ಕರ್ನಾಟಕದಲ್ಲಿ ಭೂಮಿ ಯೋಜನೆ ಏಕೆ ವಿಫಲವಾಯಿತು?

3

( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ )


ವರ್ಷಗಳ ಹಿಂದೆ ಕರ್ನಾಟಕದಲ್ಲಿ ಭೂಮಿಯ ದಾಖಲೆಗಳನ್ನು ನೋಂದಾಯಿಸಲು ಅಥವಾ ಕ್ರಮಬದ್ದವಾದ ರೆಕಾರ್ಡ್ಸ್ ಗಳನ್ನು ಮಾಡಿಕೊಡಲು ಸಾವಿರಾರು ದಲ್ಲಾಳಿಗಳು ನಿರಂಕುಶ ಪ್ರಭುತ್ವ ಸಾಧಿಸಿದ್ದರು. ೨೦೦೨ ರಲ್ಲಿ ಈ ಬಗ್ಗೆ ಒಂದು ಕ್ರಮಬದ್ದವಾದ ಯೋಜನೆ ರೂಪಿಸಬೇಕೆಂದು ಭೂಮಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇಶದ ತಂತ್ರಜ್ಞಾನ ಕೇಂದ್ರ ಎಂದೇ ಹೆಸರಾಗಿರುವ  ಬೆಂಗಳೂರಿನಲ್ಲಿ, ೨೦ ದಶಲಕ್ಷ ಕೈಬರಹದ ಭೂಮಿ ದಾಖಲೆಗಳನ್ನು ಡಿಜಿಟಲೈಸ್ ಮಾಡಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮ ಅಧಿಕಾರಶಾಹಿ ಹಾಗೂ ಭ್ರಷ್ಟಾಚಾರ ಮಾಡುವವರಿಗೆ ಕಡಿವಾಣ ಹಾಕಿತು. ಆದರೆ ದಶಕದ ನಂತರ, ಕರ್ನಾಟಕದಲ್ಲಿ ಡಾಟಾಬೇಸ್ ಭೂ ವಿವಾದ ಹಾವಳಿಯು ಹೆಚ್ಚಾಯಿತು. ಸರ್ಕಾರವು ಇಂತಹ  ಸಮಸ್ಯೆಗಳನ್ನು ಬಗೆಹರಿಸಲು ತಂತ್ರಜ್ಞಾನವನ್ನು ಒಂದು ಪ್ರಮುಖ ಸಾಧನವಾಗಿಸಿಕೊಂಡಿತು. ಇದರಿಂದಾಗಿ ಭೂಮಿ ಯೋಜನೆ ಯಶಸ್ಸು ಸಾಧಿಸಬಹುದೆಂದು ಅಂದಾಜಿಸಲಾಯಿತು. ಭೂಮಿ ಯೋಜನೆಯನ್ನು ಸ್ಥಾಪಿಸಿದ ಅಂದಿನ ಅಧಿಕಾರಿ ರಾಜೀವ್ ಚಾವ್ಲಾ ರಾಜಕೀಯದಲ್ಲಿ ತಂತ್ರಜ್ಞಾನದ ಉಪಯೋಗ ಸುಲಭ, ಹಾಗೂ ಎಲ್ಲದಕ್ಕೂ ಪರಿಹಾರ ಮಾರ್ಗ, ಭವಿಷ್ಯದ ಭೂ ವಿವಾದ ಹಾವಳಿಗಳನ್ನು ತಡೆಗಟ್ಟಲು ಉತ್ತಮ ಎಂಬ ಉದ್ದೇಶದಿಂದ ಸ್ಥಾಪಿಸಿದ ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಬೇಕಾದರೆ ೩೦ ವರ್ಷಗಳ ಕಾಲ ಬೇಕಾಗಬಹುದು ಎನ್ನುತ್ತಿರುವುದು ವಿಪರ್ಯಾಸ.
ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ಪಡೆಯಲು ಹಕ್ಕಿದೆ. ಆದರೆ ಭ್ರಷ್ಟ ಅಧಿಕಾರಿಗಳು ಹಾಗೂ ಬಂಡವಾಳಶಾಹಿಗಳ ಕಾರಣದಿಂದಾಗಿ ತಮ್ಮ ಭೂಮಿಯ ದಾಖಲೆಗಳನ್ನು ಪಡೆಯಲು ಆಸ್ತಿ ವಾರಸುದಾರರಿಗೆ ದೀರ್ಘಕಾಲ ಬೇಕಾಗುತ್ತದೆ. ಬಂಡವಾಳಶಾಹಿಗಳಿಗೆ ಇದೊಂದು ಲಾಭದಾಯಕವಾಗಿ ಮಾರ್ಪಟ್ಟಿದೆ. ಭೂ ಮಾಫಿಯಾ ಹಾಗೂ ಅಧಿಕಾರಶಾಹಿಗಳಿಂದಾಗಿಯೇ ಭೂಮಿ ಯೋಜನೆಯಲ್ಲೂ ಹಿನ್ನಡೆ ಉಂಟಾಯಿತು. ಕರ್ನಾಟಕದಲ್ಲಿ ಸುಮಾರು, ೧೦,೦೦೦ ಸಾವಿರ ಗ್ರಾಮ ಲೆಕ್ಕಿಗರು, ಭೂಮಿಯು ಯಾವ ರೀತಿಯಾಗಿ ವರ್ಗಾಯಿಸಲ್ಪಟ್ಟಿತು ಅಥವಾ ಕದಿಯಲ್ಪಟ್ಟಿತು ಎಂಬುದನ್ನು ಪತ್ತೆಹಚ್ಚಲು ಕಾರ್ಯನಿರ್ವಹಿಸಿದರು.ಇದರಿಂದಾಗಿ ಈ ಸಮಸ್ಯೆಯ ಮೂಲವನ್ನು ಗುರುತಿಸಿದರು. ಶ್ರೀಮಂತ ಕುಟುಂಬಗಳು ಬಡಕುಟುಂಬಗಳಿಗೆ ದುಬಾರಿ ಬಡ್ಡಿಗೆ ಸಾಲ ನೀಡಿ ಅದನ್ನು ಮರುಪಾವತಿಸದಾಗ, ಅವರ ಹೆಬ್ಬೆಟ್ಟನ್ನು ಹಾಕಿಸಿಕೊಂಡು ಭೂಮಿಯನ್ನು ಪಡೆದುಕೊಳ್ಳುತ್ತಿದ್ದರು. ಹಾಗೂ ಕಂಪ್ಯೂಟರ್ ಆಪರೇಟರ್ ಗಳಿಗೆ ಲಂಚ ನೀಡಿ ಸುಳ್ಳು ಲೆಕ್ಕಪತ್ರವನ್ನು ತಯಾರಿಸುತ್ತಿದ್ದರು. ಈ ಸಂದರ್ಭದಲ್ಲಿ ನ್ಯಾಯವಾಗಿ ಭೂಮಿಯನ್ನು ಪಡೆಯಲು ಯಾವುದೇ ದಾಖಲೆಗಳು ಇಲ್ಲವಾಯಿತು. ಇದರಿಂದಾಗಿ ಭೂಮಿ ಯೋಜನೆಯ ಕಂಪ್ಯೂಟರೀಕೃತ ದಾಖಲೆಗಳೂ ಅಸಿಂಧುವೆಂದು ಘೋಷಿಸಲಾಯಿತು.
ಮೂಲ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:
http://articles.economictimes.indiatimes.com/2012-12-26/news/36007939_1_land-disputes-bhoomi-land-records

