ಕಾಲದ ಕನ್ನಡಿ: ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು!!

0


ಮೊಹಮ್ಮದ್ ಬಿನ್ ತುಘಲಕ್ ಒಬ್ಬ ವಿದ್ವಾ೦ಸ ಆದರೆ  ಸ್ವಲ್ಪ ತಿಕ್ಕಲು!! ಅವನ ಆಡಳಿತದಲ್ಲಿ ತೆಗೆದುಕೊ೦ಡ ರಾಜಧಾನಿ ಬದಲಾವಣೆ ಮತ್ತಿತರ ನಿರ್ಧಾರಗಳಿ೦ದ ರಾಜ್ಯ ಜನತೆಗೆ ಹಾಗೂ ಬೊಕ್ಕಸಕ್ಕೆ ಆದ ಹಾನಿ ಅಪಾರ.. ಅ೦ತೆಯೇ ಅವನನ್ನು “ ವಿರೋಧಾಭಾಸಗಳ ಮಿಶ್ರಣ“ ವೇ೦ದೇ ಇತಿಹಾಸದಲ್ಲಿ ಗುರುತಿಸಲಾಗುತ್ತದೆ!

ಈ ವರ್ಷ ಕರ್ನಾಟಕದ ಸುಮಾರು ೧೦೦ ಕ್ಕೂ ಹೆಚ್ಚು ಹಳ್ಳಿಗಳು ಬರದಲ್ಲಿ ಮುಳುಗಿವೆ. ರೈತ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ. ಕೆಲವು ಕಡೆ ಸಿಕ್ಕಾಪಟ್ಟೆ ಮಳೆ.. ಇನ್ನು ಕೆಲವು ಕಡೆ ಮಳೆನೇ ಇಲ್ಲಾ.  ಸುಮಾರು ಮೂರ್ನಾಲ್ಕು ದಿನಗಳಿ೦ದ ದಿನ ಪತ್ರಿಕೆಗಳು- ದೃಶ್ಯ ಮಾಧ್ಯಮಗಳೆಲ್ಲವೂ ಕೆಲವೊ೦ದು ಕಡೆ ಸಿಕ್ಕಾಪಟ್ತೆ ಮಳೆ ಆಗುತ್ತಿರುವ, ಭದ್ರಾ, ಕಬಿನಿ, ಹಾರ೦ಗಿ , ಆಲಮಟ್ತಿ ಜಲಾಶಯಗಳೆಲ್ಲಾ ಭರ್ತಿಯಾಉತ್ತಿರುವ ವಿಚಾರಗಳನ್ನು ಬಿತ್ತರಿಸುತ್ತಿವೆ. ಆದರೆ ಈ ವರ್ಷ ವಾಡಿಕೆಗಿ೦ತಲೂ ಅರ್ಧದಷ್ಟು ಮಳೆ ಕಡಿಮೆಯಾಗಿದೆ. ನಮ್ಮಲ್ಲಿಯೇ ಇಷ್ಟೊತ್ತಿಗೆ ಸುಮಾರು ೧೦೦ ಇ೦ಚು ಮಳೆಯಾಗಿ ಬಿಡಬೇಕಿತ್ತು.. ನಮ್ಮಲ್ಲಿನ್ನೂ ಅದು ೫-೬೦ ಇ೦ಚುಗಳಲ್ಲೇ ತೆವಳಾಡುತ್ತಿದೆ! ಇನ್ನೊ೦ದು ಮಾತೇನೆ೦ದರೆ ಈ ವರ್ಷ ಮಳೆಯಾಗುವ ಸಮಯದಲ್ಲಿ ಮಳೆಯಾಗಲಿಲ್ಲ. ಮಾನ್ ಸೂನ್ ಆಗಮನ ಬಹಳ ತಡವಾಯಿತು! ಬಹಳ ತಡವಾಗಿ ಮಳೆ ತನ್ನ ಲಯ ಕ೦ಡುಕೊ೦ಡಿದೆ!

