ಏಳುಕೊಂಡಲವಾಡ ಗೋವಿಂದ ಗೋವಿಂದ..

5

ಏಳುಕೊಂಡಲವಾಡ ಗೋವಿಂದ ಗೋವಿಂದ.

ಮದ್ಯಾನ ಊಟವಾದ ನಂತರ ವಾಶ್ ರೂಂ ಗೆ ಹೋದೆ ಕೈತೊಳೆಯಲು. ಕೈ ತೊಳೆಯುತ್ತಿದ್ದಾಗ ಹಿಂದಿನ ಲೆಟ್ರಿನ್ ಒಳಗಿನಿಂದ ಒಂದು ದ್ವನಿ ಕೇಳಿಸಿತು.


ಏಳುಕೊಂಡಲವಾಡ ಗೋವಿಂದ ಗೋವಿಂದ..

ಹತ್ತಿಪ್ಪತ್ತು ಸೆಕೆಂಡ್ ಮೌನ ಮತ್ತೆ ಅದೆ ದ್ವನಿ
ಏಳುಕೊಂಡಲವಾಡ ಗೋವಿಂದ ಗೋವಿಂದ..

ನನಗೆ ಆಶ್ಚರ್ಯವೆನಿಸಿತು, ಅದಿನ್ನೆಂತಹ ದೈವಭಕ್ತ ಅಲ್ಲಿ ಕುಳಿತಾಗಲು ವೆಂಕಟೇಶನನ್ನು ನೆನೆದು ಜಯಕಾರ ಹಾಕುತ್ತಾನೆ.ಒಂದು ಕ್ಷಣ ಕಳೆಯಿತೇನೊ ಒಳಗಿನಿಂದ ಬಾಗಿಲು ತೆಗೆಯುವ ಸದ್ದು, ಮದ್ಯಮವಯಸಿನ ಗಡ್ಡಬಿಟ್ಟ ಪುರುಷನೊಬ್ಬ ಹೊರಗೆ ಬಂದ. ಅವನ ಮುಖವನ್ನೆ ನೋಡಿದೆ. ನಿಜ ಭಕ್ತಿಭಾವ ಅವನ ಮುಖದಲ್ಲಿ ತುಂಬಿ ತುಳುಕುತ್ತಿದೆ. ಈ ಕಲಿಯುಗದಲ್ಲು ಕಾಲ ಕೆಟ್ಟಿರುವ ಕಾಲದಲ್ಲು ಇಂತಹ ನಿಜದೈವಭಕ್ತರು ಇದ್ದಾರಲ್ಲ ಅಂದುಕೊಳ್ತೀದ್ದೆ.

ಆತನು ಕನ್ನಡಿ ಮುಂದೆ ನಿಂತು ಕೈತೊಳೆಯುತ್ತಿದ್ದ. ಆಗ ಪುನಃ ಕೇಳಿಸಿತು.
ಏಳುಕೊಂಡಲವಾಡ ಗೋವಿಂದ ಗೋವಿಂದ..

ಮುಖದಲ್ಲಿ ಅಸೌಕರ್ಯ ತೋರಿಸುತ್ತ ಆ ವ್ಯಕ್ತಿ ತನ್ನ ಜೇಬಿಗೆ ಕೈಹಾಕಿ ಮೊಬೈಲ್ ತೆಗೆದು ಕಿವಿಗೆ ಇಟ್ಟು
"ಹಲೋ" ಎಂದ
ಛೇ!  .... ಅದು ಅವನ ಮೊಬೈಲ್ ನಲ್ಲಿರುವ ರಿಗಿಂಗ್ ಟೋನ್ ...

ಮನಸಿನಲ್ಲಿಯೆ ನಾನು ಕೂಗುತ್ತ ಈಚೆ ಬಂದೆ
ಏಳುಕೊಂಡಲವಾಡ ಗೋವಿಂದ ಗೋವಿಂದ..

