ಒಮ್ಮೊಮ್ಮೆ ಅನ್ಸುತ್ತೆ _ ೪

3.666665

 ಈದಿನ ರಾಮನವಮಿ ಎಲ್ಲೆಲ್ಲಿಯು ಸಾರ್ವಜನಿಕ ಸಮಾರಂಬ ಹಬ್ಬ. ನಮ್ಮ ಮನೆಯ ಹತ್ತಿರವಿರುವ ದೇವಾಲಯದಲ್ಲು ರಾಮನವಮಿಯ ಸಡಗರ ಹಾಗಾಗಿ ಎಲ್ಲೆಲ್ಲು ದೊಡ್ಡ ದೊಡ್ದ ಬ್ಯಾನರ್ ಗಳು ಮರೆತೆ ಝಿ-ಟೀವಿಯ ಬೃಹುತ್ ಭ್ರಹ್ಮಾಂಡ ಕಾರ್ಯಕ್ರಮದ ನರೆಂದ್ರಶರ್ಮ ಎಂಬುವರು ಬಂದು ಎಲ್ಲರಿಗು ಪ್ರವಚನ ನೀಡಿ ಹೋಮವನ್ನು ನೆರವೇರಿಸುವರಂತೆ ಹಾಗಾಗಿ ಅಷ್ಟು ದೊಡ್ಡ ಬ್ಯಾನರ್ ಗಳು. ನೋಡಿದೆ ದೊಡ್ಡ ಕಟೌಟ್ ತುಂಬ ರಾರಾಜಿಸುವ ಮುಖ,ನಗು ಮುಖ ನರೇಂದ್ರಶರ್ಮರದು ಭೃಹುತ್ ಭ್ರಹ್ಮಾಂಡದವರಲ್ಲವೆ ಅವರ ಶರೀರ ಹಾಗು ಶಾರೀರವು ಬೃಹುತ್  ಇರಲಿ ಬಿಡಿ. ಪಕ್ಕದಲ್ಲಿ ಹನುಮ ದ್ಯಾನದಲ್ಲಿ ಕುಳಿತ ದೊಡ್ಡ ಪೋಟೊ. ಮತ್ಯಾರಾರದೊ ಚಿತ್ರಗಳು, 

ಕಡೆಗೆ ಹಿನ್ನಲೆಯಲ್ಲಿ ಹಿಂದೆ ಪಾಪ ಚಿಕ್ಕದಾಗಿ ಬಿಲ್ಲು ಹಿಡಿದು ಸಂಕೋಚದಿಂದ ನಿಂತ ರಾಮ!
 
ಜೈ ಶ್ರೀರಾಮ್ ಎಂದೆ ಗಲಾಟೆಯಲ್ಲಿ ಅವನಿಗೆ ಕೇಳಿಸಿತೊ ಇಲ್ಲವೊ ತಿಳಿಯಲಿಲ್ಲ   
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈಗಿನ "ಢಾಂಬಿಕತೆ " ಯ ಯುಗದಲ್ಲಿ ನಿಮ್ಮ ಕೂಗು ಯಾರಿಗೂ ಕೇಳಿಸಲ್ಲ ಬಿಡಿ.....!! ಆದರೆ ಶ್ರೀರಾಮನಿಗೆ ಮಾತ್ರ ಖಂಡಿತ ಕೇಳಿಸಿರುತ್ತೆ. ......ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

