ಇನ್ನೇನು ಅವಳು ಬರುವ....

0

ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ...

ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ

ದಿನಗಳ ಕನಸು ಕಾಣುತ್ತಲಿದ್ದೇನೆ..

ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ

ನೆನಪಿಗಾಗಿ ಕಾತರಿಸುತ್ತಿದ್ದೇನೆ...

ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ...

ಶೇಷುವಿನೊ೦ದಿಗಿನ ಹುಡುಗಾಟದ ಪುನರಾರ೦ಭದ

ದಿನಗಳ ಕನಸು ಕಾಣುತ್ತಲಿದ್ದೇನೆ..

ಆಗಾಗ ಜೂಟ್ ಆಟ.. ಮತ್ತೊಮ್ಮೆ ಲತ್ತೆ..

ದಿನಕ್ಕೆರಡು ಬಾರಿ ಆ ಆ ಇ ಈ..

ಮಲಗಿದ ಕ೦ದನ ವದನಕ್ಕೊ೦ದು ಮುತ್ತು..

ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ..

ಆರು ತಿ೦ಗಳ ವಿರಹದ ದಿನಗಳ ದೂರಾಗುವಿಕೆಯ

ಕನಸು ಕಾಣುತ್ತಲಿದ್ದೇನೆ..

ದಿನ ತು೦ಬ ಪ್ರೀತಿಯ ಒರತೆ..ಆಗಾಗ ಪಿರಿ-ಪಿರಿ

ರಚ್ಚೆ ಹಿಡಿದ ಮಕ್ಕಳ೦ತೆ..

ಸುಖದ ನಡುವಿನ ಕಿರಿ-ಕಿರಿಯಿ೦ದಾಗುವ ಆಭಾಸಗಳ

ಕ೦ಡು ಮನದೊಳಗೇ ನಗುವ ದಿನಗಳ

ಪುನರಾಗಮನದ ಸ೦ತಸದಲ್ಲಿದ್ದೇನೆ..

ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ..

ಮೂರು ತಿ೦ಗಳ ಮುದ್ದುವಿನೊ೦ದಿಗೆ..

ಭಣ-ಭಣವೆನಿಸುತ್ತಿದ್ದ ಮನೆ-ಮನಗಳೀಗ

ಮತ್ತೊಮ್ಮೆ ನ೦ದಗೋಕುಲವಾಗಬಹುದಾದ

ಕನಸಿನಲ್ಲಿದ್ದೇನೆ.. ಮುದ್ದು ಕೂಸಿನ ಮಾತುಗಳನ್ನಾಲಿಸುವ

ಸುಖದ ನಿರೀಕ್ಷೆಯಲ್ಲಿದ್ದೇನೆ....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡ ಸರ್ ಕವನ ಚೆನ್ನಾಗಿ ಮೂಡಿದೆ. ಮುದ್ದು ಮಗುವಿನ ನಗು ನಿಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಕವನ ಬರೆಯುವಂತೆ ಮಾಡಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ತಮ್ಮ ಮನದಲ್ಲಿನ ಉಲ್ಲಾಸ ಪದಗಳಲ್ಲಿ ಮೂಡಿದೆ. ನಿರೀಕ್ಷೆಯ ದಿನಗಳು ಕಡಿಮೆಯಾಗುತ್ತಾ ಬಂದಂತೆ ಮನ ಉತ್ಸುಕತೆಯಿಂದ ಮುದಗೊಳ್ಳುತ್ತದೆ. ಆಗಮನದ ಪ್ರಯಾಣ, ಮುಂದಿನ ಈವನ ಎಲ್ಲವೂ ಸುಖಮಯವಾಗಿರಲಿ ಎಂಬ ಹಾರೈಕೆ. ‍‍‍‍‍‍‍_ಆಸು ‍‍‍‍‍‍‍‍‍‍‍‍‍‍‍‍‍‍‍‍‍‍
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1. :-)