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಮತಾ ಅವ್ರೆ ಸಕಾಲಿಕ ಬರಹ-
ಆದರೆ ಭೂಮಿ -ಯೋಜನೆ ವಿಫಲ ಎಂದು ಹೇಳಲು ಯಾವ ಮಾನದಂಡ ಅನುಸರಿಸಿದರು?
ಈ ಭೂಮಿ ಯೋಜನೆಯಿಂದ ಹಲವು ಅವ್ಯವಹಾರಗಳು ತಡೆಗಟ್ಟಲ್ಪಟ್ಟು ಮೂಲ ಮಾಲಿಕರಿಗೆ (ಅದರಲ್ಲೂ ಬಡವರಿಗೆ) ಬಹು ಉಪಯೋಗವಾಗಿದೆ..
ಅವರ ಜಮೀನಿನ ಸಮಸ್ತ ಮಾಹಿತಿ ಈಗ ಸ್ಕ್ಯಾನ್ ಮಾಡಿದ ರೀತಿಯಲ್ಲಿ ಲಭ್ಯ..

ನಮ್ಮ ಜಮೀನಿನ ವಾರಸುದಾರರ ಬದಲಾವಣೆಗೆ ಅರ್ಜಿ ಹಾಕೀ 2 ವರ್ಷಗಳು ಆಗಿತ್ತು-
ಈ ಮಧ್ಯೆ ಸರ್ವೇ ಮಾಡುವವರ ಮುಷ್ಕರ-ಅಧಿಕಾರಿಗಳ ಆಮೆ ವೇಗದ ಫೈಲ್ ಮೂವ್ ಮಾಡುವ ಕೆಲಸ-ಲಂಚ ಇತ್ಯಾದಿ ಸಮಸ್ಯೆಗಳೂ ಬಂದವು...
ಕೊನೆಗೆ ಮೊನ್ನೆ ಸರ್ವೇ ಮಾಡಲು ಬಂದಾಗ ಅವರ ಕೈನಲ್ಲಿ ಇದ್ದ ನಮ್ಮ ಜಮೀನಿನ ಧಾಖಲೆಗಳು (ಸರಿ ಸುಮಾರು ಸ್ವಾತಂತ್ರ್ಯ ನಂತರದಿಂದ ಇದುವರೆಗೆ ಆದ ಬದಲಾವಣೆ ನಕ್ಷೆ ಇತ್ಯಾದಿ ಚಿತ್ರ ಸಮೇತ)ನಾ ನೋಡಿದೆ..
ಇದು ಆಮೆ ವೇಗದಲ್ಲಿ ನಡೆಯುತ್ತಿರಬಹುದು ಆದರೆ ಖಂಡಿತ ಯಶಸ್ವಿಯಾಗುತ್ತೆ -ವಿಫಲ ಎನ್ನುವ ಮಾತು ನಾ ಒಪ್ಪ್ಲೋಲ್ಲ...

ಶುಭವಾಗಲಿ.

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.