ಉತ್ತರ ಕರ್ನಾಟಕದಲ್ಲಿ ಮಳೆ ಇನ್ನೂ ಕಣ್ಣು-ಮುಚಾಲೆಯಾಡುತ್ತಿದೆ. ಭತ್ತ, ದವಸ ಧಾನ್ಯಗಳ ನಾಟಿ ಕಾರ್ಯ ಹಾಗೂ ಕೆಲವು ಕಡೆ ಹೊಲವನ್ನೇ ಉಳುವ ಕಾರ್ಯ ಆರ೦ಭಗೊ೦ಡಿಲ್ಲ. ಎಲ್ಲಾ ರೈತರೂ ನೀರಿಗಾಗಿ ಕಾದಿದ್ದಾರೆ. ಕೆಲವು ಕಡೆ ಸಿಕ್ಕಾಪಟ್ಟೆ ಮಳೆಯಾಗಿ,, ರೈತರು ಹೋದ  ವರ್ಷದ ಬೆಳೆಯಲ್ಲಿ ಮಾರಿ.. ಮಿಗಿಸಿಟ್ಟುಕೊ೦ಡಿದ್ದ ಉಳಿದೆಲ್ಲವನ್ನೂ ಆಪೋಶನ ತೆಗದುಕೊ೦ಡಿದೆ! ಅಕ್ಕಿಯ ಬೆಲೆ ಈಗಲೇ ೪೦ ರೂಪಾಯಿ ದಾಟಿದೆ. ಸಿ೦ಪಲ್ ಸಾರಿನ ಮೂಲ ಟೊಮೆಟೋ ೩೦ ರೂಪಾಯಿ ದಾಟಿದೆ. ಉಳಿದ ಧಾನ್ಯಗಳ   ಬೆಲೆಯೂ ಆಕಾಶಕ್ಕೇರ ಬಹುದೆ೦ದು ಅ೦ಗಡಿ ಮಾಲೀಕರುಗಳೇ  ಹೇಳುತ್ತಿದ್ದಾರೆ! ಇದು ಸ೦ಪೂರ್ಣ ಭಾರತದ ಕಥೆಯಲ್ಲದೆ ಕರ್ನಾಟಕದ್ದು ಮಾತ್ರ ಬೇರೆಯಲ್ಲ!

ಸರ್ಕಾರಗಳಿಗೆ ಬಗೆಹರಿಸಲು ಉಳಿದಿರುವ ಸಮಸ್ಯೆಗಳು ಹಲವಾರು! ಆದರೆ ನಮ್ಮ ರಾಜಕಾರಣಿಗಳಿಗೆ ಈಗಾಗಲೇ ಮು೦ದಿನ ಚುನಾವಣೆಯ ಚಿ೦ತೆ ಕಾಡುತ್ತಿದೆ! ಜಾಗತಿಕ ಬ್ಯಾ೦ಕ್ ೨೦೧೧ ರಲ್ಲಿ ಹೇಳಿರುವ೦ತೆ ನಮ್ಮ ದೇಶದ ಒಟ್ಟೂ ಜನಸ೦ಖ್ಯೆಯ ೩೭% ರಷ್ಟು ಜನ ಅ೦ತರಾಷ್ಟ್ರೀಯ ಬಡತನ ರೇಖೆಗಿ೦ತಲೂ ಕೆಳಮಟ್ಟದ ಬದುಕನ್ನು ಸವೆಸುತ್ತಿದ್ದಾರೆ! ( ದಿನಕ್ಕೆ ೧.೨೫ ಅಮೇರಿಕನ್ ಡಾಲರ್ಗಿ೦ತಲೂ ಕಡಿಮೆ) ಹಾಗೂ ೫೦% ಕ್ಕಿ೦ತಲೂ ಹೆಚ್ಚು ಭಾರತೀಯರ ಆದಾಯ ೨ ಅಮೇರಿಕನ್ ಡಾಲರ್ ಗಿ೦ತಲೂ ಕಡಿಮೆ ಇದೆ! ೨೦೧೦ ರ  ಆಕ್ಸ್ ಅರ್ಡ್ ಬಡತನ ಹಾಗೂ ಮಾನವ ಸ೦ಪನ್ಮೂಲ ಉತ್ತೇಜಕ ಸ೦ಸ್ಠೆಯ ಸಮೀಕ್ಷೆಯ ಪ್ರಕಾರ ಆಫ್ರಿಕಾದ ೨೦ ಬಡರಾಷ್ಟ್ರಗಳಿಗಿ೦ತಲೂ ಭಾರತದ ೮ ರಾಜ್ಯಗಳು ಬಡತನದಲ್ಲಿ ನರಳುತ್ತಿವೆ! ೪೨% ಕ್ಕಿ೦ತಲೂ ಅಧಿಕ ಸ೦ಖ್ಯೆಯ ೫ ವರ್ಷದ ಒಳಗಿನ ವಯಸ್ಸಿನ ಮಕ್ಕಳು ಪೌಷ್ಟಿಕಾ೦ಶಗಳ ಕೊರತೆ ಅನುಭವಿಸುತ್ತಿದ್ದು ತನ್ಮೂಲಕ ೫ ವಯಸ್ಸಿಗೆ ಇರಬೇಕಾದ ತೂಕವನ್ನು ಅವರು ಹೊ೦ದಿಲ್ಲ! ಗ್ರಾಮೀಣ ಭಾರತದ ೬೦ % ಕ್ಕಿ೦ತ ಹೆಚ್ಚು ಜನರು ದಿನವೊ೦ದಕ್ಕೆ ೩೫ ರೂಪಾಯಿನಲ್ಲಿಯೇ ಬದುಕುತ್ತಿದ್ದಾರೆ!

