ಕವಿನಾಗರಾಜರ ಪುಸ್ತಕ : ಆದರ್ಶದ ಬೆನ್ನು ಹತ್ತಿ

4.666665

 

ಪುಸ್ತಕ ಪರಿಚಯ : ಆದರ್ಶದ ಬೆನ್ನು ಹತ್ತಿ..... 
ಪ್ರಕಾಶನ : ಕವಿಪ್ರಕಾಶನ, ಶಿವಮೊಗ್ಗ.
 
 
 
'ನಾನು ದೊಡ್ಡವನಾದ ಮೇಲೆ ಪೋಷ್ಟ್ ಕಾರ್ಡ್ ಮಾರುತ್ತೀನಿ"  ಒಬ್ಬ ಪುಟ್ಟ ಬಾಲಕನ ಕನಸು
 
ಆ ಕನಸಿಗೆ ಇರುವ ಪ್ರಾಮುಖ್ಯತೆ  ಅರ್ಥವಾಗಿಯೊ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೆ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೆ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ. ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್  ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು.  ಆದರೆ ವಿದಿ ಬಿಡಬೇಕಲ್ಲ, ಆ ಯುವಕನ ಮುಂದೆ ದೊಡ್ಡದೊಂದು 'ಆಸೆ' ಯ ಬೆಟ್ಟವನ್ನು ಕಣ್ಣಾಮುಂದೆ ನಿಲ್ಲಿಸುತ್ತದೆ, ವಿದಿಯ ಆ ಆಟಕ್ಕೆ ಯುವಕ ಖಂಡೀತ ಮರುಳಾಗುತ್ತಾನೆ, ದೈವ ತನ್ನ ಚಿಕ್ಕವಯಸ್ಸಿನಲ್ಲಿ ಕೇಳಿ ಕೊಟ್ಟಿದ್ದ 'ವರ' ಪೋಸ್ಟಾಫೀಸಿನ ಕೆಲಸವನ್ನು ಬಿಟ್ಟು, ರಾಜ್ಯ ಸರ್ಕಾರದ ಅತಿ ಭ್ರಷ್ಟ ಇಲಾಖೆಗೆ ಕಂದಾಯ ಇಲಾಖೆಗೆ  ಆಡಿ ಇಡುತ್ತಾನೆ, ತನ್ನೊಳಗಿರುವ ನಿಜವಾದ ಮನುಷ್ಯನನ್ನು ಗ್ರಹಿಸಲು ವಿಫಲನಾಗುವುದು, ಮತ್ತು ತನ್ನ ಮನಸತ್ವಕ್ಕೆ ತಾನು ಹಿಡಿಯಲು ಹೊರಟಿರುವ ಕೆಲಸ ಹೊಂದಿಕೆಯಾಗುವದಿಲ್ಲ ಅನ್ನುವದನ್ನು ಗ್ರಹಿಸಲು ವಿಫಲನಾಗುವುದು, ಮತ್ತು ಆ ಕೆಲಸಕ್ಕೆ ಸೇರುವುದು ಬಹುಷಃ ಆ ಯುವಕನ ಜೀವನದ ಬಹು ದೊಡ್ಡ ತಿರುವು ಎಂದು ನನಗನ್ನಿಸುತ್ತಿದೆ. 
 
 ಕವಿ ನಾಗರಾಜರ ಜೀವನ ಕಥೆಯಲ್ಲಿನ ಪ್ರಮುಖ ಘಟ್ಟವೆ, ಅವರ ಕೆಲಸ ಬದಲಿಸುವ ತೀರ್ಮಾನ. 
 
ಕಂದಾಯ ಇಲಾಖೆಗೆ ಸೇರಿದ ಕೆಲವೆ ದಿನದಲ್ಲಿ ಅವರಿಗೆ ಅಲ್ಲಿಯ ಭ್ರಷ್ಟ ಮುಖದ ಪರಿಚಯ, ಇವರೆ ತಂದಿದ್ದ ೧೮೦೦೦ ರೇಷನ್ ಕಾರ್ಡಿನಲ್ಲಿ ಕಣ್ಮರೆಯಾದ ೧೨೦೦ ಕಾರ್ಡಿನ ಬಗ್ಗೆ ಇವರ ಮೇಲೆ ಅಪವಾದ, ಕಡೆಗೊಮ್ಮೆ ಇವರೆ ಅದನ್ನು ಸೊಸೈಟಿಗಳಲ್ಲಿ  ಹೋಗಿ ಕಳುವಾದ ಕಾರ್ಡ್ ಗಳನ್ನು ಪತ್ತೆ ಹಚ್ಚಿದಾದ ಅದನ್ನು ತಹಸಿಲ್ದಾರರೆ ಸಹಿಮಾಡಿ ಅವರ ಕಛೇರಿ ಮೂಲಕವೆ ಅನಧಿಕೃತವಾಗಿ ಸೊಸೈಟಿಗಳಿಗೆ ಹಂಚಿದ್ದು ತಿಳಿಯುತ್ತದೆ. ಅದನ್ನು ಪ್ರಶ್ನಿಸಹೋದರೆ ಬಾಯಿ ಮುಚ್ಚಿಸುತ್ತಾರೆ. ಅಲ್ಲಿಂದ ಮುಂದೆ ಭ್ರಷ್ಟಾಚಾರದ ವಿವಿದ ಮುಖಗಳ ಭೂತದರ್ಶನ ಕಂಡು ಬೆಚ್ಚಿ ಅದನ್ನು ಎದುರಿಸಹೊರಟವರು ನಾಗರಾಜರು. 
 
