ಒಮ್ಮೊಮ್ಮೆ ಅನ್ಸುತ್ತೆ.....2

3.5

ಒಮ್ಮೊಮ್ಮೆ ಅನ್ಸುತ್ತೆ
ಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,
ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆ
ನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿರೋದು ಅಂತ !.

ಒಮ್ಮೊಮ್ಮೆ ಅನ್ಸುತ್ತೆ...
ಈ ಮನುಷ್ಯ ಯಾವತ್ತು ಸುಖವಾಗಿರೊಲ್ಲ ಅಂತ, ಸದಾ ಗೊಣಗಾಟನೆ
ಯಾವತ್ತು ಕೇಳಿದ್ರು ನಿನ್ನೆ ಸುಖವಾಗಿದ್ದೆ ಅಂತಾನೆ!

ಒಮ್ಮೊಮ್ಮೆ ಅನ್ಸುತ್ತೆ
ಈ ಸೆಲ್ ಫೋನು, ನೆಟ್ , ಫೇಸ್ ಬುಕ್ಕು, ಇವೆಲ್ಲ ಇಲ್ದೆ ಪಾಪ ಆ ಕಾಡ್ಜನ
ಶಿಲಾಯುಗ್ದಲ್ಲಿ ಹೇಗೆ ಬದ್ಕಿದ್ರೊ ಅಂತ!

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಒಮ್ಮೊಮ್ಮೆ ಅನ್ಸುತ್ತೆ ಈ ಸೆಲ್ ಫೋನು, ನೆಟ್ , ಫೇಸ್ ಬುಕ್ಕು, ಇವೆಲ್ಲ ಇಲ್ದೆ ಪಾಪ ಆ ಕಾಡ್ಜನ ಶಿಲಾಯುಗ್ದಲ್ಲಿ ಹೇಗೆ ಬದ್ಕಿದ್ರೊ ಅಂತ!<< ತುಂಬಾ ನೆಮ್ಮದಿಯಿಂದಿದ್ದರು, ಶಿಲಾ ಯುಗ ಏಕೆ? ಈಗ್ಗೆ 25‍, 30 ವರ್ಷದ ಹಿಂದೆ ಇದ್ಯಾವುದೂ ಇಲ್ಲದೆ ನಾವುಗಳೆ ಇರಲಿಲ್ಲವೆ? ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಅದನ್ನು ಹೇಳಲೆಂದು ಅಲ್ವೆ ಬರೆದಿರೋದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೊಮ್ಮೆ ಅನ್ಸುತ್ತೆ ಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ, ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆ ನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿರೋದು ಅಂತ !. ಒಮ್ಮೊಮ್ಮೆ ಅನ್ಸುತ್ತೆ... ಈ ಮನುಷ್ಯ ಯಾವತ್ತು ಸುಖವಾಗಿರೊಲ್ಲ ಅಂತ, ಸದಾ ಗೊಣಗಾಟನೆ ಯಾವತ್ತು ಕೇಳಿದ್ರು ನಿನ್ನೆ ಸುಖವಾಗಿದ್ದೆ ಅಂತಾನೆ! -------------------------------------------------------------------------------------------- ಗುರುಗಳೆ ಅರ್ಥ ಪೂರ್ಣ ಸಾಲುಗಳು................ ನನಗೆ ಮೊದಲ ಎರಡು ಸಾಲುಗಳು ಹಿಡಿಸಿದವು.. ನೀವ್ ಇತ್ತೀಚೆಗೆ ಬರಹಗಳನ್ನ ಬರೆಯುವುದು ತುಂಬಾ ಕಡಿಮೆ ಆಗಿದೆ.... ಅದರಲ್ಲೋ ಆ ದೆವ್ವಗಳ ಬಗ್ಗೆ....!! ಶುಭ ದಿನ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಪ್ತಗಿರಿಯವರೆ ನಿಜ ಬರೆಯುವುದು ಏಕೊ ಕಡಿಮೆಯಾಗಿದೆ ಬರೆಯಲು ಎರಡು ಕತೆಗಳು ತಲೆಯಲ್ಲಿವೆ ಸಮಯವು ಆಗಾಗ್ಯೆ ಸಿಗುತ್ತಿದೆ, ಎಲ್ಲವು ಇದೆ .. ಆದರೆ .. . ಏಕೊ ಬರೆಯಲು ಆಗುತ್ತಿಲ್ಲ ! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಗುರುಗಳೆ ಒಮ್ಮೊಮ್ಮೆ ಸಿಸ್ಟಮ್ ಮುಂದೆ ಕೂತು ಏನಾರಾ ಬರೆಯ ಹೊರಟರೆ ಏನೂ ಹೊಳೆಯಲ್, ಆದರೆ ಎಲ್ಲೋ ಬಸ್ಸಲ್ಲಿ ಹೋಗುವಾಗ , ರಸ್ತೆಲಿ ನಿಂತಾಗ , ಏನೋ ಗಮನಿಸುವಾಗ ಏನೋ ಹೊಳೆದು ಆಗಲೇ ಬರೆಯಬೇಕು ಅನ್ನಿಸುತ್ತೆ, ನನ್ನ ಕೆಲ ಬರಹಗಳು ರೂಪು ತಳೆದದ್ದೆ ಹಾಗೆ!! ಈಗ ನನಗೂ ಬರೆಯಲು ಏನೂ ಸಿಗದೆ ಎಲ್ಲೆಡೆ ನೋಡುತ್ತಿರ್ವೇ- ನೋಡುವ ಏನಾರಾ ವಿಷ್ಯ ಸಿಗಬಹುದು:)) ಮತ್ತೆ ಹೇಗಿದೀರಾ? ಏನಾರಾ ವಿಶೇಷ? ಶುಭವಾಗಲಿ.. ***********ಶುಭ ದಿನ***********
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.