'ಕನ್ನಡಿ'ಸಿದ ಹಾಡು - ಯೆ ಮುಲಾಕಾತ್ ಇಕ್ ಬಹಾನಾ ಹೈ

4

ಮೊದಲಿಗೆ ಈ ಮಧುರವಾದ ಹಾಡನ್ನು ಕೇಳಿಕೊಂಡು ಬನ್ನಿ. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - https://youtu.be/IdH0ePSpVmE
ಇದು 1979 ರಲ್ಲಿ ಬಿಡುಗಡೆಯಾದ ಖಾನ್ದಾನ್ ಚಿತ್ರದ ಹಾಡು. ಲತಾ ಮಂಗೇಶಕರ್ ಇದನ್ನು ಹಾಡಿದ್ದಾರೆ

ಈ ಹಾಡನ್ನು ಅದೇ ಧಾಟಿಗೆ ಹೊಂದಿಸಿ ಈ ಕೆಳಗಿನಂತೆ ಕನ್ನಡಕ್ಕೆ ಕನ್ನಡಿಸಿದ್ದೇನೆ.

ನಮ್ಮ ಈ ಭೇಟಿ ತಾ ಬರೀ ನೆಪವು
ಒಲವಿನಾ ನಮ್ಮ ಕತೆ ತಾ ಪುರಾತನವು

ಕಲೆಯಲು ನಮ್ಮೆದೆಯಾ ಬಡಿತಗಳು
ಹೃದಯಗಳನು ತರುವಾ ಸನಿಯ

ನಾನು ಇರಲು ನಲ್ಲನಾ ತೋಳಿನಲಿ
ನನ್ನ ಕಾಲಡಿಗೆ ಲೋಕ ತಾನಿಹುದು

ನಮ್ಮ ಕನಸು ಗಾಜಿಗೂ ನಾಜೂಕು
ಒಡೆಯದಂತೆ ಕಾಯಬೇಕದನು

ನನ್ನ ಹೃದಯ ಪ್ರೇಮದಾ ದೇಗುಲವು
ನೀನೆ ತಾನೆ ಅಲ್ಲಿ ದೇವತೆಯು

ಮೂಲ ಹಾಡಿನ ಕರಾವೋಕೆ ಜತೆಗೆ ಪ್ರಯತ್ನಿಸಿ ನೋಡಿ!
ಅದಕ್ಕೂ ಒಂದು ಕೊಂಡಿ ಕೊಟ್ಟಿದ್ದೇನೆ!https://youtu.be/jPztJFYK6as

ಮೂಲ ಹಾಡಿನ ಸಾಹಿತ್ಯ ಇಲ್ಲಿದೆ :-

ಯೆ ಮುಲಾಕಾತ್ ಇಕ್ ಬಹಾನಾ ಹೈ
ಪ್ಯಾರ್ ಕಾ ಸಿಲ್ಸಿಲಾ ಪುರಾನಾ ಹೈ

ಧಡಕನೇ ಧಡಕನೊಮೇ ಖೋ ಜಾಯೆ
ದಿಲ್ ಕೋ ದಿಲ್ ಕೆ ಕರೀಬ್ ಲಾನಾ ಹೈ

ಮೈ ಹೂ ಅಪನೀ ಸನಮ್ ಕೀ ಬಾಹೋಂ ಮೆ
ಮೇರೆ ಕದಮೋಂ ತಲೆ ಜಮಾನಾ ಹೈ

ಖ್ವಾಬ್ ತೋ ಕಾಜ ಸೇ ಬೀ ನಾಜುಕ ಹೈ
ಟೂಟನೆ ಸೆ ಇನ್ಹೆ ಬಚಾನಾ ಹೈ

ಮನ್ ಮೇರಾ ಪ್ಯಾರ್ ಕಾ ಶಿವಾಲಾ ಹೈ
ಆಪ್ ಕೊ ದೇವತಾ ಬನಾನಾ ಹೈ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.