ಕದೊಳ್ಳಿ

4.666665

ನಮ್ಮ ಪುಟ್ಟ ಊರು,

ಆಹಾ! ಅದೆಂಥ ಚೆಂದದ ಊರು!

ಹಸಿರು ಸುರಿಯುತಿಹುದು ಎಲ್ಲೆಲ್ಲು ಕಾಡು,

ಮರೆಸುವುದು ಮೈ ಮನ ಬನಸಿರಿಯ ನಾಡು!

ಎತ್ತ ನೋಡಿದರತ್ತ ಸುತ್ತೆಲ್ಲ ಕಾನು,

ಇಣುಕಿ ನೋಡಲು ರವಿ ತಿಣುಕಾಡುತಿಹನು!

ಬನಸಿರಿಯ ನಡುವಿಹುದು ನಮ್ಮ ಸುಂದರ ಗೂಡು,

ವನದೇವಿ ನಿತ್ಯ ಹಾಡುವಳಿಲ್ಲಿ ಹಾಡು!

ಪ್ರಕೃತಿ ನಿರ್ಮಿಸಿಹುದೊಂದೆತ್ತರದ ಗೋಡೆ ಮನೆಯ ಪಕ್ಕದಲ್ಲಿ,

ಹಾದು ಹೋಗಿಹುದು ಚಂದದ ರಸ್ತೆ ಅದರಾಚೆಯಲ್ಲಿ.

ರಸ್ತೆಯಿಂದಾಚೆ ಇರುವುದೊಂದು ಎತ್ತರದ ಗುಡ್ಡ,

ಅದರ ಹೆಸರೆಂಥ ಚಂದ “ದೇವರಾಣೆ ಗುಡ್ಡ!”

ಹರಿಯುತಿಹುದು ಪುಟ್ಟದೊಂದು ತೊರೆ ಇನ್ನೊಂದು ಪಕ್ಕ,

ತುಂಬಿ ಹರಿದರೆ ಆಹಾ! ಅದೆಂಥ ಸೊಗಸೇ ಅಕ್ಕ!

ಚಿನ್ನಾಟವಾಡುತಿರೆ ನೀರಲ್ಲಿ ಪುಟಾಣಿ ಮೀನು,

ಮರೆಯುವೆನು ಇಹ – ಪರ, ಚಿಂತೆಯನು ನಾನು!

ಹೊಟ್ಟೆ ಪಾಡಿಗಾಗಿ ತೊರೆದೆವೆಂತಹ ನಾಕ,

ಅಪ್ಪಿಕೊಂಡೆವು ವಿಧಿಯಿಲ್ಲದೇ ನಗರವೆಂಬ ನರಕ!

ನಮ್ಮ ಪುಟ್ಟ ಊರು,

ಆಹಾ! ಅದೆಂಥ ಸುಂದರ ಊರು!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವಿಯತ್ರಿ !! ಚೆ೦ದದ‌ ಕವನ‌. ಗೋಡೆ, ಅದರಾಚೆಗಿನ‌ ರಸ್ರೆ , ದೇವರಾಣೆ ಗುಡ್ಡ, ಅ೦ಗಳದ‌ ಮಾವಿನ‌ ಮರ‌, ಬಾವಿ ಎಲ್ಲಾ ಒಮ್ಮೆ ಕಣ್ಮು೦ದೆ ಬ೦ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೋಭಾ ಅವರೆ ಅಡುಗೆಗೂ ಸೈ..ಲೇಖನಿಗೂ ಸೈ.. ಕವನ ಚೆನ್ನಾಗಿದೆ.
ಹೊಟ್ಟೆ ಪಾಡಿಗಾಗಿ ತೊರೆದೆವೆಂತಹ ನಾಕ,
ಅಪ್ಪಿಕೊಂಡೆವು ವಿಧಿಯಿಲ್ಲದೇ ನಗರವೆಂಬ ನರಕ!
ನನಗೂ ಅನೇಕ ಬಾರಿ ಹೀಗನ್ನಿಸಿದ್ದು ಇದೆ. ಆ ಹಚ್ಚ ಹಸಿರಾದ ಹಳ್ಳಿಗಳೆಲ್ಲಿ, ಈ ಬೆಂಗಳೂರೆಲ್ಲಿ? ಕಷ್ಟಪಟ್ಟು ರಜಾ ತೆಗೆದುಕೊಂಡು ಮೂರು ತಿಂಗಳಿಗೊಮ್ಮೆ ಹೋಗಿ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಇದ್ದುಬರುವುದು. ಹೀಗೆ ಕವನಗಳನ್ನು ಬರೀತಾ ಇರಿ..ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಮಮತಾ. ಪ್ರತೀ ಬಾರಿ ಊರಿಗೆ ಹೋಗಿ ಬ‌oದಾಗಲೆಲ್ಲ‌ ನನ್ನನ್ನು ಒoದು ರೀತಿಯ‌ ಖಿನ್ನತೆ ಕಾಡುತ್ತದೆ. ಆ ಗಿಡ‌, ಮರ‌, ಕಾಡು, ಬೆಟ್ಟ‌, ನದಿ, ಬಾವಿ, ಗದ್ದೆ, ಇವೆಲ್ಲ‌ ನನ್ನನ್ನು ಅದೇಕೋ ತುoಬಾ ಸೆಳೆಯುತ್ತವೆ. ಯಾಕಾದರೂ ಹಳ್ಳಿಯನ್ನು ತೊರೆದು ಬoದೆವೋ ಎoದು ಯೋಚಿಸುತ್ತೇನೆ. ನಿಸರ್ಗದ‌ ಮಡಿಲಲ್ಲಿ ಸಿಗುವ‌ ಆನ‌oದ‌ ನಗರದ‌ ಕೃತಕತೆಯಲ್ಲಿ ಹೇಗೆ ಸಿಗುತ್ತದೆ ಅಲ್ಲವೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಕವನ. +1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹೆಬ್ಬಾರರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮದು, ನನ್ನದೆಂಬ ಭಾವವೂ ಸುಂದರತೆಗೆ ಮೆರುಗೀಯುತ್ತದೆ. ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಜರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

......... ಕವಿ ನಾಗರಾಜರವರೆ ಎಂದಾಗಬೇಕಾಗಿತ್ತು. ಕಾಗುಣಿತದ ತಪ್ಪಿಗೆ ಕ್ಷಮೆ ಇರಲಿ. ನಾನು ಟೈಪ್ ಮಾಡಲು ಗೂಗಲ್ ಇನ್ ಪುಟ್ ಟೂಲ್ಸ್ ಉಪಯೋಗಿಸುತ್ತೇನೆ. ಆದರೆ ಈ ಪ್ರತಿಕ್ರಿಯೆ ಬರೆಯುವಾಗ ಅದನ್ನು ಉಪಯೋಗಿಸದೆ ಸಂಪದ ಕೀ ಬೋರ್ಡ್ ಉಪಯೋಗಿಸಿದೆ. ಹಾಗಾಗಿ ಕಣ್ ತಪ್ಪಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರಿ, ಉದ್ದೇಶಪೂರ್ವಕವಲ್ಲದ ತಪ್ಪು ಇದು. ಅದಕ್ಕಾಗಿ ಕ್ಷಮೆ ಕೋರಬೇಕಿರಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.