ಕತೆಗಾರನ ಮಾತು

5

ನಿನ್ನೆ ಮುಗಿಸಿದ ಶ್ರೀಗಂಧದ ಧೂಪ ಕತೆಬರೆಯುವಾಗ ನನ್ನ ಮನಸ್ಸು ಹಲವು ಚಿಂತನೆಗಳ ಮನೆಯಾಯಿತು. ಅದನ್ನೆಲ್ಲ ಏಕೊ ಹಂಚಿಕೊಂಡರೆ ಚೆನ್ನ ಅನ್ನಿಸಿತು.  ನಾವು ಬರಹಗಳನ್ನು ಬರೆಯುವಾಗ ಬೇರೆ ಬೇರೆ ವಿದಗಳಿವೆ. ಬ್ಲಾಗ್ ಬರೆಯುವಾಗ ಬಹುತೇಕ ನಮ್ಮ ಯೋಚನೆಗಳನ್ನು ಹಂಚಿಕೊಳ್ಳುವ ಉದ್ದೇಶವಿರುತ್ತದೆ. ಕವನಗಳನ್ನು ಬರೆಯುವಾಗ ಯಾವುದೊ ಭಾವನೆಗಳ ಬಂದಿಯಾಗಿರುತ್ತೇವೆ. ಹಾಸ್ಯ ಲೇಖನ ಮುಂತಾದವು ಬರೆಯುವಾಗ ಮನ ಪ್ರಪುಲ್ಲಿತವಾಗಿರುತ್ತದೆ. ಹೇಗೊ ನಮ್ಮ ಮನ ತನ್ನ ಭಾವನೆಗಳ ತೂಕ ಕಡಿಮೆ ಮಾಡಿಕೊಂಡು ಹಗುರವಾಗುತ್ತದೆ.

  ಆದರೆ ಕಥೆಗಳನ್ನು ಹಣೆಯುವಾಗ ಮನಸಿನ ಸ್ಥಿಥಿ ಬೇರೆಯೆ ಆಗುತ್ತದೆ. ಮೊದಲಿಗೆ ಕತೆಗೆ ಒಂದು ವಸ್ತುವನ್ನು ಗುರುತಿಸುತ್ತೇವೆ, ಮನದಲ್ಲಿ ಕಥೆಯ ಹಂದರ ಸ್ಥೂಲವಾಗಿ ಚಿತ್ರಿತವಾಗುತ್ತದೆ, ನಂತರ ಬರೆಯಲು ಕೂತಾಗ ಅದು ತನ್ನದೆ ಆದ ರೂಪ ತೆಗೆದುಕೊಳ್ಳುತ್ತ ತಿರುವುಗಳನ್ನು ಪಡೆಯುತ್ತ ತಾರ್ಕಿಕ ಅಂತ್ಯ ಕೊಡಲು ಪ್ರಯತ್ನಿಸುತ್ತ ಕೊನೆಗೆ ಬರುತ್ತೇವೆ.  ಕತೆಗೆ ಯಾವುದೆ ಪ್ರಭಾವ ಇಲ್ಲ ಅಂದುಕೊಳ್ಳುತ್ತೇವೆ. ಅದು ಸುಳ್ಳು ಅನಿಸುತ್ತದೆ. ನಾವೆ ಬರೆದ ಕೆಲವು ಕತೆಗಳನ್ನು ಗಮನಿಸುವಾಗ, ಬರೆದ ನಂತರ ಅದನ್ನು ಓದಿದರೆ, ವಿಷ್ಲೇಶಣೆ ಮಾಡಲು ಪ್ರಯತ್ನಪಟ್ಟಾಗ ಕೆಲವೊಂದು ಸತ್ಯ ಗೋಚರಿಸುತ್ತದೆ. ಅಲ್ಲಿ ನಮಗೆ ಅರಿವಿದ್ದೊ ಅರಿವಿಲ್ಲದೆಯೊ , ನಾವು ನಂಬಿರುವ ಜೀವನದ ತತ್ವಗಳು, ನಂಬಿಕೆಗಳು ಕತೆಯನ್ನು ನಿಯಂತ್ರಿಸುತ್ತಿರುತ್ತವೆ. ಕತೆ ಪ್ರಾರಂಬವಾದ ಮೇಲೆ ಅದು ಯಾವ ದಿಕ್ಕಿನಲ್ಲಿಯಾದರು ಸಾಗಬಹುದೆನ್ನುವುದು ಸುಳ್ಳು, ಬರವಣಿಗೆ ಸರಾಗವಾಗಿ ಸಾಗಿದ್ದರು ಕತೆಯ ಹಂದರದ ಮೇಲೆ ನಮ್ಮ ಮನಸಿನ ಭಾವನೆಗಳ ಅಭಿಪ್ರಾಯಗಳ ಹೊರೆ ಖಂಡೀತ ಇರುತ್ತದೆ. ಅಷ್ಟೆ ಅಲ್ಲ ಗಂಭೀರ ಕತೆಗಳನ್ನು ಬರೆಯುವಾಗ ಅದೇಕೊ ನಮ್ಮ ಮನ ಪ್ರಚಂಡ ಒತ್ತಡದಲ್ಲಿರುತ್ತದೆ.

    ಶೀಗಂಧದ ಧೂಪದ ಪ್ರತಿಕ್ರಿಯೆಗಳ ಹಿನ್ನಲೆಯಲ್ಲಿ ಯೋಚಿಸುವಾಗ ವಿಚಿತ್ರವೆನಿಸುತ್ತದೆ. ಶೀನಾಥರು ’ಶ್ರೀಗಂಧ’ ಎಂದು ಹೆಸರಿಟ್ಟಾಗಲೆ ಕೊನೆ ಹೀಗೆ ಎಂದು ಊಹಿಸಿದ್ದೆ ಎಂದಿದ್ದಾರೆ, ವಿಚಿತ್ರ ಕಥೆ ಪ್ರಾರಂಬಿಸಿದಾಗ ಅದರ ಅಂತ್ಯ ನನ್ನ ಕಲ್ಪನೆಯಲ್ಲಿರಲಿಲ್ಲ.
 
   ತುಂಬಾ ಹಿಂದೆ ಎಂ.ಕೆ. ಇಂದಿರಾರವರ ಕಥೆ ಒಂದನ್ನು ಓದಿದ್ದೆ, ಅದರಲ್ಲಿ ನಾಯಕಿಯ ಮನೆಯಲ್ಲಿ ವಾರನ್ನ ಮಾಡಿಕೊಂಡಿರುವ ಹುಡುಗನೊಬ್ಬ, ಆಕೆಯನ್ನು ಚಿಕ್ಕವಯಸಿನಲ್ಲಿ ಮೆಚ್ಚುತ್ತಾನೆ, ಅವಳು ಸಹ, ಆದರೆ ಎಂದು ಅವರಿಬ್ಬರು ತಮ್ಮ ನಡುವೆ ಪ್ರೀತಿಯಿದೆ ಎಂದು ಯೋಚಿಸುವದಿಲ್ಲ, ಹುಡುಗ ಮುಂದಿನ ಓದಿಗಾಗಿ ಹೊರಟುಹೋಗುತ್ತಾನೆ, ಇಂಜಿನೀಯರ್ ಆಗಿ , ಎಷ್ಟೋ ವರ್ಷಗಳ ನಂತರ ತನಗೆ ಆಶ್ರಯ ಕೊಟ್ಟಿದ ಮನೆಯ ಯಜಮಾನನನ್ನು ನೆನೆದು ಬರುತ್ತಾನೆ, ನಾಯಕಿ ತನ್ನ ಜಾತಕ ದೋಷದಲ್ಲಿನ ಕಾರಣದಿಂದ ಮದುವೆಯಾಗದೆ ಉಳಿದಿರುತ್ತಾಳೆ , ನಂತರ ಅವರಿಬ್ಬರ ಮದುವೆ ನಡೆಯುತ್ತದೆ. ನನಗೆ ಆ ಕತೆಯ ಸ್ಪೂರ್ತಿ ಇತ್ತು, ಶೀಗಂಧದ ಧೂಪ ಪ್ರಾರಂಬಿಸಿದಾಗ.
