ಎರಡು ಸಾಲು

4

-೧-

ಬಿಸಿಲ ಬೇಗೆಯಲಿ ಕಾದ
ಬಸವಳಿದು ಒಣಗಿದ್ದ
ಇಳೆಗೆ ತಂಪನೆರೆಯುವ
ಮಳೆಯಾಗಿ ಬಂದೆ ನೀನು

ಮಣ್ಣಲ್ಲಿ ಒಂದಾಗಿ
ಹೇಗೋ ಶಾಂತವಾಗಿದ್ದೆ 
ಕಾಯೊಡೆದು ಚಿಗುರಿದೆ ನಾನು
ನಿನ್ನ ಸವಿಸ್ಪರ್ಶದಿಂದ

-೨-

ಒಮ್ಮೊಮ್ಮೆ ಕಾದಾಡಿ
ಹಿಂದಿಂದೆ ಓಡಾಡಿ
ಮತ್ತೊಮ್ಮೆ ಗುದ್ದಾಡಿ
ಮರುಕ್ಷಣವೇ ಮುದ್ದಾಡಿ
ವೈಷಮ್ಯಗಳ ನಡುವೆಯೂ
ಒಂದಾಗಿ ಬಾಳುವ
ನಾನು ನೀನು
ಅಕ್ವೇರಿಯಂ ಒಳಗಿನ
ಜೋಡಿ-ಮೀನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂದುಶ್ರೀಯವರೇ ನಿಮ್ಮ ಕವನ ತುಂಬಾ ಚೆನ್ನಾಗಿದೆ. ಮಳೆ ನೀರಿಗಾಗಿ ಕಾಯುತ್ತಿರುವ ಬೀಜ ಹಾಗೂ ನೀರಿನಲ್ಲಿ ಸರಸ ವಿರಸಗಳ ಮಧ್ಯೆ ಜೀವಿಸುತ್ತಿರುವ ಜೋಡಿ ಮೀನುಗಳು. ಹೀಗೆ ಬರೆಯುತ್ತಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾಗಿದೆ, ಇಂದುಶ್ರೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹೇಶ್ ಬಾಕಲಿ ಹಾಗೂ ಕವಿನಾಗರಾಜ್ ಇಬ್ಬರಿಗೂ ಧನ್ಯವಾದಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಖತ್,.... ಸಮರಸ‍ ಸ‌ಹಬಾಳ್ವೆ ಬಗ್ಗೆ ಸಖತ್...ಬರಹ‌ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.