ಕೆಲವು ವೈಜ್ಞಾನಿಕ ಚಿಂತನೆ ಹಾಗು ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ

4.333335

 ಕೆಲವು ವೈಜ್ಞಾನಿಕ ಚಿಂತನೆ  ಹಾಗು  ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ

 
ಕಳೆದವಾರ ಶ್ರೀಹರಿ... ಶ್ರೀಹರಿ..ಶ್ರೀಹರಿ ಕತೆಯನ್ನು ಸಂಪದದಲ್ಲಿ ಬರೆದು ಪ್ರಕಟಿಸಿದ್ದೆ. ಸಂಪದ ಮಿತ್ರರು ಅದನ್ನು ಓದಿ ಪ್ರೋತ್ಸಾಹಿಸಿದರು. ಕೆಲವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, 'ಭವಿಷ್ಯಕ್ಕೆ ಹೋಗಿ ಬರಲು ಸಾದ್ಯವಾದಲ್ಲಿ ಎಷ್ಟು ಚೆನ್ನಾಗಿರುತ್ತೆ ಅಲ್ವ'     ಎಂದು ಬರೆದರು
 
ಆದರೆ ಅದು ಸಾದ್ಯವ?  
 
ಹೀಗೆ ಅದರ ನಿಜ ಚಿಂತನೆ ಪ್ರಾರಂಬವಾಯಿತು. ನಮ್ಮ ಮನೆಗೆ ಬಂದಿದ್ದ ನನ್ನ ಸ್ನೇಹಿತರ ಜೊತೆ ಅದರ ಚರ್ಚೆಯು ನಡೆಯಿತು. ಆ ದೃಷ್ಟಿಯಲ್ಲಿ ಕೆಲವು ಕುತೂಹಲಕರ ಎನ್ನಬಹುದಾದ ವಿಷಯಗಳನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆಂದು ಈ ಬರಹ ಬರೆಯುತ್ತಿದ್ದೇನೆ. ಪೂರ್ಣವಾಗಿ ವಿಜ್ಞಾನದ ಲೇಖನವಲ್ಲದಿದ್ದರು ನನ್ನ ಅರಿವಿನ ಮಿತಿಯಲ್ಲಿ ಚರ್ಚಿಸಿದ್ದೇನೆ. 
 
 [ ಕತೆಯನ್ನು ಓದದವರು ಈ ಲಿಂಕ್ ನಲಿ ಓದಬಹುದು :  ಶ್ರೀಹರಿ... ಶ್ರೀಹರಿ.... ಶ್ರೀಹರಿ. ]
 
