ಏಕೆ ?..

3

            ಏಕೆ ?

ನಮ್ಮನ್ನು ಪ್ರೀತಿಸುತ್ತಿರುವವರು
ನೊಂದು 
ನಮ್ಮಿಂದ ದೂರವಾಗುವಾಗ 
ಕಾಡದ  ನೋವು
ನಾವು ಪ್ರೀತಿಸುತ್ತಿರುವರು
ನೊಂದು 
ನಮ್ಮಿಂದ ದೂರವಾಗುವಾಗ
ನೋವಾಗಿ ಕಾಡುವುದು 
ಏಕೆ ?

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗುರುಗಳೇ ನನಗೂ ಆ ಪ್ರಶ್ನೆ ಅದೆಸ್ಟೋ ದಿನದಿಂದ ತಲೆ ಕೊರೆಯುತ್ತಿದೆ... ನನಗೂ ಉತ್ತರ ಸಿಕ್ಕಿಲ್ಲ.. >>> ನನಗನ್ನಿಸಿದ ಹಾಗೆ- ಇದು ಎರಡೂ ಕಡೆಯೂ ಒಂದೇ. ನಾವ್ ಇಷ್ಟ 'ಪಟ್ಟವರು' ದೂರಾದಾಗ- ನಾವು, ಅವ್ರಿಗಿಸ್ಟ ಆದ ನಾವು ದೂರವಾದಾಗ 'ಅವರು'.. ಆದರೆ ಯಾಕೆ ಎನ್ನುವುದು? ಉತ್ತರಿಸೋಕೆ ಕಷ್ಟ.. ನೋಡುವ ಯಾರಾದರೂ ಉತ್ತರ ಸಿಕ್ಕಿದ ಸಂಪದಿಗರು ಉತ್ತರಿಸಬಹುದು.. :())))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರು ಏನು ಉತ್ತರ ಕೊಡುವರೊ ತಿಳಿಯದು ಆದರೆ ನನ್ನ ಭಾವನೆ ಈ ರೀತಿ ಇದೆ ನಮ್ಮನ್ನು ಪ್ರೀತಿಸುವರು ನಮ್ಮಿಂದ ದೂರವಾದಗ‌ ‍‍‍=== ನಿಜವಾಗಿ ಪ್ರೀತಿ ಇದ್ದಿದ್ದರೆ ನನ್ನಿಂದ ದೂರವಾಗುತ್ತಿರಲಿಲ್ಲ ಎನ್ನುವ 'ಉಢಾಪೆ' ಯ ಭಾವದಿಂದ ನೋವಾಗುವದಿಲ್ಲ ನಾವು ಪ್ರೀತಿಸುವರು ದೂರವಾದಗ‌ === ನನ್ನ ಪ್ರೀತಿಯನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎನ್ನುವ ಹುಂಬು ವ್ಯಾಮೋಹದಿಂದ , ಗರ್ವಭಂಗದಿಂದ, ಅಹಂಕಾರ ನಾಶದಿಂದ ಆಗುವ ದುಖ ಇದು ನನ್ನ ಅಭಿಪ್ರಾಯ ಉಳಿದ ಸಂಪದಿಗರು ಏನನ್ನುವರು ಅವರೆ ಹೇಳಬೇಕು. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ್ಯಾಮೋಹವೇ ಕಾರಣ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ್ ... ಎರಡನೆ ಸಂದರ್ಬದಲ್ಲಿ ಅದೆ ಕಾರಣ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲ ಸಂಧರ್ಭದಲ್ಲೂ ಅದೆ ಕಾರಣ ಆಗ ವ್ಯಾಮೋಹ ಇರುವುದಿಲ್ಲ ಆದುದರಿಂದ ನೋವಾಗುದಿಲ್ಲ ಒಟ್ಟಿನಲ್ಲಿ ನೋವಾಗುವುದಕ್ಕೆ, ನೋವಾಗದಿರುವುದಕ್ಕೆ ವ್ಯಾಮೋಹ ಇರಿಸುವುದು ಇರಿಸದಿರುವುದೆ ಕಾರಣ ಅಲ್ಲವೇ ? ......ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಚಿತ್ರವೆಂದರೆ ನಾವು ಪ್ರೀತಿಸುತ್ತಿರುವರು ನೊಂದು ನಮ್ಮಿಂದ ದೂರವಾಗುವಾಗ ನಮ್ಮನ್ನು ಪ್ರೀತಿಸಿದವರ ನೆನಪುಗಳೂ ಕಾಡುತ್ತವೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

