ಕಿಟಕಿಯಾಚೆಯ ಕನಸೂ ಮತ್ತು ....

4.333335

ಕಗ್ಗತ್ತಲ ಅಂಧಕಾರ,
ಜಗವು ಮಲಗಿರೆ
ಕಿಟಕಿಯೊಂದು
ತೆರೆದ ಹೃದಯದಿ
ಕಾದಿದೆಯಿಲ್ಲಿ
ಪ್ರಥಮ ಉಷಾ
ಕಿರಣದ ಆಹ್ವಾನಕೆ;
ಸೃಷ್ಟಿಯ ಹೊಂಗನಸು
ನನಸಾದ ಪರಿಯ
ಬೆರಗಿನ ಆಸ್ವಾದಕೆ...

ಕಿಟಕಿಯಾಚೆಗಿನ
ರಮ್ಯ ಲೋಕದ
ಕನಸು ಕಿಟಕಿಯೊಳಗಿನ
ಹುಡುಗಿಯ ಕಣ್ಣ
ರೆಪ್ಪೆಯೊಳಗೆ ಬಂಧಿ...

ತಪ್ಪು ಕಿಟಕಿಯದಲ್ಲ!
ಆದರೀ ಸರಳುಗಳು?
ಸರಳವಿಲ್ಲದ ಬದುಕ
ಅಂತರಂಗ ಸತ್ಯಗಳು;
ಹಾರುವ ಬಾನಾಡಿಯ
ಜರ್ಜರಿತ ಮನದ ದರ್ಪಣಗಳು....

ಕಮಲ ಬೆಲಗೂರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.