ಒಮ್ಮೊಮ್ಮೆ ಅನ್ಸುತ್ತೆ - ೫ [ ಛೆ! ಎಂತ ಮನುಷ್ಯನಿವನು ]

4

 ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ.
ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ ಯಾವ ದಿಕ್ಕಿನತ್ತ ಸಾಗಿದೆ ಎಂದು ಚಿಂತೆಯಾಗುತ್ತದೆ. ಕೊಂದಿರುವುದು ಒಬ್ಬನೆ ಒಬ್ಬ ವ್ಯಕ್ತಿ ಇರಬಹುದು,  ಆದರು ಅವನು ಈಗಿನ ಸಮಾಜದಲ್ಲಿ ಜೀವಿಸಿರುವ ವ್ಯಕ್ತಿಯೆ ಅನ್ನುವಾಗ ಅಂತಹ ಹೀನಮನಸಿನ ವ್ಯಕ್ತಿ ಸಮಾಜದಲ್ಲಿದ್ದಾನೆ ಅಂದರೆ ಅಂತಹ ಮನಸು ಬೆಳೆಯಲು ಕಾರಣವಾದ ನಮ್ಮ ಸಮಾಜ ಹಾಗು ಸಾಮಾಜಿಕ ಸ್ಥಿಥಿಗೆ ನಾವೆಲ್ಲರು ಪೂರ್ಣ ಹೊಣೆಯಲ್ಲವೆ.

    ಮತ್ತೆ ಇಂತಹ ಕ್ರೂರಮನಸಿನ ವ್ಯಕ್ತಿಗಳನ್ನು ಏನೆಂದು ಕರೆಯಬಹುದು
"ಕ್ರೂರ ಮೃಗ" ಎನ್ನಬಹುದೆ ಆದಾಗದು ಕಾಡಿನಲ್ಲಿರುವ ನಾವು ಕ್ರೂರಮೃಗವೆಂದು ಕರೆಯುವ ಹುಲಿ ಸಿಂಹಗಳಲ್ಲಿ ಸಹಿತ ಮಾತೃ ಹೃದಯವಿದೆ. ಅದು ಎಂದಿಗು ತನ್ನ ಮರಿಯನ್ನೆ ಕೊಲ್ಲದು.
 ಮತ್ತೆ ಏನು ಅನ್ನೋಣ
"ನರರಾಕ್ಷಸ" ಎಂದೆ. ಅದು ಸಹ ಆಗದು , ಯಾವ ರಾಕ್ಷಸನು ತನ್ನ ಮಗುವನ್ನು ಕ್ರೂರವಾಗಿ ಕೊಂದ ಉದಾಹರಣೆಯಿಲ್ಲ.
ಹಾಗಿರುವಾಗ ಬೇಡ ಬಿಡಿ ಅವನನ್ನು ಮನುಷ್ಯನೆಂದೆ ಕರೆಯೋಣ
ಛೆ! ಎಂತ ಮನುಷ್ಯನಿವನು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ಸರ್, ನಿನ್ನೆ ಈ ಕುರಿತಾದ ಸ್ಪೆಷಲ್ ಕಾರ್ಯಕ್ರಮವನ್ನು ಟಿ.ವಿ. 9 ನಲ್ಲಿ ನೋಡಿದೆ. ಎರಷು ನಿಮಿಷ ನೋಡುತ್ತಿದ್ದಂತೆಯೇ ಕರುಳು ಕಿವುಚಿ ಬಂದಂತಾಯ್ತು! ಇಂಥಹ ಮನುಷ್ಯರೂ ಇರುತ್ತಾರಾ; ಏಕೋ ನೆನಸಿಕೊಂಡರೇ ನಮ್ಮ ನಾಗರೀಕತೆ ಎತ್ತ ಸಾಗುತ್ತಿದೆ ಎಂದು ಭಯವಾಗುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವತ್ತಿನ ಕನ್ನಡಪ್ರಭ ಓದಿ, ಅದರಲ್ಲಿ ಒಂದು ಸುದ್ದಿ ಬಂದಿದೆ. ಇತ್ತೀಚೆಗೆ ಮಾನಸಿಕ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ, ಅದಕ್ಕೆ ಕಾರಣ ಇಂದಿನ ಜೀವನ ಶೈಲಿ, ಅವರು ಕೊಡುವ ಅಂಕಿ ಅಂಶಗಳ ಪ್ರಕಾರ ಶೇಕಡ 70 ರೋಗಗ್ರಸ್ತರಂತೆ. ಆದ್ದರಿಂದ ಮತ್ತಷ್ಟು ಮಾನಸಿಕ ರೋಗಿಗಳ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ಚಿಂತಿಸುತ್ತಿದೆಯಂತೆ. ‍ಅಂದರೆ ಸಮಸ್ಯೆಯ ಮೂಲ ಕಾರಣವನ್ನು ಹತ್ತಿಕ್ಕುವ ಬಗ್ಗೆ ಚಿಂತನೆ ಇಲ್ಲ, ಬರಿ ತಾತ್ಕಾಲಿಕ ಉಪಶಮದ ಬಗ್ಗೆ ಮಾತ್ರ ನಿಗ ವಹಿಸುತ್ತಿದ್ದೇವೆ. ಮೇಲೆ ನೀವು ಹೇಳಿರುವ ವಿಚಾರ ಕೇವಲ ಆರಂಭ ಅಷ್ಟೆ, ಪಾರ್ಥಸಾರತಿಗಳೆ. ಇನ್ನೂ ನಾವುಗಳು ತಿದ್ದಿಕೊಳ್ಳದಿದ್ದರೆ ಏನೇನು ಸುದ್ದಿಗಳನ್ನು ಕೇಳಬೇಕೋ, ನೋಡಬೇಕೋ....??. ಇಂಥಹ ಸಮಾಜಕ್ಕೆ ನಾವು ಸಾಕ್ಶಿಯಾಗಿದ್ದೂ, ಸುಮ್ಮನೆ ಬದುಕಿದ್ದೇವೆ ಎಂಬುದು ವ್ಯಥೆಯಾಗುತ್ತಿದೆ. ದನ್ಯವಾದಗಳು ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ ದೂರದ ಹಳ್ಳಿಯಲ್ಲಿದ್ದ ನಂಗೆ ಈ ಯಾವ ವಿಚಾರವೂ ಗೊತ್ತಾಗಿರಲಿಲ್ಲ ,ಈಗ ಮರಳಿ ಬೆಂಗಳೂರಿಗೆ ಬಂದಾದ ಮೇಲೆ ಇವತ್ತಿನ ಪತ್ರಿಕೆಯಲ್ಲಿ(ವಿ ಕ ) ತನಗೆ ಹೆಣ್ಣು ಮಗು ಆಗಿದೆ ಎಂಬ ಕಾರಣಕ್ಕೆ ಮಗುವಂನ ಗೋಡೆಗೆ ಎತ್ತಿ ಎಸೆದ ಆ ಮನುಷ್ಯ ಎಂಬ ಪ್ರಾಣಿಯ ಬಗ್ಗೆ ಓದಿದೆ... ವೈದ್ಯರ ಸತತ ಪ್ರಯತ್ನದ ನಂತರವೂ ಮಗು ಉಳಿಯಲಿಲ್ಲ, ಆ ಮನುಷ್ಯನಿಗೇನೋ ಶಿಕ್ಷೆ ಆಗಬಹುದು ಅಥವಾ ಕೇಸುಗಳು ವರ್ಷಗಟ್ಟಲೇ ಹಿಡಿದು ಅಥವಾ ಸಾಕ್ಷ್ಯಾದಾರಗಳ ಕೊರತೆ ಕಾರಣವಾಗಿ ಮುಂದೊಮ್ಮೆ ಬಿಡುಗಡೆಯೂ ಆಗಬಹುದು!! ಆದರೆ ಕಳೆದು ಹೋದ ಕಂದ ಮತ್ತು ಅದರಿಂದ ಆದ ತಾಯಿಯ ದುಖಕ್ಕೆ-ಮಾನಸಿಕ ಆಘಾತಕ್ಕೆ ಕೊನೇ ಎಲ್ಲಿ?.. ನಾಗರಿಕ ಸಮಾಜದಲ್ಲಿ ಈ ತರಹದ ಅನಾಗರಿಕರು ಇರುವರು ಅಂತ ಗೊತ್ತಾಯ್ತು.. ನಾವೇ ಸಮಾಜ, ನಾವೆಲ್ಲ ನಾಗರಿಕರು ಇದ್ಕೆ ಹೊಣೆ ಆಗಿದ್ದೀವಿ ಅನ್ಸುತ್ತೆ.. ಹೆಣ್ಣು ಅಂತ ತಾತ್ಸಾರ ತೊರ್ಸೊ ಆ ಮನುಷ್ಯನಿಗೆ ತಾ ಸಹ ಹೆಣ್ನಿಂದಲೇ ಜನಿಸಿದ್ದು ಮರೆತು ಹೋಯ್ತಾ?... ಸರಕಾರ- ಸಂಘ- ಸಂಸ್ಥೆಗಳ ಪ್ರಯತ್ನ(ಹೆಣ್ಣು ಗಂಡು ಸಮಾನರು ಇತ್ಯಾದಿ ತಿಳುವಳಿಕೆ ನೀಡೋ ಕಾರ್ಯಕ್ರಮಗಳು)ಕ್ಕೆ ಇದು ಹಿನ್ನಡೆ.. ಜನ್ಮಕ್ಕೆ ಕಾರಣ ಆದ ಪಿತ ಮಗುವಿನ ಪಾಲಿಗೆ ಯಮ ಆಗಿದ್ದು ಖೇದ ಕರ ... ಸಕಾಲಿಕ ಬರಹ ಬರೆದು