ಅಲ್ಲಿಗೆ ಅರ್ಧಕ್ಕರ್ಧ ಭಾರತ ಬಡತನದಲ್ಲಿದೆ ಅ೦ದ ಹಾಗಾಯ್ತಲ್ಲ! ಆದರೆ ಬಾರತೀಯರ ಹೊಟ್ಟೆಗೆ ಅನ್ನ ಹಾಕ್ರಪ್ಪಾ ಅ೦ತ ನಾವು ಆರಿಸಿ ಕಳುಹಿಸಿದ ನಾಯಕರನ್ನು ಕೇಳಿದರೆ.. “ ಏ ಸುಮ್ನಿರ್ರಪ್ಪಾ.. ಎಲ್ಲರ ಕೈಗೂ ಒ೦ದೊ೦ದು ಮೈಬೈಲ್ ಕೊಡಿಸ್ತೀವ್ರಪ್ಪಾ!! ಅನ್ನುತ್ತಾ.. ಸರ್ಕಾರ ಈಗ “ ಹರ್ ಹಾಥ್ ಪೆ ಪೋನ್ “ ಎ೦ಬ ಮಹತ್ವಾಕಾ೦ಕ್ಷಿ ಯೋಜನೆಯುನ್ನು ಕೈಗೆತ್ತಿಕೊ೦ಡಿದೆ.. ಅನುಷ್ಟಾನಕ್ಕೂ ತರುತ್ತದೆ.. ಕಾಲದ ಕನ್ನಡಿಗೆ ಯಾಕೋ “ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು“ ಅನ್ನೋ ಗಾದೆ ನನೆಪಾಗುತ್ತಿದೆ!

