ಇನ್ನೂ ಒಂದು ... ಕತೆ.

2.5

ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ?


ರಾಮೋ : ಹೌದ್ರೀ..ಆಶ್ಚರ್ಯ! ಏರ್‌ಟೆಲ್ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್‌ಫರ್ಮ್ ಮಾಡಿಕೊಂಡೆ.


ಪಾ ಸಾ : ಅವರನ್ನು ಭೇಟಿಯಾಗುವುದು ನನಗೂ ಇಷ್ಟ. ಆದರೆ ರಾತ್ರಿ ಹನ್ನೊಂದುವರೆಗೆ ಬರಬೇಕು ಅಂದಿದ್ದಾರಲ್ಲಾ?


ರಾಮೋ : ಹೋಗೋಣಾರೀ..ಒಂದು ರಾತ್ರಿಯ ಮಟ್ಟಿಗೆ ನಿದ್ರೆ ಬಿಟ್ಟರಾಯಿತು. ನೀವು ಮೆಜೆಸ್ಟಿಕ್‍ಗೆ ೯ಗಂಟೆಗೆ ಸರಿಯಾಗಿ ಬನ್ನಿ. ಕಾರು ಕಳುಹಿಸುತ್ತೇನೆ ಎಂದು ಗಣೇಶರೇ ಹೇಳಿದ್ದಾರಲ್ಲಾ..


ಪಾಸಾ : ಅದು ಸರೀರೀ..ಹಿಂದೆ ಬರುವುದು..?


ರಾಮೋ : ಅದಕ್ಕೂ ಗಣೇಶರು ಏನಾದರೂ ವ್ಯವಸ್ಥೆ ಮಾಡಿಯಾರು. ಈಗ್ಯಾಕೆ ಅದರ ಯೋಚನೆ. ಉಳಿದವರಿಗೂ ಫೋನ್ ಮಾಡಿ ವಿಚಾರಿಸಿದಿರಾ?


ಪಾಸಾ : ಈಗ ವಿಚಾರಿಸುತ್ತೇನೆ. ನೀವು ಗ್ಯಾರಂಟಿ ತಾನೆ?


ರಾಮೋ : ೯ಕ್ಕೆ ಶಾರ್ಪ್-ಮೆಜೆಸ್ಟಿಕ್‌ನಲ್ಲಿ ಸಿಗೋಣ.


ಪಾಸಾ : ಹಲೋ..ಚಿಕ್ಕು.. ಚಿಕ್ಕು ಇದಾನಮ್ಮಾ ಮನೆಯಲ್ಲಿ?


ಹೆಣ್ಣಿನ ಧ್ವನಿ : ಚಿಕ್ಕೂನೂ ಇಲ್ಲಾ ಕುಕ್ಕೂನೂ ಇಲ್ಲ. ನೀವ್ಯಾರ್ರೀ ಮಾತನಾಡೋದು?


ಚಿ : ಲೇ..ಕೊಡೇ ಇಲ್ಲಿ..ಚಿಕ್ಕು ಎಂದು ಕರೆದರೆ ನಮ್ಮ ಸಂಪದಿಗರೇ ಇರಬೇಕು. ಓ..ಪಾರ್ಥಸರ್..ಗಣೇಶಣ್ಣನಲ್ಲಿ ಹೋಗಲು ತಾನೇ?... ನಾನಾ... ರಾತ್ರಿ ಹೊತ್ತು...ಸಾರ್..ಬೇಕಿದ್ದರೆ ನಿಮಗೆಲ್ಲಾ ನಿದ್ರೆ ಬರದ ಹಾಗೇ ಒಂದು ಫ್ಲಾಸ್ಕ್ ಪೂರ್ತಿ ಕಾಫಿ ಮೆಜೆಸ್ಟಿಕ್‌ಗೆ ತಂದು ಕೊಡುವೆ. ನಾನು ಮಾತ್ರ ರಾತ್ರಿ ಬರೊಲ್ಲಾ..ಬರೋಲ್ಲಾ..ಬರೋಲ್ಲಾ.


ಪಾಸಾ : ಸರಿ..ಒಂದು ಸಾರಿ ಹೇಳಿದರೆ ಅರ್ಥವಾಗುತ್ತದೆ. ಕಾಫಿ ನೆನಪಲ್ಲಿ ತಾ.


ಪಾಸಾ : ಹಲೋ..ಕವಿನಾಗರಾಜರೆ, ಗಣೇಶರು ನಿಮಗೂ ಬರಲು ಹೇಳಿದಾರಲ್ಲಾ?


ಕವಿ : ನಿಮಗೆಲ್ಲಾ ಬೇರೆ ಕೆಲಸವಿಲ್ಲವಾ? ಅವರಿಗೆ ಶಾಸ್ತ್ರ, ತತ್ವ ಏನೂ ಗೊತ್ತಿಲ್ಲ. ಸರಿಯಾಗಿ ಲೇಖನ ಬರೆಯಲೂ ಬರುವುದಿಲ್ಲ. ಅವರನ್ನು ಭೇಟಿಯಾಗಲು ನಡುರಾತ್ರಿ ಹೋಗಬೇಕಾ? ಹಾಂ..ನೀವು ಹೋಗುತ್ತೀರಾದರೆ ಮುಂಜಾಗ್ರತೆಯಾಗಿ ಹೊಟ್ಟೆ ತುಂಬಾ ತಿಂದುಕೊಂಡು ಹೋಗಿ. ಅಲ್ಲಿ ತಿನ್ನಲು ಇದ್ದರೂ ನಿಮಗೇನೂ ಸಿಗಲಿಕ್ಕಿಲ್ಲ.


ಪಾಸಾ : ಹ್ಹ ಹ್ಹ ಹೌದು ಸರ್. ಜಯಂತ್ ಬರುವನೋ ಎಂದು ವಿಚಾರಿಸುವೆ.


ಪಾಸಾ : ಹಲೋ ಜಯಂತ್...


ಜ : ನಾನು ರೆಡಿ ಸರ್. ೯ ಗಂಟೆಗೆ ಸರಿಯಾಗಿ ಬರುವೆ.


ಪಾಸಾ :ಹಾಗಿದ್ದರೆ ಮೂರು ಜನ ಈಗ ಕನ್‌ಫರ್ಮ್ ಆಯಿತು. ಇನ್ನು ಸಪ್ತಗಿರಿವಾಸಿಗೆ ಕಾಲ್ ಮಾಡುವೆ.


ಪಾಸಾ : ಸ.........


ಸ : ಗುರುಗಳೇ.. ಗಣೇಶಣ್ಣನ ಭೇ...


ಇಂತಹ ಸಂ...ಕ್ಕಾಗಿ ಕಾ....ದೆ. ಆದರೆ ಗುರುಗಳೇ, ನನಗೆ ನಾಳೆ ಪರೀಕ್ಷೆ ಇದೆ. ಕ್ಷ..ಸಿ


ಈಸಲ ನೀ......ನ್ನಿ.


ಪಾಸಾ : ಅರ್ಥವಾಯಿತು.


ರಾತ್ರಿ ೯ ಗಂಟೆಗೆ ಪಾರ್ಥಸಾರಥಿಯವರು, ರಾಮ ಮೋಹನರು, ಜಯಂತ್, ಚಿಕ್ಕು(ಫ್ಲಾಸ್ಕ್‌ನೊಂದಿಗೆ) ಮೆಜೆಸ್ಟಿಕ್‌ನಲ್ಲಿ ಒಬ್ಬರಿಗೊಬ್ಬರು ಭೇಟಿಯಾಗುವಾಗಲೇ...."ಶಾಂತಲಾ ಸಿಲ್ಕ್ ಮುಂದೆ ಒಂದು ಐಟೆನ್ ಕಾರು ನಿಂತಿದೆ. ಅದರಲ್ಲಿ ಬನ್ನಿ, ನಿಮ್ಮ ನಿರೀಕ್ಷೆಯಲ್ಲಿ-ಗಣೇಶ" ಎಂಬ ಮೆಸೇಜ್ ನಾಲ್ಕೂ ಜನರ ಮೊಬೈಲ್‌ಗೆ ಬಂತು. ಕಾರಿನ ಬಳಿ ಹೋಗಿ ಒಮ್ಮೆ ಕಾರಿನೊಳಗೆ ಬಗ್ಗಿ ನೋಡಿದರು. " ನಾನು ಗಣೇಶರಲ್ಲ. ಅವರ ಡ್ರೈವರ್. ದೂರದ ಹಳ್ಳಿಗೆ ಹೋಗಬೇಕು. ನೀವು ಬೇಗ ಹತ್ತಿ.." ಎಂದನು ಡ್ರೈವರ್.ಚಿಕ್ಕು ಬಿಟ್ಟು ಎಲ್ಲರೂ ಹಿಂದಿನ ಸೀಟಿನಲ್ಲಿ ಹತ್ತಿ ಕುಳಿತರು. ಡ್ರೈವರ್ ಚಿಕ್ಕುವನ್ನೊಮ್ಮೆ ನೋಡಿದ. "ಇಲ್ಲಾ.ನಾನು ಬರುವುದಿಲ್ಲ." ಎಂದು ಕಾಫಿ ಫ್ಲಾಸ್ಕ್ ಪಾರ್ಥರ ಕೈಗೆ ಒಪ್ಪಿಸಿ, ಓಡಿದ.


ಕೂಡಲೇ ಕಾರು ಸ್ಟಾರ್ಟ್ ಮಾಡಿದ ಡ್ರೈವರ್ ಕಾರನ್ನು ೧೦೦-೧೨೦ ಕಿ.ಮೀ ವೇಗದಲ್ಲಿ ಓಡಿಸುತ್ತಾ, ಟೇಪ್ ಆನ್ ಮಾಡಿದ. "ತಂಗಾಳಿಯಲ್ಲಿ ನಾನು........." ಇಂಪಾದ ಹಾಡು,ಜತೆಯಲ್ಲಿ ಎಸಿ ತಂಪು. ಆದರೂ ಪಾರ್ಥರು ಹಾಡು ಚೆನ್ನಾಗಿಲ್ಲ, ಬೇರೆ ಹಾಕು ಅಂದರು.