 ಕಾಂಗ್ರೆಸ್ ನಾಯಕ ಹಾಗು ವ್ಯಾಪಾರಿ ಆಗಿದ್ದ ವರ್ತಕರೊಬ್ಬರ ಕೃತ್ರಿಮ ಅಕ್ಕಿ ಪರ್ಮಿಟ್ ಬಗ್ಗೆ ಪ್ರಶ್ನಿಸಲು ಹೊರಟ ನಾಗರಾಜರ ಕ್ರಮ ಜಿಲ್ಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಅದು ದ್ವೇಶದ ರೂಪ ತಾಳಿ , ನಾಗರಾಜರು ಜೈಲನ್ನು ಸೇರಬೇಕಾಗುತ್ತದೆ. ಅತೀವ ದುಸ್ತಿಥಿ ಎಂದರೆ ನಾಗರಾಜರನ್ನು ಯಾವ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ ಅದೇ ನ್ಯಾಯಾಲಯದಲ್ಲಿ ಅವರ ತಂದೆಯವರು ಉಧ್ಯೋಗಿಗಳು.  ನಾಗರಾಜರ ಒಳಗಿನ 'ಆಂಗ್ರಿ ಯಂಗ್ ಮ್ಯಾನ್' ನ ನಡುವಳಿಕೆ, ಅವರ ಸ್ವಾಭಿಮಾನಿ ವರ್ತನೆ ಅವರನ್ನು ಸತತ ವಿವಿಧ ಕೇಸುಗಳಲ್ಲಿ ಪೋಲಿಸ್ ಸ್ಟೇಷನ್ ಹಾಗು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುತ್ತದೆ. ಕಡೆಗೊಮ್ಮೆ ಮುಖ್ಯಪೇದೆಗೆ ನಮಸ್ಕರಿಸಲಿಲ್ಲ ಎನ್ನುವ ಕಾರಣಕ್ಕೆ ಒಂದು ಚಿಲ್ಲರೆ ಕೇಸು ಹಾಕುವ ಮಟ್ಟಕ್ಕೆ ಅವರನ್ನು ಹಿಂಸೆಗೆ ಒಳಪಡಿಸಿದ ಘಟನೆ ಇದೆ. 
 
 ಆ ಸಮಯಕ್ಕೆ  ದೇಶದಲ್ಲಿ 'ಎಮರ್ಜೆನ್ಸಿ' ಘೋಷಣೆಯಾಗುತ್ತದೆ, ಅದರ ಸಂಪೂರ್ಣ ದುರಪಯೋಗ ಪಡೆದ ಪೋಲಿಸ್ ಹಾಗು ನಾಗರಾಜರ ಮೇಲಾಧಿಕಾರಿಗಳು ಅವರನ್ನು ದೇಶದ್ರೋಹದ ಅಪಾದನೆಗೊಳಪಡಿಸಿ , ಶಾಶ್ವತವಾಗಿ ಕಂಬಿಯ ಹಿಂದೆ ತಳ್ಳುತ್ತಾರೆ. ಜೈಲಿನ ವಾತವಾರಣ, ಅಲ್ಲಿಯ ಸಹಕೈದಿಗಳ ವರ್ತನೆ, ಜೈಲಿನಲ್ಲಿ ಪೋಲಿಸರ ಶೋಶಣೆ ಇವೆಲ್ಲ ನಾಗರಾಜರ ಮನವನ್ನು ನಿಜಕ್ಕು ಒಬ್ಬ  ರಕ್ತಪಿಪಾಸುವಾಗುವಂತೆ ಕೊಲೆಗಡುಕನಾಗುವಂತೆ ಒತ್ತಾಸೆ ನೀಡುತ್ತದೆ, ಆದರೆ ಸಾತ್ವಿಕ ಮನೋಭಾವದ ನಾಗರಾಜರು ಆ ಎಲ್ಲ ಪರಿಸ್ಥಿತಿಯನ್ನು ಗೆದ್ದು  ಬೆಂಕಿಯಲ್ಲಿ ಪುಟವಿಟ್ಟ ಚಿನ್ನದಂತೆ ಹೊರಬರುವುದು ನಮ್ಮೆಲ್ಲರ ಮನಸ್ಸು ತುಂಬುತ್ತದೆ. 
 