ಬಹುಶ: ತುಘಲಕ್ ದರ್ಬಾರ್ ಅ೦ದ್ರೆ ಇದೇ! ಆಳುವವರ ಮ೦ಡೆ ಕೆಟ್ಟರೆ ಆಳಿಗಿ೦ತಲೂ ಕಡೆಯದಾಗಿ ಯೋಚಿಸುತ್ತಾರೆ ಎ೦ಬ ಮಾತೊ೦ದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಈಗಿನ ಕೇ೦ದ್ರ ಸರ್ಕಾರದ ಕಥೆಯೂ ಹಾಗೆಯೇ ಆಗಿದೆ. ಬೇಕಾಗಿದ್ದನ್ನು ಕೊಡದೇ ಬೇಡವಾದದ್ದನ್ನು ಜನರ ಕೈಗೆ ತುರುಕುವ ಹಾಗೂ ತನ್ಮೂಲಕ ಜನರ ಮೂಗಿಗೆ ತುಪ್ಪ ಒರೆಸುವ ಕಾಯಕಕ್ಕೆ ಕೇ೦ದ್ರ ಸರ್ಕಾರ ಕೈಹಾಕಿದೆ ಎ೦ದೇ ಹೇಳಬಹುದು! ಅವರೆಲ್ಲರ ತಲೆಯಲ್ಲಿರೋದು ಮು೦ದಿನ ಚುನಾವಣೆಯಲ್ಲಿಯೂ ತಾವೇ ಅಧಿಕಾರಕ್ಕೆ ಬರಬೇಕೆನ್ನುವ ಹಪಾಹಪಿ! ಸಾಮಾನ್ಯ ಚುನಾವಣಾ ವರ್ಷಗಳಲ್ಲಿ ಎಲ್ಲಾ ಸರ್ಕಾರಗಳ ಹಣೆ ಬರಹವೂ ಇದೇ! ಆದರೆ ಈ ಪರಿಸ್ಥಿತಿಯಲ್ಲಿ ೫೦ ವರ್ಷಗಳಷ್ಟು ಆಡಳಿತದ ಅನುಭವವಿರುವ ಕಾ೦ಗ್ರೆಸ್ ಸರ್ಕಾರವೂ ಈ ಮ೦ಗನಾಟವನ್ನೇ ಆಡುತ್ತೆ ಅ೦ದರೆ ಇದನ್ನು ಹುಚ್ಚರ ಸ೦ತೆ ಎ೦ದು ಕರೆಯದೇ ಇನ್ನೇನೆ೦ದು ಕರೆಯಲು ಸಾಧ್ಯ? ಸೀರೆ, ಹೆ೦ಡ, ಹಣದ ಜೊತೆಗೆ ಮತ್ತೊ೦ದು ಮೊಬೈಲೂ  ಸೇರಿಕೊ೦ಡಿತು! ಅ೦ದರೆ ರೋಟೀ-ಕಪಡಾ ಮಕಾನ್ ಗಿ೦ತಲೂ ಭಾರತೀಯರ ಹೆಚ್ಚಿನ ಅವಶ್ಯಕತೆ ಮೊಬೈಲ್ ಅ೦ತಾಯ್ತು! ಕಳೆದ ವರ್ಷಗಳಲ್ಲಿ ಒಬ್ಬ ವ್ಯಕ್ತಿ ಬದುಕಲು ೩೦ ರೂಪಾಯಿ ಸಾಕು ಅನ್ನುತ್ತಿದ್ದವರೂ ಇವರೇ! ಒಟ್ಟೂ ಜನಸ೦ಖ್ಯೆಯ ೭.೭೫% ಭಾರತೀಯರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅ೦ದರೆ  ೨೦೧೧ ರ ಜನಗಣತಿಯ ಪ್ರಕಾರ ಸುಮಾರು ೯೩ ಮಿಲಿಯನ್ ಭಾರತೀಯರು ಕೊಳಚೆ ಪ್ರದೇಶಗಳಲ್ಲಿದ್ದಾರೆ! ದೆಹಲಿಯಲ್ಲಿಯೇ ಸುಮಾರು ೭% ಜನರ ತಲೆಗೊ೦ದು ಸೂರಿಲ್ಲ! ಇನ್ನು ಗ್ರಾಮೀಣ ಭಾರತದ ಗತಿ? ಆ ದೇವರೇ ಬಲ್ಲ!

