ಕೆಟ್ಟವರಿರಬೇಕು

4.666665

ಕೆಟ್ಟವರಿರಬೇಕ . . ಜಗದಿ . .  ಕೆಟ್ಟವರಿರಬೇಕ . .

ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. .

ರಕ್ಕಸರಿರಬೇಕ . . ಹಿಂಸೆಯು
ಮಿತಿಯ ಮೀರಬೇಕ . .
ಸುಮ್ಮನೆ ಕುಳಿತಿಹ ಸಜ್ಜನ
ಶಕ್ತಿ ಮೇಲೆ ಏಳಲಾಕ . .

ರಾವಣರಿರಬೇಕ . . ನೀತಿಯು
ಶೋಕಿಸುತಿರಬೇಕ . .
ರಾಮರು ಬಂದು ಶಿರಗಳ ತರಿದು
ನ್ಯಾಯವ ತರಲಾಕ . .

ಕಷ್ಟವು ಬರಬೇಕ . . ಬಂದು

ನಷ್ಟವ ತರಬೇಕ . .

ಕಷ್ಟ ನಷ್ಟಗಳು ಜೀವವ ಮಾಗಿಸಿ

ದೇವನ ನೆನಿಲಾಕ . .

ಸೋಲು ಕಾಡಬೇಕ . . ಸೋತು

ಸುಣ್ಣವಾಗಬೇಕ . .

ಸೋಲನು ಮೆಟ್ಟಿ ಗೆಲ್ಲುವ

ಛಲವೆ ನಮ್ಮದಾಗಬೇಕ . . 

ಬೆಂಕಿ ಚಿಮ್ಮಬೇಕ . . ಚಿಮ್ಮಿ

ಕೆಡುಕ ನುಂಗಬೇಕ. .

ಜಲವು ಉಕ್ಕಬೇಕ . . ಪಾಪವ

ಮುಕ್ಕಿ ಮುಗಿಸಲಾಕ . .