ನಮ್ಮ ಚರ್ಚೆಗೆ ಗ್ರಾಸವಾಗಿದ್ದು ಕೆಳಗಿನ ವಿಷಯಗಳು
 
ಮನುಷ್ಯ ಬೆಳಕಿನ ವೇಗದಲ್ಲಿ ಚಲಿಸಲು ಸಾದ್ಯವೆ? : 
===============================
ಸಾದಾರಣವಾಗಿ ಬೆಳಕಿನ ವೇಗ 1,86,000 ಮೈಲಿಗಳು ಅಥವ 3,00,000 ಕಿ.ಮಿ. ಒಂದು ಸೆಕೆಂಡಿಗೆ. ನೆನಪಿಡಿ ಇದು ಬೆಳಕು ಒಂದು ಸೆಕೆಂಡಿನಲ್ಲಿ ಚಲಿಸುವ ವೇಗ. ಇದು ನಮ್ಮ ಕಲ್ಪನೆಯನ್ನು ಮೀರಿದ ವೇಗ. ಮತ್ತು ಹಲವು ಪ್ರಯೋಗಗಳಿಂದ ದೃಡಪಟ್ಟಿದೆ.ಬೆಳಕಿನ ಚಲನೆ ಹಾಗು ವೇಗ ವಿಜ್ಞಾನಿಗಳಿಗೆ ಸದಾ ಸವಾಲಾಗಿಯೆ ಇತ್ತು. ಮತ್ತು ಪ್ರಯೋಗಗಳ ಮೂಲಕ ಕಂಡುಕೊಳ್ಳೂವುದು ಮತ್ತು ತ್ರಾಸದಾಯಕ. ಬೆಳಕಿನ ಚಲನೆಯ ರೀತಿಗೆ ಹಲವು ಸಿದ್ದಾಂತಗಳು ಪ್ರತಿಪಾದಿಸಲ್ಪಟ್ಟವು. ಪ್ಲಾಂಕ್, ಹೈಗನ್, ಥಾಮಸ್ ಯಂಗ್ ಹಲವು ವಿಜ್ಞ್ನಾನಿಗಳು ಬೆಳಕಿನ ಚಲನೆಯ ಬಗ್ಗೆ ತಲೆಕೆಡಸಿಕೊಂಡರು.
 ಬೆಳಕು ಒಂದು ಅಲೆಯ ರೀತಿ ಚಲಿಸುವದೆಂದು ಕೆಲವರು ಅಂದರೆ ಅದು ತೂಕವೆ ಇಲ್ಲದ ಫೋಟಾನ್ ಕಣಗಳ ಚಲನೆಯೆಂದು ಮತ್ತೊಬ್ಬ ವಿಜ್ಞಾನಿ ಹೇಳುವನು.  ಅದರ ಚಲನೆಯ ವೇಗ ಅದ್ವೀತಿಯ. ಮತ್ತು ಈ ವೇಗವು ನಿರ್ವಾತದಲ್ಲಿ ಚಲಿಸುವಾಗ, ಅದೆ ಬೆಳಕು ಗಾಜಿನಂತ ಪಾರದರ್ಶಕ ವಸ್ತುವಿನಲ್ಲಿ ಚಲಿಸುವಾಗ ಅದರ ವೇಗ ಸುಮಾರು 2,00,000 ಕಿ.ಮಿ. ಸೆಕೆಂಡಿಗೆ ಇರುತ್ತದೆ.  ಬೆಳಕಿನ ವೇಗವನ್ನು ಆದರಿಸಿ ಐನ್ ಸ್ಟಿನ್ ಎಂಬ ವಿಜ್ಞಾನಿ ಮಹಾಶಯ ತನ್ನ ಸಾಪೇಕ್ಷ ಸಿದ್ದಾಂತದ ಮೂಲಕ ಶಕ್ತಿ ಹಾಗು ವಸ್ತುವಿಗೆ ಇರುವ ಸಂಭಂದವನ್ನು ತನ್ನ E=MC~2 ಎಂಬ ಸೂತ್ರದ ಮೂಲಕ ಜಗತ್ತಿಗೆಲ್ಲ ತೋರಿಸಿದನು. ಈ ಸೂತ್ರ ಜಗತ್ತಿನಲ್ಲಿ ಇಂದಿಗೂ ಪ್ರಸ್ತುತ. ಯಾವುದೆ ವಸ್ತುವು  ಶಕ್ತಿಯ ಮೂಲರೂಪವೆ ಅನ್ನುವ ಅವನು ಶಕ್ತಿಯನ್ನು ಬೇಕಾದಲ್ಲಿ ವಸ್ತುವಿನ ರೂಪಕ್ಕೆ ಬದಲಿಸಲು ಸಾದ್ಯವೆಂದು ತರ್ಕಬದ್ದವಾಗಿ ಹೇಳಿದನು. ಆದರೆ ಪ್ರಕೃತಿ ತನ್ನದೆ ಆದ ನಿಯಮವನ್ನು ಪಾಲಿಸುತ್ತೆ  ಆದರಿಂದ ಯಾವುದೆ ವಸ್ತು ಎಂತಹುದೆ ಸಂದರ್ಭದಲ್ಲಿಯು ಬೆಳಕಿನ  ವೇಗದಲ್ಲಿ ಚಲಿಸಲು ಸಾದ್ಯವೆ ಇಲ್ಲ ಎಂದು ಅವನ ವಾದ. ಒಂದುವೇಳೆ ಯಾವುದಾದರು ಒಂದು ವಸ್ತು (ಯಂತ್ರ) ಬೆಳಕಿನ ವೇಗದ ಸಮೀಪದ ವೇಗದಲ್ಲಿ ಚಲಿಸಿದರೆ ಕಾಲ ಹಿಮ್ಮುಕವಾಗಿ ಚಲಿಸುತ್ತದೆ ಅಥವ ಕಾಲ ವಿಲಂಬಿಸುತ್ತದೆ ಅನ್ನುತ್ತಾನೆ !  . ಅದೇಗೆ ಸಾದ್ಯ 'ಕಾಲ' ಅಂದರೆ ಟೈಮ್ ಬದಲಾಗುವುದು ಸಾದ್ಯವೆ? ಹೌದು ಸಾದ್ಯ. ವಿಜ್ಞಾನದ ಪ್ರಕಾರ 'ಕಾಲ'ವು ಒಂದು ಬೌತ ವಸ್ತು ಅದು ಬೇಕಾದಲ್ಲಿ ಬದಲಾವಣೆಗೆ ಒಳಪಡುತ್ತದೆ ಎನ್ನುತದೆ ಬೌತವಿಜ್ಞಾನದ ನಿಯಮ. 
 ಒಂದು ಉದಾಹರಣೆ ತೆಗೆದು ಕೊಳ್ಳೋಣ. ಒಬ್ಬ ಮನುಷ್ಯ ಒಂದು ಚಲಿಸುವ ರೈಲಿನಲ್ಲಿದ್ದಾನೆ ಅಂತ ಭಾವಿಸಿ. ರೈಲು ಎಷ್ಟು ವೇಗವಾಗಿ ಚಲಿಸುತ್ತಿದೆಅಂದರೆ, ಬರೋಬರಿ ಬೆಳಕಿನ ವೇಗದ ಹತ್ತಿರ, ಆದರೆ ಬೆಳಕಿನ ವೇಗಕ್ಕೆ   ಸ್ವಲ್ಪವೆ ಕಡಿಮೆ, ಎಷ್ಟು ಕಡಿಮೆ ಎಂದರೆ ಒಮ್ಮ ಮನುಷ್ಯ ನಡೆಯಬಹುದಾದ ವೇಗದಷ್ಟು ಕಡಿಮೆ ಅಂದುಕೊಳ್ಳಿ. ಅಂದರೆ ಬೆಳಕಿನ ವೇಗಕ್ಕಿಂತ ಗಂಟೆಗೆ 5 ಕಿ,ಮಿ, ನಷ್ಟು ಕಡಿಮೆ ವೇಗ ಅಂದುಕೊಳ್ಳಿ. 
ಈಗ ನೋಡಿ
 ರೈಲಿನವೇಗ + ಮನುಷ್ಯ ನಡೆಯುವ ವೇಗ  =  ಬೆಳಕಿನ ವೇಗ 
 
ಈಗ ಚಲಿಸುತ್ತಿರುವ ರೈಲಿನಲ್ಲಿ ಮನುಷ್ಯ ರೈಲಿನ ಇಂಜಿನ್ ಕಡೆಗೆ ವೇಗವಾಗಿ ನಡೆಯಲು ಪ್ರಾರಂಬಿಸಿದರೆ, ಅವನ ಒಟ್ಟು ವೇಗ ಬೆಳಕಿನ ವೇಗಕ್ಕೆ ಸಮನಾಗಬೇಕು. ಮತ್ತು ಸುಮಾರು ಮೂರು ನಿಮಿಷದಲ್ಲಿ ಅವನು ರೈಲಿನ ಇಂಜಿನ್ ತಲುಪುವ ಅಂದುಕೊಂಡರೆ ಅದು ಸಾದ್ಯವಾಗುವುದೆ ಇಲ್ಲ. ಏಕೆಂದರೆ ಅವನು ಏನು ಮಾಡಿದರು ಬೆಳಕಿನ ವೇಗ ತಲುಪಲಾರ. ಅವನು ಎಷ್ಟೆ ನಡೆದರು ಅ ಮೂರು ನಿಮಿಶವಾಗುವುದೆ ಇಲ್ಲ ಏಕೆಂದರೆ ಸಮಯ ಅಲ್ಲಿ ಹಿಗ್ಗುತ್ತ ಹೋಗುತ್ತಿದ್ದೆ ಮತ್ತು ಆ 'ಮೂರು ನಿಮಿಶ' ಅನ್ನುವುದು ಅವನು ಎಷ್ಟು ಹೊತ್ತು ನಡೆದರು ಆಗುವುದೆ ಇಲ್ಲ. ಹಾಗಾಗಿ ಅವನು ಬೆಳಕಿನ ವೇಗ ತಲುಪಲು ಸಾದ್ಯವಾಗುವದಿಲ್ಲ. ಇದು ಐನ್‌ಸ್ಟಿನ್ ಸಿದ್ದಾಂತ. 
 