ನಿಮ್ಮ ಮನದಾಳವನ್ಣ ತೋಡಿಕೊಂಡಿದೀರಾ.. ಮುಂದೆಂದೂ ಈ ತರಹದ ದುರ್ಘಟನೆಗಳು ನಡೆಯದಿರಲಿ ಎಂಬ ಹರಕೆ ನನ್ನದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಕಾರ ಮನುಷ್ಯರಿದ್ದು, ವರ್ತನೆ ಮೃಗೀಯವಾಗಿದ್ದರೆ ಅವರನ್ನು ಲೆಕ್ಕಕ್ಕೆ ಮಾತ್ರ ಮನುಷ್ಯರೆನ್ನಬಹುದು, ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂತಹುದೆಲ್ಲ ಜಾಸ್ತಿಯಾಗಲು ನಮ್ಮ ಸಾಮಾಜಿಕ ವರ್ತನೆಯು ಕಾರಣವಾಗಿದೆ ದೊಡ್ಡವರು ಇಂತಹ ತಪ್ಪುಗಳನ್ನು ಮಾಡಿದಾಗ ಅದು ಸರಿ ಎಂಬಂತೆ ಬಿಂಭಿಸಲಾಗುತ್ತೆ ತಮ್ಮ ಹೆಂಡತಿ ಮಕ್ಕಳಿಗೆ ಹೊಡೆದರು ದೊಡ್ಡವರೆಲ್ಲ ಅವರ ರಕ್ಷಣೆಗೆ ನಿಲ್ಲುತ್ತಾರೆ ಮಂತ್ರಿಗಳಿಗೆ ಸಂಭಂದ ಪಟ್ಟವರು ಎಲ್ಲಿಯೋ ಹೋಗಿ ನೇಣು ಬಿಗಿದುಕೊಂಡರು ನಂತರ ಎಲ್ಲ ತಣ್ಣಾಗಾಗುತ್ತೆ ಕೋರ್ಟ್ ಗಳು ಸಹ ಅವರ ಬಗ್ಗೆ ತುಸು ಮೃದು ದೋರಣೆ ಅನುಸರಿಸುತ್ತವೆ ಹೀಗಾಗಿ ಸಾಮಾನ್ಯ ಜನರಿಗೆ ಇಂತಹುದೆಲ್ಲ ಮಾಡಲು ದೈರ್ಯ ಬರುತ್ತದೆ ಯಥಾರಾಜ ತಥಾ ಪ್ರಜಾ ಪ್ರತಿಕ್ರಿಯೆ ನೀಡಿದ ಶ್ರೀಧರ್, ರಾಮಮೋಹನ, ಸಪ್ತಗಿರಿ ಹಾಗು ನಾಗರಾಜ್ ಸರ್ ಎಲ್ಲರಿಗೂ ನನ್ನ ಆತ್ಮೀಯ ವಂದನೆಗಳು **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾಥಿಯವರೇ, ನಿಮ್ಮ ಮಾನಸಿಕ ತುಮುಲ ನಮಗೆ ಅರ್ಥವಾಗುತ್ತದೆ. ಆದರೇ ಒಮ್ಮೆ ಇದರ ಕುರಿತು ಮೂಲವನ್ನು ಅನ್ವೇಷಿಸಿದರೆ ನಮಗೆ ಸುಲಭವಾಗಿ ಉತ್ತರ ಸಿಗುತ್ತದೆ. ನನ್ನ ಚಿಂತನೆಯಂತೆ ಇದು ಸಂಸ್ಕಾರಕ್ಕೆ ಸಂಬಂಧಪಟ್ಟದ್ದು ಎನಿಸುತ್ತದೆ. , ಮಾತಾ‍ಪಿತರ ಆರೈಕೆ, ನಾವು ಬೆಳೆದ ಪರಿಸರ, ಸ್ನೇಹಿತರು, ನೋಡುವ ನೋಟ, ನಡವಳಿಕೆ ಇವುಗಳಿಂದ ಮಾನವ ತನ್ನಲ್ಲಿ ಸಾಮಾಜಿಕ ಕಳಕಳಿಯನ್ನು ರೂಢಿಸಿಕೊಳ್ಳುತ್ತಾನೆ. ಇವುಗಳಲ್ಲಿ ವ್ಯತ್ಯಾಸವಾದಾಗ ಈ ರೀತಿಯ ರಾಕ್ಷಸೀ ಕ್ಱುತ್ಯಗಳು ನೆಡೆಯುತ್ತವೆ. ಮಾನವೀಯತೆಯಿರುವ ಯಾರೂ ಇದನ್ನು ಸಹಿಸಲಾರರು. ಎಲ್ಲರ ಉದ್ಘಾರವೂ ಒಂದೇ... ಛೇ...ಹೀಗಾಗಬಾರದಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.