 ಎಮೆರ್ಜಿನ್ಸಿಯಲ್ಲಿ ಇವರ ಮೇಲೆ ಪೋಲಿಸರು ಹೊರಸಿದ ಅಪಾದನೆ ಎಷ್ಟು ಬಾಲಿಷವೆಂದರೆ  ಅವರ ಮನೆಯಲ್ಲಿ 'ಅಸತ್ಯ ಅನ್ಯಾಯದ ವಿರುದ್ದ ತಲೆಬಾಗುವುದು ಹೇಡಿತನ' ಎಂಬ ಗಾಂದೀಜಿಯವರ ಹೇಳಿಕೆ ಇದ್ದ ಗಾಂದೀಜಿಯವರ ಫೋಟೊ ಇದೆ ಎನ್ನುವುದು. ಅದೇ ರೀತಿಯ ಇತರ ಕಾರಣಗಳು, ಕಡೆಗೊಮ್ಮೆ ಎಮರ್ಜೆನ್ಸಿ  ಅವಧಿ ಮುಗಿದ ನಂತರ ಎಲ್ಲ ಅರೋಪಗಳಿಂದ ಮುಕ್ತರಾಗಿ , ಪುನಃ ಕೆಲಸಕ್ಕೆ ಸೇರುತ್ತಾರೆ. ಆದರೆ ಅವರ ರೋಷ , ಸಾತ್ವಿಕ ಸಿಟ್ಟು ಇವುಗಳು ಸದಾ ಅವರ ಸುತ್ತ ಶತ್ರುವಲಯವನ್ನು ನಿರ್ಮಿಸಿರುತ್ತದೆ. 
 
 ಕಡೆಯಲ್ಲಿ ಎಲ್ಲ ಅಗ್ನಿಪರೀಕ್ಷೆಗಳನ್ನು ಗೆದ್ದು ನಿಂತು, ಶುದ್ದ ಚಿನ್ನವಾಗಿ (ಅಪರಂಜಿ ) ಹೊರಹೊಮ್ಮುವುದು ನಾಗರಾಜರ ಜೀವನದ ಉಜ್ವಲತೆ ತೋರಿಸುತ್ತದೆ.  ವಿದಿ ಸಹ ಅವರ ಹೋರಾಟ ಮನೋಭಾವ ಮೆಚ್ಚಿದನೇನೊ ಇಲ್ಲದಿದ್ದರೆ ಯಾವ ಜೈಲಿನಲ್ಲಿ ಅವರು ಕೈದಿಯಾಗಿ  ಜೀವನ ಕಳೆದರೊ ಅದೇ ಜೈಲಿಗೆ ಪುನಃ  ಜೈಲಿನ  ಅಧಿಕಾರಿಯಾಗಿ , ತಾಲೋಕಿನ ದಂಡಾಧಿಕಾರಿಯಾಗಿ ಬರುತ್ತಾರೆಂದರೆ , ಇಂತಹ ಘಟನೆ ಬೇರ ಯಾರ ಜೀವನದಲ್ಲಿ ನಡೆದಿದೆಯೊ ಇಲ್ಲವೊ ನನಗೆ ತಿಳಿದಿಲ್ಲ. 
 
 ಕತೆಯ ಉದ್ದಕ್ಕು ಮನಸೆಳೆಯುವುದು ಅವರ ನಿರ್ಭಾವ ನಿರ್ವಿಕಾರದ ಘಟನೆಗಳ ನಿರೂಪಣೆ, ಎಲ್ಲಿಯು ಅವರು ಅವರನ್ನು ವಿಜೃಂಬಿಸಲು ವೈಭವಿಕರಿಸಲು ಹೋಗಿಲ್ಲ ಅನ್ನುವುದು ಪುಸ್ತಕದ ಅತಿ ಮುಖ್ಯ ಅಂಶ. ಇನ್ನಾದರು ದೇಶದಲ್ಲಿ ಭ್ರಷ್ಟಾಚಾರ ತೊಲಗಲಿ ಅನ್ನುವುದು ಅವರ ಪುಸ್ತಕದ ಮುಖ್ಯ ದ್ಯೇಯ. ಅಷ್ಟು ಅನುಭವಿಸಿದರು ವ್ಯವಸ್ಥೆಯ ಮೇಲಿನ ಕೋಪವೆ ಹೊರತಾಗಿ ವ್ಯಕ್ತಿಗತ ದ್ವೇಶ ಯಾರ ಮೇಲು ಇಲ್ಲ ! ಇದೆಂತ ಮನೋಭಾವ ! ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ.
 
ಓದಿ ಮುಗಿಸಿದ ನಂತರವು ಕೆಲವು ಘಟನೆಗಳು ಹಾಗೆ ಮನದಲ್ಲಿ ತಳ ಊರುತ್ತವೆ, ಎಂದರೆ ಇವು: 
 