ಕಾಲದಲ್ಲಿ ಹಿಂದೆ ಮುಂದೆ ಭವಿಷ್ಯಕ್ಕೆ ಹೋಗಲು ಸಾದ್ಯವೆ?:
===============================
 
ಮನುಷ್ಯ ಕಾಲದಲ್ಲಿ ಹಿಂದೆ ಅಥವ ಮುಂದೆ ಅಂದರೆ ಭೂತ ಅಥವ ಭವಿಷ್ಯಕ್ಕೆ ಹೋಗುವುದು ಸಾದ್ಯವಿಲ್ಲ ಅನ್ನುವುದು ನಿಯಮ. ಆದರೆ ಕೆಲವು ವಿಶೇಷಗಳನ್ನು  ವಿಶ್ವದಲ್ಲಿ ಗಮನಿಸಿ, ನಾವು ಹೋಗವ ಸಂಬವವಿದೆ!. ಅದನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಕಾಲವು ಒಂದು ಬೌತಿಕ ವಸ್ತು ಅದು ಹಿಗ್ಗ ಬಹುದು ಮತ್ತು ಕುಗ್ಗ ಬಹುದು, ಮತ್ತು ವಿಚಿತ್ರ ವೆಂದರೆ ಕಾಲವು ವಸ್ತುಗಳ ಅಂದರೆ ಬೌತಿಕ ವಸ್ತುಗಳ ಸಮೀಪದಲ್ಲಿ ನಿದಾನವಾಗಿ ಚಲಿಸುತ್ತದೆ ಅನ್ನುತ್ತದೆ ವಿಶ್ವ ನಿಯಮ!. ಹೌದು ಭೂಮಿಯ ಮೇಲೆ ಕಾಲ ಅಂದರೆ ಟೈಮ್ ಚಲಿಸುವ ವೇಗ ಭೂಮಿಯಿಂದ ಹೊರಗೆ ನಿರ್ವಾತದಲ್ಲಿ ಕಾಲ ಚಲಿಸುವ ವೇಗಕ್ಕಿಂದ ಕಡಿಮೆ!. ಸ್ಪೇಸ್ ನಲ್ಲಿ ಕಾಲ ಚಲಿಸುವ ವೇಗ ಕೊಂಚ ಜಾಸ್ತಿ. ಹಾಗಾಗಿ ನಮ್ಮ ಕೃತಕ ಉಪಗ್ರಹದಲ್ಲಿರುವ ಕ್ವಾಂಟಮ್ (ಅಣು?) ಗಡಿಯಾರಗಳು ಸೆಕೆಂಡಿನ ಕೆಲ ಬಾಗದಷ್ಟು ಮುಂದೆ ಹೋಗಿಬಿಡುತ್ತವೆ ಮತ್ತು ವಿಜ್ಞಾನಿಗಳು ಅದನ್ನು ನಿಯಮಿತವಾಗಿ ಸರಿ ಹೊಂದಿಸುತ್ತಾರೆ. ಅಂದರೆ ಕಾಲ ಅನ್ನುವುದು ವಸ್ತುಗಳ ಸಮಕ್ಷಮದಲ್ಲಿ ಕೊಂಚ ನಿದಾವವಾಗಿ ಚಲಿಸುತ್ತವೆ ಅನ್ನುತ್ತದೆ ನಿಯಮ. 
 
 ಈಗ ನೀವು ಒಂದು ವಾಹನವನ್ನೇರಿ ಭೂಮಿಯಿಂದ ಹೊರಗೆ ಹೊರಟರೆ ಭೂಮಿಯಿಂದ ಹೊರಗೆ ಸಮಯ ಸ್ವಲ್ಪ ಹೆಚ್ಚುವೇಗದಲ್ಲಿದೆ ಆದರೆ ನೀವು ಹಾಗೆಯೆ ಹೋಗಿ ಒಂದು ಕಪ್ಪುರಂದ್ರದ ಕಕ್ಷೆಯಲ್ಲಿ ಸೇರುತ್ತಿರಾಗಿ ಭಾವಿಸಿ. ನಂತರ ನೀವು ಕಪ್ಪುರಂದ್ರದ ಹತ್ತಿರದ ಕಕ್ಷೆಯಲ್ಲಿ ಅದಕ್ಕೆ ಸಮೀಪವಾಗಿ ಅದಕ್ಕೆ ಕೆಲವು ವಾರ ಅಂದರೆ ಮೂರು ಅಥವ ನಾಲಕ್ಕು ವಾರ ಸುತ್ತು ಬಂದು ನಂತರ ಭೂಮಿಗೆ ಹಿಂದಿರುಗಿ ಬರಲು ಸಾದ್ಯವಾದಲ್ಲಿ ನಿಮಗೊಂದು ಆಶ್ಚರ್ಯ ಕಾದಿದೆ. ಅಲ್ಲಿ ನೀವು ಕಳೆದುದ್ದು ಕೆಲವೆ ವಾರ ಆದರೆ ಭೂಮಿಗೆ ಬರುವಾಗ ಇಲ್ಲಿ ಒಂದೆರಡು ಶತಮಾನ ಮುಂದೆ ಹೋಗಿರುತ್ತದೆ. ಅಂದರೆ ಇಲ್ಲಿ ಇನ್ನೂರು ವರ್ಷಗಳಷ್ಟು ಮುಂದೆ ಹೋಗಿದೆ ಕಾಲ. ಅಂದರೆ ನೀವೀಗ ಭವಿಷ್ಯದಲ್ಲಿದ್ದೀರಿ!.  ಮತ್ತು ನೀವು ಒಂದು ವೇಳೆ ನೀವು ಆ ಕಪ್ಪುರಂದ್ರದ ಕೇಂದ್ರಕ್ಕೆ ಇಳಿಯಲು ಸಾದ್ಯವಾಯಿತು ಅಂದುಕೊಳ್ಳಿ ಅಲ್ಲಿ ಸ್ವಲ್ಪ ಕಾಲ ಅಂದರೆ ಕೆಲವು ನಿಮಿಶ ಅಥವ ಘಂಟೆ ವಿಶ್ರಾಂತಿ ಪಡೆಯುತ್ತೀರಿ ಅಂದುಕೊಳ್ಳಿ , ಅಲ್ಲಿ ನಿಮಗೆ ಕಾಲ ಅನ್ನುವುದು ಹೆಚ್ಚು ಕಡಿಮೆ ಸ್ಥಗಿತವಾಗಿರುತ್ತದೆ , ಅಲ್ಲಿ ಕಾಲ ಎಷ್ಟು ನಿದಾನವಾಗಿ ಚಲಿಸುತ್ತಿದೆ ಅಂದರೆ ನೀವು ಅಲ್ಲಿಂದ ಪುನಃ ಹೊರಟು ಹಿಂದ ಬಂದು (ಅದು ಸಾದ್ಯವೆ ಇಲ್ಲ !)  ಭೂಮಿಯನ್ನು ಸೇರಿದಲ್ಲಿ ಇಲ್ಲಿ ಸಾವಿರರು ವರ್ಷವೆ ಕಳೆದಿರುತ್ತದೆ!. ಇದೆಲ್ಲ ಕಲ್ಪನೆಗಳಾಗಿ ತೋರಬಹುದು ಆದರೆ ವೈಜ್ಞಾನಿಕ ಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದ ವಾದಗಳು. 
 
