ಎಲೆ ಮರೆಯ ಅಲರು

3

 ಎಲೆ ಮರೆಯ ಅಲರು

 

ಕಳೆದ ವರ್ಷ ಶಶಿದರ ಅವರು ಬೆಳೆಗೆರೆ ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲ ಐತೆ' ಪುಸ್ತಕ ಪರಿಚಯ ಮಾಡಿಸಿದರು, ಅದನ್ನು ತಂದು ಓದುವಾಗಲೆ ಅದೆ ಲೇಖಕರ ಇನ್ನೊಂದು ಪುಸ್ತಕ 'ಎಲೆ ಮರೆಯ ಅಲರು' ಸಿಕ್ಕಿತು. ಅದರಲ್ಲಿ ಸಣ್ಣ ಸಣ್ಣ ಘಟನೆಗಳನ್ನು ನಿರೂಪಿಸಲಾಗಿದೆ, ಅದರಲ್ಲಿ ನನ್ನ ಮನಸಿಗೆ ಹಿಡಿಸಿದ 'ದಿವಾನ್ ಮಿರ್ಜಾ'  ಪುಟ್ಟ ಅಧ್ಯಾಯವನ್ನು ಯಾವುದೆ ಟಿಪ್ಪಣಿ ಇಲ್ಲದೆ ಸಂಕ್ಷಿಪ್ತ ರೂಪದಲ್ಲಿ ಇಲ್ಲಿ ನೀಡುತ್ತಿದ್ದೇನೆ, ಅದೇಕೊ ಹಾಗೆ ಬರೆಯ ಬೇಕೆನಿಸಿತು. ಹಾಗೆ ಈ ಶೀರ್ಷಿಕೆಯನ್ನು ಕಾಯ್ದಿಟ್ಟುಕೊಂಡಿರುವೆ. 

---------------------------------------------------------------------------------

ಸುಮಾರು ೧೯೩೦-೩೫ ರ ಕಾಲ ಮೈಸೂರಿನ ದಿವಾನ ಮಿರ್ಜಾರವರು ಹರಿಹರ ಕಡೆ ಹೊರಟಿದ್ದರು ಹಿರಿಯೂರಿನ ಹತ್ತಿರ ಅದವಾಲ ಗ್ರಾಮಕ್ಕೆ ಬಂದಾಗ ಊರಿನ ಜನರೆಲ್ಲ ಅವರನ್ನು ಸ್ವಾಗತಿಸಿದರು. ಕುಶಲ ವಿಚಾರಿಸಿ ಹೊರಡುವ ಮುಂಚೆ ದಿವಾನರು ಅದೆ ಗ್ರಾಮದ ರಾಮನಾಥ್ ಐಯ್ಯರ್ ಎಂಬುವರು ಕೊಟ್ಟ ಹೂವು ಹಣ್ಣು ಸ್ವೀಕರಿಸಿ, ರಸ್ತೆಗೆ ಅಡ್ಡಬರುವ ಮರದ ಕೊಂಬೆಯನ್ನು ತೋರಿಸಿ , ಇದು ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದೆ ತೆಗೆಸಿ ಎಂದು ನಾರಾಯಣಸ್ವಾಮಿ ಎಂಬ ಪಿ.ಡಬ್ಲು.ಡಿ ಇಂಜಿನೀಯರ್ ರವರಿಗೆ ಸೂಚನೆ ನೀಡಿ ಹೊರಟರು. 


 ಹಿಂದೆ ಬರುವಾಗ ಪುನಃ ಅದೆ ಗ್ರಾಮದ ಹತ್ತಿರ ಬರುವಾಗ ಗಾಡಿನಿಲ್ಲಿಸಿದ ದಿವಾನರು ಮರದ ಕೊಂಬೆ ಕಡಿಸಿರುವುದು ಗಮನಿಸಿ, ಹಾಗೆ ಆ ಕೊಂಬೆಗಳನ್ನು ಹಳ್ಳದಲ್ಲಿ ಕಾಯ್ದು ಇಟ್ಟಿರುವದನ್ನು  ಗಮನಿಸಿ ತೆರಳಿದರು, ನಂತರ ನಾರಾಯಣಸ್ವಾಮಿ ಆ ಮರದ ಕೊಂಬೆಗಳನ್ನು ಸರ್ಕಾರಿ ಪದ್ದತಿಯಂತೆ ನೋಟಿಸ್ ನೀಡಿ ಹರಾಜು ಕೂಗಿ ಬಂದ ಹಣವನ್ನು ಟ್ರೆಜರಿಗೆ ಕಟ್ಟಿ ರಸೀತಿಯನ್ನು ಪಡೆದರು. ವಿಷಯ ತಿಳಿದ  ಅವರ ಪ್ರಾಮಾಣಿಕತೆಗೆ ಸಂತಸ ಪಟ್ಟ ದಿವಾನರು ದಸರಾ ಸಮಯದಲ್ಲಿ ಕರೆಸಿ ಸನ್ಮಾನಿಸಿ ಕಳಿಸಿದರು.