ಡ್ರೈವರ್ ಹಾಡು ಬದಲಾಯಿಸಿದ.."ಭೂತ್ ಹೂಂ ಮೈ........." ಪಾರ್ಥರು ಕರ್ಚೀಪ್‌ನಲ್ಲಿ ಮುಖ ಒರೆಸುತ್ತಾ, ಒದ್ದೆ ಕರ್ಚೀಪ್‌ನ್ನು ಹಿಂಡಿ ಪುನಃ ಮುಖ ಒರೆಸುತ್ತಾ " ಅಬ್ಬಾ..ಈಈ ಸಲ ಬೆಂಗಳೂರು ಸೆಖೆ ಸಹಿಸಲಾಗುತ್ತಿಲ್ಲ. ಸುಪ್ರೀತ್ ಬರೆದುದು ಸತ್ಯ."ಎಂದು ಜಯಂತ್‌ನನ್ನು ನೋಡಿದರೆ ಚಳಿಗಾಲದಲ್ಲಿ ಊಟಿಯಲ್ಲಿರುವಂತೆ ನಡುಗುತ್ತಿದ್ದಾನೆ. ರಾಮಮೋಹನರು ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದಾರೆ. "ಸರ್ರ.. ಸಂಪದದಲ್ಲಿ ದೆವ್ವಗಳ ಕತೆ ನೀವು ಮೂವರೇ ಬರೆಯುವುದಲ್ವಾ?" ಎಂದ ಡ್ರೈವರ್.


(ಮುಂದುವರೆಯುವುದು)  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಪ....ಗಣೇಶ್ ಜಿ...ಅಲ್ಲಲ್ಲ ಅಂಡಾಂಡಭಂಡರೆ; ಮೂವರಿಗೂ ಭೂತ ಬಿಡಿಸುತ್ತೀರೆಂದು ಕಾಣುತ್ತದೆ. ಇದನ್ನೂ ನೀವೆ ಬರೆದದ್ದೋ ಅಥವಾ ನಿಮ್ಮ ಹೆಸರು ಹೇಳಿಕೊಂಡು ಯಾವುದಾದರೂ....ನಿಮ್ಮ ಪ್ರೇತಗಣ ಬರೆದದ್ದೋ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಅಂಡಾಂಡಭಂಡರೆ; ಮೂವರಿಗೂ ಭೂತ ಬಿಡಿಸುತ್ತೀರೆಂದು ಕಾಣುತ್ತದೆ ಶ್ರೀಧರರೆ ಇದೊಳ್ಳೆ ಜೋಕು ಮನುಷ್ಯರಿಗೆ ಭೂತ ಬಿಡಿಸಬಹುದು ಭೂತಗಳಿಗೆ ಭೂತ ಬಿಡಿಸುವುದು ಸಾದ್ಯವೆ ? ಸದ್ಯ ಮೂರು ಭೂತಗಳು ಸೇರಿ ಗಣೇಶರನ್ನು ಕಾಡದಿದಲ್ಲಿ ಸಾಕಾಗಿದೆ! ಏನಂತಿರೆ ಗಣೇಶ್ ಸಾರ್ ! ಹೆದರಬೇಡಿ ಕತೆ ಮುಂದುವರೆಸಿ. ಅಂದ ಹಾಗೆ ಮೊನ್ನೆ ಮಲ್ಲೇಶ್ವರಕ್ಕೆ ಹೋಗಿದ್ದೆ, ಸುಮ್ಮನೆ ಅದ್ಯಾರೊ ... ಅದೆಂತದೊ ಭಾರಿಮುತ್ತು ಅಂತೆ ನಿಮ್ಮ ವಿಳಾಸ ಕೇಳಿದಳು........... ‍*** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ, ಮಾತುಮಾತಿಗೆ ಭಾರಿಮುತ್ತಿನ ಭಯತೋರಿಸುವಿರಲ್ಲಾ!? ಮಂಜಣ್ಣ ಸಂಪದದಲ್ಲಿ ನಾಪತ್ತೆಯಾಗಿದ್ದರೂ ಭಾರಿಮುತ್ತಿನ ಕೈಯಿಂದ ನನ್ನನ್ನು ಬಿಡಿಸಲು ಕೂಡಲೇ ಬರುವರು. ಕೊಡಿ ಬೇಕಿದ್ದರೆ ನನ್ನ ಅಡ್ರೆಸ್: Ondu mallige mane, next to baalkaniyalli koti mane, putta halli, bengaluru. :) >>>ಸದ್ಯ ಮೂರು ಭೂತಗಳು ಸೇರಿ ಗಣೇಶರನ್ನು ಕಾಡದಿದಲ್ಲಿ ಸಾಕಾಗಿದೆ! -ಇದೇ ಭಯ ನನಗೂ.. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್‌ಜಿ, ನನ್ನನ್ನು ನಂಬಿ. ಇದು ನನ್ನ ಕೆಲಸವಲ್ಲ. ನನ್ನ ಬಳಿ ಇವರ್ಯಾರದ್ದೂ ಫೋನ್ ನಂಬರು ಇಲ್ಲ. ಎಲ್ಲಾದರೂ ಇದ್ದರೂ ರಾತ್ರಿ ಕರೆಯದೇ ಹಗಲಲ್ಲಿ ಕರೆದು, ಇವರಿಗಾಗಿ ಸ್ಪೆಷಲ್ ಅಡುಗೆ ಮಾಡಿ, ನಾನು ತಿಂದು ಕಳುಹಿಸುತ್ತಿದ್ದೆ. :) ಅದೂ ಅಲ್ಲದೇ ಈ ದೆವ್ವ ಭೂತಗಳೆಂದರೆ ನನಗೆ ಭಯ. ಅವುಗಳ ಕತೆ ಓದುವುದೇ ಇಲ್ಲ. ಸಾಕ್ಷಿ ಬೇಕಿದ್ದರೆ ರಾಮಮೋಹನರು, ಜಯಂತು ಬರೆದಿದ್ದಾರಂತಲ್ಲಾ ದೆವ್ವದ ಕತೆ- ನನ್ನ ಪ್ರತಿಕ್ರಿಯೆ ಇದೆಯಾ ನೋಡಿ. ಇಲ್ವಲ್ಲಾ? ಹಾಗಿದ್ದರೆ ಯಾರದೀ ಕೆಲಸ? ಮನೆ ಬಳಿ ಹೆಗ್ಗಣಗಳಿವೆ-ಪ್ರೇತಗಣ ಅಂದು ಪುನಃ ಹೆದರಿಸಬೇಡಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮು‍೦ದೇನು?? ಐ10 ಕಾರು ಎ೦ದಾಕ್ಷಣ ನಮ್ಮ ಮ೦ಜಣ್ಣ ಬ೦ದರೇನೋ ಎ೦ದುಕೊ೦ಡೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸದ್ಯ, ಭೂತಕಾಟದಿಂದ ನನ್ನನ್ನು ದೂರವಿಟ್ಟಿರಲ್ಲಾ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಂ ಹ್ರಾಂ.. ಹ್ರೀಂ..... ಫಟ್ ಸ್ವಾಹಾ... ಮುಂದ.... ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:()) ಸಧ್ಯ ನನ್ ಆಂಗ್ಲ ಭಾಷಾ ಪರೀಕ್ಷೆ ಇದ್ದುದರಿಂದ ನಾ ಬಚಾವ್!! ಗುರುಗಳು- ಜಯಂತ್ ಮತ್ತು ರಾಮ ಮೋಹನರು ಏನೂ ಸಾಮಾನ್ಯರಲ್ಲ ಬಿಡಿ- ಭೂತವನ್ನೇ ಆಟ ಆಡಿಸ್ವಾವರು.. ತಾಳಕ್ಕೆ ತಕ್ಕಂತೆ ಕುಣಿಸುವವರು.. ಸರಿ ಮಧ್ಯ ರಾತ್ರಿ ಗಣೇಶ್ ಅಣ್ಣ ಈ ಬರಹ ಬರೆಯಲು ಯಾವ ಭೂತ ಪ್ರೇರಣೆ ನೀಡಿತೋ ನಾ ಅರಿಯೆ, ಅಥವಾ ಈಗಿನ ಸಂಪದ ಟ್ರೆಂಡ್(ಯೂ ಟೂಬ್ ಟ್ರೆಂಡ್ ತರಹ!!) ಗೆ ತಕ್ಕಂತೆ ದೆವ್ವದ ಕುರಿತು ಕಥೆ ಬರೆದರೆ? ಅವರೇ ಉತ್ತರಿಸಬೇಕು...!! ಚಿಕ್ಕೂನೂ ಇಲ್ಲಾ ಕುಕ್ಕೂನೂ ಇಲ್ಲ.:())) ಚಿಕ್ಕು ಅಕ ಈಗೀಗ ಚಹಾ ಕಪ್ಪು ಹಂಚಿಕೊಂಡ!! ಚೇತನ ಅವರನ್ನ ಈ ಉದ್ದೇಶಕ್ಕಾಗಿ ನೀವ್ ಕರೆದದ್ದು ಅಚ್ಚರಿ!! ನಮಗೆ ಎಲೆ ಹಾಕಿ ಊಟ ನೀಡಿ ನೆತ್ತಿಗೆ ಹತ್ತಿರುವಾಗ ಗಣೇಶ್ ಅಣ್ಣ- ನೀರು ತರುವೆ ಅಂತ ಹೋದರ?.. ಬೇಗ ಬನ್ನಿ ಪ, ನೀರ್ ಜೊತೆ( ಎರಡನೆ- ಕೊನೇ ಭಾಗ!!) ಬರಹ . ನಗೆ ಉಕ್ಕಿಸಿತು.. :())) ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> "ಸರ್ರ.. ಸಂಪದದಲ್ಲಿ ದೆವ್ವಗಳ ಕತೆ ನೀವು ಮೂವರೇ ಬರೆಯುವುದಲ್ವಾ?" ಎಂದ ಡ್ರೈವರ್. ದೆವ್ವದ ಕತೆ ಬರೆಯುವವರೇನೋ ಮೂರು ಮಂದಿ ಇರಬಹುದು. ಓದುವ ದೆವ್ವಗಳು ನೂರಾರು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೆವ್ವದ ಕತೆ ಬರೆಯುವವರೇನೋ ಮೂರು ಮಂದಿ ಇರಬಹುದು. ಓದುವ ದೆವ್ವಗಳು ನೂರಾರು!!! +1 :(()))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಶ್ರೀಕಾಂತ್, ಕವಿನಾಗರಾಜ್,ಸಪ್ತಗಿರಿವಾಸಿ, ರಾಮಮೋಹನ, ಶ್ರೀಧರ್, ಜಯಂತ್, ಪಾರ್ಥಸಾರಥಿ, ಚೇತನ್ ಎಲ್ಲರಿಗೂ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬ ನಾನಂತೂ ಬಚಾವ್ ಹುಷಾರ್ ಗಣೇಶಣ್ಣ, ರಾಮೋ, ಪಾಸಾ, ಜಯಂತ್ ತುಂಬಾನೇ ಡೇಂಜರ್. ಜೊತೆಗೆ ಡ್ರೈವರ್ ಬೇರೆ, ನೀವಂತೂ ಆ ಕಾರಿಗೆ ಹತ್ಬೇಡಿ. ಅಥವಾ ಈ ಮೂವರು ನಮ್ಮನ್ನ ಹೆದರಿಸಿದ್ದಕ್ಕೆ ರಿವೆಂಜ್ ತಗೊಳ್ಳೋ ಪ್ಲಾನ್ ಏನಾದರೂ ಮಾಡಿದ್ದೀರಾ?? ನಿಮಗೆ ಕಂಪನಿ ಕೊಡೋಕೆ ನಾವ್ಯಾರೂ ಇಲ್ಲ... ಟೇಕ್ ಕೇರ್ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ನಿಮಗೆ ಕಂಪನಿ ಕೊಡೋಕೆ ನಾವ್ಯಾರೂ ಇಲ್ಲ... ಟೇಕ್ ಕೇರ್ !!! -ಅಂದ ಹಾಗೆ ಕಾಫಿ ಚೆನ್ನಾಗಿದೆ ಅಲ್ವಾ? ಇಲ್ಲದಿದ್ದರೆ...