' ಅಂಡಾಂಡ ಬ್ರಹ್ಮ'ರು ಪ್ರತಿಕ್ರಿಯಿಸಿಲ್ಲವಲ್ಲಾ!! ಅವರಿಗೆ ಬೇಸರವಾಗಿರಬಹುದು!! :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್, ಈದಿನ ಹೀಗೂ ಆಚರಿಸಬಹುದೆಂದು ಗೊತ್ತಿರಲಿಲ್ಲ. ಮುಂದಿನ ಬಾರಿ ಅವರಿಗಿಂತ ದೊಡ್ಡ ಕಟೌಟ್ ಹಾಕಿ ಪ್ರವಚನ ಇತ್ಯಾದಿ ಇತ್ಯಾದಿ ಮಾಡುವೆನು. :) -ಅಂ.ಸ್ವಾಮಿ. *********** ಪಾರ್ಥಸಾರಥಿಯವರೆ, ಎಲ್ಲೆಲ್ಲಿ ಪಾನಕ ಸೇವೆ ನಡೆಯುತ್ತಿದೆಯೋ ಅಲ್ಲೆಲ್ಲಾ ಹೀಗೆ ರಾಜಕೀಯ/ಮರಿಪುಡಾರಿಗಳು+ಅವರ ಬಾಲಗಳ ಚಿತ್ರದ ನಡುವೆ ಎಲ್ಲೋ ಒಂದು ಕಡೆ ರಾಮನ ಚಿತ್ರವಿತ್ತು ! (ಪಾನಕ ಕುಡಿದು ಕುಡಿದು ಸಾಕಾಯಿತಾ ಅಂದ್ರಾ?) ******* ಒಮ್ಮೊಮ್ಮೆ ಅನ್ಸುತ್ತೆ _೪ ಬಿಗಿಯೋಣವಾ ಅಂತ..ನಾ? -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಬುತ! ಒಮ್ಮೊಮ್ಮೆ ಅನ್ಸುತ್ತೆ _೪ ಬಿಗಿಯೋಣವಾ ಅಂತ..ನಾ? ಕಾಮೆಂಟ್ ಆಪ್ ದ ಇಯರ್ 2012 ! ನನಗೆ ಇಷ್ಟವಾಯ್ತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಅಂಡಾಂಡ ಬ್ರಹ್ಮ'ರು ಪ್ರತಿಕ್ರಿಯಿಸಿಲ್ಲವಲ್ಲಾ!! ಅವರಿಗೆ ಬೇಸರವಾಗಿರಬಹುದು!! :) ಅಂಡಾಂಡ ಭ್ರಹ್ಮರು ನಿಮ್ಮ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ್ದಾರೆ ನೋಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಆ ಸ್ವಾಮಿಗಳೇ ಬ್ಯಾನರ್ ಪೂರ್ತಿ ಕಾಣ್ಸಿದ್ರೆ ರಾಮಂಗೆ ಎಲ್ಲಿಯ ಜಾಗ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟು ದೊಡ್ಡ ಬ್ಯಾನರ್ ತಯಾರಿಸಬಹುದೇ...?? ಅದಕ್ಕೆ ರಾಮನ ಗತಿ... ರಾಮ ರಾಮ..!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))) ದೊಡ್ಡ ಬ್ಯಾನರೆ ! ಹೌದು ಬೇಕು ಅಂಡಾಂಡಬಂಡರಿದ್ದಾಗ ** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಮ ಬಿದಿ ಚುರ್ಮುರಿ ತಿನ್ಕೋಂಡು ಬಂಡೆ ಮೇಲೆ ಕುತೀರ್ತಾನೆ ಪಾಪ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಡೆಗೆ ಹಿನ್ನಲೆಯಲ್ಲಿ ಹಿಂದೆ ಪಾಪ ಚಿಕ್ಕದಾಗಿ ಬಿಲ್ಲು ಹಿಡಿದು ಸಂಕೋಚದಿಂದ ನಿಂತ ರಾಮ! ಜೈ ಶ್ರೀರಾಮ್ ಎಂದೆ ಗಲಾಟೆಯಲ್ಲಿ ಅವನಿಗೆ ಕೇಳಿಸಿತೊ ಇಲ್ಲವೊ ತಿಳಿಯಲಿಲ್ಲ --------------------------------------------------------------------------- ಗುರುಗಳೆ- ಅವರು ತಮ್ಮದೇ ಫೋಟೋಗಳನ್ನ ಇಡೀ ಬ್ಯಾನರ್ ತುಂಬಾ ಹಾಕುವವರಿದ್ದಾರೇನೋ!! ಆಆದ್ರೆ ಸಮಯ ಸಂದರ್ಭಕ್ಕೆ ತಕುದಾದ ಆ ಚಿತ್ರವನ್ಣ ಚಿಕ್ಕದಾಗಿ ಯಾದರೂ ಹಾಕಿ ಜನ ಅತ್ತ ಕಡೆ ನೋಡುವಂತೆ ಮಾಡಿರ್ವರೂ.... ಅದೇ ಸಮಾಧಾನ... ಗಣೇಶ್ ಅಣ್ಣ ಅವ್ರ ಕಾಮೆಂಟ್ ಆಫ್ ದ್ ಯಿಯರ್ ಓದಿ :())) ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಊರಿನಿಂದಲು ಪ್ರತಿಕ್ರಿಯಸುತ್ತಿದ್ದೀರಿ ! ಅದ್ಬುತ! ಬೇಗ ಬೆಂಗಳೂರಿಗೆ ಬನ್ನಿ ! ಪಾಪ ಗಣೇಶರು ಕಾಡಿನಲ್ಲಿ ದಾರಿ ಕಳೆದ ಆನೆಮರಿಯಂತಾಗಿದ್ದಾರೆ ಯಾವುದಕ್ಕು ಪ್ರತಿಕ್ರಿಯೆ ನೀಡಬೇಕು ಎಂದು ಅವರಿಗೆ ತೋಚುತ್ತಿಲ್ಲ! *** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ ಹೇಗಿದೀರಿ? ಬೆಂಗಳೂರ ಮತ್ತು ರಾಯ ಚೂರಿನ ಬಿಸಿಲಿಗೂ ಅಸ್ತೇನೂ ಬದಲಾವಣೆ ಇಲ್ಲ...:())) ಇನ್ನೂ ಒಂದು ವಾರ ಅಸ್ಟೆ ಬರುವೆ- ಸಹೋದರಿಯ ಹೆರಿಗೆ ಆಯ್ತು, ಗಂಡು ಮಗು, ಒಂದು ವಾರ ಆಸ್ಪತ್ರೆಲಿ ಅಡ್ಮಿಟ್ ಅದ್ಕೆ... ಎಲ್ಲಿದ್ದಾರೇನು ? ಎಂತಿದ್ದಾರೇನು? ಸಂಪದ ನಾ ಮರೆವೇನೇ? ಗಣೇಶ್ ಅಣ್ಣ ನಿಮ್ಮನೆಲ್ಲ ನಾ ಮರೆವೇನೇ?...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಗಳೇ, ನಿಮಗ್ಯಾರಿಗೂ ರಾಮನ ಬ್ಯಾನರ್ ಏಕೆ ಸಣ್ಣಗಿದೆ ಎನ್ನುವ ತತ್ವ ಅರ್ಥವಾಗಿಲ್ಲ. ದೇವರು ಹಾಗೆಲ್ಲಾ ಪಬ್ಲಿಕ್ ಅಗಿ ಕಾಣಿಸಿಕೊಳ್ಳಲ್ಲ; ಕೇವಲ ನಿಮ್ಮಂತಹ ಭಕ್ತರಿಗೆ ಮಾತ್ರ ಸೂಕ್ಷ್ಮರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಅದಕ್ಕಾಗಿ ಅವನ ಚಿತ್ರವನ್ನು ಚಿಕ್ಕದಾಗಿ ಹಾಕಿದ್ದಾರೆ. :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.