ಬ0ದ ನ0ತರ ಶ್ರು0ಗಾರದ ಸುಖ ಸಂಸಾರದ ಸೊಗಸಿನ ಚಿತ್ರದ ಕಾವ್ಯಗಳು ಹೊರಹೊಮ್ಮಬಹುದು, ಶುಭಾಷಯ ನಾವಡರೆ ನಾವೆಲ್ಲ ನಿಮ್ಮ ಹೊಸ ಲಹರಿಯ ಕವನಗಳ ನಿರೀಕ್ಷೆಯಲ್ಲಿದ್ದೇವೆ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶುಭವಾಗಲಿ ನಿಮಗೆ, ಮುದ್ದು ಮಗಳ ಕಲರವ ಮನೆ ಮನ ತು೦ಬಲಿ ಎ೦ದು ಪ್ರೀತಿಯ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶುಭವಾಗಲಿ ... ಇನ್ನೂ ಹೆಚ್ಛು ಕವನಗಳು ಮೂಡಿ ಬರಲಿ ... ಹಾಗೆಯೇ 'ಲೇಖಕರ ಪರಿಚಯ'ದಲ್ಲಿ ನವಜಾತ ಶಿಶುವಿನ ಹೆಸರನ್ನು ಸೇರಿಸಿ, ಸಮಯ ಸಿಕ್ಕಾಗ ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಲ್ಲಿನ ಸ0ತಸ ಉಲ್ಲಾಸ ಹೆಚ್ಚಿದ0ತೆ ನಿಮ್ಮ ಕವನಗಳಿ0ದ ನಮ್ಮ ಸ0ತಸವೂ ಹೆಚ್ಚುತ್ತಿದೆ. ಇನ್ನೂ ಹೆಚ್ಚು ಹೆಚ್ಚು ಕವನಗಳು ಮೂಡಿ ಬರಲಿ. ನಿಮ್ಮ ಮನೆಯಲ್ಲಿ ಮನದಲ್ಲಿ ಸ0ತಸ ಉಕ್ಕಲಿ ಎ0ದು ಆಷಿಸುವೆ. ಅ0ಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನದೊ0ದು ಪ್ರಶ್ನೆ ನನಗೆ ತಿಳಿದ0ತೆ ಲತ್ತೆ ಎ0ದರೆ ಪಗಡೆ ಆಟ ನೀವು ಮಗಳೊಡನೆ ಆಡುವ ಲತ್ತೆಯಾಟ ಯಾವುದು? ಅ0ಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅ0ಬಿಕಾರವರೆ ಲತ್ತೆ ಅನ್ನುವದಕ್ಕೆ ಪಗಡೆಯಲ್ಲಿನ ಒ0ದು ಗರ ಅನ್ನುವ ಅರ್ಥವಿದ್ದರು, ಲತ್ತೆ ಅಮ್ದರೆ ಏಟು, ಹೊಡೆತ, ಕಾಲಿನಿಮ್ದ ಒದೆಯುವುದು, ಮಾಸ್ತರ ಕೋಲಿನಿಮ್ದ ಹೊಡೆಯುವುದು ಅನ್ನುವ ಅರ್ಥಗಳಲ್ಲಿ ಉಪಯೋಗಿಸುತ್ತಾರೆ ! >>ಹುಡುಕು ಪದ: ಲತ್ತೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಲತ್ತೆ ನಾಮಪದ (<ಹಿಂ. ಲತ್ತಾ) ಹೊಡೆತ, ಒದೆತ ನಿಮ್ಮದೇ ನಿಘಂಟು ಲತ್ತೆ ನಾಮಪದ ಒದೆತ; ಏಟು; ಇಂದ: kiran h ದಾಸ ಸಾಹಿತ್ಯ ಕೋಶ ಲತ್ತೆ - ಒದೆ, ಏಟು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೇ.. ನೀವು ಸೂಚಿಸಿದ ಅರ್ಥ ಸರಿಯಾಗಿದೆ... ಕವನದಲ್ಲಿಯೂ ಆಪದವನ್ನು ಆ ಅರ್ಥದಲ್ಲಿಯೇ ಬಳಸಿದ್ದೇನೆ.. ಇನ್ನು ನಾವಡ ಉವಾಚವನ್ನು ಮೆಚ್ಚಿ, ನನ್ನನ್ನು ಹಾಗೂ ನನ್ನ ಕುಟು೦ಬವನ್ನೂ ಹರಸಿದ ನಿಮ್ಮೆಲ್ಲರಿಗೂ ನಾನು ಋಣಿ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹೋ,ಭಾವನಾತ್ಮಕ ನುಡಿಗಳು. ಅಭಿನ0ದನೆಗಳು ನಾವಡರೆ ‍‍‍‍.ಶುಭಹಾರೈಕೆಗಳು ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.