ಟೇಕ್ ಕೇರ್..ಆ ಮೂವರೂ ಡೇಂಜರ್ರು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಸರ್ರ.. ಸಂಪದದಲ್ಲಿ ದೆವ್ವಗಳ ಕತೆ ನೀವು ಮೂವರೇ ಬರೆಯುವುದಲ್ವಾ?" ಎಂದ ಡ್ರೈವರ್. ಜಯಂತ್ : ಹೌದೌದು ನಾವೇ..ಇನ್ನು ಮುಂದೆ ಬರೆಯುವುದಿಲ್ಲ, ಆಯ್ತಾ? ಡ್ರೈ : ಬೇಡ..ಬೇಡ.ನಿಲ್ಲಿಸಬೇಡಿ. ನಾನಂತೂ ನಿಮ್ಮ ಮೂವರ ಅಭಿಮಾನಿ. ರಾತ್ರಿ ಕಾರ್ ಡ್ರೈವ್ ಮಾಡಲಿಕ್ಕಿದ್ದರೆ ಮೊದಲೆಲ್ಲಾ ೪-೫ ಕಡೆ ನಿಲ್ಲಿಸಿ ಟೀ ಕುಡಿದರೂ ನಿದ್ರೆ ತೂಕಡಿಸುತ್ತಿತ್ತು. ಈಗ ನಿಮ್ಮ ದೆವ್ವದ ಕತೆ ಓದಿ, ಈ ಹಾಡುಗಳನ್ನು ಹಾಕಿಕೊಂಡು ಹೋದರೆ ಭಯದಲ್ಲಿ ನಿದ್ರೆಯೇ ಬರುವುದಿಲ್ಲ. ಅದಕ್ಕೆ ನಿಮಗೊಂದು ಥ್ಯಾಂಕ್ಸ್. ಜ : ಹಾಗಿದ್ದರೆ ನೀನು ದೆವ್ವ ಅಲ್ಲವಾ? ಡ್ರೈ : ಹೇ..ತಮಾಷೆ ಮಾಡುತ್ತಿದ್ದೀರಾ? ಗಣೇಶರೂ ಸಹ ನಿಮ್ಮ ಕತೆ ಓದುವುದರಿಂದಲೇ ರಾತ್ರಿ ೨-೩ ಗಂಟೆಯವರೆಗೂ ನಿದ್ರೆ ಮಾಡದೇ ಕೆಲಸ ಮಾಡುತ್ತಿರುತ್ತಾರೆ. ರಾಮಮೋಹನ : ೨-೩ ಗಂಟೆಯವರೆಗೆ ಅದೇನು ಕೆಲಸ ಮಾಡುತ್ತಿರುತ್ತಾರೆ? ಅಲ್ಲಾ ಗಣೇಶರು ನೋಡಲು ಹೇಗಿದ್ದಾರೆ? ಡ್ರೈ : ನೀವೇ ನೋಡುವಿರಂತೆ......... ಎಂದು ಹೇಳಿ ಒಂದು ಮರದ ಪಕ್ಕದಲ್ಲಿ ಕಾರನ್ನು ಪಾರ್ಕ್ ಮಾಡಿದನು. ಮೂವರೂ ಕೆಳಗಿಳಿದು ನೋಡುತ್ತಾರೆ- ಸುತ್ತಲೂ ಮರಗಳು. ಮನೆ ಎಲ್ಲೂ ಕಾಣಿಸುತ್ತಿಲ್ಲ. "ಅಲ್ಲಿ ನೋಡಿ ಪರ್ಕುಟ್ ಸ್ಕೂಟರ್! ಗಣೇಶರದ್ದೇ ಇರಬೇಕು." ಎಂದರು ಪಾರ್ಥರು. "ಸ್ಕೂಟರ್ ಏನೋ ಇದೆ.ಗಣೇಶರ ಮನೆ ಎಲ್ಲಿ ಡ್ರೈವರ್?" ಎಂದು ರಾಮಮೋಹನರು ಬಗ್ಗಿ ಕಾರೊಳಗೆ ನೋಡಿದರೆ ಡ್ರೈವರ್ ಇಲ್ಲಾ! ಸುತ್ತಲೂ ಎಲ್ಲೂ ಕಾಣಿಸುತ್ತಿಲ್ಲ! ಮೊಬೈಲಲ್ಲಿ ಗಂಟೆ ನೋಡಿದಾಗ ಸರಿಯಾಗಿ ೧೨ ಗಂಟೆ! "ಲೇಟು ಮಾಡಿದಿರಿ.. ಆದರೂ ಪರವಾಗಿಲ್ಲ. ನಿಮಗೆಲ್ಲಾ ಸುಸ್ವಾಗತ" ದನಿ ಕೇಳಿಸಿತು. ಜನ ಕಾಣಿಸುತ್ತಿಲ್ಲಾ. "ಯಾಯ್ಯಾಯಾರು ನೀವು? ಗಗಗಣೇಶರಾ? ಎಲ್ಲಿದ್ದೀರಾ?" "ಇಲ್ಲೇ ಮರದ ಮೇಲೆ ನೋಡಿ.." ಮೂವರೂ ಕತ್ತೆತ್ತಿ ಮೇಲೆ ನೋಡಿದರು.............. ಬಿಳೀ ಬಟ್ಟೆ ಧರಿಸಿದ ದಪ್ಪಗಿನ ದೇಹ ತಲೆಕೆಳಗಾಗಿ ನೇತಾಡುತ್ತಿತ್ತು. ಎದುರಿಗೊಂದು ಲ್ಯಾಪ್‌ಟಾಪ್ ಸಹ ಉಲ್ಟಾ ನೇತಾಡುತ್ತಿತ್ತು! ********************* (ಮೂವರೂ ಎಚ್ಚರಗೊಂಡು ಸುಧಾರಿಸಿದ ಮೇಲೆ ಮುಂದಿನ ಭಾಗ..)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾತ್ರಿ ಕಾರ್ ಡ್ರೈವ್ ಮಾಡಲಿಕ್ಕಿದ್ದರೆ ಮೊದಲೆಲ್ಲಾ ೪-೫ ಕಡೆ ನಿಲ್ಲಿಸಿ ಟೀ ಕುಡಿದರೂ ನಿದ್ರೆ ತೂಕಡಿಸುತ್ತಿತ್ತು. :(((( ಈಗ ನಿಮ್ಮ ದೆವ್ವದ ಕತೆ ಓದಿ, ಈ ಹಾಡುಗಳನ್ನು ಹಾಕಿಕೊಂಡು ಹೋದರೆ ಭಯದಲ್ಲಿ ನಿದ್ರೆಯೇ ಬರುವುದಿಲ್ಲ. ಅದಕ್ಕೆ ನಿಮಗೊಂದು ಥ್ಯಾಂಕ್ಸ್. :*()())) ಜ : ಹಾಗಿದ್ದರೆ ನೀನು ದೆವ್ವ ಅಲ್ಲವಾ? :()) ಡ್ರೈ : ಹೇ..ತಮಾಷೆ ಮಾಡುತ್ತಿದ್ದೀರಾ? !! ಗಣೇಶರೂ ಸಹ ನಿಮ್ಮ ಕತೆ ಓದುವುದರಿಂದಲೇ ರಾತ್ರಿ ೨-೩ ಗಂಟೆಯವರೆಗೂ ನಿದ್ರೆ ಮಾಡದೇ ಕೆಲಸ ಮಾಡುತ್ತಿರುತ್ತಾರೆ. :(()))) ರಾಮಮೋಹನ : ೨-೩ ಗಂಟೆಯವರೆಗೆ ಅದೇನು ಕೆಲಸ ಮಾಡುತ್ತಿರುತ್ತಾರೆ? ??? ಅದ್ ಯಾರಿಗ್ಗೊತ್ತು! ಗಣೇಶ್ ಅಣ್ಣ- ಭಾಗ ೨- ಪ್ರತಿಕ್ರಿಯೆಯಲ್ಲಿ ಸೇರಿಸಿ(ಹಿಂದೊಮ್ಮೆ ಅಂಡಾಂಡಭಂಡ ಸ್ವಾಮಿಗಳ ಜತೆ ಸಪ್ತಗಿರಿವಾಸಿ | ಸಂಪದ - Sampada http://sampada.net/b... >>>> >>>'ಅಂಡಾಂಡ ಭಂಡಸ್ವಾಮಿಗಳ ಊಟದ ವೈಭವ' ನ್ನು ಹೀಗೆಯೇ ಸೇರಿಸಿದ್ದೀರಿ!) ಸಖತ್ತಾಗಿ ಬರೆದಿರುವಿರಿ... ನೀವ್ ಹತ್ತು ಹದಿನೈದು ನಿಮಿಷ ಮೌನವಾಗಿದ್ದು ನೋಡಿ ಅಂದುಕೊಂಡೆ ಅವರು- ಎಲ್ಲರ ಲೇಖನ ಓದುತ್ತಿರಬೇಕು, ಇಲ್ಲ, ಮತ್ತೆ ಒಂದು ಕಥೆ?? ಮುಂದಿನ ಭಾಗ ಬರೆಯುತ್ತಿರಬೇಕು ಅಂತ... ನನ್ನ ಊಹೆಯಂತೆ ಮುಂದಿನ ಭಾಗ ಹಾಕಿ, ೩ ನೇ ಭಾಗ ಏನು?? ಅನ್ನುವ ಹಾಗೆ ಕುತೂಹಲ ಉಳಿಸಿ ಹೊರಟಿದ್ದೀರ... ಚೆನ್ನಾಗಿದೆ... ಮುಂದೇನು?? .....ತ್ತು?.... ಶುಭವಾಗಲಿ.. ಶುಭ ಮುಂಜಾವು- ಮಧ್ಯ ರಾತ್ರಿ...!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ನನ್ನ ಊಹೆಯಂತೆ ಮುಂದಿನ ಭಾಗ ಹಾಕಿ, ೩ ನೇ ಭಾಗ ಏನು?? -ಸಪ್ತಗಿರಿವಾಸಿ ಮತ್ತು ಚೇತನ್, ಮುಂದಿನ ಭಾಗ ಈಗ ಬರೆಯುವವನಿದ್ದೆ. ಆದರೆ...........ಸೋತೆ(ಕಾರಣ ಕೆಳಗಿದೆ) ಬದಲಾದ ಮುಂದಿನ ಭಾಗ ನಾಳೆ..ಇದೇ ಸಮಯಕ್ಕೆ :( -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:())) ಬದಲಾದ ಮುಂದಿನ ಭಾಗ ನಾ... ಗೊತ್ತಾಯ್ತು ಬಿಡಿ.. ಅದ್ಕೆ ಮೇಜಿನ ಕೆಳಗಿಂದ- ಅಲ್ಲ ಅಲ್ಲ ಮೇಲಿಂದ ಪಾ... ಳು ಕೊಟ್ಟ ... ಡಿ ಎ ಕಾರಣ ಹೀಗೆ ಉಂಟು...!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲೇ ಹಾಕಿದೀರಾ ಮುಂದಿನ ಬ್ಲಾಗ್ನಾ ಹ್ಹ ಹ್ಹ ಗಣೇಶಣ್ಣ, ನೀವ್ಯಾಕೋ ಮೂರು ಭೂತಲೇಖಕರನ್ನ ಮೀರಿಸೋ ಹಾಗೆ ಕಾಣ್ಸ್ತಿದೆ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 ಗಣೇಶರೆ ನಿಮ್ಮ 'ಕೊಂಡಿ' ನೋಡುತ್ತಿದ್ದೇನೆ

