ಕೃಣ್ವಂತೋ ವಿಶ್ವಮಾರ್ಯಂ

3.5

ಜಲಪ್ರಳಯದಿ ಭೂಮಿಯು ಮುಳುಗಲು

ಮನುವಿನ ಮೀನಲಿ ಜೀವಿಗಳುಳಿಕೆಯು

ಧರಣಿಯ ಜೀವಿಯ ದಾರುಣ ಜೀವನ

ಕಾರಣ ಕಂಡರು ಖಗೋಳ ಕ್ಷೇತ್ರದಿ

ಕ್ಷುದ್ರಗ್ರಹಗಳ ಪ್ರಭಾವ ಪ್ರಮಾಣದಿ

ಧೂಮಕೇತುಗಳುಪಟಳದರಿವಲಿ

ಸೂರ್ಯನ ಬೆಂಕಿಯ ಅಲೆಗಳ ಹೊಡೆತದಿ

ತತ್ತರಗುಟ್ಟುವ ಧರಣಿಯ ಪರಿಸರ

ತಾರಾಗ್ರಹಗಳ ಭ್ರಮಣದ ತಿರುಗಣೆ

ಕಾಯದ ಕಕ್ಷೆಯ  ಅಕ್ಷದ ಲಕ್ಷಣ

ಸೂಕ್ಷ್ಮವ ಲಕ್ಷಿಸಿ ವಿಶ್ವದ  ಶಕ್ತಿಯ

ಸಕ್ಷಮಗೊಳಿಸುವ ಯೋಜಿತ ಸಾಹಸ

ನಭದಲಿ ತಿರುಗುವ ತ್ರಿಪುರದ ನಾಶ

ಸಗರ ಪುತ್ರರ ಸಾಗರ ಸೃಷ್ಟಿಯು

ಧೃವ ನಕ್ಷತ್ರದ ಸಪ್ತರ್ಷಿ ಮಂಡಲ

ತ್ರಿಶಂಕು ಸ್ವರ್ಗದ ಕೌಶಿಕ ಕೌತುಕ

ಸಾಗರ ಮಥನದ ಮಹತ್ತರ ಘಟನೆ

ವಿಶ್ವದ ವಿಷವನು ಕುಡಿಯುವ ಶಿವನು

ಭಗೀರಥ ಯತ್ನದ ಗಂಗಾವತರಣ

ಶಿವಶಿಖೆ ಬಂಧಿತ ಪಾವನ ಗಂಗಾ

ವಾಮನ ವಿರಚಿತ ದಾನದ ಪ್ರಹಸನ

ಭೋಗಾವತಿಯಲಿ ಬಲೀಂದ್ರ ಶಾಸನ

ಸಾಗರ ಮಥನದಿ ಚಂದ್ರನ ಸೃಷ್ಟಿಸಿ

ನಭದಲಿ ಚಂದ್ರನ ತಾಣವ ನಿರ್ಮಿಸಿ

ಭೂಮಿಯ ಸುತ್ತುವ ಕೆಲಸಕೆ ನಿಯಮಿಸಿ

ಸಾಗರದಾಳದ ಕ್ಷಮತೆಯನೇರಿಸಿ

ನೀರನು ಜಲಧಿಯ ಗಡಿಯೊಳಗಡಕಿಸಿ

ನೀರಿನ ಮಟ್ಟವ ಸಾಗರಕಿಳಿಸಿ

ಜೀವ ವಿಕಾಸಕೆ ಭೂಮಿಯನೊದಗಿಸಿ

ಪೃಥ್ವಿಯ ಜೀವನ ಪುಳಕದ ಗಳಿಕೆಯ

ಸಾಗರದುಬ್ಬರದಬ್ಬರ ತಡೆಯುವ

ಧರಣಿಯ ಋತುಗಳ ನಿಯಮದ ಚಲನೆಗೆ

ಚಂದ್ರನ ಕಕ್ಷೆಯ ಅಕ್ಷದ ಅಂಕೆಗೆ

ಉಲ್ಕಾಪಾತದ ಘಾತದ ಶಂಕೆಗೆ

ಸೌರ ವಿಕಿರಣ ತಾಪವ ತಡೆಯುವ

ಧರಿತ್ರಿಯ ಪರಿಧಿಯ ಓಜದ ಹಿರಿಮೆಗೆ

ಭೂಮಿಗೆ ಕ್ಷೇಮದ ಅನಿಲದ ಹೊದಿಕೆಗೆ

ಪ್ರಥ್ವಿಗೆ ಸುಸ್ಥಿರ ಗುರುತ್ವದ ಗಳಿಕೆಗೆ

ಪ್ರಕೃತಿ ಪ್ರಕೋಪದ ಉಗ್ರತೆ ಇಳಿಸಲು

ಉತ್ತರ ದಿಕ್ಕಲಿ ಧೃವ ನಕ್ಷತ್ರದ

ದಕ್ಷಿಣ ದಿಕ್ಕಲಿ ತ್ರಿಶಂಕು ಸ್ವರ್ಗದ

ಪ್ರಬಲಾಕರ್ಷಣ ಕ್ಷೇತ್ರದ ಕೇಂದ್ರದಿ

ವಿಶ್ವದ ಶಕ್ತಿಯ ಸಮತೆಯ ನಿರ್ಮಿಸಿ

ಸಾಧಿಸಿ ಮೆರೆದರು ನಮ್ಮಯ ಹಿರಿಯರು

ನಮ್ಮಯ ಪೂರ್ವಜ ಮಹಿಮಾನ್ವಿತರು. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.