    ಆದರೆ ನನ್ನ ಕಥೆಯಲ್ಲಿ ಪ್ರಾರಂಬದಲ್ಲಿಯೆ ನಾಯಕನ ಮದುವೆ ಆಗಿಹೋಗಿರುತ್ತದೆ. ತಾನು ಕಾಲೇಜಿನ ದಿನಗಳಲ್ಲಿ ಮೆಚ್ಚಿದ್ದ ಹುಡುಗಿಯ ದರ್ಶನ ಆಗಬಹುದೆಂದು ನಿರೀಕ್ಷೆಯಲ್ಲಿ ಹೊರಡುತ್ತಾನೆ. ಇಲ್ಲಿ ತ್ರಿಕೋಣ ಪ್ರೇಮದ ಕತೆಗೆ ಅವಕಾಶವಿಲ್ಲ ಎಂದೆ ನನ್ನ ಭಾವನೆ, ನಾಯಕನು ಆಗಲೆ ವಿವಾಹವಾಗಿರುವದರಿಂದ ವಿವಾಹೇತರ ಸಂಬಂದದಂತೆ ನಾಯಕಿ ಅರುಣಳನ್ನು ಚಿತ್ರಿಸಲು, ನನಗೆ ಸಾದ್ಯವಿಲ್ಲ. ಹಾಗೆ ಆದಲ್ಲಿ ಇಬ್ಬರು ತಮ್ಮ ತೂಕವನ್ನು ಕಳೆದುಕೊಳ್ಳುತ್ತಾರೆ. ಇಲ್ಲವೆ ಅರುಣಳು ನಾಯಕನ್ನು ನಿಂದಿಸಿ ಅವನನ್ನು ಒಬ್ಬ ವಿಲನ್ ನಂತೆ ಚಿತ್ರಿಸಲು ಸಾದ್ಯವಿಲ್ಲ ಏಕೆಂದರೆ ಮದುವೆ ಮುಂಚೆ ಹುಡುಗ ಹುಡುಗಿಯರು ಯಾರನ್ನೊ ಮೆಚ್ಚುವುದು ನಂತರ , ವಿವಾಹ ಇವೆಲ್ಲ ಸಾಮಾನ್ಯ. ಅಲ್ಲಿ ಯಾರದೊ ತಪ್ಪನ್ನು ಗುರುತಿಸುವುದು ಹೇಗೆ.
   ನನಗೆ ಸ್ವಲ್ಪ ಗೊಂದಲ ಮೂಡಿದ್ದು ಅರುಣ  , ದತ್ತ ನನ್ನು ಬೇಟಿ ಮಾಡಿದ ನಂತರ ಅವನ ಜೊತೆ ನಡೆದು ಕೊಂಡಿದ್ದು, ಅವಳು ಅವನ ಜೊತೆ ಪ್ರೇಮಿಯಂತೆ ನಡೆದು ಕೊಂಡಳು ಎನ್ನುವುದು ಅರಗಿಸಿಕೊಳ್ಳಲು ನನಗೆ ಕಷ್ಟವಾಯಿತು. ನಾಯಕ ಅವಳಿಗೆ ಮದುವೆಯಾಗಿ ಮಕ್ಕಳಾಗಿರಬಹುದೆಂದು ಭಾವಿಸುತ್ತಾನೆ, ಆದರೆ ಅರುಣಳಂತಹ ಹೆಣ್ಣು ಮದುವೆಯಾಗಿ ಗಂಡನ ಜೊತೆ ಇರುವುದು ನಿಜವಾದರೆ ದತ್ತನ ಜೊತೆ ಅವಳ ನಡತೆಗೆ ಸಮರ್ಥನೆ ಇರಲ್ಲ. ಅಲ್ಲದೆ ಮದುವೆಯಾಗಿರುವ ಒಂದು ಹೆಣ್ಣು ಮತ್ತೊಬ್ಬ ಪರಪುರುಷನಿಗೆ ಹಣೆಗೆ ತನ್ನ ತುಟಿಯೊತ್ತುತ್ತಾಳೆ ಅನ್ನುವುದು ಟೀವಿ ದಾರವಾಹಿಗಳಲ್ಲಿ , ಸಿನಿಮಾಗಳಲ್ಲಿ ತೋರಿಸಬಹುದು.  ಆದರೆ ನನ್ನ ಕಥೆಯಲ್ಲಿ ಅದನ್ನು ಹೇಗೆ ಸಮರ್ಥಿಸುವುದು ಎಂಬ ಗೊಂದಲ ಕಾಡಿತು.
   ಆಚಾರ್ಯರು ಮೊದಲ ಭಾಗದ ಪ್ರತಿಕ್ರಿಯೆಯಲ್ಲಿ ಕತೆ ಕೆಲವು ಊಹೆಗಳನ್ನು ಮೀರಿದರೆ ಸೂಪರ್ ಎಂದರು. ಆಗ ನನಗೆ ಈ ಚಿಂತನೆ ಪ್ರಾರಂಬವಾಯಿತು. ಅದಕ್ಕಾಗಿ ಕಡೆಯಲ್ಲಿ ದತ್ತ ಹೊರಟನಂತರ ನಿಮಗೆಲ್ಲ ಅರುಣಳ ಕತೆ ಹೇಳಲೆ ಬೇಕಿತ್ತು. ಆದರೆ ಸಪ್ತಗಿರಿಯವರು ಕಥೆಯನ್ನು ಅರುಣಳ ತ್ಯಾಗ ಎಂಬಂತೆ ನೋಡಿದರು ಆದರೆ ಅದು ಸರಿಯಲ್ಲವೇನೊ ಎಂದೆ ನನ್ನ ಅನಿಸಿಕೆ , ಏಕೆಂದರೆ ಅವಳು ಧಾಮಿನಿಗಾಗಿ ದತ್ತನನ್ನು ತ್ಯಾಗಮಾಡುವ ಸಂದರ್ಬವೇನು ಬಂದಿಲ್ಲ, ಅವರ ಜೀವನದ ಘಟನೆಗಳೆ ಹಾಗಿವೆ. ಎಲ್ಲವು ಸಹಜ ಘಟನೆಗಳೆ.
  ಇಷ್ಟಾದ ಮೇಲು ಅರುಣ ಅವಿವಾಹಿತಳಾಗಿ ಇರುವುದು ದತ್ತನ ನೆನಪಲ್ಲಿ ಇರುವುದು ಅಪರೂಪದ ವಿಷಯವಾದರು ಅಸಂಬವ ವೇನು ಅಲ್ಲ. ನಮ್ಮ ಮುಂದೆ ಆರೀತಿ ಇರುವ ಹಲವರನ್ನು ಕಾಣಬಹುದು.
   ಪ್ರೇಮಶೇಖರರ ಕತೆಯಲ್ಲಿಯು ಅಷ್ಟೆ ನಾಯಕಿ (?) ತನ್ನ ಗಂಡನನ್ನು ತೊರೆದು ನಾಯಕನ ಜೊತೆ ಬರುತ್ತಾಳೆ ಅಂತ ನಿರೀಕ್ಷಿಸುವುದು ತಪ್ಪು , ಹಾಗಾದಲ್ಲಿ  ತನ್ನ ಅಕ್ಕ ಸರಸಕ್ಕನ ಕತೆಯ ಹಿನ್ನಲೆಯಲ್ಲಿ ಬಂದಿರುವ ನಾಯಕ , ನಾಯಕಿ ಇರುವ ಹಿನ್ನಲೆಯನ್ನು ಗಮನಿಸಿದರೆ ಕತೆಗೆ ಅಪಚಾರವೆ. ಅದರಿಂದಲೆ ಅವಳ ಆತ್ಮಹತ್ಯೆ ಅನಿವಾರ್ಯವಾಗಿತ್ತು ಕತೆಯ ದೃಷ್ಟಿಯಿಂದ.
    ಇಲ್ಲೆ ನನಗೆ ಅನಿಸುತ್ತಿರುವುದು, ಕತೆ ಎಂದು ಕೊಂಡರು ಅದು ಸ್ವತಂತ್ರವಾಗಿರುವದಿಲ್ಲ, ಕತೆಗಾರನ ಮನೋಧರ್ಮವನ್ನು , ಅವನು ನಂಬಿರುವ ತತ್ವಗಳನ್ನು ಅವನು ರಚಿಸುವ ಕತೆಯ ಕಲ್ಪನೆ ಮೀರಲಾರದು ಎಂದೆ ಅನಿಸುತ್ತದೆ.