 
ಮತ್ತೆ ಸಪ್ತಗಿರಿ ಎಂತದೊ ಬಾಂಬ್ ಹಾಕಿದ್ದಾರೆ
ನೀವು ಚಿಕ್ಕವರು ನೋಡಿದ್ದೇನೆ ಅಂತ ೩೫-೩೬ ವರ್ಷದವರು ಎಂದು
ಅಲ್ಲಿ ಮರದ ಮೇಲೆ ನೇತಾಡುವ ತಿರುಗುಮುರುಗು ಗಣೇಶರು ಒಂದು ಅರ್ಥವಾಗದು
ಇರಲಿ ಬಿಡಿ
ಅಹಾರ ಸ್ವೀಕರಿಸುತ್ತ ಇರಿ ಬರುತ್ತೇನೆ
 
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ ನೀವ್ ಮಾಡಿದ್ದು ಸರೀನ?..... ಅಲ್ಲ ಗಣೇಶ್ ಅಣ್ಣ ಅವರು ನಿಮ್ಮನ್ನ ಕಾರಲ್ಳಿ ಕರೆ ತರಿಸಿ ತಿರುಗು ಮುರುಗು ದೆವ್ವ ತೋರಿಸಿದರು ಅಂತ ಅವ್ರಿಗೆ - ಭಕ್ಚೀಸು -ಲಂಚ(ತಿಂಡಿ ತೀರ್ಥ!!) ಕೊಟ್ಟು ..........?? ಕಾರಿನಲ್ಲಿ ಹನುಮಾನ ಚಾಳೀಸ ಇರಲಿಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ನಿಮಗೆ ಸ್ವಲ್ಪಾನು ಸುಳಿವು ಸೂಕ್ಷ್ಮ ತಿಳಿಯದು ! . ಛೆ! ನಿಮಗೆ ತಿಳಿಯದೆ ನಾನು ಭೂತಗಳನ್ನು ವಶಪಡಿಸಿಕೊಳ್ಳುವದರಲ್ಲಿ ಪ್ರವೀಣ ಎಂದು ಒಮ್ದೊಂದು ಭೂತಕ್ಕು ಒಂದೊಂದು ದಾರಿ ಉಂಟು ಅಂಡಾ....ಡ ಎಂಬ ಭೂತಕ್ಕೆ ಊಟ ತಿಂಡಿ ಎಂದರೆ ಪ್ರಾಣ ನಾನು ಬಲೆ ಬೀಸಿದ್ದೆ ನೀವು ಎಚ್ಚರಿಸಿ ಬಿಟ್ಟಿರಿ ! ..ಛೆ! *** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:(( ಅಯ್ಯೋ ಬ್ಡಿ ಗುರುಗಳೆ- ಹೆಂಗೂ ಅವ್ರೇನೂ ನೀವ್ ಕೊಟ್ಟಿದ್ದು ವಾಪಸ್ ಕೊಡುವವ್ರಲ್ಲ!! ಏನೋ ಇನ್ನಸ್ತು .... ಕೇಳಬಹ್ದು..:())
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ಇನ್ನು ದೆವ್ವಗಳು ನಿಮಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಿಶ್ಚಿಂತೆಯಿಂದ ನಿದ್ರಿಸಿ. ಕತೆಪೂರ್ತಿ 'u' ಟರ್ನ್... -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನು ದೆವ್ವಗಳು ನಿಮಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಿಶ್ಚಿಂತೆಯಿಂದ ನಿದ್ರಿಸಿ. ಕತೆಪೂರ್ತಿ 'u' ಟರ್ನ್... -------------------------------------------------------------------------- ಗಣೇಶ್ ಅಣ್ಣ - ಹಿಂದೊಮ್ಮೆ ಕೊಟ್ಟ ವಚನಕೆ ....... ನಡೆದರೆ ಎಂಬ ಗೋವಿನ ಕಥೆ ಬರೆದ ನೀವು.... ನೀವ್ ಹೀಗೆ ಮಾಡಬಹುದಾ? ಪಾ....ಳು ನಿಮಗೆ ಮೇಜಿನ ಕೆಳಗೆ... ಛೇ!! ಮೇಜಿನ ಮೇಲೆ ... ಡಿ ಕೊಟ್ಟರು ಅಂತ ಕಥೆಗೆ ಯೂ ಟರ್ನ್ ಕೊಡುವಿರಾ?... :()) ನಾವ್ ಭೂತ್ ಲೋಕಾಯುಕ್ಟಕ್ಕೆ ಮಾಹಿತಿ ನೀಡುವೆವು..!! ಸಾಕ್ಷಿ ಅಂತೂ ಇಲ್ಲೇ ಇದೆ.. ಕಣ್ಣ ಎದುರಿಗೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಲ್ಪ ಸಮಯದ ನಂತರ ಎಚ್ಚರಗೊಂಡ ಜಯಂತ್, ಪಾರ್ಥಸಾರಥಿ ಮತ್ತು ರಾಮಮೋಹನರನ್ನು ಎಬ್ಬಿಸಿ, "ಈ ಗಣೇಶರ ಮೇಲೆ ನನಗೆ ಮೊದಲೇ ಡೌಟು ಇತ್ತು. ಬೇಗ ಇಲ್ಲಿಂದ ತಪ್ಪಿಸಿಕೊಂಡು ಓಡೋಣ" ಗಣೇಶರ ದೆವ್ವ : "ಹ್ಹಹ್ಹ..ಹ್ಹ, ಜಯಂತ್, ಸುತ್ತಲೂ ನೋಡು. ಪ್ರತೀ ಮರದಲ್ಲೂ ನಿಮ್ಮ ಇಷ್ಟದ ದೆವ್ವಗಳಿವೆ. ಓಡಿ ತಪ್ಪಿಸಲಾರಿರಿ. ಒಟ್ಟು ೩೯ ಮರದಲ್ಲಿ ೩೮೬೦ ದೆವ್ವಗಳು ವಾಸಿಸುತ್ತಿದೆ." ಜಯಂತ್ :ಗ..ಗಣೇಶರೆ, ಇನ್ನು ಮುಂದೆ ದೆ..ದೆವ್ವದ ಕತೆ ಬರೆಯುವುದನ್ನೇ ಬಿಟ್ಟು ಬಿಡುತ್ತೇವೆ.ನಮ್ಮನ್ನು ಬಿಟ್ಟುಬಿಡಿ.." ಗ ದೆ : "ಸರಿ. ಹಾಗಿದ್ದರೆ ಜಯಂತ್, ಮಹಾಭಾರತದ ಪಾತ್ರಗಳ ಬಗ್ಗೆ ಬರೆ. ಜ : ಆಯ್ತು ದೆವ್ವ..ಅಲ್ಲ ಅಲ್ಲ..ಗಣೇಶರೆ. ಗ ದೆ : ರಾಮಮೋಹನರು ಅಂಡಾಂಡ ಭಂಡ ಭಜನೆ ಬರೆದಿದ್ದರಿಂದ ಅವರಿಗೆ ರಿಯಾಯಿತಿ. ಅವರು ದೆವ್ವಗಳ ಬಗ್ಗೆ ಬಿಟ್ಟು ಏನು ಬೇಕಾದರೂ ಬರೆಯಬಹುದು. ಇನ್ನು ಗುರುಗಳು, ರಾಮಾಯಣದ ಪಾತ್ರಗಳ ಬಗ್ಗೆ ಬರೆಯಿರಿ..ಲಕ್ಷ್ಮಣ ಆಗಿದೆ...ಊರ್ಮಿಳೆ ಆಗಿದೆ..ಇನ್ಯಾರು ಬಾಕಿ..ಹಾಂ..ಕಾಳಿದಾಸನ ಬಗ್ಗೆ ಬರೆಯಿರಿ. ಪಾರ್ಥಸಾರಥಿ : ಏ ಏಏ..ಏನ್ರೀ..ಕಾಳಿದಾಸ ಹೇಗ್ರೀ ರಾಮಾಯಣದಲ್ಲಿ ಬರುತ್ತಾನೆ? ಗ ದೆ : ರಾಮಾಯಣದಲ್ಲಿ ಮಹಾಭಾರತವನ್ನೇ ಹಂಸಾನಂದಿಯವರು ಸೇರಿಸುವರು, ನಿಮಗೆ ಕಾಳಿದಾಸನೊಬ್ಬನ್ನನ್ನ ಸೇರಿಸಲಾಗುವುದಿಲ್ಲವಾ? ಬೇಡ ಬಿಡಿ. ಇಲ್ಲಿರುವ ೩೮೭೦ ದೆವ್ವಗಳ ಕತೆ ಬರೆಯಬೇಕು.. ಪಾ : ಆಯ್ತು ಬಿಡಿ. ಕಾಳಿದಾಸ, ದೇವದಾಸ ಯಾರನ್ನು ಹೇಳಿ ಅವರನ್ನು ರಾಮಾಯಣದ ಪಾತ್ರ ಮಾಡುವೆ. ಈ ದೆವ್ವಗಳ ಸುದ್ದಿ ಮಾತ್ರ ಬೇಡ.. ಗ ದೆ : ಹೂಂ..ಹಾ...ದಾ.....ಬನ್ನಿ. ಮಾತಾಡಿ,ನೇತಾಡಿ ಸುಸ್ತಾಗಿದೆ. ಕಾಫಿಯನ್ನು ಮೇಲೆ ಕಳುಹಿಸಿ. ಪಾ : ಅರೆ..ಯಾವ ಕಾಫಿ? ಗ ದೆ : ಫ್ಲಾಸ್ಕ್....ಫಿ. ಹಗ್ಗ ಕಳುಹಿಸುವೆ. ಮೇಲೆ ಕಳುಹಿಸಿ. ಪಾರ್ಥರು ತಮ್ಮ ಬಳಿಯಿದ್ದ ಫ್ಲಾಸ್ಕನ್ನು ಹಗ್ಗಕ್ಕೆ ಕಟ್ಟಿದರು. ದೆವ್ವ ಫ್ಲಾಸ್ಕನ್ನು ಮೇಲೆ ಎಳೆದುಕೊಳ್ಳುವುದು. ಪಾರ್ಥರು ಆಗ ಜಯಂತ್ ಮತ್ತು ರಾಮ್‌ರನ್ನು ಹತ್ತಿರ ಕರೆದು "ಗಣೇಶರು ಯಾವತ್ತೂ ನನ್ನನ್ನು ಗುರುಗಳೇ ಎಂದು ಕರೆದದ್ದಿಲ್ಲ.ಅವರ ವಾಕ್ಯವೂ ಅರೆಬರೆ ಇರುವುದಿಲ್ಲ. ಬಹುಷಃ ಇದು.." "ನನಗೂ ಅದೇ ಡೌಟು ಬಂದಿತ್ತು. ಈಗ ಬಂದೆ.."