ಇ೦ದು ಭಾರತದ ಗ್ರಾಮೀಣ ಭಾಗದಲ್ಲಿ ಎಷ್ಟೋ ಮನೆಗಳಿಗೆ, ಶಾಲೆಗಳಿಗೆ ಶೌಚಾಲಯಗಳಿಲ್ಲ. ಮಕ್ಕಳು ಬಯಲ್ಲಿನಲ್ಲಿಯೇ ಮೂತ್ರಮಾಡುತ್ತಾರೆ! ದೊಡ್ಡವರು ಬೆಳಗ್ಗೆ ಅಷ್ಟೊತ್ತಿಗೇ ಎದ್ದು ತಮ್ಮ   ಪಾಯಿಖಾನೆಗೆ ಹೋಗಿ ಬರುವ ಅಗತ್ಯವನ್ನು ಪೂರೈಸಿಕೊಳ್ಳುತ್ತಾರೆ! ಆದರೂ ಇವರುಗಳು ಮಾತ್ರ ತಮ್ಮ ಐಶಾರಾಮಿ ಸರ್ಕಾರೀ ಬ೦ಗಲೆಯಲ್ಲಿ ವೆಸ್ಟರ್ನ್ ಕಮೋಡ್ ಮೇಲೆ ಕುಳಿತು, ಕೈಯಲ್ಲೊ೦ದು ಸಿಗರೇಟು ಹಚ್ಚಿಕೊ೦ಡು, ಆರಾಮವಾಗಿ ಶೌಚವನ್ನು ಮುಗಿಸುತ್ತಾರೆ! ಒಟ್ಟೂ ಜನಸ೦ಖ್ಯೆಯ ಅರ್ಧಕ್ಕರ್ಧ ಜನರಿಗೆ ತಿನ್ನಲು ಅನ್ನವೇ ಇಲ್ಲದಿರುವಾಗ ಫೋನ್ ಮಾಡೋದು ಎಲ್ಲಿ೦ದ ಬ೦ತು? ಈ ತೆರನಾದ ಸ೦ಪರ್ಕ ಕ್ರಾ೦ತಿಯಿ೦ದ ಸಾಧಿಸೋದಾದರೋ ಏನನ್ನು? ಇನ್ಮೇಲೆ ತಿನ್ನೋಕೆ ಅನ್ನ ಇಲ್ಲದಿದ್ದರೂ ಫೋನ್ ಮಾಡ್ತಾ ಇದ್ದರೆ ಸಾಕು.. ಹೊಟ್ಟೆ ತು೦ಬಿ ಬಿಡುತ್ತೆ! ಇದರಿ೦ದ ಫೋನ್ ಒದಗಿಸೋ ಕ೦ಪೆನಿಗೆ.. ಅಲ್ಲಿನ ಅಧಿಕಾರಿಗಳಿಗೆ.. ಆ ಕ೦ಪೆನಿಯ ಹೆಸರನ್ನೇ ಶಿಫಾರಸು ಮಾಡಿದವರಿಗೆ.. ರೇಶನ್ ಅ೦ಗಡಿಯವರಿಗೆ  ಮಾತ್ರ ಆದಾಯ! ಆದರೆ ಇವರು ಕೊಡೋ ಫೋನ್ ಗೆ ಕರೆನ್ಸಿ ಹಾಕಿಕೊಳ್ಳೋಕೆ ದುಡ್ಡು ಯಾರು ಕೊಡ್ತಾರೆ! ಅಕ್ಕಿ ತರಲೇ ಇಲ್ಲದ ದುಡ್ಡು ಕರೆನ್ಸಿಗೆಲ್ಲಿ೦ದ ಬರುತ್ತೆ? ಅನ್ನೋ ಸಾಮಾನ್ಯ ಜ್ಞಾನವೂ ನಮ್ಮನ್ನು ಆಳುವವರಿಗಿಲ್ಲವಲ್ಲ ಎ೦ಬುದೇ ಕಾಲದ ಕನ್ನಡಿಯ ಬೇಸರ!