ಒಮ್ಮೆ ಅಂಗಡಿಯ ಮಾಲಿಕನೊಬ್ಬ ಬಲವಂತದಿಂದ ಹಣ್ಣಿಗೆ ಎಂದು ಐವತ್ತು ರೂಪಾಯಿಗಳನ್ನು ಕೊಟ್ಟು ಹೋಗುವ, ಯಾವುದೊ ಅಸ್ಥವ್ಯಸ್ತ ಮನಸ್ಥಿಥಿಯಲ್ಲಿ ಅದನ್ನು ತೆಗೆದುಕೊಂಡ ನಾಗರಾಜರಿಗೆ ರಾತ್ರಿ ಎಲ್ಲ ನಿದ್ದೆ ಇಲ್ಲ, ಕಡೆಗೆ ಬೆಳಗ್ಗೆಯೆ ಎದ್ದು ಅಂಗಡಿ ತೆರೆಯುವ ಮುಂಚೆಯೆ ಹೋಗಿ ಜಗಲಿಯಲ್ಲಿ ಕುಳಿತಿರುತ್ತಾರೆ, ಬಾಗಿಲು ತೆಗೆಯಲು ಬಂದ ಅಂಗಡಿಯಾತ ಬೆಳಗ್ಗೆಯೆ ಫುಡ್ ಇನ್ಸ್ ಪೆಕ್ಟರ್ ಕಂಡು ಗಾಭರಿಯಾದರೆ , ನಾಗರಾಜರು ಅವನ ಐವತ್ತು ರುಪಾಯಿ ಹಿಂದೆ ನೀಡಿ ಅವನಿಗೆ ಮತ್ತೆ ಹೀಗೆಮಾಡಬೇಡ ಎಂದು ಬುದ್ದಿ ಹೇಳಿದಾಗ ಆತನ ಕಣ್ಣಲ್ಲಿ ಸಹ ನೀರು,  ಇದು ಗಾಂಧೀಜಿಯವರ 'Experiment with truth ' ನೆನಪಿಸುತ್ತದೆ. 
 
ಇವರು ಎಷ್ಟು ಸಣಕಲು ಎಂದರೆ ಇವರಿಗೆ ಹಾಕಿದ್ದ ಬೇಡಿಯಿಂದ ಸಲಿಸಾಗಿ ಕೈ ಹೊರಗೆ ಎಳೆದು ಬಿಡಬಹುದು, ಒಮ್ಮೆ ಅದೇ ರೀತಿ ಬೇಡಿ ಕಿತ್ತು ವ್ಯಾನಿನಿಂದ ಎಸೆದು ಇಂದಿರಾ ವಿರುದ್ದ ಗರ್ಜಿಸುವ ಘಟನೆ ನಗೆಯ ಜೊತೆ ಉಪೇಂದ್ರರ  ರೊಬಾಟ್ ಬಗೆಗಿನ ಸಿನಿಮ ನೆನಪಿಸುತ್ತದೆ.
 
ಉದ್ದಕ್ಕು ಇವರು ತಮ್ಮ 'ಆಂಗ್ರಿ ಇಮೇಜ್ ' ನಿಂದ ಮೈಮೇಲೆ ಕೇಸುಗಳನ್ನು ಎಳೆದುಕೊಳ್ಳುವಾಗ ಸಿನಿಮಾಗಳಲ್ಲಿ (ಸಿನಿಮಾದಲ್ಲಿ ಮಾತ್ರ) ಅಂಭರೀಷರ ನಟನೆ, ಅಮಿತಾಬ್ ರ ನಟನೆ ನೆನಪಿಗೆ ಬರುತ್ತೆ.
 
ಕಡೆಯದೊಂದು ಝಲಕ್ : ಪುಸ್ತಕದ ಕಡೆಯಲ್ಲಿ ಸಂಪದದ ಹಲವು ಮಿತ್ರರ ಸುರೇಶ್ ನಾಡಿಗ್, ಬೆಳ್ಳಾಲ ಗೋಪಿನಾಥ್ ರಾವ್, ಹೊಳೆನರಸಿಪುರ ಮಂಜುನಾಥ್ , ಕೋಮಲ್, ಹರಿಹರಪುರ ಶ್ರೀಧರ್, ಗಣೇಶರು, ವಿರೇಂದ್ರ, ಹರೀಶ್ ಆತ್ರೇಯ, ಕೇಶವ ಮೈಸೂರು, ಚೇತನ್ ಕೋಡುವಳ್ಳಿ, ನಾವಡರು, ರಾಕೇಶ್ ಶೆಟ್ಟಿ, ಗೋಪಾಲ್ ಕುಲಕರ್ಣಿ, ಪ್ರಸನ್ನ ಎಸ್ ಪಿ.  ಮತ್ತೆ ಸೋಮಶೇಖರಯ್ಯ ಚಿತ್ರದುರ್ಗ ಇವರೆಲ್ಲರ ನಾಗರಾಜರ ಲೇಖನದ ಬಗೆಗಿನ ಅಭಿಪ್ರಾಯಗಳು ದಾಖಲಾಗಿವೆ. 
 
ಕಡೆಯಲ್ಲೊಂದು ಮಾತು, ನಾಗರಾಜರೆ 'ಆದರ್ಶದ ಬೆನ್ನು ಹತ್ತಿ... ' ಎನ್ನುವ ಶೀರ್ಷಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅದು ಮರೀಚಿಕೆ ಎನ್ನುವ ಅರ್ಥವನ್ನು ಕೊಡುತ್ತಿದೆ. ನೀವಿಲ್ಲಿ ಆದರ್ಶದ ಬೆನ್ನು ಹತ್ತಿಲ್ಲ. ಆದರ್ಶ, ನ್ಯಾಯ ನೀತಿ ಇವೆಲ್ಲ ನಿಮ್ಮ ಹೃದಯಸ್ಥವಾಗಿದೆ. ನಿಮ್ಮ ನಡೆ ನುಡಿ ಮಾತು ಮತ್ತು ಹೃದಯದಲ್ಲಿ ಆದರ್ಶ ನೆಲಗೊಂಡಿದೆ. ನೀವು ಅದನ್ನು ಬೆನ್ನು ಹತ್ತುವ ಪ್ರಮೇಯವಿಲ್ಲ , ಅದು ನಿಮ್ಮೊಳಗೆ ನೆಲೆನಿಂತಿದೆ. ಹೊಗಳಲು ನಾನು ನಿಮಗಿಂತ ಚಿಕ್ಕವನು. ಈ ಜೀವನ ಹೋರಾಟವೆ ನಮಗೆ ಆದರ್ಶವಾಗಲಿ.  
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಪಾರ್ಥಸಾರಥಿಯವರೇ,
ಆದರ್ಶದ ಬೆನ್ನು ಏರಿ ........ಪುಸ್ತಕ ವಿಮರ್ಶೆ ಓದಿ ತುಂಬಾ ಖುಷಿಯಾಯಿತು . ಅತ್ಯಂತ ಸಮರ್ಪಕವಾಗಿ ಕೃತಿಯನ್ನು ಪರಿಚಯಿಸುತ್ತಾ ಸೂಕ್ಷ್ಮ ವಿಚಾರಗಳಿಗೆ ಒಟ್ಟು ಕೊಟ್ಟಿರುವುದು ನಿಮ್ಮ ಬರಹ ಸಾಮರ್ಥ್ಯವನ್ನೂ ಪರಿಚಯಿಸುತ್ತದೆ. ಉತ್ತಮ ಪ್ರಸ್ತುತಿ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕಾಶ್ ನರಸಿ0ಹಯ್ಯನವರೆ ಅಭಿನ0ದನೆ ಹಾಗೆ ಪುಸ್ತಕವನ್ನು ಒಮ್ಮೆ ಓದಿ ಚೆನ್ನಾಗಿದೆ ಮತ್ತು ಜೀವನ‌ ಹೋರಾಟದ‌ ಕಲ್ಪನೆ ಮೂಡುತ್ತದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್ ಪುಸ್ತಕ ಪರಿಚಯ ಚೆನ್ನಾಗಿ ನೀಡಿದ್ದೀರಿ.
ಕವಿಯವರೇ ನಿಮ್ಮ ಜೀವನ ಪುಸ್ತಕವಾಗಿ ಪ್ರಕಟ ಆದದಕ್ಕೆ ಅಭಿನಂದನೆಗಳು. ಹಿಂದೆ ಮಂಜಣ್ಣ ತಮ್ಮ ಎದೆಯಾಳದಿಂದ ಸರಣಿಯಿಂದ ತಮ್ಮನ್ನು ತಾವು ಪರಿಚಯಿಸಿ ಕೊಂಡಿದ್ದರು, ಪ್ರತಿಯೊಂದು ಘಟನೆಯು ಸಂಪದಿಗರ ಮನದಾಳದಲ್ಲಿ ಇಳಿದಿತ್ತು. ನೀವೂ ಹಲವೊಂದು ಘಟನೆಗಳನ್ನು ಇಲ್ಲಿ ಪ್ರಕಟಿಸಿದ್ದೀರಿ ಅವುಗಳನ್ನು ಓದಿದ ಸಂಪದಿಗರಿಗೆ ಈಗ ಬಂದಿರುವ ಪುಸ್ತಕ ಪೂರ್ಣ ಪರಿಚಯ ಒದಗಿಸುವಲ್ಲಿ ಈ ಪುಸ್ತಕ ನೆರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪುಸ್ತಕವನ್ನು ಓದುವ ಮನಸ್ಸಾಗಿದೆ. ನೋಡೋಣ ಯಾವಾಗ ಕಾಲ ಕೂಡಿ ಬರುವುದೆಂದು.
ವಂದನೆಗಳೊಂದಿಗೆ