ಈ ಸಮಯದಲ್ಲಿ ಸೋಮೇಶ್ವರ ಶತಕವೊಂದು ನೆನಪಿಗೆ ಬರುತ್ತದೆ


ಪ್ರಜೆಯಂ  ಪಾಲಿಸಬಲ್ಲಡಾತನ ಅರಸಂ

ಕೈಯಾಸೆಯಂ ಮಾಡದಂ ನಿಜ ಮಂತ್ರೀಶ್ವರಂ

ತಂದೆ ತಾಯಿಯಂ ಸಲಹಬಲ್ಲಾತನೇ ಧಾರ್ಮೀಕಂ

ಭಜಕಂ ದೈವಭಕ್ತಿಯುಳ್ಳಡೆ ಭಟ ನಿರ್ಭೀತನಾದವಂ

ದ್ವಿಜನಾಚಾರ್ಯತೆಯುಳ್ಳವ ಹರಹರಾ ಶ್ರೀಚೆನ್ನಸೋಮೇಶ್ವರ


ಈಗಿನ ಪರಿಸ್ಥಿಥಿಯಲ್ಲಿ ಈ ಶತಕ ಬಹಳ ಮಾರ್ಮಿಕ ಎನಿಸುತ್ತದೆ

------------------------------------------------------------------------------------------------

ಚಿತ್ರವನ್ನು : internet  ನಿಂದ ಪಡೆದಿದೆ.

 http://t3.gstatic.com/imagesq=tbn:ANd9GcSVf5VDbZmLZJnlD1oVLXwMRDUKB8FpAp...

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

+1 ಈಗಿನ ಕಾಲದಲ್ಲಾಗಿದ್ರೆ ಮರ ಅದಾಗೇ ಬಿದ್ದು ಸ್ವಲ್ಪ ಜನನ ಸಾಯಿಸಿ ಅವ್ರಿಗೆ ಪರಿಹಾರ ಕೊಡೋಕೆ ನಡೆಯೋ ಗೋಲ್ಮಾಲ್ಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ- ಒಳ್ಳೆಯ ಬರಹ.. >>>>ಈಗಿನ ಕಾಲದಲ್ಲಿ ಬದುಕುತ್ತಿರುವ ನಮಗೆ .ಹಿಂದೆ ನಮ್ಮ ಹಿರಿಯರು ಹೇಗೆಲ್ಲ ಬದುಕಿ ಬಾಳಿದರು ಮಾಧರಿಯದರು ಎಂಬುದರ ಪರಿಚಯ ಆಯ್ತು.. >>>>>>>>ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ -ಸತ್ಯ- ನ್ಯಾಯ ನಿಸ್ಟೆಗೆ ಸದಾ ಒತ್ತು ಕೊಟ್ಟು ಬದುಕಿದ ಆ ಮಹನೀಯರು ನಮಗೆ ಆದರ್ಶವಾಗಬೇಕು.... ಸುಪ್ರೀತ್ ಹೇಳಿದ ಆ ಸಾಲು ಈಗಿನದಕ್ಕೆ ಸಕತ್ ಸೂಟ್ ಆಗುತ್ತೆ:)... ವಂದನೆಗಳು... ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿಯವರೆ ವಂದನೆಗಳು ' ಎಲೆ ಮರೆಯ ಅಲರು ' ಓದಿದೆ, ಗತಕಾಲದ ಪ್ರಾಮಾಣಿಕ ಚೇತನಗಳ ಪ್ರಾಮಾಣಿಕತೆಯನ್ನು ಸರಳವಾಗಿ ಪರಿಚಯಿಸಲಾಗಿದೆ. ಇನ್ನೊಂದು ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳ ಕುರಿತು ಚೇತನಾ ಪ್ರಕಾಶನದವರು ' ಇದು ಎಂಥ ಜೀವನವಯ್ಯ ' ಎಂಬ ಪುಸ್ತಕ ಹೊರತಂದಿದ್ದಾರೆ. ಅದರಲ್ಲಿ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು, ಬೆಳಗೆರೆ ಜಾನಕಮ್ಮ ಮತ್ತು ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಬಗೆಗೆ ವಿವರಗಳಿವೆ ನಿಮ್ಮ ಈ ಬರಹ ಆ ಪುಸ್ತಕವನ್ನು ನೆನಪಿಸಿಕೊಳ್ಳುವಂತೆ ಮಾಡಿತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.