ಆರ್ ಕೆ ದಿವಾಕರ ರವರ ಬ್ಲಾಗ್

ಎಲ್ಲರೂ ಬೇಕು!

ಚುನಾವಣೆಯಲ್ಲಿ, ಮನಸ್ಸಿಗೊಪ್ಪುವ ಅಭ್ಯರ್ಥಿ ಇಲ್ಲವೆನಿಸಿದರೆ, ಯಾರೂ ಇಲ್ಲ ಎಂದು ಬರೆದುಕೊಡುವ ಆಯ್ಕೆಯೂ ಮತದಾರನಿಗಿದೆ ಎಂದು ಮಾಧ್ಯಮಗಳು, ತಲೆಗೆ ಹುಳ ಬಿಟ್ಟವು. ನಾಲ್ಕಾರು ಉತ್ಸಾಹಿಗಳು 'ಸೈ' ಎಂದು ಹೊರಟರು. ಬಹುತೇಕರಿಗೆ ನಿರಾಶೆ ಕಾದಿತ್ತು. ಈ ಹೊಸ ತಲೆನೋವಿನ ನಮೂನೆ, ಮತಗಟ್ಟೆಗಳಲ್ಲಿ ಸಾಮಾನ್ಯವಾಗಿ ಲಭ್ಯವಿರಲಿಲ್ಲ. ಈ ಅಯ್ಕೆಯೇ ಅರ್ಥವಿಲ್ಲದ್ದು. ನಾನು ವೋಟ್ ಮಾಡಲು ಹೋದಾಗ, ಬೇಕಾದ ಕನಿಷ್ಠ ಐವರು ಅಭ್ಯರ್ಥಿಗಳ ಹೆಸರು ಯಂತ್ರದಲ್ಲಿತ್ತು. ಹಾಗಂತ, ಎಲ್ಲರೂ ಬೇಕು ಎಂದು ಬರೆದುಕೊಡುವ ಅವಕಾಶವಿರುತ್ತದೆಯೇ; ಪ್ರಯೋಜನವಾಗುತ್ತದೆಯೇ? 'ಯಾರೂ ಬೇಡ' ಎನ್ನುವ ಕ್ಷಣಿಕ ಆವೇಶದಿಂದಲೂ ಅಷ್ಟೆ, ಕೊಳೆತು ನಾರುವ ರಾಜಕೀಯದ ತಿದ್ದಾಣಿಕೆಗೆ ಪರಿಹಾರವನ್ನೇನೂ ನೀಡಲಾರದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

’ವಿರೋಧ ವಿರೊಧೀ ಅಲೆ’

ಇತ್ತೀಚಿನ ಪಾರ್ಲಿಮೆಂಟ್ ನಡಾವಳಿ ಗಮನಿಸುತ್ತಿದ್ದೀರಾ? ಒಬ್ಬರು ಒಂದೊಂದಕ್ಕೆ ಒಟ್ಟೊಟ್ಟಿಗೇ ಕೂಗಾಡುತ್ತಾರೆ; ಯಾರು, ಏನು ಒತ್ತಾಯಿಸುತ್ತಿದ್ದಾರೆ ಎಂದು ಅರ್ಥವಾಗುವ ಮುನ್ನವೇ ಕೆಲವರು, ಯುದ್ಧಕ್ಕೆ ಬಂದಂತೆ ಅಧ್ಯಕ್ಷಾಸನದೆದುರು ಧಾವಿಸಿ ಬರುತ್ತಾರೆ. ಎರಡು ಗಂಟೆಯವರೆಗೆ ಕಲಾಪ ಮುಂದೂಡಲಾಗಿದೆ ಎಂದು ಸಾರಿ ಅಧ್ಯಕ್ಷರು ಎದ್ದುಹೋಗುತ್ತಾರೆ. ಊಟ ಮುಗಿಸಿಕೊಂಡು ಕೆಲ ಸದಸ್ಯರು ಸದನಕ್ಕೆ ಬರುತ್ತಾರೆ. ಅಧ್ಯಕ್ಷರು ಬರುತ್ತಿದ್ದಂತೆಯೇ ಇವರು ದೊಡ್ಡ ಗಂಟಲೆತ್ತುತ್ತಾರೆ. ಅಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡುತ್ತಾರೆ. ಏನೋ ದೊಡ್ಡ ಮಹರ್ಬಾನಿ ತೋರಿಸಿದಂತೆ, ಪ್ರತಿಪಕ್ಷದವರು ಧನವಿನಿಯೋಗ ಮಸೂದೆಗೆ ಅಡ್ಡಿ ಮಾಡಲಿಲ್ಲ. ‘ಏನಾದರೂ ಮಾಡಿಕೊಂಡು ಹಾಳಾಗಿಹೋಗಿ’ ಎಂಬರ್ಥದಲ್ಲಿ ಹೊರಗೋಡಿಹೋದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಸಮ್ಮಿಶ್ರವೆಂಬ ’ವ್ಯಭಿಚಾರ’ವನ್ನು ಚು.ಆ. ತಪ್ಪಿಸಲಿ