. ಖಂಡೀತ ನಿಜ ... ಅದರೆ ವಿಚಿತ್ರವಲ್ಲ ಪಶ್ಚಾತಾಪವಿರಬಹುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ನನಗೂ ಅರ್ಥವಾಗುತ್ತಿಲ್ಲ! ಅದೇಕೆ ಹೀಗೆ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇಕೆ ಹೀಗೆ? :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ನಮ್ಮನ್ನು ಪ್ರೀತಿಸುತ್ತಿರುವವರನ್ನು ನಾವು ಪ್ರೀತಿಸುವೆವು. ನಾವು ಪ್ರೀತಿಸುತ್ತಿರುವವರೇ ನಮ್ಮನ್ನು ಪ್ರೀತಿಸುತ್ತಿರುವವರು. ನೊಂದು ನಮ್ಮಿಂದ ದೂರವಾಗುವ ಪ್ರಶ್ನೆಯೇ ಇಲ್ಲ. ನಮ್ಮಿಂದ ದೂರವಾದರೆ ಅವರು ಪ್ರೀತಿಯ ನಾಟಕ ಮಾಡಿದರು ಎಂದೇ ಲೆಕ್ಕ, ಅಥವಾ ಅವರು ನಮ್ಮ ಪ್ರೀತಿಗೆ ಯೋಗ್ಯರಲ್ಲ. ಮರೆತು ಬಿಡಿ..ಕೊರಗುತ್ತಾ ಟೈಮ್ ವೇಸ್ಟ್ ಮಾಡಬೇಡಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚನಾರ್ಹ ಪ್ರಶ್ನೆ! "ನಮ್ಮನ್ನು ಪ್ರೀತಿಸುತ್ತಿರುವವರನ್ನು ನಾವು ಪ್ರೀತಿಸುವೆವು. ನಾವು ಪ್ರೀತಿಸುತ್ತಿರುವವರೇ ನಮ್ಮನ್ನು ಪ್ರೀತಿಸುತ್ತಿರುವವರು." ಗಣೇಶರ ಈ ಅದ್ಬ್ಹುತ‌ ಸಾಲ‌ನ್ನು ಓದಿದ‌ ಮೇಲೆ ನ‌ನಗನ್ನಿಸಿದ್ದು ಹೀಗೆ: ‍ ಪ್ರೀತಿ ಒಮ್ಮುಖ ( ವನ್ ವೇ) ರಸ್ತೆಯಲ್ಲಿ ಹೆಚ್ಚು ದೂರ ಹೋಗಲಾರದು. ಅದಕ್ಕೆ ಪ್ರೀತಿ ಎನ್ನಲಾಗದು, ಅದು ಬರೀ infatuation ಅಷ್ಟೇ! @ ಗಣೇಶ್ : "ಕೊರಗುತ್ತಾ ಟೈಮ್ ವೇಸ್ಟ್.." ಕೊರಗಿದ್ದರಿಂದಲೇ ಏಕೆ ಎಂಬ ಪ್ರಶ್ನೆ ಹುಟ್ಟಿ ಅದಕ್ಕೆ ನಿಮ್ಮಿಂದ ಇಷ್ಟು ಒಳ್ಳೆಯ ಉತ್ತರ ದೊರಕಿದ್ದು, ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.ಶ್ರೀಕರ್ ಅಭಿಪ್ರಾಯಕ್ಕೆ ವಂದನೆಗಳು ಈ ರೀತಿ ತರ್ಕ ಶುರುವಾದರೆ ಸಾಕು ! ಎಲ್ಲ ಭಾವನತ್ಮಕ ಅಂಶಗಳಿಗು ಉತ್ತರ ಸಿಗುತ್ತದೆ ಎಲ್ಲ ನೋವುಗಳಿಂದ ಹೊರಬರುತ್ತಾರೆ. ತರ್ಕ ಹಾಗು ಪ್ರೀತಿಯ ಭಾವನೆಗಳು ದೂರ ದೂರ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

> ನಮ್ಮನ್ನು ಪ್ರೀತಿಸುತ್ತಿರುವವರನ್ನು ನಾವು ಪ್ರೀತಿಸುವೆವು. ನಾವು ಪ್ರೀತಿಸುತ್ತಿರುವವರೇ ನಮ್ಮನ್ನು ಪ್ರೀತಿಸುತ್ತಿರುವವರು. ಗಣೇಶರೆ ಹೇಳಿಕೆ ಚೆನ್ನಾಗಿದೆ ಆದರೆ ಯಾವಗಲು ನಿಜವಲ್ಲ! > ನಮ್ಮಿಂದ ದೂರವಾದರೆ ಅವರು ಪ್ರೀತಿಯ ನಾಟಕ ಮಾಡಿದರು ಎಂದೇ ಲೆಕ್ಕ, ಅಥವಾ ಅವರು ನಮ್ಮ ಪ್ರೀತಿಗೆ ಯೋಗ್ಯರಲ್ಲ. ಮೇಲೆ ಸಪ್ತಗಿರಿಯವರಿಗೆ ಕೊಟ್ಟಿರುವ ಉತ್ತರವನ್ನು ನೋಡಿ. ಬಹುಶ ನಿಮಗು ಸರಿ ಎನ್ನಿಸಬಹುದು >ಮರೆತು ಬಿಡಿ..ಕೊರಗುತ್ತಾ ಟೈಮ್ ವೇಸ್ಟ್ ಮಾಡಬೇಡಿ . ಛೇ ಕೊರಗುವುದೆಲ್ಲ ಏನಿದೆ.. ನಾನು ಸುತ್ತ ನೋಡುತ್ತಿರುವದನ್ನೆಲ್ಲ ನೋಡಿ ಏನೊ ಬರೆದಿದ್ದೇನೆ ಅಷ್ಟೆ ಕೊರಗುವದೆಲ್ಲ ಏನಿಲ್ಲ. ಅದೆಲ್ಲ 16 ಏಪ್ರಿಲ್ 1979 ಕ್ಕೆ ಸ್ಟಾಪ್ :))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೆಲ್ಲ 16 ಏಪ್ರಿಲ್ 1979 ಕ್ಕೆ ಸ್ಟಾಪ್ :))) >>>>>>>>>> :(((((((( ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

16 ಏಪ್ರಿಲ್ 1979 = ಸ್ವಾತಂತ್ರ್ಯ ಹರಣ? ಮುವತ್ತ ಮೂರನೆ ವಯಸ್ಸಿನಲ್ಲಿ ತನ್ನ ಆಸ್ತಿಯನ್ನು ತನಗೆ ಕೊಟ್ಟುಬಿಡು ಎನ್ನುವ ಮಗನ......... ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.ಶ್ರೀಕರ್ ನಿಮ್ಮ ಊಹೆ ಚೆನ್ನಾಗಿದೆ ಆದರೆ ಅದೆಲ್ಲ ಏನು ಅಲ್ಲ ಎರಡು ಕವನಗಳನ್ನು ಬರೆಯುವಾಗ, ನಾನು ನನ್ನ ಹತ್ತಿರದವರ ಬೇರೆ ಯಾವುದೊ ಘಟನೆಗಳನ್ನು ನೋಡುತ್ತ ಬರೆದಿದ್ದು. 16‍‍ ಎಪ್ರಿಲ್ 1979 ನಾನು ನಮ್ಮ ತಂದೆಯರು ನಮ್ಮನ್ನು ಅಗಲಿದ‌ ದಿನ. ಗಣೇಶರ ಬಾಷೆಯಲ್ಲಿ 'ದಿವ್ಯ ದರ್ಶನ' ವಾದ ದಿನ. ಮತ್ತೆ ಮಗ ಆಸ್ತಿಯನ್ನು ಕೇಳುವುದೆ ? 1. ನನಗೆ ಆಸ್ತಿಯು ಇಲ್ಲ 2. ಮಗನು ಇಲ್ಲ ಒಬ್ಬಳೆ ಹೆಣ್ಣು ಮಗಳು , ಹೀಗೆ ಪದ್ಯ ಬರೆದುಕೊಂಡು ನೆಮ್ಮದಿಯಾಗಿದ್ದೇನೆ. :)))) ‍‍‍‍... ಇಲ್ಲಿ ಬರೆಯುವ ಕವನ ಕತೆಗಳನ್ನೆಲ್ಲ ಏಕಾಗಿ ಸ್ವಂತ ಅನುಭವ ಅಂದು ಕೊಳ್ತಾರೆ ನನಗೆ ತಿಳಿತಾ ಇಲ್ಲ ಸಂಪದದಲ್ಲಿ ಏಕೊ ಮೊದಲಿನಿಂದಲು ಅದೆ ಅನುಭವ. ನಾವು ಬರೆಯುವ ಎಲ್ಲವು ನಮ್ಮ ಅನುಭವವೆ ಆಗಿರಬೇಕಿಲ್ಲ ಅಲ್ಲವೆ ಸಾರ್ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇಲ್ಲಿ ಬರೆಯುವ ಕವನ ಕತೆಗಳನ್ನೆಲ್ಲ ಏಕಾಗಿ ಸ್ವಂತ ಅನುಭವ ಅಂದು ಕೊಳ್ತಾರೆ ನನಗೆ ತಿಳಿತಾ ಇಲ್ಲ ಸಂಪದದಲ್ಲಿ ಏಕೊ ಮೊದಲಿನಿಂದಲು ಅದೆ ಅನುಭವ. ನಾವು ಬರೆಯುವ ಎಲ್ಲವು ನಮ್ಮ ಅನುಭವವೆ ಆಗಿರಬೇಕಿಲ್ಲ ಅಲ್ಲವೆ>> +1 ಏಕೆ ??ಪ್ರಶ್ನೆ ಪ್ರಶ್ನೆ ಆಗಿಯೇ ಉಳಿಯಲಿ ಉತ್ತರ ಹುಡುಕಲು ಹೋಗಬೇಡಿ ಸ್ವಾಮಿ, ಮತ್ತೆ ನೀವೂ ಅಂಡಾಂಡ ಸ್ವಾಮಿಗಳ ಸಾಲಿನಲ್ಲಿ ಸೇರಿಕೊಳ್ಳ ಬಹುದು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

