ಇವತ್ತಿನ ದೀಪಾವಳಿ

4.333335

ಮನೆಯ ಕಂಪ್ಯೂಟರ್ ನಲ್ಲಿ ಮುಳುಗಿರುವ ಮಗಳಿಗೆ ತಾಯಿ ಎದ್ದು ಮನೆಯ ಅಂಗಳದಲ್ಲಿ ದೀಪ ಹಚ್ಚುವಂತೆ ಹೇಳಿದಳು. ಅಮ್ಮನ ಮಾತಿಕೆ ಮಗಳು ಕಿವಿಗೊಡಲೇ ಇಲ್ಲ. ತನ್ನ ಕಾರ್ಯದಲ್ಲೇ ಮುಳುಗಿದ್ದಳು. ಸಲ್ಪದರಲ್ಲೇ ಕರೆಂಟ್ ಹೋಯಿತು.
ಅಮ್ಮ ಎದ್ದು ಹೊರಬಂದು ನೋಡಿದಾಗ ಮಗಳು ಕಾಂಪೌಂಡ್ ಮೇಲೆ ಸಾಲು ಹಣತೆ ಇಟ್ಟು, ಅದರ ಅಂದವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಳು.
ಮಗಳು ಆಗತಾನೆ ಅಪ್ಲೋಡ್ ಮಾಡಿದ ಫೋಟೋಗೆ ಬಂದ ಅಮ್ಮನ 'ಲೈಕ್' ನೋಡಿ ಸಂಭ್ರಮಿಸಿದಳು. ಅಮ್ಮ ಕನಿಷ್ಠ ಪಕ್ಷ ಫೇಸ್ಬುಕ್ ನಲ್ಲಿ ಹಾಕಲಾದರೂ ಮಗಳು ದೀಪ ಹಚ್ಚಿದಳೆಂದು ಸಂಭ್ರಮಿಸಿದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.