುಸ್ತಕ ಪ್ರಕಾಶನದಲ್ಲಿ ಕ್ರಾಂತಿ!
ಪುಸ್ತಕದ ಮೇಲೆ ಬೆಲೆಯನ್ನು ನಮೂದಿಸಿಲ್ಲ...
ಪುಸ್ತಕ ಓದಿ ಮೆಚ್ಚಿಗೆಯಾದಲ್ಲಿ ಮಾತ್ರ ಹಣ ಕೊಡಿ!
ಹಣ ನಿಮ್ಮಿಚ್ಛೆ..
ಪುಸ್ತಕಗಳು :
೧. ದೆವ್ವದ ಜತೆಯಲ್ಲಿ (೧೦ ಕತೆಗಳ ಸಂಗ್ರಹ)
೨. ಪ್ರೇಮ ಕಾಮ ಧ್ಯಾನ (ಮಿನಿ ಕಾದಂಬರಿ)
೩. ಗುಲ್ಜಾರ್ ಕವನಗಳ ಕನ್ನಡ ಭಾವಾನುವಾದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..

ಧಾರವಾಡದ "ಕಲ್ಲು" ಗೊತ್ತಿದೆಯಲ್ಲಾ.. (ಪೇಡಾ ಆದರೂ ಪರವಾಗಿಲ್ಲ) ಅದನ್ನು ಎತ್ತಿ ಕನ್ನಡದ ಯಾವುದೇ ಟಿ.ವಿ ಚಾನಲ್‌‌ನ ಕಛೇರಿಗೆ ಎಸೆದರು ಅಂತಿಟ್ಟುಕೊಳ್ಳಿ...
ಅದು ಬೀಳುವುದು ಜ್ಯೋತಿಷಿಯ ತಲೆಯಮೇಲೇ.. :)
ಬೆಳ್ಳಂಬೆಳಗ್ಗೆ ಟಿವಿ ಆನ್ ಮಾಡಿದರೆ ಕಣ್ಣಿಗೆ ಬೀಳುವುದೇ ಅವರು- ಹಳೇ ಕಾಲದ ಹೆಂಗಸರ ಹಾಗೆ-ಜರಿ ಸೀರೆ, ಮುಖತುಂಬಾ ಮೇಕಪ್, ಮೇಲೊಂದು ಬೊಟ್ಟು, ಕೈ ಕುತ್ತಿಗೆ ತುಂಬಾ ಚಿನ್ನದ ಬಳೆ ಸರ...ಬಾಯಿ ಬಿಟ್ಟರೆ ಶನಿ ರಾಹು ಕೇತು ಎಂದು ಭಯ ಬೀಳಿಸುವರು.
ರಾತ್ರಿ ಸಹ ಅವರದ್ದೇ ಸುದ್ದಿಯೊಂದಿಗೆ ಟಿವಿ ಆಫ್ ಮಾಡುವುದು.
ಬರಬರುತ್ತಾ ಈ ಜ್ಯೋತಿಷಿಗಳು ಹೇಳಿದ ಭವಿಷ್ಯ ಬಿಡಿ, ಅವರದೇ ವರ್ತಮಾನನೇ ಸಂಕಷ್ಟಕ್ಕೀಡಾಗುತ್ತಿದೆ!
 ಯಾಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (11 votes)
To prevent automated spam submissions leave this field empty.

ಕುಂಬಳಕಾಯಿ ಮರದಲ್ಲಿಟ್ಟನೂ...ನಮ್ಮ ಶಿವಾ!

 ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು.
 ಒಂದು ಕಾಯಿ ಎತ್ತಿಕೊಂಡು ಹತ್ತು ನಿಮಿಷ ನಿಂತಿದ್ದಾಗ ಕೈ ನೋವು ಆಗಲು ಪ್ರಾರಂಭಿಸಿತು...ಆ ಬಳ್ಳಿ...ಆ ಎತ್ತರದಲ್ಲಿ.......ಆ ಮುಳ್ಳಿನ ಮರದಲ್ಲಿ... ಕುಂಬಳದ ಭಾರವನ್ನು ಹೊತ್ತುಕೊಂಡಿರುವುದು ನೋಡಿದಾಗ ಮತ್ತೊಂದು ಹಳೇ ಹಾಡು ನೆನಪಾಯಿತು-"ಬಳ್ಳಿಗೆ ಕಾಯಿ ಭಾರವೇ..ಹೆತ್ತ ತಾಯಿಗೆ ಮಗುವು ಭಾರವೇ..."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.