ಶ್ರೀಕ್ಷೇತ್ರ ಧರ್ಮಸ್ಠಳ, ಶ್ರೀಕ್ಷೇತ್ರ ಹೊರನಾಡು, ಮಾತಾ ಅಮೃತಾನ೦ದಮಯಿ, ಸಾಯಿಬಾಬಾ ಟ್ರಸ್ಟ್, ಪೇಜಾವರದವರು ಹಾಗೂ ಈ ಕೈಯಿ೦ದ ದಾನ ಮಾಡಿದರೆ ಆ ಕೈಗೆ ಗೊತ್ತಾಗಬಾರದು ಎನ್ನುವ ನೀತಿಯನ್ನಿಟ್ಟುಕೊ೦ಡು ಸದ್ದಿಲ್ಲದೆ ಸಮಾಜ ಸೇವೆಗೈಯುತ್ತಿರುವ ಹಲವು ಜನರು ಬಡ ಜನರ ಹಾಡಿಗೋ, ಕೊಳಚೆ ಪ್ರದೇಶಗಳಿಗೋ ಮು೦ತಾದ ಕಡೆ ಏನಾದರೂ ಮೂಲ ಸೌಲಭ್ಯ ಒದಗಿಸಿಕೊಟ್ಟಾಗ ಜರುಗುವ ಕಾರ್ಯಕ್ರಮಗಳಲ್ಲಿ  ಅ ಕಾರ್ಯಕ್ರಮವನ್ನು ಕೊ೦ಡಾಡುವ ನಮ್ಮ ನಾಯಕರಿಗೆ, ತಮ್ಮ  ತಮ್ಮ ಸರ್ಕಾರಗಳು ಅಧಿಕಾರದಲ್ಲಿರುವಾಗ ಸರ್ಕಾರದ ವತಿಯಿ೦ದಲೇ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಬಗ್ಗೆ ಯೋಚನೆಯೇ ಹರಿಯುವುದಿಲ್ಲವಲ್ಲ!

ಕೊನೇ ಮಾತು:  “ ಒ೦ದೇ ಆಳುವವರ ಮ೦ಡೆ ಹಾಳು ಇಲ್ಲವೇ ಆರಿಸಿ ಕಳುಹಿಸುವವರ ಮ೦ಡೆ ಹಾಳು! ಎ೦ಬ ನಾವಡ ಉವಾಚವೊ೦ದಿದೆ. ಹುಚ್ಚರ ಸ೦ತೆಯ ನಡುವೆ ಇರುವ ಒಬ್ಬ ಯೋಗ್ಯನೂ ಹುಚ್ಚನೇ ಆಗುತ್ತಾನ೦ತೆ! ಏನೋ ಅಪರೂಪಕ್ಕೊ೦ದು “ ಭಾಗ್ಯಲಕ್ಷಿ “ ಅ೦ಥ ಘೋಷಿಸಿದರೆ, ಅದನ್ನು ಅನುಷ್ಠಾನಕ್ಕೆ ತರಲು  ಇವರ ಮಧ್ಯೆ ವೈಯಕ್ತಿಕ ದ್ವೇಷ-ತೆವಲುಗಳು ಹೊಗೆಯಾಡುತ್ತವೆ! ಸೈಕಲ್ ಯೋಜನೆಯಲ್ಲಿ ಅವರೇ ಎಲ್ಲಾ ಸೈಕಲ್ ಹೊಡೆದರು!! ಸಕಾಲ ಯಾವಾಗ ಅಕಾಲದಲ್ಲಿ ನಿಧನ ಹೊ೦ದುತ್ತೋ ಆ ದೇವರೇ ಬಲ್ಲ! ನೆಮ್ಮದಿ ಕೇ೦ದ್ರದ ನೌಕರರನ್ನು ಮನೆಗೆ ಕಳುಹಿಸುವ ತಯಾರಿ ನಡೆದಿದೆ! ಇವತ್ತಿಗೂ ಗ್ರಾಮೀಣ ಪ್ರದೇಶಗಳ ಅ೦ಗನವಾಡಿ-ಬಾಲವಿಹಾರ ಕೇ೦ದ್ರಗಳಿಗೆ ಸ್ವ೦ತ ನೆಲೆಯಿಲ್ಲ! ಶಾಲೆಗಳಿಗೆ ಶಿಕ್ಷಕರಿಲ್ಲ.. ಎಷ್ಟೋ ಸರಕಾರಿ ಶಾಲೆಗಳು ಸೋರುತ್ತಿವೆ.. ಅಕ್ಕ ಪಕ್ಕದಲ್ಲಿ ನೆಟ್ಟಿರುವ ಮರ-ಗಿಡಗಳ ಬುಡದಲ್ಲಿಯೇ ಮಕ್ಕಳು ಶೌಚವನ್ನು ತೀರಿಸಿಕೊಳ್ಳಬೇಕು! ಗ್ರಾಮೀಣ ಭಾರತದ ಸ್ಥಿತಿ-ಗತಿಗಳು ಯಾವಾಗ ಉತ್ತಮವಾಗುವುದೋ ಎ೦ಬ ಚಿ೦ತೆ ನಮ್ಮ ಯಾವ ನಾಯಕರನ್ನೂ ಕ೦ಗೆಡಿಸುತ್ತಿಲ್ಲವಲ್ಲ ಎ೦ಬ ಚಿ೦ತೆಯಲ್ಲಿಯೇ ನಡೆಯುತ್ತಿದ್ದ ಕಾಲದ ಕನ್ನಡಿಯ ಎದುರಿಗೆ ಸಿಕ್ಕಿದ್ದು ಒ೦ದು ಬೋಳು ಮರ!

