ಒಮ್ಮೊಮ್ಮೆ ಅನ್ಸುತ್ತೆ..

4.166665

ಒಮ್ಮೊಮ್ಮೆ ಅನ್ಸುತ್ತೆ..
ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.
ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತ
ಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?

ಒಮ್ಮೊಮ್ಮೆ ಅನ್ಸುತ್ತೆ..
ನಮ್ಮಲ್ಲಿ ಕಳ್ರೆ ಜಾಸ್ತಿ ಆಗ್ಬಿಟ್ರ ಅಂತ, ಸುಮ್ನೆ ಊರಿಗೊಂದು ಜೈಲು ಕಟ್ಟೊ ಬದ್ಲು,
ನಾಡಿಗೆ, ಗೋಡೆ ಕಟ್ಸಿಬಿಟ್ರೆ, ಕರ್ಚಾದ್ರು ಉಳಿಯುತ್ತೆ.

ಒಮ್ಮೊಮ್ಮೆ ಅನ್ಸುತ್ತೆ..
ಎಲ್ಲರು ಈ ಹೊಸ ಟೆಕ್ನಾಲಜಿ, ಕ್ಯಾಮ್ರ , ಎಲ್ಲದ್ರು ಬಗ್ಗೆ ಹುಷಾರಿರಬೇಕು. ಅಂತ.
ನೋಡಿ ವಿರೋದ ಪಕ್ಷವೆಲ್ಲ ಸೇರಿದ್ರು ಮಾಡಕ್ಕಾಗದ ಕೆಲ್ಸಾನ ,
ಒಂದು ಕ್ಯಾಮ್ರ ಕಣ್ಣು ಮಾಡ್ಬಿಡ್ತು, ಮೂರು ಮೂರು ಜನ ಮಿನಿಷ್ಟ್ರನ್ನ ಒಟ್ಟೊಟ್ಗೆ
ರಾಜ್ನಾಮೆ ಕೊಡೊ ಹಾಗೆ ಮಾಡ್ಬುಡ್ತು!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ಸಾರಥಿ ಯವರೆ ವಂದನೆಗಳು ' ಒಮ್ಮೊಮ್ಮೆ ಅನ್ಸತ್ತೆ ' ಒದಿದೆ ಎಷ್ಟು ಖಚಿತವಾಗಿ ಕಡಿಮೆ ಶಬ್ದಗಳಲ್ಲಿ ವರ್ತಮಾನದ ಸತ್ಯಗಳನ್ನು ದಾಖಲಿಸಿದ್ದೀರಿ. ಹೌದು ಬಿಳಿ ಕೂದಲಿಗೆ ಕರಿ ಬಣ್ಣ ಹಚ್ಚೊಕಿಂತ ಕರಿ ಕೂದಲಿಗೆ ಬಿಳಿ ಬಣ್ಣ ಹಚ್ಚಿ ಬಿಟ್ಟರೆ ಶ್ರಮ ಹಾಗೂ ಬಣ್ಣದ ಖರ್ಚಿನ ಉಳಿತಾಯ, ಅದರೆ ಮನುಷ್ಯನ ಯೌವನದ ಚಿರಂತನದ ಆಶೆಗೆ ಏನು ಹೇಳುತ್ತೀರಿ? ನನಗೆ ಒಮ್ಮೊಮ್ಮೆ ಅನಿಸುತ್ತೆ ಒಳ್ಳೆಯವರನ್ನು ಜೇಲಿನಲ್ಲಿ ಇಟ್ಟು ಕಳ್ಳ ಕಾಕರನ್ನು ಸಮಾಜ ವಿರೋಧಿ ಗಳನ್ನು ಹೊರಗೆ ಬಿಟ್ಟು ಬಿಡುವುದು ಕಡಿಮೆ ಖರ್ಚಿನ ಕೆಲಸವೆಂದು, ಇನ್ನು ಮೂರನೆಯ ವಿಷಯ ಕೆಮರಾ ಕಣ್ಣುಗಳು ಜಾಗೃತವಾಗಿವೆ ಎಂಬ ಪ್ರಜ್ಞೆಯೂ ಇಲ್ಲದ ಈ ಎಚ್ಚರಗೇಡಿ ನೀತಿಗೆಟ್ಟ ನಡವಳಿಕೆಗೆ ಏನು ಹೇಳಬೇಕು ಮೇಲಾಗಿ ಇವರನ್ನು ಬೆಂಬಲಿಸುವವರಿಗೆ, ಈ ಅಪರಾಧಿ ಪ್ರಜ್ಞೆ ಮತದಾರರಾದ ನಮ್ಮನ್ನು ಕಾಡದೇ ಹೋದರೆ ಈ ದೇಶಕ್ಕೆ ಭವಿಷ್ಯವಿಲ್ಲ, ಉತ್ತಮ ಬರಹ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದನ್ಯವಾದಗಳು ಪಾಟೀಲರೆ ತಮ್ಮ ಒಳ ದ್ಱುಷ್ಟಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಒಮ್ಮೊಮ್ಮೆ ಅಲ್ಲ, ಹಲವಾರು ಸಲ ಅನ್ನಿಸುತ್ತೆ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಅನ್ನಿಸುತ್ತೆ.. ಆದರೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪು ಮಾಡೋದನ್ನೇ ಅಭ್ಯಾಸ ಮಾಡಿಕೊಂಡು ಅದನ್ನೇ ಸರಿ ಎಂದು ಎಂದು ಸಾಧಿಸೋ ಇವರನ್ನು ಕಂಡಾಗ‌ ಒಮ್ಮೊಮ್ಮೆ ಅನ್ನಿಸುತ್ತೆ, ನಾನೇ ಸ‌ರಿ ಇಲ್ವೇನೋ ಅಂತ‌ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ್ನಿಸೊದೇನು .... ' ಸರಿ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆತ್ತಲೆ ಇರುವವರ ಸಾಮ್ರಾಜ್ಯದಲ್ಲಿ ಬಟ್ಟೆ ಹಾಕಿಕೊಂಡವನದೇ ನಾಚಿಕೆಗೇಡಿನ ವಿಷಯ ಅಂತ ಅನ್ನಿಸುತ್ತೆ ಹಾಗೆಂದು ನಾವೂ ಅವರಂತೆ ಇರಲಾಗುತ್ತದೆಯೇ ಪಾರ್ಥ ಸರ್?! ನಾವು ನಾವೇ ಅವರು ಅವರೇ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಶ್ರೀ ಧರ್ ಅವ್ರೆ- ಬಹು ದಿನಗಳ ನಂತರ ಸಂಪದಕ್ಕೆ ಮರಳಿದೀರಾ.. ಸಂತೋಷ.. ಸಕ್ರಿಯರಾಗಿರಿ.. ಶುಭ ದಿನ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರೇ, ನನ್ನದು ರಿಲಯನ್ಸ್ ಲ್ಯಾಂಡ್ ಕನೆಕ್ಷನ್ನು ನಾನು ಸುಮಾರು ಹತ್ತು ದಿವಸಗಳಷ್ಟು ಪ್ರವಾಸದಲ್ಲಿದ್ದಾಗ ನನ್ನ ಸರ್ವೀಸ್ ಡಿಸ್ ಕನೆಕ್ಟ್ ಮಾಡಿದ್ದಾರೆ; ಗಲಾಟೆ ಮಾಡಿದ ನಂತರ ಎರಡು ಸಾರಿ ರೀ ಕನೆಕ್ಟ್ ಮಾಡಿದ್ರು ಮತ್ತೆ ಅದೇನೋ ನನ್ನ ಪೇಮೆಂಟ್ ಅಪ್‍ಡೇಟ್ ಆಗಿಲ್ಲವಂತೆ ಅದನ್ನೇ ಸುಮಾರು ಇಪ್ಪತ್ತು ದಿವಸದಿಂದ ಹೇಳ್ತಾ ಇದ್ದಾರೆ. ಅವ್ರು ಹೇಳಿದಂತೆ ನನ್ನ ರಸೀದಿಯನ್ನು ಸ್ಕ್ಯಾನ್ ಮಾಡಿ ಅವರು ಹೇಳಿದ ಈ‍‍ ಮೇಲ್ ಐಡಿಗೂ ಕಳುಹಿಸಿ ಆಯ್ತು ಆರು ದಿನ ಆಯ್ತು ಆದರೂ ಏನೇನೋ ಕಾರಣ ಹೇಳಿ ನನ್ನ ಸರ್ವೀಸ್ ಅನ್ನ ಅಪ್ ಡೇಟ್ ಮಾಡ್ತಾ ಇಲ್ಲ. ಅದಕ್ಕೆ ಸಂಭಂದಪಟ್ಟವರನ್ನೆಲ್ಲಾ ಫೋನಿನಲ್ಲಿ ಭೇಟಿ ಮಾಡಿದ್ದಾಯಿತು. ಅನಿಲ್ ಅಂಬಾನಿಯೊಬ್ಬರನ್ನು ಬಿಟ್ಟು. ಇದನ್ನು ಯಾವ ರೀತಿ ಟ್ಯಾಕಲ್ ಮಾಡಬೇಕೋ ಅರ್ಥ ಆಗ್ತಾ ಇಲ್ಲ. ಸಂಪದಿಗರ್ಯಾರಾದರೂ ಸಲಹೆ ಕೊಟ್ಟರೆ ಅದರಂತೆ ನಡೆದು ಕೊಳ್ಳುತ್ತೇನೆ. ನಾನೂ ಎಲ್ಲ ಸಂಪದಿಗರನ್ನು ಬಹಳ ಕಾಲದಿಂದ ಮಿಸ್ ಮಾಡ್ಕೋತಾ ಇದೇನೆ. ಇದು ನಮ್ಮ ಕ್ಲಯಿಂಟಿನ ಆಫೀಸಿನಲ್ಲಿ ಓದಿ ಸ್ಪಂದಿಸ್ತಾ ಇದ್ದೇನೆ. ಬೇಗನೇ ನನ್ನ ಸಮಸ್ಯೆ ಸರಿಹೋಗ ಬಹುದೆಂದು ಆಶಿಸುತ್ತಿದ್ದೇನೆ. ಶ್ರೀಕರ್ ಅವರು ಕಳುಹಿಸಿದ ಒಂದು ರಸಮಯ ಮೇಲ್ ಅನ್ನು ಕನ್ನಡಕ್ಕೆ ಅನುವಾದಿಸಿ ನನ್ನ ಸರ್ವಿಸ್ ಪುನರಾರಂಭಗೊಂಡ ನಂತರ ಅಪ್ ಲೋಡ್ ಮಾಡುತ್ತೇನೆ. ಅಲ್ಲಿಯವರೆಗೂ ಎಲ್ಲ ಸಂಪದಿಗರಿಗೂ ನನ್ನ ಶುಭ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))) ಹೌದು ಶ್ರೀದರೆ ನಾನು ನಾವೆ ಅವರು ಅವರೆ.... ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೊಮ್ಮೆ ಮಾತ್ರ ಅನಿಸುವುದರಿ೦ದಲೇ ನಾವು ಹೀಗೇ ಇರುವುದು. ಯಾವಾಗಲೂ ಅನ್ನಿಸಿದರೆ ಎಲ್ಲಾ ಬದಲಾಗುತ್ತಿತ್ತೇನೋ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಂತ್ , ಶ್ರೀಕರ್, ಮಂಜುನಾಥ್ ಎಲ್ಲವು ಸರಿ ಹೋಗಿ ಬಿಟ್ಟರೆ ... ಆಮೇಲೆ ಎಲ್ಲ ಏನು ಮಾಡೋದು ಇದು ಹೀಗೆ ಇರುತ್ತೆ... ನಾವು ಹೀಗೆ ಇರ್ತೇವೆ.. ನೋಡಿ ಸ್ವಾಮಿ... ನಾವಿರೋದೆ ಹೀಗೆ.. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