 [ನಮ್ಮ ಪುರಾಣಗಳಲ್ಲಿ ಹೇಳುವಾಗ ಭೂಮಿನ ಒಂದು ವರ್ಷ ಅಂದರೆ ಭ್ರಹ್ಮನ ಒಂದು ದಿನ. ಹಾಗೆ ಭ್ರಹ್ಮನ ಒಂದು ವರ್ಷವೆಂದರೆ ವಿಷ್ಣುವಿನ ಒಂದು ದಿನ, ಇವೆಲ್ಲ  ನಕ್ಕು ತಳ್ಳಿಹಾಕಿಬಿಡುತ್ತೇವೆ ಆದರೆ ಆ ಕತೆಗಳಲ್ಲಿ ಯಾವುದೊ ಸತ್ಯವಿದೆ ಎಂದು ಭಾವಿಸುವದಿಲ್ಲ.
ಹಿಂದೊಮ್ಮೆ ಹಿಮಾಲಯದ ತಪ್ಪಲಿನ ಪ್ರಪಂಚದ ಒಂದು ಕತೆ ಓದಿದ್ದೆ ಬಹುಷಃ ನೀಲಿ ಚಂದ್ರ ಎಂದೊ ಏನೊ ಅದರ ಹೆಸರು, ಹಿಮಾಲಯದ ತಪ್ಪಲಿನ ಒಂದು ಕಣಿವೆಯ ರಾಜ್ಯದಲ್ಲಿ ಒಬ್ಬಾತ ಸ್ವಲ್ಪ ಕಾಲ ಕಳೆದು ತನ್ನ ಊರಿಗೆ ಹಿಂದಿರುಗುತ್ತಾನೆ ಆದರೆ ಅವನ ಊರಿನಲ್ಲಿ ಅವನ ಕಾಲವೆ ಕಳೆದಿರುತ್ತದೆ ಅಂದರೆ 'ಕಾಲ' ನೂರು ವರ್ಷಗಳಷ್ಟು ಮುಂದೆ ಹೋಗಿರುತ್ತದೆ] 
 
ವಸ್ತುಗಳು ತಮ್ಮ ಸ್ವರೂಪ ಬದಲಿಸಲು ಸಾದ್ಯವೆ?:
============================
 
 ಈಗ ನೋಡಿ ವಿಶ್ವದಲ್ಲಿರುವ ಎಲ್ಲ ವಸ್ತುಗಳು ಅಣುಗಳಿಂದ ಪರಮಾಣುಗಳಿಂದ ಆಗಿದೆ ಅನ್ನುತದೆ ವಿಜ್ಞಾನ. ಎಲ್ಲಕ್ಕು ಮೂಲವಸ್ತು ಆ ಪರಮಾಣುವೆ. ಅದರೆ ಸ್ವರೂಪವಾದರು ಎಂತಹುದು ಅದಲ್ಲಿರುವುದು ಪ್ರೋಟಾನ್ , ಎಲಕ್ಟ್ರಾನ್, ಹಾಗು ನ್ಯೂಟ್ರಾನ ಗಳು ಅಷ್ಟೆ. ಎಲ್ಲ ಪರಮಾಣುಗಳ ಸ್ವರೂಪವು ಅಷ್ಟೆ, ಅದರೊಳಗೆ ವಿವಿದ ಕಕ್ಷೆಗಳಲ್ಲಿ ಸುತ್ತುತ್ತಿರುವ ಇಲಾಕ್ರ್ತಾನ್  ಹಾಗು ಪ್ರೋಟಾನ್ ಗಳ ರಚನೆ. ಬರಿ ಅವುಗಳ ಸಂಖ್ಯೆಯಲ್ಲಿ ಮತ್ತು ಜೋಡಣೆಯಲ್ಲಿ ಮಾತ್ರ ವೆತ್ಯಾಸ. ಕಬ್ಬಿಣ , ಚಿನ್ನ ಅಥವ ಯಾವುದೆ ವಸ್ತುವಿರಲಿ ಅದು ಪರಮಾಣಿ ಎಂಬ ಮೂಲವಸ್ತುವಿನಿಂದ ಆಗಿದೆ ಅಷ್ಟೆ , ಅವುಗಳಲ್ಲಿರುವ ಪ್ರೋಟಾನ್ , ಎಲೆಕ್ಟ್ರಾನ್, ನ್ಯೂಟ್ರಾನಗಳ ಸಂಖ್ಯೆ ಹಾಗು ಜೋಡಣೆಯಲ್ಲಿ ಮಾತ್ರ ವೆತ್ಯಾಸ. ಒಂದು ವೇಳೆ ನೀವು ಕಬ್ಬಿಣದ ಪರಮಾಣುವಿನಲ್ಲಿಯ ಈ ದಾತುಗಳನ್ನು ಮರುವಿನ್ಯಾಸಮಾಡಬಲ್ಲಿರಾದರೆ ಕಬ್ಬಿಣವನ್ನು ಚಿನ್ನ ಮಾಡಬಹುದು!. ಹಾಗೆಯೆ ಮನುಷ್ಯನ ದೇಹವಾದರು ಇಂತಹ ಮೂಲವಸ್ತುಗಳಿಂದಲೆ ಆಗಿರುವುದು. ಮನುಷ್ಯ ಪರಮಾಣುವಿನಲ್ಲಿಯ ಒಳಗಿನ ಇಲಕ್ಟ್ರಾನ್ ಪ್ರೋಟಾನಗನ್ನು ಒಂದಿಷ್ಟು ಸೇರಿಸುವುದು ತೆಗೆಯುದು ಮಾಡುವ ತಂತ್ರ ಸಿದ್ದಿಸಿತು ಎಂದರೆ ಜೀನ್ಸ್ ,ಕ್ರೋಮೊಸೋಮಗಳ ಮರು ಜೋಡನೆಯೇನು ಮಹಾ ,ಅವನು ಸೃಷ್ಟಿಯಲ್ಲಿ ಹೊಸ ಹೊಸ ವಸ್ತುಗಳನ್ನು ಸಹ ಸೃಷಿಮಾಡಬಲ್ಲ. ಇಂದಿಗು ಪರಮಾಣುಗಳನ್ನು ಅವುಗಳ ಪರಮಾಣುಸಂಖ್ಯೆಗೆ ಅನುಸಾರವಾಗಿ ಜೋಡಿಸುವಾಗ ಕೆಲವೊಂದು ಜಾಗ ಖಾಲಿ ಇದೆ, ಅಂದರೆ ಅಲ್ಲಿ ಮನುಷ್ಯ ಹೊಸ ಹೊಸ ದಾತುಗಳನ್ನು ಸೃಷ್ಟಿ ಮಾಡಬಲ್ಲ. ಆದರೆ ಅದೆಲ್ಲ ತಂತ್ರಜ್ಞಾನ ಸಿದ್ದಿಸಿದಲ್ಲಿ ಮನುಷ್ಯನು ಮನುಷ್ಯನಾಗಿ ಉಳಿದಿರುವದಿಲ್ಲ ಸೃಷ್ಟಿಕರ್ತನಾಗಿಬಿಟ್ಟಿರುತ್ತಾನೆ. 
 