ಇಂತಿ ನಿಮ್ಮ
ಪಾರ್ಥಸಾರಥಿ

 
 
  

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಮಾತು ನಿಜ ಕಥೆಗಾರನ ಮನೋಧರ್ಮ, ಭಾವನೆ ಮತ್ತು ಅವನಲ್ಲಿನ ಸಂಸ್ಕೃತಿ ಇವುಗಳ ಪ್ರಭಾವ ಕಥೆಯ ಮೇಲೆ ಖಂಡಿತವಾಗಲು ಇರುತ್ತದೆ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸತೀಶರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ >>>>>>>>>>ನಂಗೆ ಅರ್ಥ ಆಯ್ತು... ಆದರೆ ನಾ ಯಾವುದೇ ಬರಹ ಬರೆವಾಗ ನಂಗೆ ಹಾಗೆ ಅನ್ನಿಸಿಲ್ಲ.. ಬರಹವನ್ನ ಒಂದು 'ಎಳೆ' ಮಾತ್ರ ಯೋಚಿಸಿ ಬರೆಯುವ ನಾ ಅದು ಅದನ್ನು ಒಂದೊಂದು ಭಾಗ ಬರೆವಾಗ ಏನು ಮನಸ್ಸಿಗೆ ಬರುತ್ತದೋ ಅದನ್ನೇ ಬರೆದದ್ದು, ಹೀಗಾಗಿ ನನ್ನ ಬರಹಗಳು ಅದೇ ತಡೆ ಇಲ್ಲದೆ ಅಡ್ಡ -ದಿಡ್ಡಿ ಹೋಗಿದ್ದು ನಿಮಗೆ ಗೊತ್ತಿರಬೇಕು..ನಿಮ್ಮ ಅನುಭವಕ್ಕೆ ಬಂದಿರಬೇಕು..... ಆದರೂ ನಿಮ್ಮ ಭಾವನೆಗಳನ್ನ ನಾ 'ಗೌರವಿಸಿ' ಆದರಿಸುತ್ತೇನೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲು ಮೊದಲು ಹಾಗೆ ಸಪ್ತಗಿರಿಯವರೆ ತುಂಟು ಕುದುರೆ ಹತ್ತಿದ ಹಾಗೆ ಆಗುತ್ತದೆ ಯಾವುದೆ ಬರಹ ಕತೆಯನ್ನು ಮೊದಲು ಮನದಲ್ಲಿ ಮಂತನ ನಡೆಸಿ ನಂತರ ಬರೆಯಲು/ಕುಟ್ಟಲು ಕೂಡಿ ಆಗ ನಿಮ್ಮ ಮನದಲ್ಲಿರುವಂತೆ ಮೂಡುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಅದೊಮ್ಮೆ 'ನಿಮಗೆ' ಪ್ರತಿಕ್ರಿಯಿಸುತ್ತ ಹೇಳಿದ್ದೆ, 'ಯಾವುದೇ ಸಿದ್ದ ಸೂತ್ರ ಇಲ್ಲದೆ' ನಾ ಬರೆಯುವೆ ಎಂದು,(ಅಹಂಕಾರದದ ಅಹಮ್ಮಿನ ಮಾತು ಅನಿಸಬಹುದು:)) >>>>>>>>ಅದಕ್ಕೆ ಈಗಲೂ ಬದ್ಧ! ಆದರೂ ಬದಲಾವಣೆಗೆ ಪ್ರಯತ್ನಿಸುವೆ. ನೋಡುವ... >>>ತಮ್ಮ ಹಿತ ನುಡಿಗೆ ತಲೆ ಬಾಗುವೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಕತೆಗಾರನ ಮನೋಧರ್ಮವನ್ನು , ಅವನು ನಂಬಿರುವ ತತ್ವಗಳನ್ನು ಅವನು ರಚಿಸುವ ಕತೆಯ ಕಲ್ಪನೆ ಮೀರಲಾರದು ಎಂದೆ ಅನಿಸುತ್ತದೆ. > +1 ಕತೆ ಎಷ್ಟು ಹದ ತಪ್ಪಿದ ಕುದುರೆಯಂತೆ ವರ್ತಿಸಿದರೂ ಅದಕ್ಕೆ ಕಥೆಗಾರನ ಮನೋಭಾವದ ಮಿತಿ ಇದ್ದೇ ಇರುತ್ತದೆ ಎಂದು ನನ್ನ ನಂಬಿಕೆ. ಅದಕ್ಕೆ ಯಾರು 'ಒಮ್ಮೆ ಬರೆಯಲು ಪ್ರಾರಂಭಿಸಿದ ಬಳಿಕ ಅದು ತನ್ನಂತಾನೆ ಮುಂದುವರೆಯುವುದು' ಎಂದು ಹೇಳಿದರೂ ನನಗೆ ಅದರ ಬಗ್ಗೆ ನಂಬಿಕೆ ಇಲ್ಲ. ಮುಖ್ಯವಾಗಿ ಕಥೆ/ಕಾದಂಬರಿ/ನಾಟಕ ಪ್ರಕಾರಗಳಲ್ಲಿ ಮನುಷ್ಯ ಮನಸ್ಸಿನ ವೈರುಧ್ಯಗಳನ್ನು, ಬಹು ಆಯಾಮಗಳನ್ನು ತೋರಿಸುವುದು ಸುಲಭ ಮತ್ತು ವಾಸ್ತವತೆಯ ದೃಷ್ಟಿಯಿಂದ ಅವು ಹೆಚ್ಚಿನ ಸತ್ವವನ್ನೂ ಹೊಂದಿರುತ್ತವೆ. ಕವಿತೆ, ಲೇಖನಗಳು ಮೋನೊಟೊನಸ್ ಆಗಿ ಬಿಡುತ್ತವೆ ಎಂದು ನನಗೆ ಯಾವಾಗಲೂ ಅನಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನದೊ೦ದು ಬೇರೆಯದೇ ಸಮಸ್ಯೆ.ಕತೆ ಆರ೦ಭದಿ೦ದ ಅ೦ತ್ಯ ಹೀಗೆ ಇರಬೇಕು ಅ೦ದುಕೊಳ್ಳುತ್ತೇನೆ.ಅರ್ಧ ಕತೆ ಬರೆದ ನ೦ತರ ಅ೦ತ್ಯ ಹಾಗಲ್ಲ ,ಹೀಗಿದ್ದರೇ ಚೆ೦ದ ಎ೦ದುಕೊಳ್ಳುತ್ತೇನೆ.ಕೊನೆಗೆ ನನ್ನ ಮನಸ್ಸಿನಲ್ಲಿದ್ದ ಕತೆಯೇ ಬೇರೆ ,ಬರೆದುದೇ ಬೇರೆಯಾಗಿಬಿಡುತ್ತದೆ.ನಾನು ಹೆಚ್ಚಾಗಿ ಕಮರ್ಷಿಯಲ್ ಕತೆ ಬರೆಯುವುದರಿ೦ದ ಹೀಗಾಗುತ್ತದೇನೋ ಅನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುರಾಜರೆ ಇರಬಹುದೇನೊ ಆದರೆ ನಾನು ಕತೆಗಳನ್ನು ಬರೆಯಲ್ಲು ಕೆಲವು ಸಾರಿ ತಿಂಗಳುಗಳನ್ನು ತೆಗೆದುಕೊಳ್ಳೂವೆ ಹಾಗಾಗಿ ಕತೆ ಪೂರ್ಣರೂಪಗೊಂಡ ನಂತರೆವೆ ಬರೆಯುವೆ ನಿಮಗೆ ನಂಬಿಕೆಯಾಗದೆನೊ ಲೌಕಿಕ ಅಲೌಕಿಗ ನನ್ನ ಮನದಲ್ಲಿ ಎಂಟುವರ್ಷಗಳ ಕಾಲ ನೆಲೆಸಿದ್ದ ಕತೆ ಅಷ್ಟುವರ್ಷಗಳ ನಂತರ ಬರೆದೆ ಮತ್ತೆ ಕಮರ್ಷಿಯಲ್ ಕತೆ ಎಂದರೇನು ತಿಳಿಸುತ್ತೀರ ನನಗೆ ಸರಿಯಾಗಿ ಅರ್ಥವಾಗಲಿಲ್ಲ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷರೆ ನನ್ನ ಅಭಿಪ್ರಾಯವನ್ನು ತಾವು ಒಪ್ಪಿರುವುದು ನನಗೆ ಸಂತಸ ತಂದಿದೆ ನೀವು ಉಪಯೋಗಿಸುವ ಪದ ಮನೋಭಾವದ ಮಿತಿ ತುಂಬ ಸರಿಯಾಗಿದೆ ಕಲ್ಪನೆಗೆ ಮಿತಿಯಿಲ್ಲ ಆದರೆ ಮನೋಭಾವಕ್ಕೆ ಮಿತಿಯಿರುತ್ತದೆ ನಾವದನ್ನು ಮೀರಬೇಕಾದರೆ ನಮ್ಮ ಮನೋಭಾವವು ಬದಲಾಗಬೇಕು ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆಗೆ ಪೂರಕವಾದ ಟೈಟಲ್ ಹಾಕಿದಾಗ ಕಥೆಗಾರ ಅರ್ಧ ಗೆಲ್ಲುತ್ತಾನೆ ಎಂದು ನನ್ನ ನಂಬಿಕೆ. ಹಾಗಾಗಿ ಈ ಕಥೆ ಹೀಗೇ ಆಗಬಹುದು ಎಂದು ಅನ್ನಿಸಿತು. ಹಾಗಾಗದೇ ಇದ್ದಾಗ 'ಏನಿದು ಕಥೆ ಏನೋ ಟೈಟಲ್ ಏನೋ' ಎಂಬ ಪ್ರಶ್ನೆ ಉದ್ಭವ ಆಗುತ್ತದೆ. ಕಥೆಗಾರನ ಮನೋಧರ್ಮ, ತತ್ವ ಇತ್ಯಾದಿಗಳು ಕಥೆಗಾರನ ಕಥೆಗಳಿಗೆ ಲಿಮಿಟೇಷನ್ ತರುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಇದು ನನ್ನ ಅಭಿಪ್ರಾಯ ಮಾತ್ರ :‍) ತಾನು ಅನುಭವಿಸಲಾಗದ / ಅನುಭವಿಸಲಾಗದಿದ್ದ ಸುಖಗಳು, ಅನುಭವಿಸಿರದ ವೇದನೆಗಳೂ ಹೇರಳವಾಗಿರುವ ಕಥೆಗಳು ಇವೆ ಅಲ್ಲವೇ? ವಿಧ ವಿಧವಾದ ಪ್ರತಿಕ್ರಿಯೆಗಳಿಂದ ನಿಮಗೆ ಬೇಸರವಾಯಿತೇ ಪಾರ್ಥರೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಾಥರೆ ನಿಜ ಕತೆಗೆ ಶೀರ್ಷಿಕೆ ಹೊಂಚುವುದು ನಿಜಕ್ಕು ದೊಡ್ಡ ಸವಾಲು (ಮುಂದಿನ ಕತೆ ನಾಯಕನ ಹೆಸರು ಶ್ರೀನಾಥ ಹಾಗು ಕತೆಯ ಹೆಸರು ಶ್ರೀಹರಿ... ಶ್ರೀಹರಿ... ಶ್ರೀಹರಿ ಎಂದು ಕೊಂಡಿರುವೆ :)) ) ಪ್ರತಿಕ್ರಿಯೆಗಳು ಹೇಗೆ ಬೇಸರ ತರಿಸಬಲ್ಲದು ಸರ್ ನಿಜಕ್ಕು ನಾನು ಎಲ್ಲರ ಭಾವನೆ ತಿಳಿಯಲೆಂದು , ನನ್ನನ್ನ ಪರಿಕ್ಷಿಸಿ ಬೆಳಸಲೆಂದೆ ಈ ವಿಷಯವೆತ್ತಿದ್ದೇನೆ ನಿಮ್ಮೆಲ್ಲರ ಅನುಭವಗಳು ನನಗೆ ನಡೆಯುವ ದಾರಿ ತೋರುತ್ತದೆ ನಾನು ಈ ಲೇಖನಕ್ಕೆ ಹೆಚ್ಚು ಪ್ರತಿಕ್ರಿಯೆ ಹಾಗು ಚರ್ಚೆ ನಿರೀಕ್ಷೆಸಿದ್ದೆ ಏಕೆಂದರೆ ಎಲ್ಲರು ತಮ್ಮ ಅನುಭವ ಹಂಚಿಕೊಳ್ಳಲು ಇದು ವೇದಿಕೆ ಯಾಗುವ ಸಾದ್ಯತೆ ಇತ್ತು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೇ, ನಿಮ್ಮ ತೊಳಲಾಟ ನೀವು ಎಷ್ಟು ತೊಡಗಿಸಿಕೊಂಡಿದ್ದಿರಿ ಎಂಬುದನ್ನು ತೋರಿಸುತ್ತಿದೆ! ಇದು ಕಥೆಯಾದ್ದರಿಂದ ಬದಲಾವಣೆಗಳಿಗೂ ಅವಕಾಶವಿರುತ್ತದೆ. ಮುಂದೊಮ್ಮೆ ನಿಮ್ಮ ಮನಸ್ಸಿಗೆ ಒಪ್ಪುವಂತಹ ರೂಪ (ನಿಮ್ಮ ಒಳ ತೊಳಲಾಟ ಕೊನೆಗೊಳಿಸುವಂತಹ) ನಿಮ್ಮ ಕಥೆಗೆ ಕೊಡಲು ನಿಮಗೆ ಅವಕಾಶವಿದೆ. ನಿಮ್ಮ ಕಥೆಯಲ್ಲಿಯಂತೆ ನಿಜಜೀವನದಲ್ಲೂ ನಡೆಯಲು ಅವಕಾಶವಿದೆಯೆಂಬುದು ನಿಮ್ಮ ಕಥೆಯ ತೂಕ ಹೆಚ್ಚಿಸಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರೆ ವಂದನೆಗಳು ನಿಮ್ಮ ಅನಿಸಿಕೆ ನಿಜ ನಮ್ಮ ಬರಹಗಳು ನಮ್ಮ ಜೀವನದ ಪ್ರತಿಬಿಂಬವಾಗಿರಬೇಕು ಇಲ್ಲದಿದ್ದಲ್ಲಿ ಬರಹ ಒಂದು ಅಷಾಡಭೂತಿತನ (ಹಿಪೋಕ್ರಸಿ) ಯಾಗದೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್, ಎಲ್ಲರ ಅಭಿಪ್ರಾಯಗಳನ್ನು ಓದುತ್ತಿದ್ದರೆ ಒಬ್ಬೊಬ್ಬ ಕಥೆಗಾರನ ಶೈಲಿ ಒಂದೊಂದು ರೀತಿ ಇರುತ್ತದೆ. ನೀವು ಕತೆಯ ಚೌಕಟ್ಟನ್ನು ರೂಪಿಸಿಕೊಂಡು ಕತೆ ಅದರ ಪರಿಧಿಯೊಳಗೇ ಇರುವಂತೆ ನೋಡಿಕೊಳ್ಳುತ್ತೀರ. ಕೊಡ್ಕಣಿಯವರು ಮನಸ್ಸಿನಲ್ಲಿ ಒಂದು ಚೌಕಟ್ಟನ್ನು ರೂಪಿಸಿಕೊಂಡು ಕತೆಯ ಮಧ್ಯದಲ್ಲಿ ಅದನ್ನು ಬೇರೆಯಲ್ಲಿಗೋ ಒಯ್ದು ಮುಟ್ಟಿಸುತ್ತಾರೆ; ಏಕೆಂದರೆ ಅವರ ಪ್ರಕಾರ ಅವರು ಕಮರ್ಷಿಯಲ್ಲಿ ಕತೆಗಾರರು ಅಂದರೆ ಈ ರೀತಿ ಬರೆದರೆ ಓದುಗರಿಂದ 'ನೆಗೆಟಿವ್' ಪ್ರತಿಕ್ರಿಯೆ ಬರಬಹುದೆಂದು ನಿರೀಕ್ಷಿಸಿ ಕತೆಯ ಹರಿವನ್ನು ಬದಲಾಯಿಸುತ್ತಾರೆ. ಸಪ್ತಗಿರಿವಾಸಿಗಳು ಒಂದು ಟಾಪಿಕ್ ಇಟ್ಟುಕೊಂಡು ಬರೆಯಲು ಷುರು ಮಾಡಿದರೆ ಅದನ್ನು ಬರೆಯುವಾಗ ಏನೇನು ಹೊಸ‍ ಹೊಸ ಆಲೋಚನೆಗಳು ಬರುತ್ತವೆಯೋ ಆ ರೀತಿ ಬರೆಯುತ್ತಾ ಹೋಗಿ ಎಲ್ಲೋ ಒಂದು ಕಡೆ ಹೋಗಿ ಮುಟ್ಟುತ್ತಾರೆ; ಕೆಲವೊಮ್ಮೆ ಕಥೆಗಳು ದಡ ಸೇರುವುದಿಲ್ಲ; ಅವರ ಪ್ರಕಾರ. ಯಾರ ಶೈಲಿ ಏನೇ ಇದ್ದರೂ ಕೂಡ ಎಲ್ಲರಿಗೂ ತಾನು ಹೇಳ ಹೊರಟಿರುವುದು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಬೇಕೆನ್ನುವುದೇ ಆಗಿರುತ್ತದೆ. ಕೆಲವೊಮ್ಮೆ ನಾವು ಹೇಳ ಹೊರಟಿದ್ದೇ ಒಂದು ಆದರೆ ಓದುಗರು ಅರ್ಥಮಾಡಿಕೊಳ್ಳುವುದೇ ಒಂದು ಆಗ ಕಥೆ ಬರೆದವನಿಗೆ ಬೇಸರವಾಗುವುದು ಸಹಜ; ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಯಾರು ತಾವು ಅಂದುಕೊಂಡಿದ್ದನ್ನು ಓದುಗನಿಗೆ ಸರಿಯಾಗಿ ತಲುಪುವಂತೆ ಮಾಡುತ್ತಾರೋ ಅವರೇ ಯಶಸ್ವಿ ಕಥೆಗಾರ ಎನ್ನಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>ಸಪ್ತಗಿರಿವಾಸಿಗಳು ಒಂದು ಟಾಪಿಕ್ ಇಟ್ಟುಕೊಂಡು ಬರೆಯಲು ಷುರು ಮಾಡಿದರೆ ಅದನ್ನು ಬರೆಯುವಾಗ ಏನೇನು ಹೊಸ ಹೊಸ ಆಲೋಚನೆಗಳು ಬರುತ್ತವೆಯೋ ಆ ರೀತಿ ಬರೆಯುತ್ತಾ ಹೋಗಿ 'ಎಲ್ಲೋ ಒಂದು ಕಡೆ' ಹೋಗಿ ಮುಟ್ಟುತ್ತಾರೆ; <<<< ಇದನ್ನು ನಾ ಒಪ್ಪುವೆ- ನಾ ಇದ್ವರ್ಗೂ ನನ್ನ ಮನಸಿಗೆ ಆ ಸಮಯಕ್ಕೆ- ಆ ಬರಹ ಬರೆವಾಗ ಮನಸಿಗೆ ಏನು ಬರುತ್ತೋ ಅದನ್ನೇ ಬರೆದದ್ದು ನನ್ನಂಬಿ ನನ್ನಂಬಿ ಪ್ಲೀಜ್ >>>> ಯಾರ ಶೈಲಿ ಏನೇ ಇದ್ದರೂ ಕೂಡ ಎಲ್ಲರಿಗೂ ತಾನು ಹೇಳ ಹೊರಟಿರುವುದು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಬೇಕೆನ್ನುವುದೇ ಆಗಿರುತ್ತದೆ. ಕೆಲವೊಮ್ಮೆ ನಾವು ಹೇಳ ಹೊರಟಿದ್ದೇ ಒಂದು ಆದರೆ ಓದುಗರು ಅರ್ಥಮಾಡಿಕೊಳ್ಳುವುದೇ ಒಂದು ಆಗ ಕಥೆ ಬರೆದವನಿಗೆ ಬೇಸರವಾಗುವುದು ಸಹಜ; ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಯಾರು ತಾವು 'ಅಂದುಕೊಂಡಿದ್ದನ್ನು' ಓದುಗನಿಗೆ ಸರಿಯಾಗಿ 'ತಲುಪುವಂತೆ' ಮಾಡುತ್ತಾರೋ ಅವರೇ 'ಕಥೆಗಾರ' ಎನ್ನಬಹುದು <<<ನಿಮ್ಮ ()ಶ್ರೀಧರ್ ಅವ್ರ ಪ್ರತಿಕ್ರಿಯೆ) 'ಯೆಶಸ್ವಿ' ಪದವನ್ನ ನಾ ಉದ್ದ್ದೆಶಪೂರ್ವಕವಾಗಿ ತೆಗೆದ ಹಾಕಿದ್ದೇನೆ.. ಯಶಸ್ಸನ್ ಅಳೆಯುವುದು ಹಿಟ್ಸ್ ಗಳ ಮೂಲಕವೋ? ಅಥವಾ ಅದಕ್ಕೆ ಬಂದ ಪ್ರತಿಕ್ರಿಯೆಗಳ ಮೂಲಕವೋ? ನನನ್ ದ್ವಂದ್ವ ಮತ್ತು ಸಂದೇಹ:) >>> ಶ್ರೀಧರ್ ಅವ್ರೆ 'ಅವರ' ಪ್ರಕಾರ<< ಯಾರ ಪ್ರಕಾರ? (ನಾ ಊಹಿಸಿದಂತೆ:) ಅದು ಕಥೆಗಾರನ ಪ್ರಕಾರ-ಅದು ಯಾವುದೇ ಕಥೆಗಾರ ಆಗಿರಬಹುದು ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<< ಇದನ್ನು ನಾ ಒಪ್ಪುವೆ- ನಾ ಇದ್ವರ್ಗೂ ನನ್ನ ಮನಸಿಗೆ ಆ ಸಮಯಕ್ಕೆ- ಆ ಬರಹ ಬರೆವಾಗ ಮನಸಿಗೆ ಏನು ಬರುತ್ತೋ ಅದನ್ನೇ ಬರೆದದ್ದು ನನ್ನಂಬಿ ನನ್ನಂಬಿ ಪ್ಲೀಜ್ >>>> ಸಪ್ತಗಿರಿಗಳೆ ನಾನು ಹೇಳಿದ್ದು ಅದನ್ನೇ ನನ್ನ ನಂಬಿ ಪ್ಲೀಸ್ :)) ಶ್ರೀಧರ್ ಅವ್ರೆ 'ಅವರ' ಪ್ರಕಾರ<< ಯಾರ ಪ್ರಕಾರ? (ನಾ ಊಹಿಸಿದಂತೆ:) ಅದು ಕಥೆಗಾರನ ಪ್ರಕಾರ-ಅದು ಯಾವುದೇ ಕಥೆಗಾರ ಆಗಿರಬಹುದು ಅಲ್ಲವೇ? ‍ ನಿಮ್ಮ ಊಹೆ ಸರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಯಶಸ್ಸನ್ ಅಳೆಯುವುದು ಹಿಟ್ಸ್ ಗಳ ಮೂಲಕವೋ? ಅಥವಾ ಅದಕ್ಕೆ ಬಂದ ಪ್ರತಿಕ್ರಿಯೆಗಳ ಮೂಲಕವೋ? ನನನ್ ದ್ವಂದ್ವ ಮತ್ತು ಸಂದೇಹ:) >>> ಸಪ್ತಗಿರಿಯವರೆ ನಾವು ಹಿಟ್ಸ್ ಅಥವ ಪ್ರತಿಕ್ರಿಯೆಗಳ ಬಗ್ಗೆ ಯೋಚಿಸುವ ಮೊದಲು ಕತೆ ನಮಗೆ ಸಮಾದಾನ ಕೊಟ್ಟಿದೆಯ ಯೋಚಿಸಬೇಕು ನಮ್ಮ ಕತೆಗೆ ನಾವೆ ಮೊದಲ ಓದುಗರು ! ವಿಮರ್ಷಕರು! ನಿಮಗೆ ತ್ರುಪ್ತಿ ಕೊಡುವಂತ ಬರೆಯಲು ಪ್ರಯತ್ನಿಸಿ ನಿಜವಾಗಲು ಅದು ಯಶಸ್ವಿ ಕತೆಯೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತೆ ನಮಗೆ ಸಮಾದಾನ ಕೊಟ್ಟಿದೆಯ ಯೋಚಿಸಬೇಕು >>>ನಾ ಬರೆದ ಎಲ್ಲವೂ ನಂಗೆ ಆ ಕ್ಚನಕ್ಕೆ(ಹೌದು ಅದನ್ನ ಬರೆದು ಸಂಪದಕ್ಕೆ(ಸಂಪದ ಮತ್ತು ವಿಸ್ಮಯನಗರಿ ಮಾತ್ರ) ಸೇರಿಸಿ ಆದಮೇಲೆ ನನಗೆ ಸಮಾದಾನ ಆಗುತ್ತೆ , ಆದರೆ ಅದೇ ಬರಹವನ್ನ ಮತ್ತೊಮ್ಮೆ ಹಲವೊಮ್ಮೆ ಓದಿದಾಗ ಅದನ್ನು ಹೀಗ್ e ಬರೆದಿದ್ದರೆ ಚೆನ್ನಿತ್ತೇನೋ ಅನ್ಸುತ್ತೆ:) ಹಾಗೆ ನೋಡಿದರೆ ' ಹೆತ್ತವರಿಗೆ ಹೆಗ್ಗಣವೂ ಮುದ್ದು ' ಹಾಗೆ ನಮ್ಮ ಬರಹ ನಮಗೆ ಅನ್ಸುತ್ತೆ:( ನಮ್ಮ ಕತೆಗೆ ನಾವೆ ಮೊದಲ ಓದುಗರು ! ವಿಮರ್ಷಕರು! >>>>ಹೌದು ಇದು ಸತ್ಯ- ಆದರೆ ನಂಗೆ ಇಷ್ಟ ಆದದ್ದು ಬೇರೆವರಿಗೂ ಆಗುವುದು ಕಷ್ಟ ಕಷ್ಟ- ನಮ್ಮ ಪರಿಚಯದವರು, ಇಲ್ಲ ಇನ್ನೆತಕ್ಕೋ ಮುಲಾಜಿಗೆ(ದಾಕ್ಸ್ಚಿನ್ಯಕ್ಕೆ) ಪ್ರತಿಕ್ರಿಯಿಸಿದರೆ? (ನನಗೆ ನನ್ನ ಕೆಲ ಬರಹಗಳನ್ನ ಅವುಗಳಿಗೆ ಬಂದ ಪ್ರತಿಕ್ರಿಯೆ ನೋಡಿದಾಗ ಹಾಗೆ ಅನ್ನಿಸಿದೆ) ನಿಮಗೆ ತ್ರುಪ್ತಿ ಕೊಡುವಂತ ಬರೆಯಲು ಪ್ರಯತ್ನಿಸಿ ನಿಜವಾಗಲು ಅದು ಯಶಸ್ವಿ ಕತೆಯೆ >>>>ಇದರ ಬಗ್ಗೆ ಕೊಂಚ ಸಂದೇಹವಿದೆ.. ಮುಂದೆ ಕಾಲಾಂತರದಲ್ಲಿ:) ಬದಲಾವಣೆಗೊಳಪಟ್ಟು ನನ್ನಬರಹ ಶೈಲಿ ಸುಧಾರಿಸಿದರೆ ನನಗೆ ಓಕೆ ಅನ್ನಿಸಿದರೆ ಆಗ ಈ ಮತ್ತು ನಾ ಪೂರ್ತ ನಂಬಬಹುದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತೆ ನಮಗೆ ಸಮಾದಾನ ಕೊಟ್ಟಿದೆಯ ಯೋಚಿಸಬೇಕು >>>ನಾ ಬರೆದ ಎಲ್ಲವೂ ನಂಗೆ ಆ ಕ್ಚನಕ್ಕೆ(ಹೌದು ಅದನ್ನ ಬರೆದು ಸಂಪದಕ್ಕೆ(ಸಂಪದ ಮತ್ತು ವಿಸ್ಮಯನಗರಿ ಮಾತ್ರ) ಸೇರಿಸಿ ಆದಮೇಲೆ ನನಗೆ ಸಮಾದಾನ ಆಗುತ್ತೆ , ಆದರೆ ಅದೇ ಬರಹವನ್ನ ಮತ್ತೊಮ್ಮೆ ಹಲವೊಮ್ಮೆ ಓದಿದಾಗ ಅದನ್ನು ಹೀಗ್ e ಬರೆದಿದ್ದರೆ ಚೆನ್ನಿತ್ತೇನೋ ಅನ್ಸುತ್ತೆ:) ಹಾಗೆ ನೋಡಿದರೆ ' ಹೆತ್ತವರಿಗೆ ಹೆಗ್ಗಣವೂ ಮುದ್ದು ' ಹಾಗೆ ನಮ್ಮ ಬರಹ ನಮಗೆ ಅನ್ಸುತ್ತೆ:( ನಮ್ಮ ಕತೆಗೆ ನಾವೆ ಮೊದಲ ಓದುಗರು ! ವಿಮರ್ಷಕರು! >>>>ಹೌದು ಇದು ಸತ್ಯ- ಆದರೆ ನಂಗೆ ಇಷ್ಟ ಆದದ್ದು ಬೇರೆವರಿಗೂ ಆಗುವುದು ಕಷ್ಟ ಕಷ್ಟ- ನಮ್ಮ ಪರಿಚಯದವರು, ಇಲ್ಲ ಇನ್ನೆತಕ್ಕೋ ಮುಲಾಜಿಗೆ(ದಾಕ್ಸ್ಚಿನ್ಯಕ್ಕೆ) ಪ್ರತಿಕ್ರಿಯಿಸಿದರೆ? (ನನಗೆ ನನ್ನ ಕೆಲ ಬರಹಗಳನ್ನ ಅವುಗಳಿಗೆ ಬಂದ ಪ್ರತಿಕ್ರಿಯೆ ನೋಡಿದಾಗ ಹಾಗೆ ಅನ್ನಿಸಿದೆ) ನಿಮಗೆ ತ್ರುಪ್ತಿ ಕೊಡುವಂತ ಬರೆಯಲು ಪ್ರಯತ್ನಿಸಿ ನಿಜವಾಗಲು ಅದು ಯಶಸ್ವಿ ಕತೆಯೆ >>>>ಇದರ ಬಗ್ಗೆ ಕೊಂಚ ಸಂದೇಹವಿದೆ.. ಮುಂದೆ ಕಾಲಾಂತರದಲ್ಲಿ:) ಬದಲಾವಣೆಗೊಳಪಟ್ಟು ನನ್ನಬರಹ ಶೈಲಿ ಸುಧಾರಿಸಿದರೆ ನನಗೆ ಓಕೆ ಅನ್ನಿಸಿದರೆ ಆಗ ಈ ಮತ್ತು ನಾ ಪೂರ್ತ ನಂಬಬಹುದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತೆ ಓದುಗನ ಮಾತು- ಓದುಗರ ಮೇಲೆ ಕತೆ ತುಂಬಾ ಪ್ರಭಾವ ಬೀರುವುದು. (ಗಾಂಧೀಜಿಯವರ ಮೇಲೆ ಆದ ಕತೆಯ ಪ್ರಭಾವ ಎಲ್ಲರಿಗೂ ಗೊತ್ತಿರುವ ವಿಷಯ) ಕತೆಯ ನಾಯಕನಿಗೆ/ಳಿಗೆ ತನ್ನನ್ನು ಹೋಲಿಸಿಕೊಂಡು ಕೊನೆ ಏನಾಗಿರುವುದೋ ಅದನ್ನು ತಾವೂ ಮಾಡುವವರೂ ಇದ್ದಾರೆ. ಚಲುವಿನ ಚಿತ್ತಾರ ಸಿನೆಮಾ ಕತೆ ನೋಡಿ ಅದೆಷ್ಟೋ ಎಳೆಯ ಹುಡುಗ/ಹುಡುಗಿಯರು ದಾರಿ ತಪ್ಪಿದ್ದಾರೆ. ಕತೆಯ ಕೊನೆ ಬರೆಯುವಾಗ ಹತ್ತು ಸಲ ಯೋಚಿಸಿ.. ಮಗಳ ಮೇಲೆ ಕತೆಯ ಪ್ರಭಾವದ ಬಗ್ಗೆ ಒಂದು ಕೊಂಡಿ- http://sampada.net/b... -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇ ಸಣ್ಣ ನಿಮ್ಮ ಆ ಪುಣ್ಯ ಕೋಟಿ ಕಥೆ ಓದಿದೆ... >>>>>ದೇವೇಗೌಡರ ಬಗ್ಗೆ ಬರೆದದ್ದು ಓದಿ ನಕ್ಕಿದ್ದೆ ನಕ್ಕಿದ್ದು:) ಹಳೆ ಬರಹಗಳೇ ಭಲೇ ಸೊಗಸಾಗಿವೆ.. ಕಥೆಯ ಮುಕ್ತಾಯ ಬಗ್ಗೆ ನೀವು ಹೇಳಿದ ಮಾತು ಬರೀ ಜೋಕು ಅನ್ಕಂದಿದ್ದೆ, ಆದರೆ ಈಗ ನಿಮ್ಮ 'ಆ ಪಾಡು' ನೋಡಿದ ಮೇಲೆ ಮುಂದೆ ನನಗೋ 'ಆ ರೀತಿ' ಆಗಬಾರದು ಅಂತ ನನ್ನ ಕಥೆಗಳ ಮುಕ್ತಾಯವನ್ ನಿಮಗೆ ಬಿಡುತ್ತೇನೆ:)) ನಿಮ್ಮ ಹಳೆಯ ಎಲ್ಲ ಬರಹ ಎಲ್ಲವನ್ನು ಓದುವೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ, ನನ್ನ ಬ್ರೌಸರಿನಲ್ಲಿ ಹುಲಿಯ ಚಿತ್ರ ಮೂಢಿ ಬಂದಿಲ್ಲ ಬಹುಶ: ನಿಮ್ಮಲ್ಲಿಗೆ ಆಟವಾಡಿಕೊಳ್ಳಲು ಬಂದಿರಬೇಕು ಸ್ವಲ್ಪ ಕತ್ತಾಲಾಗುವುದರೊಳಗೆ ಅಲ್ಲಲ್ಲ ಬೆಳಗಾಗುವುದರೊಳಗೆ ಕಳುಹಿಸಿ ಕಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಗಣೇಶರೆ ಕೆಲವು ಸಾರಿ ಕತೆಗಳು , ಘಟನೆಗಳು ಓದುಗರ ಮೇಲೆ ಪ್ರಭಾವ ಬೀರುವ ಸಾದ್ಯತೆ ಖಂಡೀತವಾಗಿ ಇರುತ್ತದೆ ಅದು ಒಳ್ಳೆಯ ಪರಿಣಾಮವು ಇರಬಹುದು ಗಾಂದೀಜಿಯವರಿಗಾದ ಹಾಗೆ ಮತೆ ಕೆಟ್ಟದು ಇರಬಹುದು ಚೆಲುವಿನ ಚಿತ್ತಾರದ ಹಾಗೆ ಅದಕ್ಕಾಗಿಯೆ ನಾವು ಚಿಂತಿಸುವ ಅಗತ್ಯವಿರುತ್ತದೆ ಮತ್ತು ಆ ನಿಟ್ಟಿನಲ್ಲಿ ಓದುಗರ ಅಭಿಪ್ರಾಯಗಳು ಮುಖ್ಯವಾಗುತ್ತದೆ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತೆಯ ನಾಯಕನಿಗೆ/ಳಿಗೆ ತನ್ನನ್ನು ಹೋಲಿಸಿಕೊಂಡು ಕೊನೆ ಏನಾಗಿರುವುದೋ ಅದನ್ನು ತಾವೂ ಮಾಡುವವರೂ ಇದ್ದಾರೆ. ಗಣೇ ಸಣನ್ ಸದ್ಯ ತಾವು ಕರೀನಾ ರೀತಿ ಡ್ಯಾನ್ಸ್ ಮಾಡದೆ ನಮಗೆ, ಬೆಂಗಳೂರಿಗೆ------------------? ಕಿಚನ್ ಮೆ ಚಮ್ಮಕ್ ಚಲ್ಲೋ ಓ.. | ಸಂಪದ - Sampada http://sampada.net/b... ಅದರಲ್ಲೂ ದೇಶದ "ಬಡ ಹೆಣ್ಣುಮಕ್ಕಳ" ಬಗ್ಗೆ ಚಿಂತಿಸುತ್ತಲಿದ್ದೆ! ಕರೀನಾ ಕಪೂರ್ ತೋರುಬೆರಳನ್ನು ಏಳು ಆಕಾರದಲ್ಲಿ ಬೆಂಡು ಮಾಡಿ, ಸೊಂಟ ಬಳುಕಿಸಿ ಚಮ್ಮಕ್ ಚಲ್ಲೋ ಡ್ಯಾನ್ಸ್ ಚೆನ್ನಾಗಿ ಏನು ಸೂಪರ್ ಆಗಿ ಮಾಡಿದ್ದಾಳೆ. ಕೋಟಿಗಟ್ಟಲೆ ಸಂಪಾದಿಸಿದರೇನು ಕರೀನಾಕಪೂರ್ ಅವಳ ಹೆಸರಿನಷ್ಟೂ ದಪ್ಪವಿಲ್ಲ. ಅವಳಂತೆ ಆಗಲು, ಅವಳನ್ನು ಅನುಕರಿಸಿ ಸಣ್ಣಗಾಗಲು ಈಗಿನ ಹೆಣ್ಣುಮಕ್ಕಳು ಊಟತಿಂಡಿ ಬಿಟ್ಟು ೭-೮ ವಯಸ್ಸಲ್ಲೇ ಡಯಟ್ ಶುರುಮಾಡುತ್ತಾರೆ. ಗಂಡುಮಕ್ಕಳು ಸಿಕ್ಸ್‌ಪ್ಯಾಕ್-ಎಯ್ಟ್‌ಪ್ಯಾಕ್ ಎಂದು ಹಂದಿಗಳಂತೆ ಬೆಳೆದರೆ-ಹೆಣ್ಣು ಮಕ್ಕಳು ಕರೀನಾ ಐಶ್ವರ್ಯ ಅಂತ ಹಪ್ಪಳದ ಹಾಗೇ ಒಣಗುತ್ತಿದ್ದಾರೆ. ಹೀಗೇ ಯೋಚಿಸುತ್ತಿರುವಾಗಲೇ... >>>>ಬೆಂಗಳೂರ್ ಬಚಾವ್ ಆಯ್ತು...............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಕಥೆ. ಅದನ್ನು ಹಾಗೇ ಬಿಟ್ಟಿದ್ದರೆ ಚೆನ್ನಿತ್ತು, ಈ ವಿವರಣೆ ಅಗತ್ಯವಿರಲಿಲ್ಲ ಅನಿಸುತ್ತದೆ. ಬರೆಯುವವರೆಗಷ್ಟೇ ಅದು ಬರಹಗಾರನ ಕಥೆಯಾಗಿರುತ್ತದೆ. ಬರೆದಾದ ಮೇಲೆ ಅದು ಓದುಗನ ಸ್ವತ್ತಾಗುತ್ತದೆ. ಅದನ್ನು ತನ್ನ ಅನುಭವ, ಅನುಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಸ್ವಾತಂತ್ರ್ಯ ಓದುಗನಿಗಿರುತ್ತದೆ. ಅಲ್ಲಿ ಕಥೆಗಾರನ ಮಧ್ಯಪ್ರವೇಶದ ಅಗತ್ಯವಿಲ್ಲ, ಇರಕೂಡದು ಎಂದು ಒಬ್ಬ ಕಥೆಗಾರನಾಗಿ ನನ್ನ ನಿಲುವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೇಮಶೇಖರರವರೆ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ದನ್ಯವಾದ‌ ನಾನು ನನ್ನ ಕತೆಯನ್ನು ಅಲ್ಲಿಯೆ ಬಿಟ್ಟಿರುವೆ ! ಅಲ್ಲಿ ನನ್ನ ಅಭಿಪ್ರಾಯ ಹೇಳಲಿಕ್ಕೆ ಹೋಗಿಲ್ಲ ನೀವನ್ನುವುದು ನಿಜ ಒಮ್ಮೆ ಕತೆ ಬರೆದಾದಮೇಲೆ ಅದು ಓದುಗನದೆ ಅದಕ್ಕಾಗಿ ನಾವು ಬರೆಯುವ ಮೊದಲು ಸಾಕಷ್ಟು ಚಿಂತಿಸಬೇಕಾಗುತ್ತೆ ನಾವು ಓದುಗನಿಗೆ ಏನನ್ನ ಕೊಡುತ್ತಿದ್ದೇವೆ ಎಂಬುದನ್ನು ಅದಕ್ಕಾಗಿ ನಾನು ಬೇರೆಯದ ಆದ ಬ್ಲಾಗ್ ಬರಹವನ್ನಾಗಿಸಿ ಬರೆದೆ ಮತ್ತು ಇಲ್ಲಿ ಅಲ್ಲಿನ ಕತೆಯ ಹೆಸರು ಬಳಸಿರುವುದು ನಿಮ್ಮೆಲ್ಲರ ಜೊತೆ ನನ್ನ ಮನದ ಭಾವನೆ ಹಂಚಿಕೊಳ್ಳಲು ಅಷ್ಟೆ ನನ್ನ ಅನಿಸಿಕೆಯಂತೆ ಸಂಪದ ದಲ್ಲಿ ಇರುವ ಓದುಗರು ಬಹಳಷ್ಟು ಜನ ಬರಹಗಾರರೆ ಅದಕ್ಕಾಗಿಯೆ ನಾನು ಹೇಳುವುದು ಇದೊಂದು 'ಬರಹಗಾರರ ಕಮ್ಮಟ' ದಂತೆ , ನಮ್ಮ ಬರಹಗಳ ಬಗ್ಗೆ ಚರ್ಚಿಸಲು ಒಂದು 'ಸಿದ್ದ ವೇದಿಕೆ' ಎಂದು ಹಾಗಾಗಿ ಎಲ್ಲರ ಜೊತೆ ನನ್ನ ಅನುಭವವನ್ನು ಅವರ ಅನುಭವವನ್ನು ಹಂಚಿಕೊಳ್ಳುವ ಇರಾದೆ ಅಷ್ಟೆ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಕತೆ ಎಂದು ಕೊಂಡರು ಅದು ಸ್ವತಂತ್ರವಾಗಿರುವದಿಲ್ಲ, ಕತೆಗಾರನ ಮನೋಧರ್ಮವನ್ನು , ಅವನು ನಂಬಿರುವ ತತ್ವಗಳನ್ನು ಅವನು ರಚಿಸುವ ಕತೆಯ ಕಲ್ಪನೆ ಮೀರಲಾರದು ಎಂದೆ ಅನಿಸುತ್ತದೆ.