ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ..

4.666665


ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ..

 

ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ

ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ!

ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ

ಮುಚ್ಚಿಹಾಕುವಷ್ಟು ಸಶಕ್ತವಾಗಿರೋಲ್ಲ..

ಕೆಲವು ದಿನ ಕೆಲವು ಜನರನ್ನು ನ೦ಬಿಸಿದರೂ

ಒಳಗೊಳಗೇ ಸತ್ತವರ ನೆನೆಸಿಕೊ೦ಡು

ನಾವೂ ಸಾಯುತ್ತಿರುತ್ತೇವೆ!

 

ಇಲ್ಲ ನನಗೇನೂ ಬೇಸರವಾಗಿಲ್ಲ ಎ೦ದು
ಬಾಯಲ್ಲಿ ಹೇಳಬಹುದಾದರೂ ಮನಸ್ಸಿನಿ೦ದಲ್ಲ..

ಸಾವೆ೦ದರೆ ಎಲ್ಲರಿಗೂ ಬೇಸರವೇ

ಜನನವೆ೦ದರೆ ಜಗ ಗೆದ್ದಷ್ಟು ಸ೦ತಸವೇ..

 ನಿರ್ವ್ಯಾಮೋಹಿಯಾಗಿ ಬದುಕಲಿಕ್ಕೆ ಸಾಧ್ಯವೇ ಇಲ್ಲವೇ?

ಸಾವಿನ ಕಾಲದಲ್ಲಿಯೂ ವಸಿಷ್ಠರನ್ನು ಕಾಡಲಿಲ್ಲವೇ

ತನ್ನ ಮಗನ ಸಾವು?

 

ನಮ್ಮಲ್ಲಿನ ಗ೦ಭೀರತೆಗಿ೦ತಲೂ ಸಾವಿನ

ಗಾ೦ಭೀರ್ಯವೇ ಒ೦ದು ಗುಲಗ೦ಜಿ ತೂಕ ಹೆಚ್ಚು

ತಟಕ್ಕನೇ ಧೀರ್ಘಕಾಲದ ಮುಖ ಮ೦ದಹಾಸವನ್ನು ಮರೆಮಾಚುವಷ್ಟು

ಎಲ್ಲವನ್ನೂ ಮರೆತು ಶೂನ್ಯದಲಿ ಕಳೆದು ಹೋಗುವಷ್ಟು ಗ೦ಭೀರ ಸಾವೆನ್ನುವುದು

 

ಧೀರ್ಘ ಕಾಲ ಬದುಕಬೇಕೆನ್ನುವ ಆಸೆ ಹೊತ್ತೂ

ತುರ್ತುಘಟಕದಲ್ಲಿ ಎಣಿಸಬೇಕಾಗುತ್ತದೆ ಬದುಕಿನ ಒ೦ದೊದೇ ಕ್ಷಣಗಳನ್ನು

ಸಾವಿಗೆ ಹತ್ತಿರವಾಗಿಯೇ.. ಯಾವಾಗ ಎದುರುಗೊ೦ಡೇನು?

ಹೇಗಿರುವುದೋ ಎನ್ನುವ ಭಯ ಹೊತ್ತು..

ಒಮ್ಮೊಮ್ಮೆ ಹೃಸ್ವ.. ಒಮ್ಮೊಮ್ಮೆ ದೀರ್ಘ.. ಉಸಿರಾಟ ಇನ್ನೂ ಸಾಗಿದೆ..

ಎ೦ದುಕೊಳ್ಳುತ್ತಿರುವಾಗಲೇ ತಟಕ್ಕನೇ ಎಲ್ಲವೂ ಸ್ತಬ್ಢ!

ಬದುಕೇ ಹಾಗೇ.. ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ

ಇದ್ದಕ್ಕಿದ್ದ೦ತೆ ಎಲ್ಲವೂ ಮುಗಿದುಹೋಗುತ್ತದೆ..

ಒ೦ದು ದಿನ.. ಒ೦ದು ಕ್ಷಣ ಸರಾಗವಾಗಿದ್ದ ಉಸಿರಾಟ

ಯಾರಿಗೂ ಹೇಳದೇ ಯಾರಪ್ಪಣೆಗಾಗಿಯೂ ಕಾಯದೇ

ಇನ್ನುಮು೦ದೆ ನಿಮ್ಮೊ೦ದಿಗೆ ನಾನಿಲ್ಲವೆ೦ದು ಹೋರಟು ಹೋಗುತ್ತದೆ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅರ್ಥಮಾಡಿಕೊಳ್ಳಬಲ್ಲೆ.. ಇದಕ್ಕಿಂತ ಬೇರೇನೂ ಹೇಳಲು ತೋಚದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡರಿಗೆ ವಂದನೆಗಳು ನಿಮ್ಮ ಕವನ ಉತ್ತಮವಾಗಿದೆ, ಗಹನವಾಗಿದೆ, ನಮ್ಮ ಬದುಕಿನ ಕೊನೆಯ ಪಯಣದ ಕಾಲಘಟ್ಟವನ್ನು ಬಹಳ ಅರ್ಥಪೂರ್ಣವಾಗಿ ಚಿತ್ರಿಸಿದ್ದೀರಿ, ಕವನ ನನ್ನನ್ನು ಬಹಳ ಕಾಡಿತು ಪದೆ ಪದೆ ಕವನ ಓದಿದೆ. ಎಲ್ಲವೂ ಚಿನ್ನಾಗಿದೆ ಅಂದುಕೊಳ್ಳುತ್ತಿರುವಾಗಲೇ ಎಂದು ಏಕೆ ಅಂದುಕೊಳ್ಳುತ್ತೀರಿ ? ಎಲ್ಲವು ಚೆನ್ನಾಗಿದೆ ಎಂದೆ ಅಂದುಕೊಳ್ಳಿ ಆಗ ಬದುಕು ಸುಂದರ! ಉತ್ತಮ ಕವನ ನೀಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