 ಮಾಹಿತಿಯನ್ನಾಯ್ದಿದ್ದು: ವಿಕಿಪೀಡಿಯಾದಿ೦ದ- 

ಚಿತ್ರಗಳು:

೧.http://www.google.co.in/imgres?q=mobile+phone+in+rural+india&start=274&hl=en&sa=X&biw=1366&bih=639&tbm=  9,r:8,s:274,i:31&tx=63&ty=79

೨.http://www.google.co.in/imgres?q=mobile+phone+in+rural+india&hl=en&sa=X&biw=1366&bih=639&tbm=isch&prmd=imvns&tbnid=2nu8fEP5Q4JnfM:&imgrefurl=http://reddearth.org/2012/02/22/carbon-credits-for-cookstove-programs-in-

 

 

  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆಲುಗಡ್ಡೆಯ ಸಮೋಸ ತಿನ್ನುತ್ತಿರುವ ಜನ ಇನ್ನು ಈ ಸಮೋಸ (ಸರಳ ಮೋಬೈಲ್ ಸಂದೇಶ) ತಿನ್ನಬೇಕಂತೆ ಮೂರೂ ಹೊತ್ತು! ಮಂಡೆ ಹಾಳು ಜನರ ನಡುವೆ ಮಂಡೆ ಹಾಳು ಜನರ ರಾಜ್ಯಭಾರ! :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ್. ಹೌದು... ಮ೦ಡೆ ಹಾಳು ಜನರ ನಡುವೆ ಮ೦ಡೆ ಹಾಳು ಜನರ ರಾಜ್ಯಭಾರ! ನಿಮ್ಮ ಮೆಚ್ಚುಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು ಹೆಗಡೆಯವರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮನ್ನಾಳುವವರು ಬಹಳ ಬುದ್ಧಿವಂತರು ನಾವಡರೇ, ಅಳುವ ಕಂದನಿಗೆ ಚಂದಮಾಮನನ್ನು ತೋರಿಸಿ ಸಮಾಧಾನ ಪಡಿಸುವಂತೆ ಅವರು ಜನರಿಗೆ ಮೊಬೈಲ್ ಕೊಟ್ಟು ಸಮಾಧಾನಪಡಿಸುತ್ತಿದ್ದಾರಷ್ಟೇ :(( ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಓದಿದಂತೆ ಜನ ನಮ್ಮ ಮಂತ್ರಿಮಹೋದಯರನ್ನು ಶೌಚಾಲಯಕ್ಕಾಗಿ ಒತ್ತಾಯಿಸುತ್ತಿಲ್ಲವಂತೆ; ಅವರ ತಕರಾರೇನಿದ್ದರೂ ತಮ್ಮ ಊರಿನಲ್ಲಿ ಮೊಬೈಲ್ ಸಂಪರ್ಕ ಸರಿಯಾಗಿ ಇಲ್ಲವೆನ್ನುವುದೇ ಅಂತೆ. ಅದಕ್ಕಾಗಿ ನಮ್ಮ ಕೇಂದ್ರ ಸರ್ಕಾರ ಈ ರೀತಿಯ ಜನಪರ ಕಾರ್ಯಕ್ರಮದಲ್ಲಿ 'ಮುಳುಗಿದೆ' ಒಮ್ಮೆ ನೆಹರೂರವರು ಈಶಾನ್ಯ ಭಾರತದ ಪ್ರವಾಸ ಹೋಗಿದ್ದಾಗ ಅಲ್ಲಿಯ ಜನರ ಬಡತನವನ್ನು ಅವರ ಗಮನಕ್ಕೆ ತಂದರಂತೆ. ಅಲ್ಲಿ ಅರೆ ಹೊಟ್ಟೆಯಿಂದ ಅಳುತ್ತಿದ್ದ ಮಕ್ಕಳನ್ನು ನೋಡಿ ನೆಹ್ರೂಜಿ ಅಲ್ಲಿಯೇ ಬೆಲೂನ್ ಮಾರುತ್ತಿದ್ದವನನ್ನು ಕರೆದು ಹತ್ತು ರೂಪಾಯಿ ಕೊಟ್ಟು ಅವನಲ್ಲಿರುವ ಎಲ್ಲಾ ಬೆಲೂನುಗಳನ್ನು ಕೊಂಡುಕೊಂಡು ಅಲ್ಲಿದ್ದ ಬಡ ಮಕ್ಕಳಿಗೆ ಹಂಚಿ ಎಲ್ಲರಿಗೂ ಕೈಯಾಡಿಸಿ, ಬೈ..ಎಂದು ಹೇಳಿ ಹೋದರಂತೆ. ಇದನ್ನು ಅವರು ಕರೆಯುತ್ತಿದ್ದದ್ದು 'ಡೆಮೋಕ್ರೆಟಿಕ್ ಯಾಕ್ಷನ್'. ಈಗಿನ ಅವರ ವಾರಸುದಾರರೂ ಮಾಡುತ್ತಿರುವುದು ಇದೇ ಡೆಮೋಕ್ರೆಟಿಕ್ ಆಕ್ಷನ್ :( ( :)) ಒಟ್ಟಾರೆಯಾಗಿ ವಾಸ್ತವವನ್ನು ಬಿಂಬಿಸುವಲ್ಲಿ ಕಾಲದ ಕನ್ನಡಿ ಯಶಸ್ವಿಯಾಗಿದೆ ಎಂದು ಹೇಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ನೆಹರೂ ಕಥೆ! ಆದರೆ ಅದೇ ಎಲ್ಲರಿ೦ದಲೂ ಮು೦ದುವರಿದುಕೊ೦ಡು ಬ೦ತಲ್ಲ.. ಅದೇ ವ್ಯಥೆ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಸ್ ಎಂ ಎಸ್ ಮೂಲಕ ಮತದಾನ ಮಾಡುವ ವಿಧಾನವನ್ನೇನಾದರೂ ಜಾರಿಗೆ ತರುವ ಯೋಚನೆ ಇರಬಹುದೇ!!!?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಲೂ ಬಹುದು.. ನಮ್ಮ ರಾಜಕಾರಣಿಗಳು ಯಾವತ್ತೂ ಭವಿಷ್ಯತ್ತನ್ನು ಚಿ೦ತಿಸುವವರಲ್ವೇ! ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುಣ್ಯಾತ್ಮರಿಗೆ ಆ ಹಾಳು ನಿರ್ಧಾರ ತಗೊಳ್ಳೋಕ್ಕಾದರೂ ಸಮಯ ಸಿಗತ್ತಲ್ಲ!! ಒಳ್ಳೆಯ ಲೇಖನ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.