....... ...... ..... ಉ೦ಡು ಮಲಗುವ ತನಕ.

4
ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...
ಇನ್ನೇನು ಮುಗೀತು ಅನ್ನುವಷ್ಟರಲ್ಲಿ,
ಇದೇ ಶುರು ಅನ್ನುವ೦ತೆ
ಆಗಿ ಬಿಡುತ್ತದೆ...

ಹನಿದು ಕರಗಿತು ಮುಗಿಲು,
ಎ೦ದೆನಿಸುವಷ್ಟರಲ್ಲೇ,
ಮತ್ತಷ್ಟು ಗಾಢವಾಗಿ,
ರಭಸದಲ್ಲಿ ನೆಲವೇ ಕುಸಿಯುವ೦ತೆ
ಮಳೆ ಸುರಿಯತೊಡಗುತ್ತದೆ...
 

ನನ್ನ ಮಾತಿಗೆ ನಿನ್ನ ವಿರೋಧ,
ನಿನ್ನ ನುಡಿಗೆ ನನ್ನ ಮುನಿಸಿನೊ೦ದಿಗೆ,
ಕವಿದ ನಿರ್ವಿಣ್ಣ ಮೌನ...,
ಮರುಗಳಿಗೆಯೇ ಗಡಿ ದಾಟಿ,
ಆಸ್ಫೋಟಿಸಿ ಬಿಡುತ್ತದೆ...
ಆಗ, ನಾ ನಾನಾಗಿರುವುದಿಲ್ಲ...
ನೀ ನೀನಾಗಿರುವುದಿಲ್ಲ...

ಆದರೆ, 
ಇದೆಲ್ಲದರ ನಡುವೆ ಸರಿದ ಸಮಯಕ್ಕೆ
ಮಾಗಿಸುವ ಗುಣ ಇದೆ...
ಮರೆಸುವ ಗುಣವೂ ಇದೆ...

ಆಗಬೇಕಾದುದೆಲ್ಲ ಆಗಿಹೋಗಿರುವಾಗ,
ಕೊನೆಗೆ ಇಬ್ಬರ ನಡುವೆ
ಉಳಿಯುವುದಿಷ್ಟು...
ನನ್ನ ಗಾಯಕ್ಕೆ ನೀನೇ ಮಲಾಮು ಸವರಬೇಕು..
ಮತ್ತೆ, ನಿನ್ನ ಗಾಯಕ್ಕೆ ನಾನು...
ಆಗ ಕಾಣುವ ಜಗವೆಲ್ಲ ಅದೇಷ್ಟು ಸು೦ದರ...!!
ಜೊತೆಗೆ, ನೀನೂ ಕೂಡ....!!!
ಎ೦ದೆನ್ನುತ್ತ, ಅದೂ ಇದೂ
ಒಲವ ಮಾತುಗಳನ್ನಾಡುತ್ತ,
ಒಬ್ಬರಿಗೊಬ್ಬರು ರಮಿಸುತ್ತ,
ಮನ್ನಿಸುತ್ತಲಿರುವಾಗ...

ಇಬ್ಬರಿಗೂ ಅನ್ನಿಸುವುದಿಷ್ಟು....
ಸಾಕು..!! ಈ ಮಾತು ಮ೦ತ್ರದ ಮೋಡಿ...
ಇದು ಕವಿ ಸಮಯವಲ್ಲ...
ಉ೦ಡಾಗಿದೆ, ಈಗ ಮಲಗುವ ಸಮಯ...

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರಳ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಕುಲಕರ್ಣಿಗಳೆ, ಅಂತೂ ಕುರುಕ್ಷೇತ್ರ ಏನೇ ನಡೆದರೂ ಕೊನೆಗೆ ಬಿಳಿ ಬಾವುಟ ಮತ್ತು ' ನಾನೂ, ನೀನು ಜೋಡಿ, ಈ ಜೀವನ ಎತ್ತಿನ ಗಾಡಿ'ಯೆ ಗಟ್ಟಿ ಎನ್ನುತ್ತಿದ್ದಿರ; ಯುದ್ಧ ಕಾಂಡದಲ್ಲಿ ಲಟ್ಟಣಿಗೆ, ಸೌಟುಗಳು ಕೈಗೆ ಸಿಗದಂತಿರಬೇಕು ಎಂದು ಸೇರಿಸಿಬಿಡಬೇಕಿತ್ತು :-) ಮುನಿಸೆಷ್ಟೆ ಪ್ರಚಂಡವಿದ್ದರೂ ತಣ್ಣಗೆ ಆರಿದ ಕೆಂಡದ ತಂಪೆ  ಮೆಚ್ಚಿದ ಸಂಗಾತಿ ಮನಗಳದು ಎಂದು ಚೆನ್ನಾಗಿ ಹೇಳಿದ್ದೀರಾ - ನಾಗೇಶ ಮೈಸೂರು, ಸಿಂಗಪುರದಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರೀ.. ಅದುವೇ ಸ೦ಸಾರ.. ಸೊಗಸಾದ ಬಣ್ಣನೆ..
ಮನಸ್ಸು ರಮಿಸಿತು..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.