--------------------------------------------------------------------------------------------------------------------------------
ಮತ್ತೆ 
ಬೆಳಕು ಅತೀವವೇಗದಲ್ಲಿ ನಮ್ಮ ಮನಸಿಗೆ ನಿಲುಕದ ವೇಗದಲ್ಲಿ ಚಲಿಸುತ್ತಿದ್ದರು ಸಹ ಅಕಾಶದಲ್ಲಿನ ಕೆಲವು ಗ್ರಹಗಳ ನಕ್ಷತ್ರಗಳಲ್ಲಿನ ನಡುವಿನ ಚಲನೆಗೆ ಬೆಳಕು ತೆಗೆದುಕೊಳ್ಳುವ ಸಮಯ ಗಮನಿಸಿ.
 
  ಬೆಳಕಿನ ವೇಗ ಸೆಕೆಂಡಿಗೆ ೩,೦೦,೦೦೦ ಕಿ,ಮಿ, ಅಥವ ೧,೮೬,೦೦೦ ಮೈಲಿಗಳು ಅಂದುಕೊಳ್ಳುವಾಗ 
 
ಬೆಳಕು ೧ ಮೀ. ಚಲಿಸಲು ತೆಗೆದುಕೊಳ್ಳುವ ಸಮಯ  ೩.೩ ನಾನೊ ಸೆಕೆಂಡ್
         ಚಂದ್ರನಿಂದ ಭೂಮಿಗೆ ಬೆಳಕು ಚಲಿಸುವಾಗ ೧.೩ ಸೆಕೆಂಡ್ ತೆಗೆದುಕೊಳ್ಳುವುದು
         ಅತಿ ಹತ್ತಿರದ ಗೆಲಾಕ್ಸಿ ಕಾನಿಸ್ ಮೇಜರ್ ದ್ವಾವರ್ ನಿಂದ ೨೫,೦೦೦ ವರ್ಷಗಳು
        ಅಂಡ್ರೋಮಿಡ ಗೆಲಾಕ್ಸಿಯಿಂದ ೨.೫ ಮಿಲಿಯನ್ ವರ್ಷಗಳು
 ವಿಚಿತ್ರವೆನಿಸುವದಿಲ್ಲವೆ , ಅಂದರೆ ನಾವು ಇಂದು ಬಾನಿನಲ್ಲಿ ನೋಡುತ್ತಿರುವ ನಕ್ಷತ್ರ ಹಾಗು ಅದರೆ ಬೆಳಕು ಇಂದಿನದಲ್ಲ ಅದು ಸಾವಿರರೊ , ಲಕ್ಷವೊ ವರ್ಷಗಳ ಹಿಂದಿನ ದೃಷ್ಯ , ಅಂದರೆ ಏನು ಈಗಿನ ನಾವು ನೋಡುತ್ತಿರುವ ಯಾವ ನಕ್ಷತ್ರವು ಇಂದಿನದಲ್ಲಿ ಯಾವುದೊ ಕಾಲದ್ದು ಈಗ ಅಲ್ಲಿ ನಿಜವಾಗಿ ನಕ್ಷತ್ರ ಇದೆಯೆ ಇಲ್ಲವೊ ಯಾರಿಗೆ ಗೊತ್ತು .
   ಈದಿನ ಯಾವುದೊ ನಕ್ಷತ್ರವೊಂದು ಎಲ್ಲೊ ದೂರದಲ್ಲಿ ಸಿಡಿದು ನಾಶವಾಗಿ ಹೋದರೆ ನಮಗದು ಗೊತ್ತಾಗುವುದೆ ಇಲ್ಲ , ಬರಿಗಣ್ಣಿಗೆ ಕಾಣಿಸುತ್ತಲೆ ಇರುತ್ತದೆ, ಎಷ್ಟೊ ಲಕ್ಷ ವರ್ಷಗಳಾದ ಮೇಲೆಯೆ ನಮಗರಿವಾಗುವುದು ಅಲ್ಲಿ ನಕ್ಷತ್ರವಿಲ್ಲ ಎಂದು.
 
 ಎಲ್ಲವೂ ಮಾಯ ಪ್ರಪಂಚವಲ್ಲವೆ. 
 
 
ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು I
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು II
ಅರಿತೆನಾನೆನ್ನುವಂತಾಗೆ ಕೃತಿಕೌಶಲದ I 
ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ II
========================================================================
 
