ಗಜೇಂದ್ರ ಮೋಕ್ಷ -2

3.666665

ಗಜೇಂದ್ರ ಮೋಕ್ಷ -2

ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನು ಬಳಸಬೇಕಿತ್ತು.

ಆಗ ಬರೆದ ಪದ್ಯವನ್ನು ಓದಲು ಇಲ್ಲಿ ಚಿಟಕಿಸಿ.




ಕಳೆದ ವಾರ ನಡೆದ ಶತಾವಧಾನದಲ್ಲಿ ಕೆಲವು ಪೃಚ್ಛಕರು ಒಂದೇ ಸಮಸ್ಯೆಗೆ ಹತ್ತು-ಇಪ್ಪತ್ತು-ಮೂವತ್ತು ಉತ್ತರಗಳನ್ನು ಬರೆದ ವಿಷಯ ನೋಡಿದಾಗಿನಿಂದ ಇಪ್ಪತ್ತು ಬೇಡ ಹೋಗಲಿ, ಒಂದು ಪ್ರಶ್ನೆಗೆ ನನಗೆ ಎರಡು ಉತ್ತರವನ್ನಾದರೂ ಬರೆಯುವುದು ಸಾಧ್ಯವೇ ಅನ್ನುವ ಪ್ರಶ್ನೆ ಬಂತು . ಇರಲಿ.  ಇನ್ನೊಂದು ಅವಧಾನದ ವಿಡಿಯೋ ನೋಡುವಾಗ ಅಲ್ಲಿ ಇದೇ ಗಜೇಂದ್ರ ಮೋಕ್ಷಕ್ಕೆ ತುಸು ಬೇರೆ ಪದಗಳನ್ನು ಕೊಡಲಾಗಿತ್ತು - ಸರಿ, ಅದಕ್ಕೆ ಒಂದು ಕೈ ಹಾಕೋಣವೆಂದು ಈ ಪ್ರಯತ್ನ. ಹಾಗಾಗಿ ಒಂದೇ ಸಮಸ್ಯೆ ಅಲ್ಲದಿದ್ದರೂ ಒಂದೇ ತರಹದ ಸಮಸ್ಯೆ  ಅನ್ನಬಹುದು!

ಈ ಬಾರಿ ಇಲ್ಲಿ ಬಳಸಬೇಕಾದ ಪದಗಳೂ ಚಕ್ರಿಗಳೇ - ಅಂದರೆ ಚಕ್ರಗಳನ್ನು ಹೊಂದಿದವೇನೇ: ಸೈಕಲ್ (Cycle)  , ವ್ಯಾನ್ (Van), ಲಾರಿ (Van)  ಮತ್ತೆ ಕಾರ್ (Car).

ನಾನು ಬರೆದ ಪದ್ಯ ಹೀಗಿದೆ ನೋಡಿ. ಹೇಗಿದೆ ಹೇಳಿ!

ಅಸುವು ಹೋಗುತಲಿಹವು ವ್ಯಾನಾದಿ ಪಂಚಕವು
ತುಸು ನೀನು ಕರುಣಿಸೈ ಕಲ್ಲಾಗಿಸದೆ ಮನವ
ಮೊಸಳೆಯಿಂದೆನ್ನುಳಿಸಲಾರಿಹರೆನಲು ಗಜವು
ಎಸೆವ ಕಾರ್ಮುಗಿಲಿಂದ ಗರುಡವಾಹನ ಬಂದ!
  
-ಹಂಸಾನಂದಿ

ಕೊ: ಪಂಚಪ್ರಾಣಗಳೆಂದರೆ  ಪ್ರಾಣ,ಅಪಾನ,ಉದಾನ,ಸಮಾನ,ಮತ್ತೆ ವ್ಯಾನ. ಹೆಚ್ಚಿಗೆ ವಿವರಕ್ಕೆ ವಿಕಿಪೀಡಿಯ ನೋಡಿ.

ಕೊ.ಕೊ: ಪದ್ಯವು ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ.

ಚಿತ್ರ ಕೃಪೆ: http://www.harekrsna.com/sun/features/02-10/features1643.htm

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂಸಾನಂದಿಯವರೆ ಪದ್ಯ ಅರ್ಥಪೂರ್ಣವಾಗಿದೆ. ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಳ‌ ಹಿಡಿಸ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಆಗಾಗ ನೋಡಿದ್ದೇ..ಆದ್ರೆ ಅದರ ಹಿಂದಿನ ಕಥೆ ಗೊತ್ತಿರಲಿಲ್ಲ..ಈಗ ಗೊತ್ತಾಯ್ತು....
ಶುಭವಾಗಲಿ..

\\//

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ ಕೊಟ್ಟಿರುವ ಪದಗಳನ್ನು ಅಡಕವಾಗಿಸಿ ಬರೆದಿರುವ ಪದ್ಯ ಎಷ್ಟು ಸಹಜ ಎಂದರೆ

ಪದ್ಯ ಬರೆದ ನಂತರ ಪದಗಳನ್ನು ಕೊಟ್ಟಿದ್ದಾರ ಅನಿಸುವಮಟ್ಟಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಒಳ್ಳೆ ಮಾತುಗಳಿಗೆ ನಾನು ಆಭಾರಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.