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೀರ್ಷಿಕೆ ಓದಿ 'ಸ' ಬಗ್ಗೆ ಏನೋ ............ರೆ ಅಂತ ನೋಡಿ- ಓದಿ ಸಧ್ಯ ಸ ....... ಲ್ಲ ಅಂತ ಸಮಾಧಾನವಾಯ್ತು :) ಈಗೀಗ 'ಯಾರು'- 'ಯಾರ್'- ಬಗ್ಗೆ 'ಯಾವಾಗ್'- -ಹೇಗೆ'- -'ಯಾಕೆ'- ಬರೀತಾರೆ ಅಂತಲೇ ಗೊತ್ತಾಗ್ತಿಲ್ಲ!! ಸಧ್ಯ ಸ .... ವ್ ಹಿಂದಿನ ಲೆಟ್ರಿನ್ ಒಳಗಿನಿಂದ ಒಂದು ದ್ವನಿ ಕೇಳಿಸಿತು :( >>>ಈ ಕಲಿಯುಗದಲ್ಲು ಕಾಲ ಕೆಟ್ಟಿರುವ ಕಾಲದಲ್ಲು ಇಂತಹ ನಿಜದೈವಭಕ್ತರು ಇದ್ದಾರಲ್ಲ 'ಅಂದುಕೊಳ್ತೀದ್ದೆ' :() ಮುಖದಲ್ಲಿ ಅಸೌಕರ್ಯ ತೋರಿಸುತ್ತ!! >>>>>ಹೊಳ ಹೋಗಿ ಎಲ್ಲ .....ರ್ರ್ ಮಾಡಿ ಬಂದು 'ಮುಖದಲ್ಲಿ ಅಸೌಕರ್ಯವೇ ? ಹೀಗೂ ಉಂಟು!! ಒಳ್ಳೆ ಪತ್ತೆಧಾರಿ ಕಥೆ ತರಹ ಶುರು ಮಾಡಿ ಆಸಕ್ತಿ ಹುಟ್ಟಿಸಿ ಕೊನೆಗೆ ಈ ತರಹ 'ಟ್ವಿಸ್ಟು ' ಕೊಡೋದ ಗುರುಗಳೇ!! ಛೇ! .... ಅದು ಅವನ ಮೊಬೈಲ್ ನಲ್ಲಿರುವ ರಿಗಿಂಗ್ ಟೋನ್ ... ಚಿಕ್ಕ ಬರಹ ಆದರೂ ನಗೆಉಕ್ಕಿಸದೆ ಇರಲಿಲ್ಲ:) ಮೊಬೈಲ್ ಈಗ 'ಎಲ್ಲೆಲ್ಲೂ' ಇದೆ!! ಜೈ ಮೊಬೈಲಾಯ ನಮಃ!! ಶುಭ ಸಂಜೆ ವಂದನೆಗಳು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಪಾರ್ಥಸಾರಥಿಯವರೆ ನಿಮ್ಮ ಹಾಸ್ಯ ಕಥನ. ಇದನ್ನು ಓದಿದ ಕೂಡಲೆ ನನಗೆ ರಾಮಮೋಹನರ ಬೆಂಬಿಡದ ಭೂತ ನೆನಪಾಯಿತು. ಅದರ ಕೊಂಡಿಯನ್ನು ಇಲ್ಲಿದೆ ನೋಡಿ http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಹಾಗು ಶ್ರೀಧರ್ ಇಬ್ಬರಿಗು ವಂದನೆಗಳು ಬೆಂಬಿಡದ ಭೂತವನ್ನು ಮೊದಲೆ ಓದಿರುವೆ ಗಣೇಶರಿಗೆ ಕೊಂಡಿ ಇದೆ ಅಂದುಕೊಂಡೆ ಈಗ ಶ್ರೀದರರಿಗು ಕೊಂಡಿ ಬಂತೆ ! :)) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರಿಗೆ ಕೊಂಡಿ ಇದೆ ಅಂದುಕೊಂಡೆ ಈಗ ಶ್ರೀದರರಿಗು ಕೊಂಡಿ ಬಂತೆ !.......ಪಾರ್ಥ ಸಾರಥಿಗಳೆ ನನ್ನದು ಮಕರ ರಾಶಿ ಹಾಗೆಲ್ಲಾ ಕೊಂಡಿ ಬರುವುದಿಲ್ಲ ವ್ರುಶ್ಚಿಕ ರಾಶಿಯವನಾಗಿದ್ದರೆ ನಿಮ್ಮ ಮಾತು ನಿಜವಾಗುತ್ತಿತ್ತೋ ಏನೋ? ಈ ಮಧ್ಯೆ ಗಣೇಶರನ್ನು ನೋಡಿ ಸ.....