-------------------------------------------------------------------------------- ಒಮ್ಮೊಮ್ಮೆ ಅನ್ಸುತ್ತೆ.. ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ. ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತ ಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ? ಒಮ್ಮೊಮ್ಮೆ ಅನ್ಸುತ್ತೆ.. ನಮ್ಮಲ್ಲಿ ಕಳ್ರೆ ಜಾಸ್ತಿ ಆಗ್ಬಿಟ್ರ ಅಂತ, ಸುಮ್ನೆ ಊರಿಗೊಂದು ಜೈಲು ಕಟ್ಟೊ ಬದ್ಲು, ನಾಡಿಗೆ, ಗೋಡೆ ಕಟ್ಸಿಬಿಟ್ರೆ, ಕರ್ಚಾದ್ರು ಉಳಿಯುತ್ತೆ. ------------------------------------------------------------------------ ಗುರುಗಳೆ ವಾಹ್ವ್!! ಸೂಪರ್ .... ಇಡೀ ಕವನವೇ ಹಿಡಿಸಿತು .. ಸಕತಾಗಿ ಬರ್ದಿದೀರಾ... ವಾಹ್ವ್!! ಮೊದಲ ಮಾತು ಕೊನೇ ಸಾಲುಗಳು :()))))೦ ಶುಭ ದಿನ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಪ್ತಗಿರಿಯವರೆ ಹೇಗೆ ಸಾಗಿದೆ ಓದು ಬಿಕಾಂ ನದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ ಓದು ಚೆನ್ನಾಗಿಯೇ ಸಾಗುತ್ತಿದೆ.. ಏನಾರಾ ನನ್ನ ಓದಿನ ಸಂಬಂಧಿ ಸಂಶಯ ಇದ್ರೆ ನಿಮಗೆ ಕೇಳುವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.