ಎಂದು ಜಯಂತ್, ಸರಸರ ಮರಹತ್ತಿ, ದರದರ ಸಪ್ತಗಿರಿವಾಸಿಯನ್ನು ಎಳಕೊಂಡು ಬಂದನು. ರಾಮಮೋಹನರು, ಮರದ ಮರೆಯಲ್ಲಿ ನಿಂತು ದೆವ್ವಗಳ ಸೌಂಡ್-ಲೈಟ್ ಇಫೆಕ್ಟ್ ಮಾಡುತ್ತಿದ್ದ ಸತೀಶರನ್ನು ಎಳಕೊಂಡು ಬಂದರು. "ನಮ್ಮೊಂದಿಗೆ ನಡುರಾತ್ರಿ ಹುಡುಗಾಟ ಮಾಡುತ್ತಿದ್ದೀರಾ?" ಎಂದು ಹೇಳಿ, ಗಣೇಶರ ಗೊಂಬೆಯನ್ನು ಕೆಳಗಿಳಿಸಿ, ಅದೇ ಹಗ್ಗದಲ್ಲಿ ಸಪ್ತಗಿರಿಯ ಕಾಲನ್ನು ಕಟ್ಟಿ, ಹಗ್ಗದ ಇನ್ನೊಂದು ತುದಿ ಮರದ ಕೊಂಬೆಗೆ ಎಸೆದು, ಆ ಬದಿಗೆ ಬಂದ ತುದಿಗೆ ಸತೀಶರ ಕೈಯನ್ನು ಕಟ್ಟಿ, "ಇಬ್ಬರೂ ಬೆಳಗ್ಗಿನವರೆಗೆ ನೇತಾಡಿಕೊಂಡಿರಿ" ಎಂದು ಮೂವರೂ ಹೊರಟರು. ಸಪ್ತಗಿರಿವಾಸಿ : "ಗುರುಗಳೇ, ತಪ್ಪಾಯ್ತು. ಕಾಫಿ ಕುಡಿದದ್ದೆಲ್ಲಾ ಬಾಯಿಗೆ ಬರುತ್ತಿದೆ... ತಲೆತಿರುಗುತ್ತಿದೆ... ತಲೆ ಮೇಲಾಗಿಯಾದರೂ ನೇತಾಡಿಸಿ ಪ್ಲೀಸ್. ಗುರುಗಳೇಏಏಏಏ.." ಕೇಳಿಸದಂತೆ ಮೂವರೂ ಹೋಗೇ ಬಿಟ್ಟರು. ...... ..... (ಮುಗಿದಿಲ್ಲ..)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅಣ್ಣ- ಇವತ್ತು ಹಸನ್ಮುಖಿಯಾಗೇ ಇದ್ದ ನಾ ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ ಮೆಜೆಸ್ಟಿಕ್ ಗೆ ಬಂದು ಅಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ ಇದ್ದು, ಜನ ಜಾಸ್ತಿ ಇದ್ದು ಬೇಗ ರೂಮ್ ಸೇರುವ ತವಕದಲ್ಲಿ ಆಟೋ ಕೇಳಿ ೧೫೦ ರೂಪಾಯೀ ಕೊಡಿ ಅಂದದ್ದು ಕೇಳಿ...!! ಆಗಿ ಮತ್ತೆ ಕೆ ಎಸ್ ಆರ್ ಟೀ ಸೀ ಕಡೆ ಬಂದು ತುಮಕೂರು ಬಸ್ಸು ಹತ್ತಿ, ಯಶವಂತಪುರ ರೇಲ್‌ವೇ ನಿಲ್ದಾಣದ ಹತ್ತಿರ ಇಳಿದು ರೂಮು ಸೇರಿ ಟೆಂಷನ್ ನಲ್ಲೇ ಇದ್ದೇ :((( ಫ್ರೆಶ್ ಆಗಿ ಇತ್ತೀಚಿನ ಪ್ರತಿಕ್ರಿಯೆಗಳು ಕ್ಲಿಕ್ಕಿಸಿದರೆ(ನಾ ಬರಹಗಳನ್ನ ಓದುವುದು ಅದನ್ನು ಕ್ಲಿಕ್ ಮಾಡಿ ಮತ್ತು ಇತ್ತೀಚಿನ ಎಲ್ಲ ಲೇಖನಗಳು) ನಿಮ್ಮದು ಹೆಸರು ಕಾಣಿಸಿ ಕ್ಲಿಕ್ಕ್ಕಿಸಿ ಓದಿ, :())))) ಮನ ಪ್ರಫುಲ್ಲವಾಯ್ತು.. ಬೀ ಎಂ ಟೀ ಸೀ ಬಗ್ಗೆ ಆಗಲೇ ಒಂದು ಬರಹ ಬರ್ದಿದ್ದೆ, ನಾಳೆ-ನಾಡಿದ್ದು ಮತ್ತೊಮ್ಮೆ ಬರಹ ಬರೆವೆ.. ನೀವ್ ಸಹಾ ಅಥವಾ ಬೇರೆಯವರು ಬರೆದಿರಬಹುದು ಆ ಬಗ್ಗೆ... ಕೋಟಿಗಳಲ್ಲಿ ಲಾಭ ಗಳಿಸೋ ಬೀ ಎಂ ಟೀ ಸೀ ಪ್ರಯಾಣಿಕರ(ಅದರಲ್ಲೂ ರಾತ್ರಿ ಪ್ರಯಾಣಿಕರ ) ಕಸ್ಟ ನಸ್ತ ಬಗ್ಗೆ ಎಸ್ಟು ಗಮನ ಹರಿಸಿದೆ?.. ಇನ್ನೂ ನಿಮ್ಮ ಬರಹದ ಬಗ್ಗೆ... ನಾ ಓದೋ ಬರಹದಲ್ಲಿ ನಾನೇ ಬಂದದ್ದು ...!! ಆಯ್ತು.. ಖುಷಿಯೂ ಆಯ್ತು ಅನ್ನಿ :()))) ಅಲ್ಲಿಗೆ 'ಗಣೇಶ್ ದರ್ಶನ' ಯಾವತ್ತೂ ಆಗೋಲ್ಲ ಎಂಬ ಮಾಹಿತಿಯನ್ನ ನೀವ್ ನೀಡಿದಿರಾ? ಎಂಬುದು ನನ್ನ ಕೆಟ್ಟ ಆಲೋಚನೆ!! ರಾಮ ಮೋಹನ ಅವರಿಗೆ ಭರ್ಜರಿ ರಿಯಾಯ್ಟಿ ಕೊಟ್ಟು ಗುರುಗಳಿಗೆ ರಾಮಾಯಣದಲ್ಲಿ ಕಾಳಿದಾಸನ ಬಗ್ಗೆ ಬರೆಯಲು ಹೇಳಿ ಎಂತ ಸಮಸ್ಯೆ ನನ್ನ ಕೈನಿಂದಲೇ ಸೃಸ್ಟಿಸಿದ್ರಿ...:())) ಪ್ರತಿಕ್ರಿಯೆಯಲ್ಲೇ ಸರಣಿ ಪ್ರಕಟಿಸೋ ಇರುವ ಕಡಿಮೆ ಸಮಯದಲ್ಲೇ ಆ ಬರಹಕ್ಕೆ ಬೇಕಾದ್ದು(ವಸ್ತು-ವಿಷ್ಯ) ಹುಡುಕುವ ನಿಮ್ಮ ಮನೋ ಶಕ್ತಿಗೆ ನಮೋ ನಮಹ : :... ಶುಭವಾಗಲಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾತ್ರಿ ಹೊತ್ತು ಬಸ್ಸಿನ ರಗಳೆ ಇರುವುದು ಗೊತ್ತಿದ್ದೂ, ಬಿ.ಎಮ್.ಟಿ.ಸಿ., ಕೆ.ಎಸ್.ಅರ್.ಟಿ.ಸಿ., ಎಂದು ಪರದಾಡುವ ಬದಲು ನೇರ ರೈಲ್ವೇಸ್ಟೇಷನ್ಗೆ ಹೋಗಿ, ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ರೈಲ್ವೇ ಟ್ರಾಕಲ್ಲೆ ನಡಕೊಂಡು(ಹಿಂದೆ ಸುಬ್ರಹ್ಮಣ್ಯದಲ್ಲಿ ಟ್ರಾಕ್‌ನಲ್ಲಿ ನಡೆದು ಗೊತ್ತಿದೆಯಲ್ಲಾ) ಬಂದಿರುತ್ತಿದ್ದರೆ, ಬೇಗನೆ ರೂಮ್ ಮುಟ್ಟುತ್ತಿದ್ದಿರಿ. :) ಕತೆಯನ್ನು ಓದಿ, ಅಷ್ಟು ಬೇಗ ಇಷ್ಟುದ್ದ ಪ್ರತಿಕ್ರಿಯೆ ನೀಡುವವರಲ್ಲಿ ನಿಮ್ಮನ್ನು ಮೀರಿಸುವವರಿಲ್ಲ. :) ಧನ್ಯವಾದಗಳು-ಕೋಪಿಸದೇ ಕತೆಯನ್ನು ಮೆಚ್ಚಿದ್ದಕ್ಕೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಿಯ ಸುಬ್ರಮಣ್ಯ ಟ್ರಾಕು? ಎಲ್ಲಿಯ ಈ ಬೆಂಗಳೂರು-ಯಶವಂತಪುರ ರೇಲ್‌ವೇ ಟ್ರಾಕು..!! ಅಲ್ಲಿ ಅದು ಬಿಟ್ಟರೆ ಎಲ್ಲೋ ದಾರಿ ಮದ್ಯೆ(ದಟ್ಟ ಕಾಡು ಮಧ್ಯೆ!!) ಯಾವುದೋ ಊರು ಸಿಕ್ಕಿ ಬಸ್ಸುಗಳು(ಕೆ ಎಸ್ ಆರ್ ಟೀ ಸಿ) ಸಿಕ್ಕವು... ಆದ್ರೆ ಇಲ್ಲಿ ಬೇಜಾನ್ ಅಪ್ಚನ್ಸ್ ಇವೆ ಅಂತ ಕಾಯ್ದರೆ 'ಮಳೆ ರಾಯ' ಬೇರೆ ಗುಡ್-ದುಡ್ ಅಂತ ಶುರು ಹಚ್ಚಿಕೊಂಡು...!! ಕಾಯೋದ್ಕಿಂತ ನಡೆದುಕೊಂಡೆ ಹೋಗೋದ್ ವಾಸಿ ಅಂತ ಅನ್ನಿಸಿದ್ದು ಸುಳ್ಳು ಅಲ್ಲ... ಒಟ್ಟಿನಲ್ಲಿ ನನ್ನ ಕದಡಿದ ಮನ ಶಾಂತಿಯಾನ್ ವಾಪಾಸು ಪ್ರತಿಸ್ಟಾಪಿಸ್ದ್ದು ನಿಮ್ಮ ಈ ಬರಹ... ಈಗ ನೆಮ್ಮದಿಯಿಂದ ಊಟ ಮಾಡಿ ತುಟಿ ಅಂಚಲ್ಲಿ ನಗು ಸಮೇತ ಮಲಗುವೆ.. :())) ನನ್ನ ಒಂದು ಆದ್ರೂಸ್ಟ ಅಂದ್ರೆ ನಿಮ್ಮ ಯಾವುದೇ ಮದ್ಯ ರಾತ್ರಿ ಬರಹಗಳನ್ ಮೊದಲಿಗನಾಗಿ ಓದೋದು- ಪ್ರತಿಕ್ರಿಯಿಸೋದು...!!