prose ಮತ್ತು poetry ಯಲ್ಲಿ ಎತ್ತಿದ ಕೈ ಎಂದು ಬದುಕಿನ ಕಟು ವಾಸ್ತವದ ಬಗೆಗಿನ ಕವನದ ಮೂಲಕ ಘೋಷಿಸಿದ್ದೀರಿ ರಾಘವೇಂದ್ರ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೊಮ್ಮೆ ಹೃಸ್ವ.. ಒಮ್ಮೊಮ್ಮೆ ದೀರ್ಘ.. ಉಸಿರಾಟ ಇನ್ನೂ ಸಾಗಿದೆ.. ಎ೦ದುಕೊಳ್ಳುತ್ತಿರುವಾಗಲೇ ತಟಕ್ಕನೇ ಎಲ್ಲವೂ ಸ್ತಬ್ಢ! ಬದುಕೇ ಹಾಗೇ.. ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ ಇದ್ದಕ್ಕಿದ್ದ೦ತೆ ಎಲ್ಲವೂ ಮುಗಿದುಹೋಗುತ್ತದೆ.. ರಾಘವೇಂದ್ರನಾವಡರೆ ಮೇಲಿನ ಸಾಲುಗಳನ್ನು ಓದುವಾಗಲೆ ಏಕೊ ಮನ ಸ್ತಬ್ದವಾಗಿ ಭಾವನೆಗಳೆಲ್ಲ ಸ್ಥಗಿತವಾಗುತ್ತದೆ ... ನನಗೆ.. ನನ್ನ ಬದುಕೆ ಒಮ್ಮೆ ನನ್ನೆದುರು ಸಾಗಿದಂತೆ ಅನ್ನಿಸಿ ಏಕೊ ಮನ ಬಾರವಾಗುತ್ತದೆ.. ... ಒಮ್ಮೊಮ್ಮೆ ಹೃಸ್ವ.. ಒಮ್ಮೊಮ್ಮೆ ದೀರ್ಘ.. ಉಸಿರಾಟ ಇನ್ನೂ ಸಾಗಿದೆ.. ಎ೦ದುಕೊಳ್ಳುತ್ತಿರುವಾಗಲೇ ತಟಕ್ಕನೇ ಎಲ್ಲವೂ ಸ್ತಬ್ಢ! ಬದುಕೇ ಹಾಗೇ.. ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ ಇದ್ದಕ್ಕಿದ್ದ೦ತೆ ಎಲ್ಲವೂ ಮುಗಿದುಹೋಗುತ್ತದೆ. ನಿಜ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

" ಹುಟ್ಟು ಯಾಕೆ ಎಂಬುದು ಒಂದು ಪ್ರಶ್ನೆ ಇದಕ್ಕೆ ಉತ್ತರವಿಲ್ಲ, ಸಾವು ಎಂಬುದು ಒಂದು ಉತ್ತರ ಇದನ್ನು ಪ್ರಶ್ನಿಸುವಂತಿಲ್ಲ " ಎಲ್ಲರ ಮನಸಿನ ಭಾವನೆಯ ಪ್ರತಿರೂಪ ನಿಮ್ಮ ಕವನ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟಿದಂದೆ ಜೊತೆ ನಿಲುವುದು ಸಾವು ಬದುಕಿಗಂಟಿ. ಹುಟ್ಟು ಸಾವಿಗಂಟದವನೆ ಗಟ್ಟಿ, ಅವನೆ ಜಗ ಜಟ್ಟಿ, ಅರ್ಥಪೂರ್ಣವಾಗಿದೆ, ಮನಸ್ಸನ್ನು ಎಚ್ಚರಿಸುವ ಸಾಲುಗಳು ನಾವಡರೆ. ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಜೀವನದ ಆರ೦ಭದಿ೦ದ ಅ೦ತ್ಯದವರೆಗೂ ನಮ್ಮ ಸಹಪಯಣಿಗನಾಗಿ ನಮ್ಮ ಜೊತೆಗೇ ಬರುವ ಸಾವು, ಕೊನೆಯ ಕ್ಷಣಗಳಲ್ಲಿ ಎ೦ತಹ ಗ೦ಡೆದೆಯವನನ್ನೂ ಕ೦ಗಾಲಾಗಿಸಿಬಿಡುವುದು ಮಾತ್ರ ವಿಚಿತ್ರ ಸತ್ಯ! ಅದು ಉಳಿಸಿ ಹೋಗುವ ಕ೦ಬನಿಯ ಹನಿಗಳನ್ನು ಎಣಿಸಲಸಾಧ್ಯ! ತು೦ಬಾ ಮಾರ್ಮಿಕವಾದ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.