ಕಾಮತ್ ಕುಂಬ್ಳೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕು0ಬ್ಳೆಯವರೆ ವ0ದನೆಗಳು ಹಾಗೆ ನಿಮ್ಮ 'ಅ ಕಪ್ ಆಪ್ ಕಾಪಿಯ‌.. ' ಪುಸ್ತಕದ‌ ಪರಿಚಯವನ್ನು ಇಲ್ಲಿ ಮಾಡಲು ಬೇಗ‌ ಏರ್ಪಾಡು ಮಾಡಿ :‍)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪಾರ್ಥರೇ, ನಿಮ್ಮ ಆತ್ಮೀಯತೆಯ ದರ್ಶನವಾಯಿತು. ಧನ್ಯವಾದಗಳು. ನನ್ನ ಅನಿಸಿಕೆ:
1.ಕಂದಾಯ ಇಲಾಖೆಯಲ್ಲೂ ಒಳ್ಳೆಯ ನೌಕರ, ಅಧಿಕಾರಿಗಳಿದ್ದಾರೆ. ಒಂದು ಇಲಾಖೆ ಭ್ರಷ್ಠವಾಗಿದ್ದರೆ ಸರಿಯಾಗಬೇಕಾದರೆ ಆ ಮನೋಭಾವದವರು ಅಲ್ಲಿ ಹೆಚ್ಚಬೇಕು. ರಾಜಕಾರಣ ಭ್ರಷ್ಠವಾಗಿದೆ. ಸರಿಯಾಗಬೇಕಾದರೆ? ಭ್ರಷ್ಠ ಇಲಾಖೆ, ರಾಜಕಾರಣ, ಇತ್ಯಾದಿಗಳಲ್ಲಿ ಸದ್ವಚಾರಿಗಳು ಹೆಚ್ಚಾಗಬೇಕು. ಇದು ಇಂದಿನ ಅಗತ್ಯ. ಅವರುಗಳೇ ಅದರಿಂದ ದೂರವಾದರೆ ಸರಿ ಮಾಡುವವರು ಯಾರು?
2.ನನ್ನ ಮೇಲೆ ವಿವಿಧ ಕೇಸುಗಳು ದಾಖಲಾಗಿದ್ದೇ ಎಮೆರ್ಜೆನ್ಸಿಯಲ್ಲಿ, ಅದರ ದುರುಪಯೋಗ ಪಡೆದು!
3. ನನ್ನ ಹಿಂದಿನ ಶೀರ್ಷಿಕೆ 'ಸರಳುಗಳ ಹಿಂದಿನ ಲೋಕ'ವೆಂದಿತ್ತು. ಹರಿಹರಪುರ ಶ್ರೀಧರರ ಸಲಹೆಯಂತೆ ಈಗಿನ ಶೀರ್ಷಿಕೆ ಕೊಟ್ಟಿರುವೆ. ಒಂದು ತಮಾಷೆ ನನ್ನನ್ನೇ ಕುರಿತು: ಆದರ್ಶ ನನ್ನ ಬೆನ್ನು ಹತ್ತಿ ಮಾಡಿಸಿದ ಅವಾಂತರಗಳಿವು.
ಆಸಕ್ತ ಸಂಪದಿಗರ ಮಾಹಿತಿಗಾಗಿ: ಕೊರಿಯರ್ ವೆಚ್ಚ ಸೇರಿ ರೂ.50/- ಅನ್ನು ನನಗೆ ಮನಿಯಾರ್ಡರ್ ಮಾಡಿದರೆ ಪುಸ್ತಕವನ್ನು ಕಳಿಸಿಕೊಡುವೆ. ವಿಳಾಸ: ಕ.ವೆಂ.ನಾಗರಾಜ್, 2354, 'ನಾಗಾಭರಣ', 7ನೆಯ ಅಡ್ಡರಸ್ತೆ, 2ನೆಯ ಮುಖ್ಯ ರಸ್ತೆ, ಶಾಂತಿನಗರ, ಹಾಸನ -573201.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರಿಗೆ ವ0ದನೆಗಳು , ನಿಮ್ಮ ಮಾತು ನಿಜ‌ ನನಗು ಹಾಗೆ ಅನ್ನಿಸಿತು. ನಿಮ್ಮ0ತ‌ ಒಬ್ಬ ಪ್ರಾಮಣಿಕರಿದ್ದರೆ ಭ್ರಷ್ಟಾಚಾರವನ್ನು ಎದುರಿಸಿ ನಿಲ್ಲುವ‌ ಶಕ್ತಿ ಸರ್ಕಾರಿ ನೌಕರರಿಗು ಬರುತ್ತದೆ, ಈಗ‌ ಬಹಳಷ್ಟು ಮ0ದಿ ಹಿ0ಸೆಯಲ್ಲಿಯೆ ಇದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಆ ಸಮಯಕ್ಕೆ ದೇಶದಲ್ಲಿ 'ಎಮರ್ಜೆನ್ಸಿ' ಘೋಷಣೆಯಾಗುತ್ತದೆ

ಸ0ಪದಿಗರಿಗೆ ಮೇಲಿನ‌ ವಾಕ್ಯವನ್ನು

> ಆ ಸಮಯಕ್ಕೆ ದೇಶದಲ್ಲಿ 'ಎಮರ್ಜೆನ್ಸಿ' ಘೋಷಣೆಯಾಗಿರುತ್ತದೆ

ಎ0ದು ಓದಿಕೊಳ್ಳಬೇಕಾಗಿ ವಿನ0ತಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರಾದ ಪಾರ್ಥ ಸಾರಥಿಯವರೇ,
ಮಿತ್ರರ ಕೃತಿವಿಮರ್ಷೆಗಾಗಿ ಧನ್ಯವಾದಗಳು. ಇಲ್ಲೊಂದು ವಿಶೇಷ ಕೂಡ ಇದೆ. ಮಿತ್ರರು ಬರೆದರೂ ನಾಮಕರಣ ಮಾಡಿದ್ದು ನಾನು. ಹೆಸರಿನ ಹೊಗಳಿಕೆ ತೆಗಳಿಕೆ ನನಗೆ ಸೇರಬೇಕಾದ್ದು. ಇರಲಿ. ಈ ಹೆಸರು ಯಾಕೆ ಸೂಚಿಸಿದೆ ಎಂದರೆ ನನ್ನ ಮಿತ್ರರು ಇಟ್ಟಿದ್ದ ಹೆಸರೇನು ಗೊತ್ತೇ? " ಸರಳುಗಳ ಹಿಂದೆ" ಪೂರ್ಣ ಕೃತಿಯನ್ನು ಓದಿದಾಗ ನನಗನ್ನಿಸಿದ್ದು....ಆದರ್ಶದ ಬೆನ್ನುಹತ್ತಿ ಹೋದಾಗ ಏನೇನು ಅನುಭವಿಸಬೇಗುಗುತ್ತದೆ, ಏನೇನು ಅವಾಂತರಗಲಾಗುತ್ತದೆ, ಎಲ್ಲವನ್ನೂ ಕೃಕಾರರು ಅನುಭವಿಸಿದ್ದಾರೆ. ಅದಕ್ಕಾಗಿ "ಆದರ್ಶದ ಬೆನ್ನಹತ್ತಿ ಹೊರಟಾಗ" ಎಂದು ಸೂಚಿಸಿದೆ, ನನ್ನ ಮತ್ತು ನಾಗರಾಜರ ಹಿರಿಯ ಮಾರ್ಗದರ್ಶಕರಾದ ಶ್ರೀ ಸು.ರಾಮಣ್ಣ ನವರು ಒಂದು ಪದ ಕಮ್ಮಿ ಮಾಡಿ ಆ ಜಾಗದಲ್ಲಿ ಎರಡು ಚುಕ್ಕಿ ಹಾಕಿದರು. ಅಂತೂ ಇದು ನಾಮಕರಣದ ಕಥೆ.
ಒಂದಂತೂ ಬಲು ಸಂತೋಷದಿಂದ ಹೇಳಬಯಸುವೆ. ಈ ಕೃತಿ ಯಾವುದೋ ರಂಜನೆಗಾಗಿ ಬರೆದಿದ್ದಲ್ಲ. ಎಲ್ಲವೂ ಅನುಭವ. ಮತ್ತು 1975-77 ರ ತುರ್ತು ಪರಿಸ್ಥಿತಿಯ ವಿರುದ್ಧದ ಆಂದೋಳನದ ನೆನಪು. ಅದಕ್ಕಾಗಿ ನಾಗರಾಜರೊಡನೆ ನಾನು ಹಾಸನಜಿಲ್ಲೆ ಯನ್ನು ಒಂದು ಭಾರಿ ಸುತ್ತಿ ಅಂದಿನ ಆಂದೋಲನದಲ್ಲಿ ಪಾಲ್ಗೊಂಡಿದ್ದ ಹಲವರನ್ನು ಮಾತನಾಡಿಸಿ ಬಂದಿದ್ದೆವು. ಹಾಗಾಗಿ ಸುಮಾರು 80ಕ್ಕೂ ಹೆಚ್ಚು ಅಂದಿನ ಹೋರಾಟಗಾರರನ್ನು ಒಂದು ವೇದಿಕೆಯಲ್ಲಿ ಸೇರಿಸಲು ನಮಗೆ ಸಾಧ್ಯವಾಯ್ತು. ಅಲ್ಲದೆ ಪ್ರಕಟಣೆ ಪೂರ್ವಭಾವಿಯಾಗಿ ನಾನು ಸ್ಥಳೀಯ ಪತ್ರಿಕೆಗಳಲ್ಲಿ ಎರಡು ಲೇಖನ ಬರೆದೆ. ಪರಿಣಾಮ ಯಶಸ್ವೀ ಬಿಡುಗಡೆ ಕಂಡಿತು. ನಭೂತೋ ನಭವಿಶ್ಯತಿ...ಎಂದರೂ ತಪ್ಪಾಗದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರಾದ ಪಾರ್ಥ ಸಾರಥಿಯವರೇ,