ದೇಶದ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭ

ದೇಶದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭ(ಚಿತ್ರ-1) (೨೧೩ ಅಡಿ-ದೆಹಲಿಯದ್ದು ೨೦೭ ಅಡಿ) ನಮ್ಮ ಬೆಂಗಳೂರಿನ "ರಾಷ್ಟ್ರೀಯ ಸೈನಿಕ ಸ್ಮಾರಕ" ಉದ್ಯಾನದಲ್ಲಿದೆ(ಚಿತ್ರ-13). ರಾಜಭವನದ ಪಕ್ಕದಲ್ಲಿರುವ "ಜವಾಹರಲಾಲ್ ನೆಹರು ಪ್ಲಾನಟೋರಿಯಮ್"ನ ಎದುರಿಗೇ ಇದೆ. ರಾಷ್ಟ್ರಧ್ವಜ ಹಾರಾಡುತ್ತಿರುವುದನ್ನು ದೂರದಿಂದಲೇ ತಲೆ ಎತ್ತಿ ನೋಡಿ ರೋಮಾಂಚಿತರಾಗಬಹುದು. ಆದರೆ ಅಕ್ಕಪಕ್ಕದ ರಸ್ತೆ ತುಂಬಾ ವಾಹನಗಳು ವಿಪರೀತ ವೇಗದಲ್ಲಿ ಹೋಗುತ್ತಿರುವುದರಿಂದ, ಡ್ರೈವ್ ಮಾಡುತ್ತಾ ಧ್ವಜವನ್ನು ನೋಡುವ ಸಾಹಸ ಮಾಡಬೇಡಿ. (ನನ್ನ ವಿಷಯ ಬಿಡಿ. ೨೫ ವರ್ಷದಿಂದ ಬೆಂಗಳೂರೆಲ್ಲಾ ಓಡಾಡಿ ಅಭ್ಯಾಸವಿರುವ ನನ್ನ ಸ್ಕೂಟರ್ ಅದರ ಪಾಡಿಗೆ ಹೋಗುತ್ತಾ ಇರುತ್ತದೆ- ನಾನು ಕ್ಲಿಕ್ಕಿಸುತ್ತಾ ಹೋಗುವೆ...:)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಗೂಂಡಾ ಗಣೇಶ.. ಫೇಸ್ ಬುಕ್ ಲಾಯರ್:)

ಈ ಬರಹದಲ್ಲಿ ಬರುವ ಪಾತ್ರಗಳೆಲ್ಲಾ ಕಾಲ್ಪನಿಕ. ಇದು ನೈಜ ಘಟನೆಯಲ್ಲ.
ಪ್ರತೀ ವರ್ಷ ಗಣೇಶ ಹಬ್ಬವನ್ನು ಭಕ್ತಿಯಿಂದ ಆಚರಿಸುವ ನಾನು ಮಹಾನ್ ದೈವಭಕ್ತ-ಇಲ್ಲಿ ಗಣೇಶ ದೇವರನ್ನು ಗೂಂಡಾ ಎಂದು ಹೇಳಿಲ್ಲ.
ಹುಟ್ಟಿನಿಂದ ಇದುವರೆಗೂ ನಾನು, ಯಾರೊಬ್ಬರನ್ನೂ "ನಿಮ್ಮ ಜಾತಿ ಯಾವುದೆಂದು?" ಸಹ ಕೇಳಿಲ್ಲ. ಆದ್ದರಿಂದ ಈ ಲೇಖನದಲ್ಲಿ ಎಲ್ಲಾದರೂ ಜಾತಿ/ಧರ್ಮದ ಬಗ್ಗೆ ವಿಷಯ ಏನಾದರೂ ಬಂದಲ್ಲಿ, ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಹೊಟ್ಟೆಗೆ ಹಾಕಿಕೊಳ್ಳಿ.
ಹೆಣ್ಣಿನ ಬಗ್ಗೆ ಅಪಾರ ಗೌರವವಿದೆ. ಕೆಟ್ಟ ಗುಣದ ಹೆಣ್ಣನ್ನೂ ಸಹ ನಾನು ತೆಗಳುವುದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.

Pages

Subscribe to RSS - ಗಣೇಶ ರವರ ಬ್ಲಾಗ್