--------------------------------------------------------------------------------------------------------------- ಇಲ್ಲಿ ಬರೆಯುವ ಕವನ ಕತೆಗಳನ್ನೆಲ್ಲ ಏಕಾಗಿ 'ಸ್ವಂತ ಅನುಭವ' ಅಂದು ಕೊಳ್ತಾರೆ ನನಗೆ ತಿಳಿತಾ ಇಲ್ಲ ಸಂಪದದಲ್ಲಿ 'ಏಕೊ' ಮೊದಲಿನಿಂದಲು 'ಅದೆ' ಅನುಭವ. ನಾವು ಬರೆಯುವ ಎಲ್ಲವು ನಮ್ಮ ಅನುಭವವೆ ಆಗಿರಬೇಕಿಲ್ಲ ಅಲ್ಲವೆ? -------------------------------------------------------------------------------------------------------------- ಗುರುಗಳೇ ಅದೊಮ್ಮೆ ನಾ ೩- ೪ ಹಾಸ್ಯ ಬರಹಗಳನ್ನ ಬರೆದಾಗ ಕೆಲ ಸಂಪದ ಮಿತ್ರರು ಅದು ನನ್ನ 'ಸ್ವನುಭವವೇ ' ಎಂದು ತಮಾಷೆಗೆ ಹೇಳಿದ್ದರು .. ನಾ ಸಹ ಹಲವೊಮ್ಮೆ ಅದೇ ರೀತಿ ಕೆಲವರಿಗೆ ನಿಮ್ಮ ಸ್ವಾನುಭವವೇ? ಅಂತ ಪ್ರತಿಕ್ರಿಯಿಸಿದ್ದೆ !! ನನಗೂ ನಿಮ್ಮ ಹಾಗೆ ಈ ಭಾವನೆ ಬಂದಿತ್ತು ಆದರೂ ನಾ ಅಲ್ಲಗಳೆದರೂ ಕೊನೆಗೆ 'ನಕ್ಕು ' ಸುಮ್ಮನಾದೆ .. ನೀವು ಹಾಗೆ ಮಾಡಿಬಿಡಿ.. ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪು ತಿಳುವಳಿಕೆಗಾಗಿ ಕ್ಷಮಿಸಿ, ಪಾರ್ಥರೇ! ನಮ್ಮ ದೊಡ್ಡ ಕುಟುಂಬದಲ್ಲಿನ ಉದಾಹರಣೆ ಕೊಡುವುದಾದರೆ, ನನ್ನ ಸಾಲ ತೀರಿಸು ಎಂದು ಚೆನ್ನಾಗಿ ದುಡಿಯುತ್ತಿರುವ ಮಗನನ್ನು ಅಪ್ಪ ಕೇಳಿದಾಗ ಮಗನ ಉತ್ತರ: "ನಿನ್ನ ಸಾಲಕ್ಕೆ ನೀನೇ ಹೊಣೆ, ನನ್ನನ್ನು ಕೇಳಿ ಏನು ಸಾಲ ಮಾಡಿದೆಯಾ?" ಕೆಲವೇ ವರ್ಷಗಳ ನಂತರ ಆಸ್ತಿಯ ಪಾಲಿಗಾಗಿ ಅದೇ ಮಗನ ಹಕ್ಕೊತ್ತಾಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಕಾಲಾಯ ತಸ್ಮೈ ನಮ: (ಅಂಡಾಂಡ ಭ್ರಹ್ಮ ಉವಾಚ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.