ಇನ್ನೊಂದಿಷ್ಟು ವಿಚಿತ್ರಾನ್ನ‌ : ಪುಸ್ತಕ‌ ವಿಮರ್ಷೆ

5

ಪುಸ್ತಕ : ಇನ್ನೊಂದಿಷ್ಟು ವಿಚಿತ್ರಾನ್ನ
ಲೇಖಕರು : ಶ್ರೀವತ್ಸ ಜೋಶಿ
ಪ್ರಕಾಶಕರು : ಗೀತಾ ಬುಕ್ ಹೌಸ್
 
 
ಓದುಗರಿಗೇ ಅರ್ಪಿಸಿದ್ದಾರೆ ಪುಸ್ತಕವನ್ನು ಶ್ರೀವತ್ಸ
ಜೋಶಿಯವರ ತಮಾಶೆಯ ಸುರಿಮಳೆಗೆ ನಕ್ಕು ಆಗುವಿರಿ ವತ್ಸ
ಇನ್ನೊಂದಿಷ್ಟು, ಮತ್ತೊಂದಿಷ್ಟು ವಿಚಿತ್ರ ಬರಹಗಳು ಝುಮಝುಮ
ತುಂಬಿದೆ ಇದರಲ್ಲಿ ಚಿತ್ರಗೀತೆಗಳ ಒಗ್ಗರಣೆಯ ಘಮಘಮ!
 

ವಾರದ ಬರಹಗಳ ಸಂಗ್ರಹ
ಮಜ ಮಾಡಲು ಆಗ್ರಹ
ಬರಹ ಶೈಲಿ ಕಲಿಯಲೆಂದು,
ವಿವಿಧ ಲೇಖನಗಳುಳ್ಳ ವಿಗ್ರಹ

 
ಚಿತ್ರಾನ್ನದಷ್ಟೇ ಸರಳ, ಹೆಸರಷ್ಟೇ ವಿಚಿತ್ರಾನ್ನ 
ಇದು pun ಇಂದ ಅಲಂಕರಿಸಿಕೊಂಡ ’ಚಿತ್ರಾ’ ನಾ?
ಟ್ಯಾಗ್-ಲೈನ್ ಲಗುಬಗೆ ಬರಹಗಳ ಬುತ್ತಿಯನ್ನ
ಇದರೊಳಗಿರುವುದು ಜೀವನದ ಗಾಥೆಯ ವಿಚಿತ್ರ ನಾ?
 

ಅನಿವಾಸಿ ಭಾರತೀಯನಾದರೂ ಅಂಜಿಕೆಯಿಲ್ಲ 
ಕನ್ನಡದ ಅಭಿಮಾನ ಎಂದೂ ಬಿಡಲಿಲ್ಲ
ದಿನಪತ್ರಿಕೆ, ಅಂತರ್ಜಾಲ, ಪುಸ್ತಕಗಳಲ್ಲಿ,
ಅವರು ಬರೆಯದಿರುವ ವಿಷಯ ಹುಡುಕುವುದು ಸುಲಭವಲ್ಲ

 
ಅನುಭವಗಳ ಸಂಕಲನ ಮುರಳಿಗಾನ ಅಮ್ರುತಪಾನ
ತಿಂಡಿಗಳ ಹೆಸರೇ ಉತ್ತರವಾದ ರಸಪ್ರಶ್ನೆ ರಂಜನ
ಖಾನಾವಳಿ ಉತ್ತರಾವಳಿ, ಪ್ರೈಜಾವಳಿ ಭೋಜನದ ಔತಣ
ಯುಗಾದಿ ಹಬ್ಬಕ್ಕೂ ರಸಪ್ರಶ್ನೆಯ ತಳಿರುತೋರಣ
 

ತಿಂಡಿ ತಿನಿಸು ತುಂಬಿವೆ
ಆಧ್ಯಾತ್ಮದ ಚರ್ಚೆಗಳೂ ಇವೆ

ಗಣಿತ, ಸಂಸ್ಕೄತ, ತಂತ್ರಜ್ಞಾನದ ಪರ್ವತ
ವಿಷಯ ಮಂಥನದ ಅಮೃತ ಉಣಿಸಿವೆ

 
’ಚ’ ಉವಾಚಿಸಿದ ಚಾಗುಣಿತದ ’ಚ’ರ್ವಿತ ’ಚ’ವರ್ಣಂ
’ಚ’ ಅಕ್ಷರದ ತಿಂಡಿಗಳ ಬಾಯಲ್ಲಿ ನೀರೂರಿಸುವ ತುಪ್ಪದ ಬಿಸಿಯನ್ನಂ
ಎಲ್ಲವೂ ಉಪ್ಪು ಆದರೆ ನಿಮಗೆ ಒಪ್ಪುತ್ತದೆಯೇ?
ಸಿಹಿಸಿಹಿ ರಾಮ(ನ್)ನಾಮ ಪಾಯಸ ಜೊತೆಗೆ ಹಿತವಲ್ಲವೇ?
 

ಗೊತ್ತಿತ್ತೇ ಬಿಸ್ಕತ್ತಿಗೂ ಇರುವ ತಾಕತ್ತು
ಆರೋಗ್ಯಕ್ಕೆ ಕರಿಬೇವಿನ ಹಣ್ಣೆಲೆ ಚಿಗುರಬೇಕಿತ್ತು
ಭೌತಶಾಸ್ತ್ರೀಯ ಬಾತ್ ರೂಮ್ ಸಿಂಗಿಂಗ್ ಜೊತೆ
ಮಜಾ ವಾಣಿ ಓದಿ ಮಜಾ ಮಾಡಬೇಕಿತ್ತು
 

ಸ್ವರ್ಣಾನುಪಾತದ ಬಗ್ಗೆ ನಿಮಗೆಷ್ಟು ಗೊತ್ತು?
ಗಣಿತದ ’ಪೈ’ ವಿಶೇಷ ತಿಳಿಸಲು ಇವರಿಗೆ ಎಷ್ಟು ಹೊತ್ತು
ಆತ್ಮಗೌರವದ ಅಂದ ಆನಂದ ಹಂಚುತ್ತಾರೆ ಹೊಟ್ಟೆ ತುಂಬುವಷ್ಟು
ಸ್ವಲ್ಪ ಕಿಲಾಡಿ, ಅತೀ ಚುರುಕು, ಸೂಕ್ಷ್ಮಬುದ್ಧಿ ಮೆಚ್ಚುವಷ್ಟು
 
ಈ ಪುಸ್ತಕ ಅನೇಕ ತರ್ಕಗಳ ತಂದಿದೆ
ಓದಿಲ್ಲದಿರುವರು ಓದುವ ಸಮಯ ಈಗ ಬಂದಿದೆ
ಇರಬೇಕು ಇದು ಎಲ್ಲರ ಮನೆಯಲ್ಲೂ ಒಂದು ಪ್ರತಿ
ಓದಲು, ಕಲಿಯಲು, ಮೆಚ್ಚುಗೆಯ ವಿಭಿನ್ನ ಜ್ಞಾನ ತುಂಬಿದೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.