ಏನಾಗಿದೆ ರಸ್ತೆಯಲ್ಲಿ ಹೆಂಗಸರಿಗೆಲ್ಲ ?

3.333335

ಸಂಜೆಯಿಂದ ರಸ್ತೆಯಲ್ಲಿ ಎಲ್ಲರ ಮನೆಯಲ್ಲಿ

ಹೆಂಗಸರಲ್ಲಿ ಎಂತದೊ ಆತಂಕ
ಮನೆಯ ಒಳಗಿನಿಂದ ಗೇಟಿಗೆ 
ಗೇಟಿನಿಂದ ಮನೆಯ ಒಳಕ್ಕೆ ಓಡಾಟ.
 
ಎಲ್ಲರ ಮುಖದಲ್ಲಿ ಎಂತದೊ ದುಗುಡ ಭಾವ
ಛೇ! ಇದೇನಾಯ್ತು ಎಂಬ ಸಂಕಟ ಭಾವ 
ಮುಖದಲ್ಲಿ ತುಂಬಿದ ಅಸಹನೆಯ ಭಾವ
ಮಾತನಾಡಿದರೆ ಸಾಕು ಪರಚುವ ಸಿಡುಕು ಭಾವ
 
ಎಲ್ಲ ಕೇಳಿದ ಗೆಳೆಯನೆಂದ  ಪಾಪ ಏನಾಯ್ತು ಇವರಿಗೆಲ್ಲ 
ಯಾವ ಭೂತ ಹೊಕ್ಕಿತು ಪೂರ್ತಿ ರಸ್ತೆಯನ್ನೆಲ್ಲ
ಮತ್ತೇನಿಲ್ಲ
ಗೆಳೆಯ ಅಂತಹ ಅತಂಕವೇನಿಲ್ಲ ನಿನಗೆ ತಿಳುದುದೆ ಎಲ್ಲ
 