***********

-ಕ.ವೆಂ.ನಾಗರಾಜ್.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲ ಪಾತ್ರಗಳು ಇದ್ದರೆ ಅಲ್ಲವೆ ಜೀವನದ " ನಾಟಕ " ಕಳೆಕಟ್ಟುವುದು ಒಳ್ಳೆಯ ಕವನ ನಾಗರಾಜ್ ರವರೇ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರೂ ಒಳ್ಳೆಯವರೇ ಅದರೆ ಜಗತ್ತು ಈಗಿರುವಂತಿರುತ್ತಿರಲಿಲ್ಲ! ಧನ್ಯವಾದ, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಷ್ಟವು ಬರಬೇಕ . . ಬಂದು ನಷ್ಟವ ತರಬೇಕ . . ಕಷ್ಟ ನಷ್ಟಗಳು ಜೀವವ ಮಾಗಿಸಿ ದೇವನ ನೆನಿಲಾಕ . . ಸೋಲು ಕಾಡಬೇಕ . . ಸೋತು ಸುಣ್ಣವಾಗಬೇಕ . . ಸೋಲನು ಮೆಟ್ಟಿ ಗೆಲ್ಲುವ ಛಲವೆ ನಮ್ಮದಾಗಬೇಕ . . ಬೆಂಕಿ ಚಿಮ್ಮಬೇಕ . . ಚಿಮ್ಮಿ ಕೆಡುಕ ನುಂಗಬೇಕ. . ಜಲವು ಉಕ್ಕಬೇಕ . . ಪಾಪವ ಮುಕ್ಕಿ ಮುಗಿಸಲಾಕ . . --------------------------------------- ಕವಿಗಳೇ- ತುಂಬಾ ಚೆನ್ನಾಗಿ ಬರೆದಿರುವಿರಿ.. ಅರ್ಥಪೂರ್ಣವಾಗಿದೆ... ಹಿಡಿಸಿತು... ಕಪ್ಪು ಜೊತೆಗೆನೆ ಬಿಳಿ ಬಣ್ಣಕ್ಕೆ ಪ್ರಾಮುಖ್ಯತೆ... ಶುಭವಾಗಲಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಸಪ್ತಗಿರಿವಾಸಿಯವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ ಸರ್ ನೀವು ಬರೆದಿರುವ ಕವನ ಅರ್ಥಪೂರ್ಣವಾಗಿದೆ ಅಷ್ಟೆ ಅಲ್ಲ ರಾಗಬದ್ದವಾಗಿ ತಾಳಬದ್ದವಾಗಿ ಹಾಡಲು ತುಂಬಾ ಚೆನ್ನಗೆ ಹೊಂದುತ್ತದೆ ಅಭಿನಂದನೆಗಳು **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಪದ್ಯ. ಜನರಲ್ಲಿ ಹೊಸ ಜಾಗೃತಿಯಾಗಲು ಇಂತಹ ಸಾಹಿತ್ಯಗಳು ಅವಶ್ಯವಾಗಿ ಬೇಕೆಂದು ನನ್ನ ಭಾವನೆ ಅಭಿನಂದನೆಗಳು - ಸದಾನಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಸದಾನಂದರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳೆ, <<ಕೆಟ್ಟವರಿರಬೇಕ . . ಜಗದಿ . . ಕೆಟ್ಟವರಿರಬೇಕ . . ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. .>>+1 ಆದರೆ, <<ಕೀಚಕರಿರಬೇಕ . . ಹೆಣ್ಣನು ಗೋಳುಗುಡಿಸಬೇಕ . . >> <<ರಾವಣರಿರಬೇಕ . . ಸ್ತ್ರೀಯರ ಹೊತ್ತು ಒಯ್ಯಬೇಕ . .>> ಇವುಗಳ ಬೇಡ :((. ಏಕೆಂದರೆ ಇವು ಕವನದ ಆಶಯಕ್ಕೆ ಪೂರಕವೆನಿಸುವುದಿಲ್ಲ. ಉಳಿದಂತೆ ಕವಿತೆಯ ಆಶಯ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಲಹಾತ್ಮಕ ಪ್ರತಿಕ್ರಿಯೆಗೆ ವಂದನೆ, ಶ್ರೀಧರರೇ. ಇದು ವಸ್ತುಸ್ಥಿತಿಯಾದರೂ, ಅದನ್ನು ಇರಬೇಕೆಂದು ಬಯಸುವುದು ಸರಿಯಾಗಲಾರದು ಎಂದು ನನಗೂ ಅನ್ನಿಸುತ್ತದೆ. [ಒಂದು ತರಲೆ ಅನಿಸಿಕೆ: ಕೀಚಕರು, ರಾವಣರು ಇಲ್ಲದಿದ್ದರೆ ಟಿವಿ9, ಸುವರ್ಣದಂತಹ ಚಾನೆಲ್ ಗಳಿಗೆ ಕೆಲಸವೇ ಇರುವುದಿಲ್ಲ.] ಸೂಕ್ತ ಬದಲಾವಣೆ ಮಾಡುವ ಕುರಿತು ಚಿಂತಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೇ, ಬದಲಾವಣೆ ಮಾಡಿರುವೆ. ಸಲಹೆಗೆ ಮತ್ತೆ ವಂದಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕವನಾದರೂ ಕೂಡ ನನ್ನ ಸಲಹೆಯನ್ನು ಸ್ವೀಕರಿಸಿ ಸೂಕ್ತ ಬದಲಾವಣೆಯನ್ನು ಮಾಡಿದ್ದೀರ. ಕವಿಗಳೆ ನಿಮ್ಮ ಹಿರಿತನಕ್ಕೆ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಪೂರ್ಣವಾಗಿದ್ದು ತುಂಬಾ ಸೊಗಸಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆ, ಪ್ರೇಮಾರವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೇ, ಯಾರೂ ಕಿರಿಯರಲ್ಲ. ಹಿರಿತನಕ್ಕೆ ವಯಸ್ಸು ಗಣನಾರ್ಹವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿದ್ದುಪಡಿ:ಹಿರಿತನಕ್ಕೆ ವಯಸ್ಸೊಂದೇ ಪರಿಗಣನಾರ್ಹವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಚಿಕ್ಕೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.