ಆ ಒಂದು ರೂಪಾಯಿ!

4.4
ಫೆಬ್ರವರಿಯ ಎಲ್ ಐ ಸಿ ಪೇಮೆಂಟ್ ಬಾಕಿ ಇತ್ತು. ಆ ತಿಂಗಳು ರಜೆ ತೆಗೆದುಕೊಂಡಿದ್ದರಿಂದ ಜೊತೆಗೆ ಮಾರ್ಚ್ನಲ್ಲಿ ಮದ್ವೆ ಇದ್ದುದ್ದರಿಂದ ಏಪ್ರಿಲ್ನಲ್ಲಿ ಅದನ್ನ ಬಡ್ಡಿ ಸಮೇತ ಕಟ್ಟಬೇಕಾದ ಭಾಗ್ಯ ನನಗೊಲಿದಿತ್ತು. ಈ ಉರಿಬಿಸಿಲಿನಲ್ಲಿ ಮಧ್ಯಾಹ್ನ ೧:೩೦ರ ಸುಮಾರಿಗೆ ಆಫೀಸಿನಿಂದ ಸ್ವಲ್ಪ ದೂರದಲ್ಲಿರುವ ಎಲ್ ಐ ಸಿ ಆಫೀಸಿಗೆ ಹೋದೆ, ಆದರೆ ಊಟದ ಸಮಯವಾದ್ದರಿಂದ ವಾಪಸ್ ಬಂದೆ. ಮತ್ತೆ ೨:೩೦ಕ್ಕೆ ಹೋಗಿ ೩ನೇ ಮಹಡಿಗೆ (ಲಿಫ್ಟಲ್ಲಿ!) ಹೋಗಿ ಕ್ಯೂನಲ್ಲಿ ನಿಂತು ನನ್ನ ಸರದಿ ಬಂದಾಗ, ಪಾಲಿಸಿ ನಂಬರ್ ಹೇಳಿದೆ. ಅಲ್ಲಿರುವ ಚೀಟಿಯಲ್ಲಿ ಬರೆದುಕೊಡು ಅಂದ್ರು, ಪೆನ್ ಇರಲಿಲ್ಲ. ಹಿಂದೆ ಇದ್ದವರ ಬಳಿ ತೆಗೆದುಕೊಂಡು ಬರೆದು ಕೊಟ್ಟೆ. ೩೦೨೧ ರೂಪಾಯಿ ಕೊಡಿ ಅಂದಾಗ ೩೦೩೦ ಕೊಟ್ಟೆ. ಚೇಂಜ್ ಇಲ್ಲ ೧ ರೂ ಚೇಂಜ್ ಕೊಡು ಅಂದ್ರು. ಇಲ್ಲ ಅಂದೆ. ೯ ರೂ ನಾನೆಲ್ಲಿಂದ ತರಲಿ ಈಗ, ಇಲ್ಲಿ ಬರೆದು ಕೊಂಡಿರ್ತೀನಿ ೪ ಘಂಟೆ ಒಳಗೆ ಬಂದ್ರೆ ಕೊಡ್ತೀನಿ. ಕೊಡಿ ರಶೀದಿ ಅಂದು ಅದ್ನ ಇಸ್ಕೊಂಡು ನೋಡಿದ್ರೆ ೩೦೨೦.೧೦ ಅಂತಿತ್ತು. ಇಲ್ಲಿ ೧೦ ಪೈಸೆ ಇದೆ ನೀವು ೧ ರೂ ಕೇಳ್ತಿದೀರಾ? ಅದು ಹಾಗೇನೇ, ರೌಂಡ್ ಆಫ್. ಪ್ರತಿಕ್ರಿಯೆ ಕಾರವಾಗಿತ್ತು. ಪರ್ಸ್ ಹುಡುಕ್ದೆ, ೫೦ ಪೈಸೆ ಸಿಕ್ತು. ಅದನ್ನ ತೋರಿಸಿ, ೫೦ ಪೈಸೆ ಆಗತ್ತಲ್ಲ? ಇಲ್ರೀ ೧ ರೂ ಬೇಕು. ಅದೇಕೆ ಹಾಗೆ? ಸರಕಾರದ್ದೇ ಸಂಸ್ಥೆ. ಸರ್ಕಾರನೇ ೫೦ ಪೈಸೆ ಇನ್ನೂ ಸ್ಟಾಪ್ ಮಾಡಿಲ್ಲ ನೀವು ನೋಡಿದ್ರೆ ತಗೋಳಲ್ಲ ಅಂತಿದೀರಾ?. ಆ ವಯ್ಯನ ತಲೆ ಸ್ವಲ್ಪ ಹೊತ್ತು ಬ್ಲಾಂಕ್ ಆಯ್ತು, ಆಮೇಲೆ ಇಲ್ಲ ಒಂದ್ರೂಪಾಯಿ ಕೊಡ್ಬೇಕು ಅಂದ. ಸರಿ ಇನ್ನೇನು ಈತನ ಹತ್ರ ಮಾತಾಡೋದು ಅಂದು ಮತ್ತೆ ಕೆಳಗಿಳಿದು, ಸ್ವಲ್ಪ ದೂರ ನಡೆದು ಒಂದು ಅಂಗಡಿಯ ಬಳಿ ಹೋದೆ. ೧ ಶ್ಯಾಂಪೂ ಕೊಡಿ ಅಂದೆ ೩ ರೂಪಾಯಿದು. ೧೦ ರೂ ತೆಗೆದೆ. ಸಾರ್ ಚೇಂಜ್ ಇಲ್ಲ, ೩ ಕೊಡ್ಲಾ? ?????? ಸರಿ ಕೊಡಿ. ೧೦ರೋ ಕೊಟ್ಟೆ, ದುಡ್ಡು ತಗೊಂಡು ಶ್ಯಾಂಪೂ ಕೊಟ್ಟು ಒಂದು ಚಾಕಲೇಟ್ ಕೊಟ್ಟ. ಈ ೧ ರೂಪಾಯಿಗೆ ನಿಮ್ಮ ಹತ್ರ ಬಂದಿದ್ದು, ಈ ಚಾಕಲೇಟ್ ಬೇಡ. ಸಾರ್ ಚೇಂಜ್ ಇಲ್ಲ. ಹಾಗಿದ್ರೆ ಶ್ಯಾಂಪೂ ತಗೊಳ್ಳಿ ೧೦ ರೂ ಕೊಡಿ. ಅವ್ನು ಯಾಕೆ ಲಾಸ್ ಮಾಡ್ಕೊಳ್ಳೋದು ಅಂದ್ಕೊಂಡು ತಡೀರಿ ಸಾರ್ ಅಂದು ಪಕ್ಕದಲ್ಲಿ ಹರಟೆ ಹೊಡೆಯುತ್ತಿದ್ದ ಅವನ ಗೆಳೆಯನ ಹತ್ತಿರ ಕೇಳಿದ, ಅವ್ನು ಪರ್ಸ್ ತೆಗದು ಹುಡ್ಕಿ ಹುಡ್ಕಿ ಆಮೇಲೆ ೧ ರೂ ಕೊಟ್ಟ. ನಾನು ಮತ್ತೆ ವಾಪಸ್ ಎಲ್ ಐ ಸಿ ಆಫೀಸಿಗೆ ಹೋದೆ. ೧ ರೂ ಕೊಟ್ಟೆ. ನಿಮ್ಮಿಂದ ನಮ್ಗೆ ಸಮಸ್ಯೆ ನೋಡಿ, ಬರೋವಾಗ ಚೇಂಜ್ ಇಟ್ಕೊಂಡು ಬರ್ಬೇಕು. ಇಲ್ಲಾಂದ್ರೆ ನಮ್ಮ ಕೈನಿಂದ ಹಾಕ್ಬೇಕು, ನಮ್ಗೇನು ಅಂತ ದರ್ದು. ಕಡಿಮೆ ಆದ್ರೆ ಮೇಲಿನವ್ರು ಕೇಳ್ತಾರೆ ಏನೇನೋ ಕಥೆ ಶುರು ಮಾಡಿದ. ನೋಡಯ್ಯಾ, ಸಾಕು ಮಾತು ಸುಮ್ನೆ ಕಥೆ ಕುಯ್ಬೇಡ . ೧೦ ರೂ ಈಚೆ ಕೊಡು, ನಾನೇನಾದ್ರೂ ನಿಂಗೆ ಹೇಳಿದ್ರೆ ಆಗ ಮಾತಾಡು, ನಾನು ನನ್ನ ಕೆಲ್ಸ ನೀಟಾಗಿ ಮಾಡಿದೆ ತಾನೇ, ನೀನು ಹಾಗೆ ಮಾಡು ಅಂದು ೧೦ ರೂ ವಾಪಸ್ ತಗೊಂಡು ಬಂದೆ. (ಚಿತ್ರಕೃಪೆ: ಅಂತರ್ಜಾಲ)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಾ.. ಹಾ.. ಸಕತ್ ಕಾಮಿಡಿ. ಲೇಖನ ಚೆನ್ನಾಗಿದೆ ಚೇತನ್ರವರೆ, ದತ್ತಾತ್ರೇಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ಧನ್ಯವಾದ ದತ್ತಾತ್ರೇಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಅನುಭವ ಚೇತನ್ ರವರೇ, ಪೆಟ್ರೋಲ್ ಬಂಕ್ ನಲ್ಲು ಇದೇತರ ಮಾಡ್ತಾರೆ ಅದಕ್ಕೆ ನಾನು ರೌಂಡ್ ಫಿಗರ್ ದುಡ್ಡು ಕೊಟ್ಟು ಹಾಕಿಸಿ ಬಿಡ್ತಿನಿ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ <ಪೆಟ್ರೋಲ್ ಬಂಕ್ ನಲ್ಲು ಇದೇತರ ಮಾಡ್ತಾರೆ ಅದಕ್ಕೆ ನಾನು ರೌಂಡ್ ಫಿಗರ್ ದುಡ್ಡು ಕೊಟ್ಟು ಹಾಕಿಸಿ ಬಿಡ್ತಿನಿ> ಒಳ್ಳೆ ಕೆಲಸ ಇಲ್ಲಾಂದ್ರೆ ಚೇಂಜ್ ಹುಡುಕ್ತಾ ಇರಬೇಕಾಗತ್ತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

50 ಪೈಸೆ ಸ್ವೀಕರಿಸಲು ಒಪ್ಪದಿದ್ದರೆ ಕೇಸು ಹಾಕಬಹುದು! ಸಾವಿರಾರು ರೂ. ಖರ್ಚಾಗುತ್ತದೆ, ಅಷ್ಟೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಬೇಡ ಬಿಡಿ ಸುಮ್ನೆ ತಲೆನೋವು ಪ್ರತಿಕ್ರಿಯೆಗೆ ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕುರವರೆ ಹಿಡಿದ‌ ಪಟ್ಟು ಸಡಲಿಸದೆ ನಿಮ್ಮ್ ಕೆಲಸವನ್ನು ಸಖತಾಗಿ ಮಾಡಿದ್ದಿರಾ.. ನಮಗು ಬಸ್ ಅಥವಾ ಅಂಗಡಿಯಲ್ಲಿ ಈ ರೀತಿ ಎಷ್ಟೊಂದು ಬಾರಿ ಚಿಲ್ಲರೆ ಸಮಸ್ಯೆ ಕಾಡುತ್ತದೆ. ಒಂದು ಉಚಿತ ಸಲಹೆ LIC ಯಲ್ಲಿ ಪಾಲಿಸಿಯನ್ನು online ನಲ್ಲಿಸಹ ಕಟ್ಟಬಹುದು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ವೀರೇಂದ್ರವ್ರೆ <ಒಂದು ಉಚಿತ ಸಲಹೆ LIC ಯಲ್ಲಿ ಪಾಲಿಸಿಯನ್ನು online ನಲ್ಲಿಸಹ ಕಟ್ಟಬಹುದು> ನಾನು ಯಾವಾಗ್ಲೂ ಹಾಗೆ ಕಟ್ಟೋದು ಎಸ್ ಬಿ ಐ ನಿಂದ ಆದ್ರೆ ಫೈನ್ ಇತ್ತಲ್ವ ಹಾಗಾಗಿ ಅಲ್ಲಿಗೆ ಹೋಗಿದ್ದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕಾಸಿಗಾಗಿ ಚಿಕ್ಕುವಿನ ಪರದಾಟ ಎಂದಿದ್ದರೆ ಬರಹದ ಶೀರ್ಷಿಕೆ ಚೆನ್ನಾಗಿರುತ್ತಿತ್ತೇನೋ? ಚಿಕ್ಕ ಪ್ರಸಂಗವನ್ನು ಚೊಕ್ಕದಾಗಿ ನಿರೂಪಿಸುವುದು ಬಹುಶಹ ಚಿಕ್ಕೂಗೆ ಸಾಧ್ಯವೇನೋ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಶ್ರೀಧರವ್ರೆ ಸಕತ್ ಟೈಟಲ್ ನಿಮ್ಮ ಕಾಮ್ಪ್ಲಿಮೆಂಟ್ಸ್ಗೆ ಧನ್ಯವಾದ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಿದ್ರೆ ಶ್ಯಾಂಪೂ ತಗೊಳ್ಳಿ ೧೦ ರೂ ಕೊಡಿ. ಅವ್ನು ಯಾಕೆ ಲಾಸ್ ಮಾಡ್ಕೊಳ್ಳೋದು ಅಂದ್ಕೊಂಡು ತಡೀರಿ ಸಾರ್ ಅಂದು :())))) ಪಕ್ಕದಲ್ಲಿ ಹರಟೆ ಹೊಡೆಯುತ್ತಿದ್ದ ಅವನ ಗೆಳೆಯನ ಹತ್ತಿರ ಕೇಳಿದ, ಅವ್ನು ಪರ್ಸ್ ತೆಗದು ಹುಡ್ಕಿ ಹುಡ್ಕಿ ಆಮೇಲೆ ೧ ರೂ ಕೊಟ್ಟ. ---------------------------------------------------------------------------------------------------------- ಚೇತನ್ ಅವ್ರೆ- ಕೆಲವೊಮ್ಮೆ ಈ ಚಿಲ್ಲರೆ ಸಮಸ್ಯೆ- ಮಾಮೂಲಿನಲ್ಲಿ ನಾವ್ ಹೇಳೋ ಹಾಗೆ -ಅದಾ ಚಿಲ್ರೆ!! ಅನ್ನೋ ಹಾಗಿಲ್ಲ, ತಲೆ ಕೆಡಿಸಿಬಿಡುತ್ತೆ.... ಅಂತೂ ಛಲ ಬಿಡದ(ಚಹಾ ಸಹಾ ಬಿಡದ_) ಚಿಕ್ಕು ಚೇಂಜ್ ತಂದ--- ಅದನ್ನೇ ನಾವು(?) ಸಿನೆಮಾ ಮಾಡುವೆವು.... ಛಲ(ಚಹ) ಬಿಡದ ಚಿಕ್ಕು -ಶೀರ್ಷಿಕೆ ಆಡಿ ಬರಹ ಇವ ಸಾಮಾನ್ಯ ಅಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಸಪ್ತಗಿರಿಯವ್ರೆ ಹಾಗೆಲ್ಲಾ ಮಾಡ್ಬೇಡಿ ಫಿಲಂ ರಿಲೀಸ್ಗೆ ಮೊದ್ಲೇ ತೋಪೆದ್ದು ಹೋಗತ್ತೆ!!! ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳ ಪ್ರತಿಕ್ರಿಯೆಗೆ +1, ಶ್ರೀಧರ್ ಅವರ ಪ್ರತಿಕ್ರಿಯೆಗೆ +1, ಚೆನ್ನಾಗಿದೆ ಚಿಕ್ಕು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ಧನ್ಯವಾದ ಜಯಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಭವ ಚೆನ್ನಾಗಿದೆ ಒಮ್ಮೆ ಕೆಲವು ಅಂಗಡಿಯಲ್ಲಿ ಕೊಡುವ ಚಾಕಲೇಟ್ ಗಳನ್ನೆಲ್ಲ ಕೂಡಿಹಾಕಿ ಸುಮಾರು ಹತ್ತು ರುಪಾಯ ಆದ ಮೇಲೆ ಅದೇ ಅಂಗಡಿಯಲ್ಲಿ ಹತ್ತು ಚಾಕಲೇಟ್ ಕೊಟ್ಟು ಏನಾದರು ಖರೀದಿಸಿ ನೋಡೊಣ‌ *ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಪಾರ್ಥವ್ರೆ ಎಲ್ಲಾ ಬ್ಯುಸಿನೆಸ್ ನೋಡಿ. ಎಲ್ಲಾ ಕಡೆ ಮೋಸ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.