ರವರು ಅವರ ಲೇಖನಗಳಿಗೆಲ್ಲಾ ಕೊಂಡಿಕೊಡುವುದನ್ನು ನೋಡುತ್ತಾ...ನೋಡುತ್ತಾ....ನನಗೂ ಈ ಹವ್ಯಾಸ ಅಂಟಿಕೊಂಡಂತೆ ಕಾಣುತ್ತಿದೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮಧ್ಯೆ ಗಣೇಶರನ್ನು ನೋಡಿ >>>ಸ.....ರವರು ಅವರ ಲೇಖನಗಳಿಗೆಲ್ಲಾ ಕೊಂಡಿಕೊಡುವುದನ್ನು >>>>ನನದು - ವೃಷಭ ರಾಶಿ !! ಇಸ್ಟಕೂ 'ಕೊಂಡಿ' ಕೊಡಲು ರಾಶಿಗೂ ಏನು ಸಂಬಂಧ ಜೀ ? ಬೇಕಾದರೆ 'ಕೊಂಬು' ಕೊಡಬಲ್ಲೆ.... ಹಾಗೆ ಕೊಂಡಿಯೂ ಒಂದು ತೊಗೊಂಡ್ರೆ ಒಂದು ಫ್ರೀ ತರಹ:)))) (ನಿಮ್ಮದೇ ಒಂದು ಬರಹದಲ್ಲಿ ಇಮ್ಮಂ ಸಾಬಿಗೂ -ಗೋಕುಲಾ ... ಅಂತ ನೀವೇ ಹೇಳಿದೀರ ತೀರ ಮೊನ್ನೆ ಮೊನ್ನೆ !!) ಈಗ ಸರಿ ಮದ್ಯ ರಾತ್ರಿ , ನಿನ್ನೆಯೇ ಶ್ರೀ ಮಹಾನ ಡಾ: ಗಣೇ ಸಣ್ಣ ಅವ್ರು ಹೇಳಿದಾರೆ, ಇನ್ನು ಒಂದು ವಾರ ಸಂಪದದಲ್ಲಿ ಪ್ರತಿಕ್ರಿಯಿಸುವುದಿಲ್ಲ ಅಂತ(ಅವ್ರು ಹೇಳಿದ್ದು ವಾರ ರಜಾ ಬೇಕು ಅಂತ, ಆದರೆ 'ನಾ ಸಂಪದ ನೋಡದೆ ಇರಲಾರೆ ಅಂತ ಅಲ್ಲ!!) ಹೀಗಾಗಿ ಇವತ್ತಿನ ರಾತ್ರಿ(ಮದ್ಯ ರಾತ್ರಿ) ಡ್ಯೂಟಿ ನನದೆ ಕೊನೆ ಇರ್ಬೇಕು:) ನೀವು ಮಲ್ಕೊಳಿ ಪ...!! ಶುಭ ಮದ್ಯ ರಾತ್ರಿ ಕಂ ಶುಭ ಮುಂಜಾವು.. ನಾಳೆ ಮತ್ತೆ ಬೆಳಗೆ ೯ ಮೇಲೆ ಸಿಗವ.. ನೋಡುತ್ತಾ...ನೋಡುತ್ತಾ....ನನಗೂ ಈ ಹವ್ಯಾಸ ಅಂಟಿಕೊಂಡಂತೆ ಕಾಣುತ್ತಿದೆ : >>>>ರಾತ್ರಿ 'ಡ್ಯೂಟಿ' ಮತ್ತು 'ಕೊಂಡಿ ' ಹೆಚ್ ಆದಷ್ಟು .......ಗೆ ತೊಂದರೆ....!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೃಶ್ಚಿಕ ರಾಶಿ ಅಂದರೆ ಚೇಳಿನ ರಾಶಿ ಆದ್ದರಿಂದ ಆ ರಾಶಿಯವರಿಗೆ ಕೊಂಡಿ ಇರಲು ಸಾಧ್ಯ ಎಂದದ್ದು. ನೀವು ವೃಷಭ ರಾಶಿ ಎಂದಿರಲ್ಲವೇ ಸಪ್ತಗಿರಿಗಳೇ....ಮತ್ತೆ ಕೊಂಬು ಮೂಢೀತು....... ಹುಷಾರು :)) ನಿಮಗೂ ಸಹ ಶುಭರಾತ್ರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.