>> +೧ <<ಯಾವುದೆ ಬರಹ ಕತೆಯನ್ನು ಮೊದಲು ಮನದಲ್ಲಿ ಮಂತನ ನಡೆಸಿ ನಂತರ ಬರೆಯಲು/ಕುಟ್ಟಲು ಕೂಡಿ ಆಗ ನಿಮ್ಮ ಮನದಲ್ಲಿರುವಂತೆ ಮೂಡುತ್ತದೆ>> ಈ ಮಾತು ನಿಜ, ಆದರೆ ಕೆಲವೊಮ್ಮೆ ನೀವಂದಂತೆ ಮನದಲ್ಲಿನ ವಿಚಾರಗಳು ಮೂಡದೆ ಬೇರೆ ದಾರಿಗೂ ಸಾಗ ಬಹುದು; ಮೊದಲ ಬಾರಿಗೆ ಕಥೆ ಹೆಣೆಯಲು ಶುರುಮಾಡಿದ್ದಾಗ ಒಂದು ನೈಜ್ಯ ಘಟನೆ ಆದರಿಸಿ ಶುರು ಮಾಡೋಣ ಎಂದು ಕೊಂಡಿದ್ದೆ; ಇದೆ ಇರಾದೆಯಲ್ಲಿ ಕಥೆಯನ್ನು ಟೈಪಿಸಲು ಶುರು ಮಾಡಿದೆ, ಹೆಸರೂ ಇಡದ ಕಥೆಯು ಮುನ್ನೂರ ರಿಂದ ನಾಲ್ಕುನೂರು ಶಬ್ದ ಟೈಪಿಸಿ ಅದಾಗ ಹೊಸ ಕಥೆ ತಲೆಗೆ ಓಡಿತು, ಹೀಗೆ ಒಂದು ಭಾಗ ಮುಗಿಸಿದೆ, ನಂತರ ಅದಕ್ಕೆ ಡೈರಿ(http://sampada.net/b...) ಎಂದು ಹೆಸರಿಟ್ಟೆ. ಕಥೆಗೆ ಹೆಸರಿಟ್ಟಾಗಿಂದ ಕಥೆಯ ಹರಿವು, ದೃಷ್ಟಿಕೋನ, ಕಥಾವಸ್ತುವೇ ಬದಲಾಯಿತು.ಮತ್ತು ಕಥೆ ವೆಗವನ್ನು ಪಡಕ್ಕೊಂಡಿತು. ಕಥೆಗೆ ಕಾರಣವಾದ ಆ ಮೂಲ ಕಥಾವಸ್ತು ಹಿಡಿ ಕಥೆಯಲ್ಲಿ ಎಲ್ಲೂ ಬರಲಿಲ್ಲ. ಮನಸಲ್ಲಿ ಅವ್ವುಗಳಿಗೆ ಚಿತ್ರಣ ಮೂಡಿಸಲು ಶುರು ಮಾಡಿದೆ, ಕೆಲ ದಿನಗಳ ಬಳಿಕ ಅದನ್ನು ಕಿಚ್ಚು (http://sampada.net/b...) ಆಗಿ ಬರೆದೆ. << ಬರೆಯುವವರೆಗಷ್ಟೇ ಅದು ಬರಹಗಾರನ ಕಥೆಯಾಗಿರುತ್ತದೆ. ಬರೆದಾದ ಮೇಲೆ ಅದು ಓದುಗನ ಸ್ವತ್ತಾಗುತ್ತದೆ. ಅದನ್ನು ತನ್ನ ಅನುಭವ, ಅನುಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಸ್ವಾತಂತ್ರ್ಯ ಓದುಗನಿಗಿರುತ್ತದೆ. ಅಲ್ಲಿ ಕಥೆಗಾರನ ಮಧ್ಯಪ್ರವೇಶದ ಅಗತ್ಯವಿಲ್ಲ, >> +೧
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಕುಂಬ್ಳೆಯವರೆ ಕೆಲವು ಸಾರಿ ನಾವು ಪ್ರಾರಂಬ ಮಾಡಿದ ಕಥೆ ಎಲ್ಲಿಯೊ ಹೋಗಿ ನಮ್ಮ ಮೂಲವಸ್ತು ನಮ್ಮಲ್ಲಿಯೆ ಇರುತ್ತದೆ ಆಗ್ ಅದನ್ನು ನಾವು ಹೇಳಲು ಇನ್ನೊಂದು ಕತೆಯನ್ನೆ ಬರೆಯಬೇಕಾಗಬಹುದು ಈ ಅನುಭವ ನನಗು ಆಗಿದೆ ಮೊದಲಲ್ಲಿ ನಿಮ್ಮ ಕಿಚ್ಚು ಕತೆಯನ್ನು ಓದಿರುವೆ ಆದರೆ ಅದರ ಮೊದಲ ಕತೆ ಡೈರಿ ಅಂತ ತಿಳಿದಿರಲಿಲ್ಲ‌ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮರ್ಷಿಯಲ ಕತೆಯೆ೦ದರೇ ಅದರಲ್ಲಿ ಹೆಚ್ಚಾಗಿ ಸಾಮಾಜಿಕ ಸುಧಾರಣಾ ತತ್ವಗಳಾಗಲಿ,ವ್ಯಕ್ತಿತ್ವ ಸುಧಾರಣೆಯಾಗಲಿ ಇರುವುದಿಲ್ಲ.ಇವುಗಳ ಮೂಲ ಉದ್ದೇಶ ಓದುಗನನ್ನು ಸ೦ತೋಷಪಡಿಸುವುದಷ್ಟೇ ಆಗಿರುತ್ತದೆ. ಉದಾ: ಯ೦ಡಮೂರಿಯವರ ’ತುಳಸಿ’ ರವಿ ಬೆಳಗೆರೆಯವರ ಕಾದ೦ಬರಿಗಳು ಇತ್ಯಾದಿ ಕಮರ್ಶಿಯಲ್,ಯು.ಆರ್ ಅನ೦ತಮೂರ್ತಿ,ಭೈರಪ್ಪ ಮು೦ತಾದವರು ಕಮರ್ಶಿಯಲ್ ಅಲ್ಲವ೦ತೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ ನಿಮ್ಮ ತುಂತುರು ಪುಸ್ತಕ ಪರಿಷೆ ಕುರಿತ ಬರಹಕ್ಕೆ ನನ್ನ ಬಹಳ ಲೇಟ ಆದ ಪ್ರತಿಕ್ರಿಯೆ ಇದೆ.. ಒಮ್ಮೆ ನೋಡಿ,... ನಾ ಅದಾಗಲೇ ಒಮ್ಮೆ ಕೆಲಿದೀನ್ ನಿಮ್ಮನ್ನ, ಆಗಾಗ ನೀವು ನಿಮ್ಮ ಹಳೆಯ ಬರಹಗಳನ್ನ ನೋಡುತ್ತಿರಿ, ಕೆಲವಕ್ಕೆ ನಮ್ಮಂತವರ ಲೇಟ ಆದ ಪ್ರತಿಕ್ರಿಯೆಗಳು ಇರುತ್ತವೆ:)) http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲೆ ನನಗೆ ಅನಿಸುತ್ತಿರುವುದು, ಕತೆ ಎಂದು ಕೊಂಡರು ಅದು ಸ್ವತಂತ್ರವಾಗಿರುವದಿಲ್ಲ, ಕತೆಗಾರನ ಮನೋಧರ್ಮವನ್ನು , ಅವನು ನಂಬಿರುವ ತತ್ವಗಳನ್ನು ಅವನು ರಚಿಸುವ ಕತೆಯ ಕಲ್ಪನೆ ಮೀರಲಾರದು ಎಂದೆ ಅನಿಸುತ್ತದೆ. ಈ ನಿಮ್ಮ ಸಾಲುಗಳು ಸತ್ಯ. ಕಲ್ಪನೆ ಕೂಡ ನಮ್ಮ ಪರಿಧಿಯನ್ನು ಮೀರಿ ಹೋಗಲಾರದು. ಕಂಡದ್ದು, ಕೇಳಿದ್ದು ಎಲ್ಲದರ ಸುತ್ತವೇ ನಮ್ಮ ಕಲ್ಪನೆ ಕೂಡ ಗಿರಕಿ ಹೊಡೆಯುತ್ತದೆ. ಚನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಅಭಿಪ್ರಾಯವನ್ನು ಅನುಮೋದಿಸಿದ ತಮ್ಮ ಅಭಿಪ್ರಾಯಕ್ಕಾಗಿ ವಂದನೆಗಳು ಹೊಸವರ್ಷದ ಶುಭಾಷಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.