(ಅತಿಥಿ ಓದುಗರನ್ ಬಿಟ್ಟು) ... ಶುಭ ರಾತ್ರಿ ಗಣೇಶ್ ಅಣ್ಣ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ ಚೆನ್ನಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ ಸಕ್ಕತ್ತಾಗಿದೆ ಒಂದು U turn ತೆಗೆದುಕೊಂಡೆ ಇಷ್ಟು ಇನ್ನು ಎಷ್ಟು ಟರ್ನ್ ಗಳಿದೆಯೊ ಅಂತ ಕುತೂಹಲ‌ ನಿರೀಕ್ಷಿಸದೆ ಇದ್ದ ಟರ್ನ್ ನೋಡೋಣ ಪಾಪ ತಲೆಕೆಳಗಾಗಿ ನೇತಾಡ್ತ ಇರೋ ಸಪ್ತಗಿರಿ ಹಾಗು ಸತೀಶರನ್ನು ಯಾರು ಬಿಡಿಸುತ್ತಾರೆ ಎಂದು ಗಣೇಶರೆ ಬರಬಹುದೇನೊ ವಾಕಿಂಗು ಟ್ರಕಿಂಗು ಎಂದು **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಒಟ್ನಲ್ಲಿ ಎಲ್ರಿಗೂ ದೆವ್ವ ಬಿಡಿಸ್ತಿದೀರಾ!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೂ ಒಬ್ಬರು ಬಾಕಿ ಇದ್ದಾರೆ :) ಪ್ರತಿಕ್ರಿಯೆ ನೀಡಿ ಮೆಚ್ಚಿದ ಚೇತನ್, ಸಪ್ತಗಿರಿವಾಸಿ, ಶ್ರೀಧರ್, ಜಯಂತ್, ಪಾರ್ಥಸಾರಥಿಯವರಿಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅಣ್ಣ- ಬಾಕಿ ಇಟ್ಟುಕೊಂಡಿರೋ ಇನ್ನೂ ಒಬ್ಬ ಅವರು 'ಅವರೇ' ಇರಬೇಕು ಅನ್ನೋದು ನನ್ ಊಹೆ....!!??? ಯಾರವರು?? ಯಾರು ಅವರು ??? ಅವರು?? ಇವರು.... http://sampada.net/u...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ತಲೆಮೇಲಾಗಿ ಆದರೂ ನೇತಾಡಿಸಿ..ಪ್ಲೀಸ್" ಎಂದು ಸಪ್ತಗಿರಿ ಗೋಗರೆದರೂ ಕೇಳಿಸದಂತೆ ಮೂವರೂ ಹೋಗೇಬಿಟ್ಟರಲ್ವಾ... ಸ್ವಲ್ಪ ದೂರ ಹೋದ ಮೇಲೆ, ಪಾರ್ಥಸಾರಥಿಯವರು " ಇದು ಸಪ್ತಗಿರಿವಾಸಿ, ಸತೀಶರ ಐಡಿಯಾ ಇರಲಿಕ್ಕಿಲ್ಲ. ಗಣೇಶರದ್ದೇ ಇರಬಹುದು. ಎಲ್ಲೋ ದೂರದಲ್ಲಿ ಕುಳಿತು ನೋಡುತ್ತಿದ್ದು, ಈಗ ಇವರನ್ನು ಬಿಡಿಸಲು ಬಂದೇ ಬರುವರು.ಈ ಸಲ ಮಾತ್ರ ಅವರನ್ನು ಬಿಡಲೇ ಬಾರದು.ಅವರ ಕೈಕಾಲು ಕಟ್ಟಿ ಮರಕ್ಕೆ ನೇತಾಡಿಸುವುದೇ..ಮರ ಬಿದ್ದರೂ ಪರವಾಗಿಲ್ಲ."ಅಂದರು. ಮೆಲ್ಲನೆ ಸದ್ದಾಗದಂತೆ ಮೂವರೂ ಹಿಂದೆ ಬಂದರು. ಪಾರ್ಥಸಾರಥಿಯವರು ಯೋಚಿಸಿದಂತೆ-ಸಪ್ತಗಿರಿವಾಸಿ ಮತ್ತು ಸತೀಶರ ಹಗ್ಗ ಬಿಚ್ಚಿ ಕೆಳಗಿಳಿಸಲಾಗಿತ್ತು- ಗಣೇಶ! ಕತ್ತಲಾದುದರಿಂದ ಅವರ ಮುಖ ಕಾಣುತ್ತಿರಲಿಲ್ಲ. ಎಲ್ಲರೂ ಯೋಚಿಸಿದಷ್ಟು ಗಣೇಶರು ದಪ್ಪಗಿರಲಿಲ್ಲ. ಕೋಪದಿಂದ ಸಪ್ತಗಿರಿವಾಸಿಗೆ ಜೋರುಮಾಡುವುದನ್ನು ಪಾಸಾ,ಜ,ರಾಮೋ..ಕದ್ದು ಕೇಳಿದರು- " ಗುರುಗಳೇ.. ಅಂತೆ ಗುರುಗಳೆ..ಅಲ್ವೋ.. ಒಂದು ದಿನದ ಮಟ್ಟಿಗಾದರೂ ಪಾರ್ಥ, ಪಾರ್ಥಸಾರಥಿ, ಹೋಗಲಿ.. ಪಾರ್ಥಸಾರಥಿಯವರೆ ಅನ್ನಬಾರದಿತ್ತೆ? ಲ್ಯಾಪ್ ಟಾಪನ್ನೂ ಯಾಕೆ ನೇತಾಡಿಸಿದ್ದು? ಕಾಫಿ ಬೇರೆ ಬೇಕಾ?......." ಇದೇ ಸರಿಯಾದ ಸಮಯ ಎಂದು ಪಾರ್ಥಸಾರಥಿಯವರು "ಅಟ್ಯಾಕ್" ಎಂದಾಗ, ಜಯಂತ್ ಮತ್ತು ರಾಮಮೋಹನರು ಎರಡೂ ಕಡೆಯಿಂದ ನುಗ್ಗಿಬಂದು, ಗಣೇಶರನ್ನು ಹಿಡಿದರು. ಎಲ್ಲಿತ್ತೋ ಕೋಪ ಮೂವರೂ ಸೇರಿ ಬಾರಿಸಿದ್ದೇ ಬಾರಿಸಿದ್ದು..ಹೊಡೆದೂ ಹೊಡೆದೂ ಕೈ ನೋವು ಬಂದ ಮೇಲೆ, ಸುಮ್ಮನಾಗಿ, ಕೆಳಬಿದ್ದವನ ಮುಖ ನೋಡುವರು.........................................................................................................................ಚಿಕ್ಕು! "ಥತ್ ನಿನ್ನ! ಅಲ್ವೋ ಅಲ್ಲಿ ನಮಗೆ ಫ್ಲಾಸ್ಕ್ ತುಂಬಾ ಕಾಫಿ ತುಂಬಿಸಿ, ಕಳುಹಿಸಿ, ಇಲ್ಲಿ ಗಣೇಶರೊಂದಿಗೆ ಸೇರಿ ತಮಾಶೆಯಾಡುತ್ತಿದ್ದೀಯಾ? ಗಣೇಶರು ಎಲ್ಲಿದ್ದಾರೆಂದು ಸತ್ಯ ಹೇಳಿದರೆ ಸರಿ. ಇಲ್ಲಾ..ಇನ್ನು ಎರಡನೇ ರೌಂಡ್ ಶುರುಮಾಡುವೆವು.." "ನಿಮ್ಮ ದಮ್ಮಯ್ಯ ಪಾರ್ಥರೆ, ನಿಜ ಹೇಳುತ್ತೇನೆ. ಇದರಲ್ಲಿ ಗಣೇಶರದ್ದೇನು ಕೈವಾಡವಿಲ್ಲ. ಇದರ ಕಿಂಗ್‌ಪಿನ್ ಬೇರೆಯವರು. ಅವರು ಜಪ,ತಪ, ಯೋಗ, ಧ್ಯಾನ... ಎಂದು ಜನತೆಯ ಒಳಿತಿನ ಬಗ್ಗೆಯೇ ಬರೆಯುತ್ತಿರುವಾಗ, ನೀವು ಮೂರು ಜನ ದೆವ್ವ,ಭೂತಗಳ ಬಗ್ಗೆ ಬರೆದು ಸಂಪದಿಗರಿಗೆ ಭಯಬೀಳಿಸುತ್ತಿದ್ದೀರಿ. ಅದಕ್ಕೆ ನಿಮ್ಮನ್ನು ನಿಮ್ಮದೇ ದೆವ್ವದ ಬಲೆಗೆ ಬೀಳಿಸಲು ಪ್ಲಾನ್ ಮಾಡಿ ನಮಗೆ ಹೇಳಿದರು. ಅವರ ಫ್ರೆಂಡ್ ಗಣೇಶ (ಸಂಪದ ಗಣೇಶರಲ್ಲ)ರ ಫೋನಲ್ಲಿ ನಿಮಗೆಲ್ಲಾ ಫೋನ್ ಮಾಡಿದ್ದು. ಈಗ ನಾವಿರುವ ಸ್ಥಳ ಸಹ ಅವರ ಫ್ರೆಂಡ್‌ನ ಫಾರ್ಮ್ ಹೌಸ್. ಕವಿನಾಗರಾಜ್ (ಅವರ ಶುಭಾಶೀರ್ವಾದದೊಂದಿಗೆ), ಶ್ರೀಕರ್(ಕಾರು ಡ್ರೈವ್ ಮಾಡಿದ್ದು), ಸತೀಶ್ (ಲೈಟ್ ಸೌಂಡ್ ಇಫೆಕ್ಟ್), ಎಲ್ಲಾ ಪ್ಲಾನ್ ಪ್ರಕಾರ ಆಕ್ಟ್ ಮಾಡಿದರು. ಈ ನಿಮ್ಮ ಶಿಷ್ಯನಿಂದಾಗಿ ನಾವು ಸಿಕ್ಕಿಬಿದ್ದೆವು. ತಪ್ಪಾಯ್ತು. ಬೇಸರಿಸದಿರಿ. ನಿಮ್ಮನ್ನು ನಿಮ್ಮ ಮನೇವರೆಗೆ ಡ್ರಾಪ್ ಕೊಡುವೆ. ಬನ್ನಿ," ಮೂವರೂ ಕೂಡಲೇ ಕಾರು ಹತ್ತಿ ಕುಳಿತು-"ಮನೆಗೆ ನಂತರ..ಮೊದಲು ಹೈದರಾಬಾದಿಗೆ ಕಾರು ಓಡಿಸು"ಅಂದರು. .. (ಮುಗಿಯಿತು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