  ಇತ್ತೀಚಿಗಿನ ಬಹುತೇಕ ಚುನಾವಣೆಯಲ್ಲಿ ತ್ರಿಶಂಕು ಸದನಗಳೇ ಹುಟ್ಟಿಬರುತ್ತವೆ. ಪ್ರಜಾಸತ್ತೆಗೆ ಶಾಪವಾದ ಈ ಸನ್ನಿವೇಶ, ಚಿಲ್ಲರೆ ರಾಜಕಾರಣಿಗಳಿಗೆ ಹಬ್ಬ. ಚಿಲ್ಲರೆ ಪಕ್ಷಗಳಿಗೆ ಸ್ವಯಂ ಅಧಿಕಾರಕ್ಕಿಂತಾ ಹೆಚ್ಚಾಗಿ, ’ಬ್ಲಾಕ್‌ಮೇಲ್’ ಸರಕಾರವನ್ನು ಅಧಿಕಾರಕ್ಕೆ ತರುವುದೇ ಲಾಭದಾಯಕ ದಂಧೆ!
 ನಾನಾದರೋ ವೋಟ್ ಹಾಕುವುದು, ಅಭ್ಯರ್ಥಿಯ ಸದ್ಗುಣಗಳಿಗಷ್ಟೇ ಅಲ್ಲ, ಅವರ ಪ್ರಣಾಳಿಕೆಗೆ ಸಹ. ಮಹೋದಯರು, ಆ ಗುಣ-ನಿಲವುಗಳನ್ನೆಲ್ಲಾ ಇಲ್ಲೇ ಕಟ್ಟಿಟ್ಟು, ಪ್ರೇತದಂತೆ ಸದನ ಪ್ರವೇಶಿಸಿ, ಯಾವುದೋ ಫ್ರಂಟ್‌ಗೆ ಬೆಂಬಲ ಸೂಚಿಸುವುದಾದರೆ, ನನ್ನ ಆಯ್ಕೆ ಏನಾಯಿತು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ನಿಷೇಧಾತ್ಮಕ ವೊಟು; ಅದೊಂದು ಪ್ರಹಸನ

