ಕವನ‌ : ನೀರು

4

 ನೀರು

=====
ರಾತ್ರಿಯೆಲ್ಲ ಜಿಟಿ ಜಿಟಿ ಮಳೆ
ಹೊರಗೆ ಮಳೆ ಬೀಳುತ್ತಿರುವ ಸತತ ಶಬ್ದ
ಭೂದೇವಿಗೆ ಸುಖದ ತಂಪು
"ಎಲ್ಲೆಲ್ಲಿಯು ನೀರು ತುಂಬಿದೆಯ?"
ಎಚ್ಚರವೊ ನಿದ್ದೆಯೊ ಅರಿಯದ ಜೊಂಪು
ಬೆಚ್ಚನೆಯ ಬೆಳಗಿನ ನಿದ್ದೆ
ಹೊರಗೆ
ಕಿಟಕಿಯ ಹೊರಗೆ 
ಯಾರೊ ಮಾತನಾಡುತ್ತಿರುವ ಅಸ್ವಷ್ಟ ಶಬ್ದ
"ನಲ್ಲಿಯಲ್ಲಿ ಇಂದು ನೀರಿಲ್ಲ
ಎಂದು ಬಿಡುವನೊ ಗೊತ್ತಿಲ್ಲ"
ಇದೆಂತಹ ದಿನದ ಹಾಡು
ಅನುದಿನ ಮುಗಿಯದ ಪಾಡು

[ ಸಮುದ್ರದ ನೆಂಟಸ್ತನ - ಉಪ್ಪಿಗೆ ಬಡತನ

ಕಾವೇರಿ ನೀರಿನ ಒಡೆತನ - ಕುಡಿಯುವ ನೀರಿಗೆ ಬಡತನ ? ]

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಪಾರ್ಥವ್ರೆ

ಇಲ್ಲಿ ಮಳೆಯಾದರೇನು ಬಂತು
ಅಲ್ಲಿ ಮಳೆಯಾಗಬೇಕು!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸರಸ್ವತಿ ಮೇಡಮ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು
" ನೀರು " ಒಂದು ಒಳ್ಳೆಯ ಸಾರ್ಥಕ ಕವನ. ಹೊರಗೆ ಸಮೃದ್ಧ ಮಳೆ ಸುರಿದರೂ ಜನ ಸಾಮಾನ್ಯರಿಗೆ ಕುಡಿಯುವ ನೀರಿಗೆ ಪರದಾಟ,ಎಂತಹ ವೈಪರೀತ್ಯ? ಎಲ್ಲರೂ ಯೋಚಿಸಬೇಕಾದ ಸಮಸ್ಯೆ, ಕವನ ಖುಷಿ ನೀಡಿತು ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪಾರ್ಥಸಾರಥಿ ಯವರೇ,
ಸಮುದ್ರ ಮಧ್ಯೆ ನಿಂತವನ ಪಾಡು ನಮ್ಮದು. ಎಲ್ಲೆಲ್ಲಿಯೂ ನೀರು ಕುಡಿಯಲು ಒಂದು ಹನಿ ನೀರಿಲ್ಲ!!!!!
ಎಂತಹ ವಿಪರ್ಯಾಸ? ಚನ್ನಾಗಿದೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲೆಲ್ಲಿಯು ನೀರು ಕುದಿಯಲು ನೀರಿಲ್ಲ ಹೌದಲ್ಲವೆ ಅದನ್ನೆ ಹೇಳಿದ್ದು ಸಮುದ್ರದ ನೆಂಟಸ್ತನ ಆದರೆ ಉಪ್ಪಿಗು ಬಡತನ ಅಂತ!
ವಂದನೆಗಳು ಪ್ರಕಾಶ್ ನರಸಿಂಹಯ್ಯನವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಲ್ಲವೆ ಸ್ವರ ಕಾಮತ್ ಸರ್ ಯಾವಗಲು ವೈರುದ್ಯವೆ ಎಲ್ಲರ ಮನಸೆಳೆಯುವುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :)
ಪಾರ್ಥರೆ, ಕವನ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ತಮ್ಮ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ನೀರು ಕವನ ಚನ್ನಾಗಿದೆ. ಬರೆಯುತ್ತಿರಿ. ಹೀಗಯೇ ಕವನಗಳು ಮೂಡುತ್ತಿರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಇಟ್ನಾಳರೆ. ತಮ್ಮ ಮೆಚ್ಚುಗೆಗೆ ವಂದನೆಗಳು. ಮೊದಲಿಗೆ ಕವನ ಬರೆಯಲು ನನಗೆ ಬರುವದಿಲ್ಲ, ಮತ್ತು ನೀರು ಎನ್ನುವ ಕವನಕ್ಕೆ ಕವನದ ಲಕ್ಷಣವಿದೆಯೊ ಇಲ್ಲವೊ ತಿಳಿದಿಲ್ಲ. ಕವನ ಅನ್ನುವ ಪ್ರಾಕಾರ ಕನ್ನಡದಲ್ಲಿ ತುಂಬ ಕಠಿಣ. ನನ್ನದು ಬರಿ ಬ್ಲಾಗ್ ಅಷ್ಟೆ ಅನ್ನಿಸುತ್ತೆ ಅಂದರೆ ಅನಿಸಿಕೆ. ಆದರು ನೀವು ಹೇಳಿದಂತೆ ಪ್ರಯತ್ನ ಪಡುತ್ತಿರುವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.