ಮಿತ್ರರ ಕೃತಿವಿಮರ್ಷೆಗಾಗಿ ಧನ್ಯವಾದಗಳು. ಇಲ್ಲೊಂದು ವಿಶೇಷ ಕೂಡ ಇದೆ. ಮಿತ್ರರು ಬರೆದರೂ ನಾಮಕರಣ ಮಾಡಿದ್ದು ನಾನು. ಹೆಸರಿನ ಹೊಗಳಿಕೆ ತೆಗಳಿಕೆ ನನಗೆ ಸೇರಬೇಕಾದ್ದು. ಇರಲಿ. ಈ ಹೆಸರು ಯಾಕೆ ಸೂಚಿಸಿದೆ ಎಂದರೆ ನನ್ನ ಮಿತ್ರರು ಇಟ್ಟಿದ್ದ ಹೆಸರೇನು ಗೊತ್ತೇ? " ಸರಳುಗಳ ಹಿಂದೆ" ಪೂರ್ಣ ಕೃತಿಯನ್ನು ಓದಿದಾಗ ನನಗನ್ನಿಸಿದ್ದು....ಆದರ್ಶದ ಬೆನ್ನುಹತ್ತಿ ಹೋದಾಗ ಏನೇನು ಅನುಭವಿಸಬೇಗುಗುತ್ತದೆ, ಏನೇನು ಅವಾಂತರಗಲಾಗುತ್ತದೆ, ಎಲ್ಲವನ್ನೂ ಕೃಕಾರರು ಅನುಭವಿಸಿದ್ದಾರೆ. ಅದಕ್ಕಾಗಿ "ಆದರ್ಶದ ಬೆನ್ನಹತ್ತಿ ಹೊರಟಾಗ" ಎಂದು ಸೂಚಿಸಿದೆ, ನನ್ನ ಮತ್ತು ನಾಗರಾಜರ ಹಿರಿಯ ಮಾರ್ಗದರ್ಶಕರಾದ ಶ್ರೀ ಸು.ರಾಮಣ್ಣ ನವರು ಒಂದು ಪದ ಕಮ್ಮಿ ಮಾಡಿ ಆ ಜಾಗದಲ್ಲಿ ಎರಡು ಚುಕ್ಕಿ ಹಾಕಿದರು. ಅಂತೂ ಇದು ನಾಮಕರಣದ ಕಥೆ.
ಒಂದಂತೂ ಬಲು ಸಂತೋಷದಿಂದ ಹೇಳಬಯಸುವೆ. ಈ ಕೃತಿ ಯಾವುದೋ ರಂಜನೆಗಾಗಿ ಬರೆದಿದ್ದಲ್ಲ. ಎಲ್ಲವೂ ಅನುಭವ. ಮತ್ತು 1975-77 ರ ತುರ್ತು ಪರಿಸ್ಥಿತಿಯ ವಿರುದ್ಧದ ಆಂದೋಳನದ ನೆನಪು. ಅದಕ್ಕಾಗಿ ನಾಗರಾಜರೊಡನೆ ನಾನು ಹಾಸನಜಿಲ್ಲೆ ಯನ್ನು ಒಂದು ಭಾರಿ ಸುತ್ತಿ ಅಂದಿನ ಆಂದೋಲನದಲ್ಲಿ ಪಾಲ್ಗೊಂಡಿದ್ದ ಹಲವರನ್ನು ಮಾತನಾಡಿಸಿ ಬಂದಿದ್ದೆವು. ಹಾಗಾಗಿ ಸುಮಾರು 80ಕ್ಕೂ ಹೆಚ್ಚು ಅಂದಿನ ಹೋರಾಟಗಾರರನ್ನು ಒಂದು ವೇದಿಕೆಯಲ್ಲಿ ಸೇರಿಸಲು ನಮಗೆ ಸಾಧ್ಯವಾಯ್ತು. ಅಲ್ಲದೆ ಪ್ರಕಟಣೆ ಪೂರ್ವಭಾವಿಯಾಗಿ ನಾನು ಸ್ಥಳೀಯ ಪತ್ರಿಕೆಗಳಲ್ಲಿ ಎರಡು ಲೇಖನ ಬರೆದೆ. ಪರಿಣಾಮ ಯಶಸ್ವೀ ಬಿಡುಗಡೆ ಕಂಡಿತು. ನಭೂತೋ ನಭವಿಶ್ಯತಿ...ಎಂದರೂ ತಪ್ಪಾಗದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತ್ಮೀಯರಾದ‌ ಶ್ರೀಧರ‌ ರವರಿಗೆ ಶೀರ್ಷಿಕೆ ಬಗ್ಗೆ ನನ್ನ ತೆಗಳಿಕೆ ಏನಿಲ್ಲ. ನಾಗರಾಜರ‌ ಹ್ಱುದಯದಲ್ಲಿ ಮನದಲ್ಲಿ ಪ್ರಾಮಾಣಿಕತೆ ನೆಲಸಿದೆ ಎ0ದು ಹೇಳುವ‌ ಸಲುವಾಗ‌ ಆ ರೀತಿ ಹೇಳಿದೆ. ಮತ್ತು ಅಲ್ಲಿ ನಾಗರಾಜರಿಗೆ ಪ್ರಾಮಾಣಿಕತೆಯ‌ ಹೋರಾಟದ‌ ಪಲ‌ ಮರೀಚಿಕೆಯಾಗಲಿಲ್ಲ ಅದನ್ನು ಸಾಧಿಸಿದಿದರು ಹಾಗಾಗಿ ಅ ರೀತಿ ಹೇಳಿದೆ ಅಷ್ಟೆ. ಉಳಿದ0ತೆ ಶೀರ್ಷಿಕೆ ಪುಸ್ತಕಕ್ಕೆ ಹೊ0ದುತ್ತದೆ ಬಿಡಿ ನೀವು ಚಿ0ತಿತರಾಗಬೇಡಿ.
ನಿಮಗು ಹಾಗು ಎಲ್ಲ ಮಿತ್ರರಿಗು ಅ0ತಹ‌ ಒ0ದು ವೇದಿಕೆ ನಿರ್ಮಿಸಿದ್ದಕ್ಕಾಗಿ ಅಭಿನ0ದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.