ಆಗಾಗ ಅಲುಗಾಡುವ ಎಲೆ!

4
೧ ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ ಮೈಮುಟ್ಟದ೦ತೆ ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ ನಡು ಭಾಗವನ್ನಾವರಿಸಿಯೂ ಹನಿಯೊ೦ದು ಸೋತು ಕೈ ಚೆಲ್ಲಿತು!! ೩ ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು! ೪ ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು ಸುಖದಿ೦ದ ಮೈಮರೆಯಲು ಯತ್ನಿಸಿದರೂ ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ! ೫ ಹನಿಗಳೊ೦ದಿಗಿನ ಪಯಣವನ್ನು ಹನಿ-ಹನಿಯಾಗಿ ಮರೆತುಬಿಡುವಷ್ಟರಲ್ಲಿ ಮತ್ತೊ೦ದಿಷ್ಟು ಹನಿಗಳು ಒಟ್ಟಿಗೇ ಮಡಿಲಿಗೆ ಬಿದ್ದವು!!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರವರೇ, ವಿಭಿನ್ನ ಹಾಗು ಸುಂದರ ಹನಿಗಳು. ಕೊಟ್ಟಿದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ತೇಜಸ್ವಿ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ಹನಿಗಳ ಬಗ್ಗೆ ಸು೦ದರ ಹನಿಗಳು. ಅದರಲ್ಲೂ ಎರಡನೇ ಹನಿಗಳ೦ತೂ ಅದ್ಭುತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಜಯ೦ತರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ ಮೈಮುಟ್ಟದ೦ತೆ ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ ನಡು ಭಾಗವನ್ನಾವರಿಸಿಯೂ ಹನಿಯೊ೦ದು ಸೋತು ಕೈ ಚೆಲ್ಲಿತು!! ನಿಸರ್ಗದ ರೋಮಾನ್ಸ್ ರಸಮಯವಾಗಿದೆ, ರಾಘವೇಂದ್ರ. ಈ ಬಿಸಿಲ ಬೇಗೆಯ ಸಮಯದಲ್ಲಿ ಮಳೆ ಹನಿಯ ನೆನಪಾಗಲು ಕಾರಣ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ... ಹೀಗೆಯೇ ನುಣುಪು ಮೈಯ.... ಹನಿಗಳು ಎಲ್ಲಾ ಈ ಬೇಸಿಗೆ ಕಾಲದಲ್ಲಿಯೂ ನೆನಪಾಗುವ೦ಥಹವೇ ಅಲ್ಲವೇ ಭಯ್ಯಾ!! ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಸಭರಿತ, ಸುರಸ ಕಲ್ಪನೆಗೆ ಧನ್ಯವಾದ, ನಾವಡರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹಿರಿಯರೇ. ನಿಮ್ಮ ಮೆಚ್ಚುಗೆಗೆ ನಾನು ಆಭಾರಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೪ ಮತ್ತು ೫ ಕ್ಕೆ ಬೇರೆ ಬೇರೆ ಅರ್ಥಗಳನ್ನು ಕೊಡಬಹುದು. ಅದಕ್ಕಾಗಿ ಇಷ್ಟವಾದವು. ಕೋರಂ ಅಂದರೆ ಏನು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಆಚಾರ್ಯರೇ.. ಕೋರ೦ ಎ೦ದರೆ ಗು೦ಪಿನ ಸದಸ್ಯರ ಹಾಜರಾತಿಯ ಕೊರತೆ! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು! ೪ ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು ಸುಖದಿ೦ದ ಮೈಮರೆಯಲು ಯತ್ನಿಸಿದರೂ ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ! ----------------------------------------------------------- ನಾವಡ ರೆ ಪ್ರಕೃತಿಯ ರಮ್ಯ ವರ್ಣನೆ.. ಶೃಂಗಾರಮಯ ೨ ನೆ ಸಾಲು ತುಟಿಯಲ್ಲಿ :()) ಲಾಸ್ಯವಾದುವಂತೆ ಮಾಡಿತು... ಸೌಂದರ್ಯ ನೋಡುವವರ ಕಣ್ಣಲ್ಲಿದೆ- ನಿಜ -ನಿಜ... ನನಗೆ ಕವನ ಬಹು ಹಿಡಿಸಿತು... ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸರೇ.. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಶಿಶಿರದ ನಂತರ ವಸಂತನಾಗಮನವಾಗಿದೆ... ನಂದನ ಸಂವತ್ಸರದಲ್ಲಿ ಮನ ನಂದನವನವಾಗಿದೆ. ಸಂತಸವಾಯ್ತು! ಶುಭಮಸ್ತು! -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ.. ನಿಮ್ಮ ಆಶೀರ್ವಾದ ಮೆಚ್ಚುಗೆ,ಹಾರೈಕೆಗಳಿದ್ದಮೇಲೆ ನನ್ನಲ್ಲಿ ವಸ೦ತನಾಗಮನವಾಗಲೇಬೇಕು. ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಚಿರರುಣಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡರೆ ನಮಸ್ಕಾರಗಳು. ಇತ್ತೀಚೆಗೆ ಮಾತೃ ವಿಯೋಗದಿಂದ ಉಂಟಾದ ದುಃಖವನ್ನು ಮರೆತು ತಾವು ಪುನಃ ಸಂಪದ ಅಂಗಳಕ್ಕೆ ಬಂದಿರುವುದು ನಮಗೆ ಸಂತೋಷ ವಾಗಿದೆ. ಹನಿಗಳ ಕುರಿತಾದ ತಮ್ಮ ಆಲೋಚನ ಲಹರಿ ಎಷ್ಟೊಂದು ಸುಂದರ! ಮೇಲೆ ಮೇಲೆ ಓದಬೇಕೆನಿಸುತ್ತದೆ. ಸರಳವಾಗಿ ಅರ್ಥಗರ್ಭಿತವಾಗಿ ಕವನವನ್ನು ರಚಿಸಿದ್ಧೀರಿ. ತಮ್ಮ ಈ ಹುರುಪನ್ನು ಸದಾ ಉಳಿಸಿಕೊಳ್ಳಿ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆಗೆ ಧನ್ಯವಾದಗಳು ಹಿರಿಯರೇ.. ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು ಸುಖದಿ೦ದ ಮೈಮರೆಯಲು ಯತ್ನಿಸಿದರೂ ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ! ಸಿ೦ಪ್ಲಿ ಸುಪೆರ್ರ್ ರಘುರವರೇ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಹನಿಗಳಿ೦ದ ನೀವು ಖುಷ್ ಆದರೆ ನಾನೂ ಖುಷ್ ಸತೀಶರೇ! ಆಗಲೇ ನನ್ನ ಶ್ರಮ ಸಾರ್ಥಕವಾಗುವುದು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.