. ಎಲ್ಲರೂ ಯೋಚಿಸಿದಷ್ಟು ಗಣೇಶರು ದಪ್ಪಗಿರಲಿಲ್ಲ... >>> ಕಲ್ಪಿಸಿಕೊಂಡಂತೆ..!! .....................................................................................................ಚಿಕ್ಕು! :(((( :(()))) :())) (*ಆಗ ಮೊದಲು ಅನೇಕ ಸಾರಿ . ಪಾರ್ಥ ಸಾರಥಿಗಳೇ ಅಂತ ಕರೆದಿದ್ದೆ- ((ಅಲ್ಲದೇ ಅವರು ಎಲ್ಲ ವಿಧವಾದ ಬರಹಗಳನ್ನ ಲೀಲಾಜಾಲವಾಗಿ ಬರೆಯೋದು ಕಂಡು ನಾ ಸಹಾ ಹಾಗೆ ಪ್ರಯತ್ನಿಸಲು)) ಅವರ ಅನುಭವ -ವಯಸ್ಸು- ಪಾಂಡಿತ್ಯ ಕಂಡು ಗುರುಗಳೆ ಅನ್ನೋದೇ ಸೂಕ್ತ ಅನ್ನಿಸಿತು).... ಅಲ್ಲ ಅವ್ರಿಗೆಲ್ಲ ದೆವ್ವಗಳ ಬಗೆ ಗೊತ್ತು ಮಾಡಲು(ಬುದ್ಧಿ ಕಲಿಸಲು!!) ನಾನೇ 'ಬಡ ಪಾಯಿ' ಸಿಗಬೇಕಿತ್ತೇ??.. ಅದೂ ಸಾಲದು ಎಂಬಂತೆ ಪಾಪ....!! ಆ ಚಿಕ್ಕು ಗೆ ಆ ಪರಿ...... ಸ ಕೋಡೋದ?.. ಶ್ರೀಕರ್ ಸತೀಶ್ ಅವ್ರೂ....!! ಅಬ್ಬೊ..!! ಶ್ರೀಧರ್ ಜೀ ಅವರು ...??? ಈಗಾಗಲೇ ಇವರೆಲ್ಲ 'ಅಲ್ಲಿಗೆ' ಧಾವಿಸುತ್ತಿರುವುದು 'ಗೂಗಲ್ ಲ್ಯಾತೀಟೂಡ್' ನಲ್ಲಿ .....?/ ಗಣೇಶ್ ಅಣ್ಣ ಕೊನೆಯ ಭಾಗ ಸೂಪರ್... ವಿಪರೀತ ನಕ್ಕೂ ನಕ್ಕೂ ಸುಸ್ತಾದೆ... ಅಂತೂ ನನ್ನ ನಿರೀಕ್ಷೆಗೆ ಹೆಚ್ಚಾಗಿ ನೀವ್ ಭಾಗವನ್ಣ ಅದೂ ಬರೀ 'ಪ್ರತಿಕ್ರಿಯೆಗಲ್ಲಿ' ಬರೆಯುತ್ತಾ ಶಾಕಿಂಗ್ ಆಗಿ ಎಂಡ್ ಮಾಡಿದಿರಿ... ಬೆಳಗ್ಗೆ ಇದನ್ನು ಓದುವ ಎಲ್ಲರೂ ಈ (ಶಾ)ಶೇಕಿಂಗ್ ಎಂಡ್ ನೋಡಿ ಅಚ್ಚರಿ ಆಗಿ... :())) ಆಗದಿದ್ದರೆ ಕೇಳಿ.. ಅದರಲ್ಲೂ ಆ ಚೇತನ್ ಅವಸ್ಥೆ ಕಂಡು -ಕೇಳಿ -ಕಲ್ಪ್ಸಿಕೊಂಡು....!!! ಕೊನೆಗೂ ಈ ಬರಹದ ಮೂಲಕ ನೀವ್(ಗಣೇಶ್ ಅಣ್ಣ) ನಮಗೆ ಸಿಗೋಲ್ಲ ಅಂತ ಹೇಳ್ತಾ ಇದ್ದೀರ... ನಾವ್ ಬಹುತೇಕ ಪ್ರಯತ್ನಿಸುವೆವು.. ನಮ್ಮ ಪ್ರಯತ್ನದಲ್ಲಿ 'ಸಫಲರಾಗಿ' ಅಂತ ಹಾರೈಸಿ...!! ಈಗ ನಗು ನಗುತ್ತಲೇ ನಿದ್ದೆಗೆ ಜಾರುವೆ... :())))))))))))))))))))))) :())) :())) :()))) ' ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿ ಪ್ರತಿಕ್ರಿಯೆ ನೀಡಿದ ಸಪ್ತಗಿರಿವಾಸಿಯವರ ಎಲ್ಲಾ ಪ್ರಯತ್ನಗಳೂ ಸಫಲವಾಗಲಿ. :) ಶುಭರಾತ್ರಿ -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಅಣ್ಣ ನಿಮ್ಮಂಥ 'ಹಲ' ಹಿರಿಯರ ಆಶೀರ್ವಾದ-ಸದಾ ಹೀಗೆಯೇ ಇರಲಿ.......... ಧನ್ಯವಾದಗಳು... ನಿಮಗೆ ಶುಭ ಮಧ್ಯ ರಾತ್ರಿ- ಬೆಳಗು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಕ್ತಾಯ ಚೆನ್ನಾಗಿದೆ .. ಪಾಪ ಸಪ್ತಗಿರಿ ಚಿಕ್ಕುಗೆ ಕಷ್ಟವಾಯ್ತು ಅದರ ಪರಿಣಾಮ ನನ್ನ ಮೇಲೆ ... ನಿಮ್ಮ ಮಲ್ಲೇಶ್ವರ ಅಂ.ಭಂ. ಸಮ್ಮರ್ ಕ್ಯಾಂಪಿನಲ್ಲಿ ** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) :) ಆಹಾ ಹಾ ಹಾ ಗಣೇಶಣ್ಣ ಅಂತೂ ಅನ್ಯಾಯವಾಗಿ ಪಾಪದವನಿಗೆ ಹೊಡೆತ ಬಿತ್ತು!.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ...ಹ್ಹ....ಹ್ಹ...ಹ್ಹ ಅಂತೂ ಎಲ್ಲ ನೀವೂ ಮಾಡಿ ನಮ್ಮನ್ನ ಸಿಕ್ಕಿಸಿ ಬಿಟ್ರ ಇದು ನ್ಯಾಯ ಅಲ್ಲ .....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯಯ್ಯೋ ಸಂಪದಿಗರೇ, ಕ್ಷಮಿಸಿ ಇದರಲ್ಲಿ ನನ್ನ ತಪ್ಪೇನೂ ಇಲ್ಲಾ! ಹಲವಾರು ದಿನಗಳಿಂದ ನನಗೊಂದು ಅನಾಮಧೇಯ ಕರೆ ಬರುತ್ತಿತ್ತು. ಮಾತುಗಳು ಮಾತ್ರ ಕೇಳಿಸುತ್ತಿದ್ದವು ಆದರೆ ನಂಬರ್ ಮೂಢುತ್ತಿರಲಿಲ್ಲ. ಅದು ಹೇಗೋ ಕಷ್ಟ ಪಟ್ಟು ಆ ಕರೆ ಎಲ್ಲಿಂದ ಬರುತ್ತಿದೆ ಎನ್ನುವುದನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿತ್ತು; ಅದ್ಯಾವುದೋ ಬೆಂಗಳೂರಿನ ನಡುವೆ ಇದ್ದೂ ಕರೆಂಟಿಲ್ಲದ, ನೆಟ್ ಕನೆಕ್ಷನ್ ಇಲ್ಲದ ಪ್ರದೇಶವೆಂದಷ್ಟೇ ತಿಳಿಯಿತು. ಆ ಮಾಹಿತಿಯ ಪ್ರಕಾರ ಈ ಕರೆಯನ್ನು ಮಾಡುತ್ತಿರುವವರು ಅಂಡಾಂಡಭಂಡ ಸ್ವಾಮಿಯವರೆಂದು ತಿಳಿದು ಸಂತೋಷ ಪಟ್ಟಿದ್ದೆ. ಏಕೆಂದರೆ ಫೋನಿನಲ್ಲಿ ಹೇಳುತ್ತಿದ್ದ ವಿಷಯವೇನೆಂದರೆ ನೀವು ಅಂಡಾಂಡಭಂಡ ಸ್ವಾಮಿಗಳ ಕ್ರುಪೆಗೆ ಪಾತ್ರರಾಗಬೇಕಾದರೆ ಏನೇನು ಮಾಡಬೇಕು ಎಂದು ಆಗಿಂದಾಗ್ಗೆ ನನಗೆ ಸ್ಪಷ್ಟ ಆದೇಶ ಬರುತ್ತಿತ್ತು. ನಾನು ಅದರಂತೆ ಈ ನಾಟಕವನ್ನು ಆಯೋಜಿಸಿದ್ದಷ್ಟೇ; ನಾನು ಕೇವಲ ನಿಮಿತ್ತ ಮಾತ್ರ ನಾನು ಕೇವಲ ಅಂಡಾಂಡಭಂಡ ಸ್ವಾಮಿಗಳ ಆಗ್ನಾನುವರ್ತಿಯಷ್ಟೇ! ನಿಮ್ಮಲ್ಲಿ ಯಾರಿಗಾದರೂ ಅಂಡಾಂಡಭಂಡ ಸ್ವಾಮಿಗಳ ಪರಿಚಯವಿದ್ದರೆ ಅವರನ್ನೇ ಭೇಟಿಯಾಗಿ ವಿಷಯವನ್ನು ಸ್ಪಷ್ಟ ಪಡಿಸಿಕೊಳ್ಳಬಹುದು; ಹೈದರಾಬಾದಿಗೆ ಅದಕ್ಕೋಸ್ಕರ ಬರುವುದು ವೇಸ್ಟ್. ಒಂದು ವೇಳೆ ಇದನ್ನು ಓದಿ ಮುಗಿಸುವಲ್ಲಿ ಹೈದರಾಬಾದ್ ಸಮೀಪಕ್ಕೆ ಬಂದಿದ್ದರೆ; ಹೇಗೂ ಆದಿತ್ಯವಾರವಲ್ಲವೆ; ಇಲ್ಲಿಯ ರಾಮೋಜಿ ಸಿಟಿ ತೋರಿಸುತ್ತೇನೆ ಬನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಹಿಂದೆ ತೂಕಡಿಸುತ್ತಾ ಇರುವ ಮೂವರನ್ನು ನೋಡಿದ ಚಿಕ್ಕು ಕಾರನ್ನು ನೇರ ಸ್ಟೇಡಿಯಂ ಕಡೆ ತಿರುಗಿಸಿ,ಪಾರ್ಕ್ ಮಾಡಿ,ತೂಕಡಿಸುವವರನ್ನು ಕಾರೊಳಗೇ ಬಿಟ್ಟು, ಅಂಡಾಂಡ ಭಂಡರ ಜತೆ ಐಪಿಎಲ್ ನೋಡುತ್ತಿರುವನೆಂದು ನಮಗೆ ವರದಿ ಬಂದಿದೆ. ನೀವು ಚಿಂತಿಸಬೇಡಿ. ಪ್ರತಿಕ್ರಿಯೆ ನೀಡಿ ಮೆಚ್ಚಿದ ಶ್ರೀಧರ್‌ಜಿ, ಪಾರ್ಥಸಾರಥಿ, ಸಪ್ತಗಿರಿವಾಸಿಯವರಿಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.