ಸಂಜೆಯಿಂದ ರಸ್ತೆಯಲ್ಲಿ ಎಲ್ಲಿಯು ಕರೆಂಟ್ ಇಲ್ಲ
ಯಾರು ಯಾವ ಸೀರಿಯಲ್ಲು ನೋಡುವ ಹಾಗಿಲ್ಲ.
ಹಾಗಾಗಿ ನಡೆದಿದೆ ಈ ಗಡಿಬಿಡಿ ಎಲ್ಲ
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥಸಾರಥಿಗಳೆ, <<ಸಂಜೆಯಿಂದ ರಸ್ತೆಯಲ್ಲಿ ಎಲ್ಲಿಯು ಕರೆಂಟ್ ಇಲ್ಲ ಯಾರು ಯಾವ ಸೀರಿಯಲ್ಲು ನೋಡುವ ಹಾಗಿಲ್ಲ.>> ಹೀಗೋ ವಿಷ್ಯಾ! ನಾನೆಲ್ಲೋ ಎಲ್ಲಾ "ಕನ್ನಡದ ಕೋಟ್ಯಾಧಿಪತಿ" ನೋಡುವುದರಲ್ಲಿ ಮಗ್ನರಾಗಿದ್ದಾರೇನೋ ಅಂದುಕೊಂಡಿದ್ದೆ. :)) ಸೀರಿಯಲ್ಲುಗಳೇ ಇಲ್ಲದಿದ್ದರೆ ಮತ್ತೆ ಬೀದಿ ಜಗಳ ಖಾಯಂ. ಈಗ ಟೀ.ವಿ.ಗಳಲ್ಲಿ ನೋಡುತ್ತಿರುವುದನ್ನು ಇನ್ನು ಮುಂದೆ ಲೈವ್ ಆಗಿ ನೋಡಬಹುದು; ಆಲೋಚಿಸಬೇಡಿ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಈಛೆಗಿನ ಪತ್ರಿಕೆ ವರದೀ ಪ್ರಕಾರ ಎಲ್ಲ ಜಲಾಶ್ಯಗಳಲ್ ನೀರೂ ಕಡೀಮೆ ಇದೆ.... ವಿದ್ಯುತ ಉತ್ಪಾದನೆಗೆ ನಾವ್ ನೆಛ್ಹಿಕೊಣ್ದದ್ದು ಹೆಛ್ಹಾಗಿ ಜಲವನ್ನೆ...:(( ಈಗ ಎಲ್ಲರಿಗೋ ಮಳೇ ರಾಯನ ಅವಶ್ಯಕತೆ ಇದೆ>..ಎಲ್ರಿಗಿನ್ತ ಹೆಛ್ಹಾಗಿ ನಮ್ಮ ವಿದ್ಯುತ ಸಛಿವರಿಗೇ...!! >>>> ನನ್ನ ಊಹೆ ಪ್ರಕಾರ ಯಾರೊಬ್ಬರು ವಿದ್ಯುತ ಖಾತೆಯೆ ಬೆಕು ಅನ್ತ ಈಗ ಹಟ್ಹ ಹೀಡೀವ ಸಮ್ಭವ ಇಲ್ಲ ಅನ್ಸುತ್ತೆ...!! ಸಧ್ಯಕ್ಕೆ ಅದು ಹೊರಲಾಗದೆ ಹೊರುವ ಖಾತೆ....!! ನಾ ಸೀರಿಯಲ್ಲ ಕೊನೆಯದಾಗಿ ನೊಡೀದ್ದು ಸಿಲ್ಲಿ ಲಲ್ಲೀ ಪಾಪ ಪಾ0ಡೂ ಅಸ್ತೇ/////// \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಸಪ್ತಗಿರಿಯವರೆ ಹೌದು ಮುಂದೆ ಕಾದಿದೆ ನೀರು ವಿಧ್ಯುತ್ ಮುಂತಾದ ಮೂಲಭೂತ ಅವಶ್ಯಕತೆಗಳಿಗೆ ಹೊಡೆತ ಬೀಳಲಿದೆ ಉಸಿರಾಡುವ ಗಾಳಿಗು ಟ್ಯಾಕ್ಸ್ ಕಟ್ಟುವ ದಿನಗಳು ಹತ್ತಿರದಲ್ಲಿದೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀಧರ್ ಭಂಡ್ರಿಯವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ಸೂಪರ್ ಕವನ! ನನಗೆ ಈ ವಿಷಯ ಗೊತ್ತೇ ಇರಲಿಲ್ಲ ಸಂಜೆ ಮನೆಗೆ ಬರುವಾಗ ದೂರದಿಂದಲೇ ನನ್ನಾಕೆಯ ದುಗುಡ ತುಂಬಿದ ಮೊಗ ಕಂಡು ಅಲ್ಲಿಂದಲೇ ಹಿಂದೆ ಬಸ್ ಸ್ಟಾಪ್‌ಗೆ ಬಂದು ಹುಟ್ಟಿದ ದಿನ, ಮದುವೆ ದಿನ..,ಎಲ್ಲಾ ದಿನಗಳ ಪಟ್ಟಿ ಮೊಬೈಲಲ್ಲಿ ಹುಡುಕಿದೆ...ಯಾವುದೂ ಅಲ್ಲ.. ಯಾವುದಕ್ಕೂ ಇರಲಿ ಎಂದು ಮಾರುದ್ದ ಮಲ್ಲಿಗೆ ಕೊಂಡು ಹೋದೆ :) .......... ಛೇ..ಈ ಕರೆಂಟು ಕೈಕೊಟ್ಟ ವಿಷಯ ಈಗ ಗೊತ್ತಾಯಿತು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಲಿ ಬಿಡಿ ಗಣೇಶರೆ ವಿಧ್ಯುತ್ ಇಲ್ಲದ ಕಾರಣ ನಿಮ್ಮವರಿಗೊಂದು ಮಾರು ಹೂಬಂದಿತಲ್ಲ ಆಕೆ ಅನುದಿನವು ಬೇಡಿಯಾರು, ಶೆಟ್ಟರೆ ದಿನ ಸಂಜೆ ನಿಮ್ಮ ಕರೆಂಟ್ (ಶೋಬ?) ತೆಗಿಯಿರಲ್ಲ! ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀರಿಯಲ್ಲು ಗಳು ' serial killer 'ಗಳು :‍))) ಚೆನ್ನಾಗಿದೆ ಕವನ :‍)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀನಾಥ ಭಲ್ಲೆಯವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ. ಚೆನ್ನಾಗಿದೆ ಪಾರ್ಥರೇ..!! ಚೆನ್ನಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ವಂದನೆಗಳು ನಾವಡರೆ ತಮಗೂ ನಮಸ್ಕಾರ‌ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿರಾಶೆ ಬೇಡ ಹೆಂಗಸರಿಗೆಲ್ಲ ಅದಕ್ಕೆ ಅಂತಾನೇ ಯುಪಿಎಸ್ ಇದೆಯಲ್ಲ ದೀಪವು ಉರಿಯುತ್ತಿರುತ್ತದೆ ಮನೆಯಲೆಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಅದಕ್ಕೆ ಅಂತಾನೇ ಯುಪಿಎಸ್ ಇದೆಯಲ್ಲ ದೀಪವು ಉರಿಯುತ್ತಿರುತ್ತದೆ ಮನೆಯಲೆಲ್ಲ << ಕಮಲರವರೆ ಯು ಪಿ ಎಸ್ ಇದ್ದರೇನು ದೀಪ ಉರಿದರೇನು ಟೀವಿ ಬಾರದಲ್ಲ ಕೇಬಲ್ ಟೀವಿನವನು ಯು ಪಿ ಎಸ್ ಇಟ್ಟಿಲ್ಲವಲ್ಲ :)) ವಂದನೆಗಳೊಡನೆ ಪಾರ್ಥಸಾರಥಿ ‍
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಪಾರ್ಥರೆ, ಈಗ ನಮ್ಮಲ್ಲಿನ ಸ್ಥಿತಿ ಇದು. ಹೆಂಗಸರ ಶಾಪ ಮುಟ್ಟುವುದು ಕಟ್ಟಕಡೆಗೆ ಕೇಬಲ್ ಟೀವಿಯವನಿಗೆ. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ನಮ್ಮಲ್ಲಿನ ಸ್ಥಿತಿ ಇದು. ಹೆಂಗಸರ ಶಾಪ ಮುಟ್ಟುವುದು ಕಟ್ಟಕಡೆಗೆ ಕೇಬಲ್ ಟೀವಿಯವನಿಗೆ. ವಂದನೆಗಳು :)))) ವಂದನೆಗಳು ರಮೇಶ್ ಕಾಮತ ಸರ್ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು ' ಏನಾಗಿದೆ ಈ ಹೆಂಗಸರಿಗೆಲ್ಲ ' ಸಿಟ್ಟು ಬಂದಿದೆ ಅವರಿಗೆ ವಿದ್ಯತ್ ಸಚಿವರ ಮೇಲೆಲ್ಲ, ಹುಡುಕುತ್ತಿರುವರು ಕಸ ಪೊರಕೆಯನೆಲ್ಲ, ಮುಂದಾಗುವ ಘಟನೆಯನೆಲ್ಲ ಆ ದೇವರೆ ಬಲ್ಲ, ಹರ ಹರ ಮುನಿತಾಯೇಶ್ವರ, ಉತ್ತಮ ವಿಡಂಬನಾತ್ಮಕ ಕವನ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ ತಮ್ಮ ಮೆಚ್ಚುಗೆಗೆ ನನ್ನ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹ್!! ನಿಜ, ಕರೆಂಟ್ ಕೈ ಕೊಟ್ಟರೆ ಹೀಗೇ ಆಗುವುದು! ಕತ್ತಲೆಯಲ್ಲಿ ಸೊಳ್ಳೆಗಳ ಸಂಗೀತವೂ ಶುರುವಾಗುವುದು! ಒಳ್ಳೆಯ ದೃಷ್ಟಿ ನಿಮ್ಮದು! ನಮಗೆ ಇದು ಹೊಳೆದಿರಲಿಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಚೆನ್ನಾಗಿದೆ ಪಾರ್ಥವ್ರೆ ಕೆ ಇ ಬಿಯವರಿಗೆ ಇವ್ರೆಲ್ಲಾ ಶಾಪ ಹಾಕೋದು ಗ್ಯಾರಂಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರ ಶಾಪವು ಈಗ ಯಾರನ್ನು ಏನು ಮಡುವದಿಲ್ಲ ಬಿಡಿ ಯಾವ ಶಾಪಕ್ಕು ಶಕ್ತಿ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.