ಒಪೇರಾದಲ್ಲಿ ಫಾಂಟ್ ತೊಂದರೆ

0

ಉಬುಂಟು(11.04)ನಲ್ಲಿ  ಕನ್ನಡ ಯೂನಿಕೋಡ್ ಅಕ್ಷರಗಳು ಎಲ್ಲ ತಂತ್ರಾಂಶಗಳಲ್ಲಿಯೂ ಸರಿಯಾಗಿ ಕಾಣುತ್ತದೆ ಎಂದುಕೊಂಡಿದ್ದೆ. ಆದರೆ ಮೊನ್ನೆ ಹೊಸದಾಗಿ ಮಾಡಿದ ಒಂದು ಕನ್ನಡ ಸೈಟನ್ನು ಬೇರೆ ಬೇರೆ ಬ್ರೌಸರುಗಳಲ್ಲಿ ಟೆಸ್ಟ್ ಮಾಡಬೇಕಿತ್ತು. ಅದಕ್ಕೆಂದೇ ಒಪೇರಾವನ್ನು ಇನ್ಸ್ಟಾಲ್ ಮಾಡಿಕೊಂಡೆ. ಆದರೆ ಅದರಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಒತ್ತಕ್ಷರಗಳೆಲ್ಲಾ ಒತ್ತೊತ್ತಾಗಿ ಸೇರಿಕೊಂಡು ಓದಲಸಾಧ್ಯವಾಗಿ ಕಾಣುತ್ತಿದೆ. ಅದನ್ನು ಪರಿಶೀಲಿಸುವಷ್ಟು ತಾಳ್ಮೆ ಇಲ್ಲ. ಯಾರಾದರೂ ರೆಡಿಮೇಡ್ ಪರಿಹಾರ ಹೊಂದಿದ್ದರೆ ದಯವಿಟ್ಟು ತಿಳಿಸಿ. :-)

ಧನ್ಯವಾದಗಳು..

ಸ್ಕ್ರೀನ್ ಶಾಟ್‌ಗಳು:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಒಪೆರ ಮಿನಿ ಬ್ರೌಸೆರ್ನಲ್ಲಿ ನನ್ನ ಆನ್ಡ್ ರೈಡ್ ಮೊಬೈಲ್ ಫೋನೆಗೆ ಈ ರೀತಿ ಸೆಟ್ ಮಾಡಿದ ಮೇಲೆ ಸಂಪದ ಮತ್ತಿತರ ಕನ್ನಡ ವೆಬ್ ತಾಣಗಳನ್ನೂ ಓದಲು ಸಹಾಯ ಆಯಿತು . ಬಹುಶ ಇದೆ ಸೆಟ್ಟಿಂಗ್ ನಿಮಗೂ ಸಹಾಯವಾಗಬಹುದು. http://veerasundar.c... ೧) Open the address about:config in your opera mini browser. This will open the browser’s option page. ೨) Scroll down until you see something like this: Use bitmap fonts for complex scripts. ೩) Set the above option value to yes and then click on Save button.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬರೆದಿರುವ ಮಾಹಿತಿ ಬಿಟ್ ಮ್ಯಾಪ್ ರೂಪದಲ್ಲಿ ಕನ್ನಡ ಡಿಸ್ಪ್ಲೇ ಕುರಿತು. ಒಪೆರಾ ಬ್ರೌಸರಿನಲ್ಲಿ (ಮೊಬೈಲ್ ಹೊರತಾಗಿ) ಕನ್ನಡ ಅಕ್ಷರಗಳು ಸರಿಯಾಗಿ ಬರದಿರುವ ತೊಂದರೆ ಮುಂಚಿನಿಂದ ಇರುವಂತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಷಃ closed source ಅಪ್ಲಿಕೇಶನ್‌ಗಳ ಹಣೆಬರಹವೇ ಇಷ್ಟು ಅಂತ ಕಾಣ್ಸುತ್ತೆ! ಸಮಸ್ಯೆಗಳನ್ನು ಅವರು ಸರಿಮಾಡುವುದೂ ಇಲ್ಲ, ಬೇರೆಯವರಿಗೆ ಮಾಡಲು ಬಿಡುವುದೂ ಇಲ್ಲ.. ಒಟ್ಟಿನಲ್ಲಿ ಬಳಕೆದಾರರು ಚಾತಕ ಪಕ್ಷಿಯಂತೆ ಕಾಯುತ್ತಾ ಕೂರಬೇಕು.. (ಮೂರು ವರ್ಷದ ಹಿಂದೆ ಓಂಶಿವಪ್ರಕಾಶ್ ಇದೇ ತೊಂದರೆ ಬಗ್ಗೆ ಬರೆದ ಬರಹ ಇಲ್ಲೇ ಕೆಳಗೆ ಸಿಕ್ಕಿತು! http://sampada.net/b... )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ‌ wordpad ನಲ್ಲಿ ಕನ್ನಡ ಟೈಪ್ ಮಾಡಿದ ನ0ತರ‌ ಅದರಲ್ಲಿ ಒಟ್ಟು ಎಷ್ಟು ಪದಗಳಿವೆ ಅ0ತ count ತೆಗೆದುಕೊಳ್ಳಲು ಸಾದ್ಯವ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಂ.ಎಸ್.ವರ್ಡ್‌ನಲ್ಲಿ ಈ ಸೌಲಭ್ಯ ಇದೆ, ಆದರೆ ವರ್ಡ್‌ಪ್ಯಾಡ್‌ನಲ್ಲಿ, ನೋಟ್‌ಪ್ಯಾಡ್‌ನಲ್ಲಿ ನಿಮಗೆ ಇದರ ಸೌಲಭ್ಯ ಸಿಗದು.. :( ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.