  ಹುರಿಯಾಳುಗಳ ಪೈಕಿ ಯಾರೂ ಅರ್ಹರಿಲ್ಲ ಎಂದು ಅಧೀಕೃವಾಗಿ ತಿರಸ್ಕರಿಸುವ ಅವಕಾಶ ಚುನಾವಣಾ ಕಾನೂನಿನಲ್ಲಿದೆಯಂತೆ. ಹಾಗೆಂದು ವಿಜಯ ಕರ್ನಾಟಕ  ಮಾಹಿತಿ ನೀಡಿದೆ.(ಏ. 27) ಇಂತಹ ಪ್ರಕ್ರಿಯೆ ಒಂದು ಪ್ರಹಸನವೆನ್ನದೆ ಅನ್ಯತ್ರವಿಲ್ಲ. ‘ಅರ್ಹರು ಯಾರೂ ಕಣದಲ್ಲಿಲ್ಲವೆಂದು, ಒಳ್ಳೆಯವರು ವೋಟ್ ಮಾಡಲು ಹೋಗುತ್ತಿಲ್ಲ; ಈ ಕಾನುನು ಅವರನ್ನು ಮತಗಟ್ಟೆಗೆ ಸೆಳೆಯುತ್ತದೆ’ ಎನ್ನುವುದು ಸಮಜಾಯಷಿ. ಇಂಥಾ ನಿರೀಕ್ಷೆಯೇ ಬಾಲಿಶ. ಇಡೀ ಚುನಾವಣೆಯನ್ನು ನಕಾರಗೊಳಿಸುವಷ್ಟು ಸಂಖ್ಯೆಯ ಪ್ರಜ್ಞಾವಂತ ಮತದಾರರನ್ನು ಒಗ್ಗೂಡಿಸುವುದು ಸಾಧ್ಯವಾದರೆ, ‘ಇಲ್ಲ’, ‘ಬೇಡ’ಗಳ ನಿಷೇಧಾತ್ಮಕ ಸಾಮ್ರಾಜ್ಯವದರೂ ಏಕೆ? ಆ ನಾಯಕನನ್ನೇ ಕಣಕ್ಕಿಳಿಸಿ ಗೆಲ್ಲಿಸಬಾರದೇ?! ನಿಜವಾದ ಎಡವಟ್ಟಿರುವುದು ಇಲ್ಲಿ. ಎಲ್ಲೆಂದರೆ, ಕ್ಷೇತ್ರದ ಶೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಯಾಪಾಟಿ ಹಳೆಯದಾದರೇನಂತೆ?

 ಏಪ್ರಿಲ್ 20 ವಿಜಯ ಕನಾಟಕ  ಪತ್ರಿಕೆಯಲ್ಲಿ, ಡಿ ಎನ್ ಶಂಕರಭಟದಟರ ಲೇಖನವೊಂದಿದೆ. ಇದರಲ್ಲಿ ಅವರು ತಮ್ಮನ್ನೇ  'ಎಲ್ಲ ಕನ್ನಡಿಗರು' ಕರೆದುಕೊಂಡಿದ್ದಾರೋ ಎನಿಸುತ್ತದೆ. ಅದರಲ್ಲಿನ ಅವರ ‘ಕೆದುಕು’ (ಸಂಶೋಧನೆ), ನಲ್ಮೆಯಿಂದಲೇ ಕೂಡಿರಬಹುದು. ಆದರೂ ಒಟ್ಟು ಕನ್ನಡದ ಬಲ್ಮೆಗೆ ಇದು ಹೆಚ್ಚಿನದೇನನ್ನೂ ಕೊಟ್ಟಿರುವಂತಿಲ್ಲ. ಆದರೂ ಆದ ಮಟ್ಟಿಗೂ ಕನ್ನಡದ ಮಾತು ಮತ್ತು ಬರವೆಯಲ್ಲಿ ತನ್ನದೇ ಅನ್ನುಗಳನ್ನು ಹೂಡಬೇಕೆಂಬ, ಅವರ ತುಡಿತ, ಬರಮಾಡಿಕೊಳ್ಳತಕ್ಕದ್ದಾಗಿದೆ. ಆದರೆ ನಮ್ಮೆಲ್ಲರ ಹೊಸಗನ್ನಡವನ್ನು, ಸಂಸ್ಕೃತದ ಅನ್ನು-ಆಡುಗಳು ಬೋ ಪಾಟಿ, ಕಿತ್ತಲಾಗದಂತೆ ಹಿಡುದುಕೊಂಡಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - ಆರ್ ಕೆ ದಿವಾಕರ ರವರ ಬ್ಲಾಗ್