ಮೇಲಿನ ಎಲ್ಲ ಮಾತುಕತೆಗಳು ನಡೆದಿದ್ದು ನನ್ನ ಸ್ನೇಹಿತ ಹಾಗು ಕಸಿನ್ ಶ್ರೀದರ್  ಎಂಬುವರ ಜೊತೆ. ಎಲ್ಲ ವಿಷಯಗಳನ್ನು ಚರ್ಚೆಯ ಮೂಲಕ ತಿಳಿಸಿದ ಅವರಿಗೂ ಕೃತಜ್ಞತೆಗಳು.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಹುಡುಕಾಟ, ತಡಕಾಟ, ತೊಳಲಾಟಗಳು ಇಷ್ಟವಾದವು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ನಾಗರಾಜ್ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು I ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು II ಅರಿತೆನಾನೆನ್ನುವಂತಾಗೆ ಕೃತಿಕೌಶಲದ I ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ I| ----------------------------------------------------- ಡೀ ವೀ ಜಿ ಅವ್ರ ಅರ್ಥಪೂರ್ಣ ಸಾಲುಗಳು ಬರಹದ ಜೊತೆಗೆ ಸೇರಿಸಿದ್ದು ತಕ್ಕುದಾಗಿದೆ... ನಿಮ್ಮ ಈ ಸರಳ ವೈಜ್ಞಾನಿಕ ವಿವರಣೆಯ ಬರಹ , ನಾ ಅರಿಯದ -ಅರ್ಥ ಮಾಡಿಕೊಂಡಿರದಿದ್ದ ಹಲ ವಿಷ್ಯಗಳನ್ನ ತಿಳಿಸಿತು.. ಗುರುಗಳೆ ಅದೊಮ್ಮೆ ನೀವು 'ಶ್ರೀಗಂಧದ ಧೂಪ' ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನ ನೋಡಿ ಅದನ್ನ ಮತ್ತಸ್ತು ವಿವರವಾಗಿ ಅರಿಯಲು http://sampada.net/b... ಲೇಖನ ಬರೆದಿದ್ದೀರಿ... ಈಗ ಶ್ರೀ ಹರಿ-- ಶ್ರೀ ಹರಿ--- ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನ ನೋಡಿ ಈ ಬರಹ ಬರ್ದಿದೀರಾ... ಅದು ನೀವು ಬರಹವನ್ಣ ಪ್ರೀತಿಸುವ- ನಮ್ ಸಂದೇಹವನ್ಣ ಪರಿಹರಿಸುವ ವಿವರ ನೀಡುವ ಆ ಕುರಿತು ನೀವು ಸಂಶೋಧನೆ ನಡೆಸಿದ ಬಗೆಯನ್ನ ತಿಳಿಸಿತು.... ನಿಮ್ಮ ವಿಶೇಷತೆಯೇ ಅದು- ಅದ್ಕೆ ನನಗೆ ನಿಮ್ಮ ಮೇಲೆ ತುಂಬು ಅಭಿಮಾನ ಅಕ್ಕರೆ ಪ್ರೀತಿ... ಬರಹವನ್ 'ತಪಸ್ಸಂತೆ' ಪರಿಗಣಿಸಿ ಬರಹ ಬಗ್ಗೆ ಯೋಚಿಸಿ ಸಂಶೋಧನೆ ನಡೆಸಿ ಬರೆದು- ತಿದ್ದಿ ತೀಡಿ ಮಾರ್ಪಾಡುಗೊಳಿಸಿ ನಿಮಗೆ ಸಮಾಧಾನ ಕೊಟ್ಟು ಓಕೇ ಅನ್ನಿಸಿದರೆ ಸಂಪದಕ್ಕೆ ಸೇರಿಸಿ ನಮ್ಮನ್ನ ರಂಜಿಸುವ ನಿಮಗೆ ದೀರ್ಘಾಯುಷ್ಯವನ್ಣ ಆ ಭಗವಂತ ನೀಡಲಿ... ಶುಭವಾಗಲಿ... ************ಯುಗಾದಿಯ ಮುಂಗಡ ಶುಭಾಶಯಗಳು*************
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಪ್ತಗಿರಿಯವರೆ **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಗಳೇ, ಒಳ್ಳೆಯ ವಿಷಯವನ್ನು ಆಲೋಚನೆಗೆ ಗ್ರಾಸವಾಗಿ ಕೊಟ್ಟಿದ್ದೀರ. ನಿಮ್ಮ ವಿವರಣೆಗಳು ಮತ್ತು ಉದಾಹರಣೆಗಳು ಕೂಡ ಬಹಳ ಚೆನ್ನಾಗಿವೆ. ಇಂತಹ ಕ್ಲಿಷ್ಟ ವಿಷಯಗಳನ್ನು ಸರಳ ಭಾಷೆಯಲ್ಲಿ ಬರೆದು ಸಾಮಾನ್ಯ ಓದುಗರೂ ಗಹನವಾದ ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದ್ದೀರ. ಅಭಿನಂದನೆಗಳು ತಮಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀಧರ್ ಸಾಮಾನ್ಯವಾಗಿ ಖಗೋಳ ಶಾಸ್ತ್ರವೆ ಆಗಿ ಎಲ್ಲರಲ್ಲು ಆಸಕ್ತಿ ಕೆರಳಿಸಿಬಿಡುತ್ತದೆ **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊನ್ನೆ ಅಭ್ಯಾಸದ ಕಾರ್ಯಕ್ರಮದಲ್ಲಿ ನೀವು ಬರೆಯುತ್ತಿರುವ ನಿಮ್ಮ ಈ ಲೇಖನದ ಬಗ್ಗೆ ಹೇಳಿದಾಗ ಕುತೂಹಲ ಹುಟ್ಟಿಕೊ೦ಡಿತ್ತು.. ಓದಿದಾಗ ಈ ವಿಷಯ ಇನ್ನಷ್ಟು ಕುತೂಹಲಕಾರಿಯಾಗಿದೆ ಎ೦ದೆನಿಸುತ್ತಿದೆ.. ಈ ಕೆಳಗಿನ ಕೊ೦ಡಿಗಳಲ್ಲಿ ಇನ್ನಷ್ಟು ಮಾಹಿತಿ ಸಿಗಬಹುದು.. http://www.phys.unsw... http://science.howst... http://www.allabouts... ನಿಮ್ಮ ಸ೦ಶೋಧನ ಪ್ರವೃತ್ತಿ ನಿಮ್ಮ ಬರವಣಿಗೆಗಳನ್ನು ಇನ್ನಷ್ಟು ಗಟ್ಟಿಯಾಗಿಸಿವೆ.. ಬರೆಯುತ್ತಿರಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಸಂಶೋಧನೆ ನಡೆಸುವಷ್ಟು ಸಮಯ ಅಥವ ಜ್ಞಾನ ಎರಡು ನನ್ನಲ್ಲಿ ಇಲ್ಲ ಸುಮ್ಮನೆ ಕುತೂಹಲವಷ್ಟೆ . ನೀವು ಕೊಟ್ಟಿ ಲಿಂಕ ಗಳು ಸಾಕಷ್ಟು ವಿಷ್ಯಗಳನ್ನು ತಿಳಿಸುತ್ತವೆ **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ ಪಾರ್ಥಸಾರಥಿಯವರೆ, ಪ್ರಸನ್ನರವರು ಕೊಟ್ಟ ಕೊಂಡಿಗಳಿಂದ ನಿಮ್ಮ ಲೇಖನವನ್ನು ಇನ್ನಷ್ಟು ಹೆಚ್ಚು ಅರ್ಥವತ್ತಾಗಿ ಅರಿತುಕೊಳ್ಳಲು ಸಹಾಯಕವಾಯಿತು. ಇಂತಹ ವೈಚಾರಿಕ ಲೇಖನ ಬರೆದ ನಿಮಗೂ ಹಾಗೂ ಪ್ರಸನ್ನ ಇಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ನನಗೂ "ಶ್ರೀಹರಿ....." ಓದಿದ ಮೇಲೆ, ಆ ವಿಷಯದ ಬಗ್ಗೆ ಸಮಾಲೋಚನೆ ನಡೆಸಬೇಕು ಅನಿಸಿತು. ಈ ಸಮಯದಲ್ಲಿ ಯಾವ ಮಿತ್ರರೂ ಸಿಗುವುದಿಲ್ಲ. (ಸಪ್ತಗಿರಿವಾಸಿ ಸಿಕ್ಕಿದರೂ "ಬೆಳಗ್ಗೆ ಆಯಿತು ಗುಡ್ ನೈಟ್" ಅಂದು ನಿದ್ರೆಗೆ ಜಾರುವರು) ಕೊನೆಗೆ ಮನೆಯ ಎದುರಿನ ಮರದಲ್ಲಿ ನೇತಾಡುತ್ತಿದ್ದ ೩-೪ ದೆವ್ವಗಳನ್ನು ಚರ್ಚೆಗೆ ಕರೆದೆ. ಬಹಳ ಖುಷಿಯಿಂದ ಮುಚ್ಚಿದ ಬಾಗಿಲು,ಕಿಟಕಿ ಸಂಧಿಯಿಂದಲೇ ಒಳ ಬಂದು ಫ್ಯಾನ್ ರೆಕ್ಕೆಯಲ್ಲಿ ಕುಳಿತ(ಜೋತಾಡಿದ)ವು. ನಾನು ವೈಜ್ಞಾನಿಕ ನೆಲೆಯಲ್ಲಿ ಚರ್ಚೆ ನಡೆಯಬೇಕು ಎಂದು ಮೊದಲಿಗೆ ರಿಕ್ವೆಸ್ಟ್ ಮಾಡಿದೆ. ಅದಕ್ಕೆ " ನಮ್ಮ ಟೈಮ್ ಸುಮ್ಮನೆ ವೇಸ್ಟ್ ಮಾಡಬೇಡ. ಸವಾಲುಗಳಿಗೆಲ್ಲಾ ನಾವು ವ್ಯರ್ಥ ಪುರಾವೆ ಕೊಡುತ್ತಾ ಇರುವುದಿಲ್ಲ. ದೆವ್ವ ಇಲ್ಲ ಅಂದವರಿಗೆ ಇದ್ದೇವೆ ಎಂದು ತೋರಿಸಲು ಹೋಗುವುದಿಲ್ಲ. ಅವರಿಗೆ ತೋರಿಸಿ ನಮಗೇನಾಗಬೇಕು? ವೈಜ್ಞ್ನಾನಿಕವಂತೆ! ಅದು ಈ ಕಾಲದಲ್ಲಿ ಹಾಕುವ ಡಾಮರ್ ರೋಡಿನಂತೆ- ಇತ್ಲಾಗೆ ಹಾಕುತ್ತಾ ಬರುವರು, ಅತ್ಲಾಗಿಂದ ಕಿತ್ತೋಗ್ತಾ ಬರುತ್ತದೆ. ಮನೋವೇಗದ ಎದುರು ಬೆಳಕಿನ ವೇಗ ಏನೂ ಇಲ್ಲ. ದೇವತೆಗಳು, ಸನ್ಯಾಸಿಗಳು,ಸ್ವಾಮಿಗಳು (ಅಂ.ಭ. ಸ್ವಾಮಿ...) ಸಾಧನೆಯಿಂದ ಎಲ್ಲಿಂದ ಎಲ್ಲಿಗೂ ಹೋಗಲು ಶಕ್ಯರು. ಈಗ ಬೇಕಿದ್ದರೆ ನಿನಗೊಂದು ಪುರಾವೆ. ಇಲ್ಲೇ ಇದ್ದು ನಾನು ಪಾರ್ಥರನ್ನು ಭೇಟಿಯಾಗಿ ಬರುವೆ" ಅಂದಿತು ದೆವ್ವ! ನನಗೋ ಪರಮಾಶ್ಚರ್ಯ! ಆಗಲೇ ದೆವ್ವಗಳೆಲ್ಲಾ ತಮ್ಮ ಮರಕ್ಕೆ ಹಿಂದೆ ಹೊರಟವು. ಪಾರ್ಥರು ಸಿಕ್ಕಿದರಾ ಅಂದೆ.. ಅವರೇ ಹೇಳುವರು. ಅಂದಿತು ದೆವ್ವ. ನೀವು ಆ ವಿಷಯ ತಿಳಿಸಲೇ ಇಲ್ಲಾ? (ಅಂದ ಹಾಗೇ ಆ ದೆವ್ವದ ಕಣ್ಣಿನ ಬಳಿಯಲ್ಲಿ ಒಂದು ಗಾಯದ ಗುರ್ತು ಇತ್ತು) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

(ಸಪ್ತಗಿರಿವಾಸಿ ಸಿಕ್ಕಿದರೂ "ಬೆಳಗ್ಗೆ ಆಯಿತು ಗುಡ್ ನೈಟ್" ಅಂದು ನಿದ್ರೆಗೆ ಜಾರುವರು) >>>ಈಗ ಮಧ್ಯ ರಾತ್ರಿ ದಾಟಿದರೂ ನಿಮ್ಮ ಆ ದೆವ್ವಗಳು ಇಲ್ಲಿ ಓಡಾಡುತ್ತಿದ್ದರೂ ನಾ ಎದ್ದಿರುವೆ ..!! ಕೊನೆಗೆ ಮನೆಯ ಎದುರಿನ ಮರದಲ್ಲಿ ನೇತಾಡುತ್ತಿದ್ದ ೩-೪ ದೆವ್ವಗಳನ್ನು ಚರ್ಚೆಗೆ ಕರೆದೆ. ಬಹಳ ಖುಷಿಯಿಂದ ಮುಚ್ಚಿದ ಬಾಗಿಲು,ಕಿಟಕಿ ಸಂಧಿಯಿಂದಲೇ ಒಳ ಬಂದು ಫ್ಯಾನ್ ರೆಕ್ಕೆಯಲ್ಲಿ ಕುಳಿತ(ಜೋತಾಡಿದ)ವು. ನಾನು ವೈಜ್ಞಾನಿಕ ನೆಲೆಯಲ್ಲಿ ಚರ್ಚೆ ನಡೆಯಬೇಕು ಎಂದು ಮೊದಲಿಗೆ ರಿಕ್ವೆಸ್ಟ್ ಮಾಡಿದೆ. :()) ಅದಕ್ಕೆ " ನಮ್ಮ ಟೈಮ್ ಸುಮ್ಮನೆ ವೇಸ್ಟ್ ಮಾಡಬೇಡ. :((( ಸವಾಲುಗಳಿಗೆಲ್ಲಾ ನಾವು ವ್ಯರ್ಥ ಪುರಾವೆ ಕೊಡುತ್ತಾ ಇರುವುದಿಲ್ಲ. ದೆವ್ವ ಇಲ್ಲ ಅಂದವರಿಗೆ ಇದ್ದೇವೆ ಎಂದು ತೋರಿಸಲು ಹೋಗುವುದಿಲ್ಲ. ಅವರಿಗೆ ತೋರಿಸಿ ನಮಗೇನಾಗಬೇಕು? :()) ವೈಜ್ಞ್ನಾನಿಕವಂತೆ! ಅದು ಈ ಕಾಲದಲ್ಲಿ ಹಾಕುವ ಡಾಮರ್ ರೋಡಿನಂತೆ- ಇತ್ಲಾಗೆ ಹಾಕುತ್ತಾ ಬರುವರು, ಅತ್ಲಾಗಿಂದ ಕಿತ್ತೋಗ್ತಾ ಬರುತ್ತದೆ. :())) ಮನೋವೇಗದ ಎದುರು ಬೆಳಕಿನ ವೇಗ ಏನೂ ಇಲ್ಲ. ದೇವತೆಗಳು, ಸನ್ಯಾಸಿಗಳು,ಸ್ವಾಮಿಗಳು (ಅಂ.ಭ. ಸ್ವಾಮಿ...) ಸಾಧನೆಯಿಂದ ಎಲ್ಲಿಂದ ಎಲ್ಲಿಗೂ ಹೋಗಲು ಶಕ್ಯರು. :()) ಈಗ ಬೇಕಿದ್ದರೆ ನಿನಗೊಂದು ಪುರಾವೆ. ಇಲ್ಲೇ ಇದ್ದು ನಾನು ಪಾರ್ಥರನ್ನು ಭೇಟಿಯಾಗಿ ಬರುವೆ" ಅಂದಿತು ದೆವ್ವ! >>> ಅಯ್ಯೋ ಪಾಪ!! ಅನ್ನೋಲ್ಲ ನಾ-- ನಮ್ಮ ಗುರುಗಳನ್ ನೀವ್ ಹೇಗೆ ...ಯ ಪಡಿಸುವುದೇ? ಪುಣ್ಯಕ್ಕೆ ಅವ್ರು ಇದನ್ ಬೆಳಗ್ಗೆ ಇಲ್ಲ ಮಧ್ಯಾಹ್ನ ಇಲ್ಲ ಸಂಜೆ ಅಥವಾ ರಾತ್ರಿ ಓದುವರು!! ಆದರೂ ಹನುಮಾನ್ ಚಾಲೀಸ ಓದಿದರೆ!! ನನಗೋ ಪರಮಾಶ್ಚರ್ಯ! ಆಗಲೇ ದೆವ್ವಗಳೆಲ್ಲಾ ತಮ್ಮ ಮರಕ್ಕೆ ಹಿಂದೆ ಹೊರಟವು. ಪಾರ್ಥರು ಸಿಕ್ಕಿದರಾ ? ಅಂದೆ.. ಅವರೇ ಹೇಳುವರು. ಅಂದಿತು ದೆವ್ವ. >>> ಗುರುಗಳು ಬೆಳಗ್ಗೆ ನಿಮಗೆ ಏನು ಹೇಳುವರು? ಅದನ್ನ ನಾ ಈಗಲೇ ಹೇಳಬಲ್ಲೆ???? ಆ ದೆವ್ವ 'ಬಾರಿ ಮುತ್ತು' ಹಹಃ ಅಹಹಹ ನೀವು ಆ ವಿಷಯ ತಿಳಿಸಲೇ ಇಲ್ಲಾ? >>> ನಿಮಗೆ ಸದಾ ಆ 'ಬಾರಿ ಮುತ್ತುದೆ' ........ಯ !! ಕನವರಿಕೆ ಅದ್ಕೆ ಏನೇನೋ ಊಹಿಸುತ್ತಿದ್ದೀರಿ... ಪ್ಚ್ !! (ಅಂದ ಹಾಗೇ ಆ ದೆವ್ವದ ಕಣ್ಣಿನ ಬಳಿಯಲ್ಲಿ ಒಂದು ಗಾಯದ ಗುರ್ತು ಇತ್ತು) ಅದು ಹಿಂದೊಮ್ಮೆ ನಮ್ ಗುರುಗಳನ್ ಪರೀಕ್ಷಿಸಲು ಹೋಗಿ ಅವರು .......ಗಿ ಕೊಟ್ಟ ಗಿಫ್ಟ್!! :()))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರೆ ಗಣೇಶರು ಪಾಪ ಅ ಬಾರಿಮುತ್ತುಗೆ ಹೆದರಿ ಮಲ್ಲೇಶ್ವರವನ್ನೆ ಬಿಟ್ಟು ಬಂದು ನೆಮ್ಮದಿಯಾಗಿ ಮನೆ ಹಿಂದಿನ ಗುಡ್ಡ ಬನ್ನೇರುಘಟ್ಟ ಅಂತ ಸುತ್ತುತ್ತ ಇದ್ದಾರೆ ನೀವು ಅವರಿಗೆ ಪದೆ ಪದೆ ಆಕೆಯನ್ನು ನೆನಪಿಸಿ ಹೆದರಿಸುತ್ತೀರಿ. ಅವರು ಮಾತನಾಡುತ್ತಿರುವ ದೆವ್ವ .... ನೀವು ನೋಡಿರುವ ಆ ನಾಯಿ... ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ ನಾನು ಕತೆಗೆ ಪುರಾವೆ ಒದಗಿಸಲು ಅಥವ ನಂಬಿಸಲು ಈ ಬರಹ ಬರೆಯಲಿಲ್ಲ. ಕತೆ ಬರೆದ ನಂತರ ಕೆಲವು ಕುತೂಹಲ ಪ್ರಶ್ನೆಗಳು ನನಗೂ ಮೂಡಿದ್ದವು ಅದರ ಪರಿಣಾಮ ಇದು. ಮತ್ತೆ ... ನೀವು ಕಳಿಸಿದ ಆ ದೆವ್ವ .. ನನ್ನನ್ನು ಬೇಟಿಮಾಡಿತ್ತು.... ಎರಡು ಕಣ್ಣಿನ ಹತ್ತಿರ ಗುರ್ತು ಇದ್ದ ದೆವ್ವ ಅಲ್ಲವೆ ಆದರೆ ಅದು ದೆವ್ವದಂತೆ ವಿಕಾರವಾಗಿ ಏನು ಇರಲಿಲ್ಲ .. ಅಂಡಾಂಡಭ್ರಹ್ಮರ ಶಿಷ್ಯನಂತೆ ಸುಂದರವಾಗಿಯೆ ಇತ್ತು...... ‍ ‍*** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.