ಆಕಳಿಕೆ

5

ಆಕಳಿಕೆ

ಆ....ಆ.....
ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ.

ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ ಆಕಳಿಸುವ ಈ ಕ್ರಿಯೆ ಅಂಟುಜಾಡ್ಯವಂತೂ ಹೌದು.

ತುಂಬಾ ನಿದ್ದೆಗೆಟ್ಟಾಗ, ನಿದ್ದೆಗೆ ಮುಂಚೆ ನಿದ್ದೆಯ ನಂತರ ಹೀಗೆ ಕಾಡುವ ಆಕಳಿಕೆ ಬರುವದಾದರು ಏತಕ್ಕೆ ಎಂಬುದು ಯಾರಿಗು ತಿಳಿಯದು. ಹಿಂದಿನ ದಿನ ಅತಿಯಾದ ಶ್ರಮಪಟ್ಟಿದ್ದರೆ, ನಿದ್ದೆಗೆಟ್ಟಿದ್ದರೆ ಹೀಗೆ ಕೆಲವೊಮ್ಮೆ ಆಕಳಿಕೆ ಬರುವುದು ಉಂಟು. ನಿದ್ದೆ ಜಾಸ್ತಿಮಾಡಿದ ನಂತರವೂ ಈ ಆಕಳಿಕೆ ಕಾಡುವುದುಂಟು!  ಅತಿಯಾದ ಮೈಕೈ ನೋವಿನಿಂದ ದೇಹವನ್ನು ಸಡಿಲಗೊಳಿಸಲು ಸಹ ಆಕಳಿಕೆ ಬರುವುದು ಉಂಟು.

ಮನುಷ್ಯನಷ್ಟೆ ಅಲ್ಲ ಹಲವು ಪ್ರಾಣಿಗಳು ಸಹ ಆಕಳಿಸುವದನ್ನು ನಾನು ಕಾಣಬಹುದು.

ವಿಚಿತ್ರ ಎಂದರೆ ಮಗು ಹುಟ್ಟುವ ಮುಂಚೆ , ತಾಯಿಯ ಗರ್ಭದಲ್ಲಿದ್ದಾಗಲೆ ಆಕಳಿಸುತ್ತ ಇರುತ್ತದೆ.,ಈ ಪುಟದಲ್ಲಿರುವ ವೀಡಿಯೋ ನೋಡಿ 
 http://en.wikipedia.org/wiki/Yawn

ಇಂತಹ ಅಂಟುಜಾಡ್ಯ ಆಕಳಿಕೆ ಕಾರಣಗಳು ಏನು !

ಮನುಷ್ಯನ ದೇಹದ ರಕ್ತದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಜಾಸ್ತಿಯಾದಾಗ ಆಕಳಿಕೆ ಬರುತ್ತದೆ ಎನ್ನುತ್ತದೆ ಒಂದು ಪ್ರಯೋಗ. ಹಾಗೆಂದು, ಅದನ್ನು ಪೂರ್ತಿ ಪ್ರಮಾಣಿಕರಿಸಲು ಸಾದ್ಯವಾಗಿಲ್ಲ. ದೇಹಕ್ಕೆ ಆಮ್ಲಜನಕ ಒದಗಿಸಿದಾಗಲು ಆಕಳಿಕೆ ನಿಂತಿಲ್ಲ.ಪ್ರಾಣಿಗಳಲ್ಲಿ ಆಕಳಿಕೆಯನು ಇತರ ಪ್ರಾಣಿಗಳಿಗೆ ರವಾನಿಸುವ ಎಚ್ಚರಿಕೆ ಎಂದು ಭಾವಿಸಲಾಗುತ್ತದೆ, ಆದರೆ ಆಕಳಿಕೆಗೆ ಇಂತದೇ ಎಂದು ನಿಶ್ಚಿತ ಕಾರಣವನ್ನು ಊಹಿಸಲಾಗಿಲ್ಲ.
ಮತ್ತೊಂದು ಕಾರಣ ಮೆದುಳಿನಲ್ಲಿ ಹೆಚ್ಚಾಗುವ ಸೆರೋಟಿನಿನ್ , ಡಿಪೋಮೈನ್ ನಂತಹ ರಸಾಯನಿಕಗಳು ಇರಬಹುದು ಎನ್ನುತ್ತದೆ ಅನ್ವೇಷಣೆ.ಏಂಡೋರ್ಫಿನ್ಸ್ ನಂತಹ ರಸಾಯಿನಿಕಗಳು ಆಕಳಿಕೆಯನ್ನು ತಡೆಗಟ್ಟುತ್ತದೆ ಎನ್ನಲಾಗುತ್ತದೆ.

ಆಕಳಿಕೆಯ ವೈಚಿತ್ರ್ಯ ಎಂದರೆ ಇದರ ಸಾಂಕ್ರಾಮಿಕತೆ, ಎದುರಿಗೆ ಇರುವ ವ್ಯಕ್ತಿ ಸತತವಾಗಿ ಆಕಳಿಸುತ್ತ ಇದ್ದಲಿ, ನಮಗೂ ಅದೂ ಕಾಡುತ್ತದೆ.
ಆಕಳಿಕೆಯ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಮನುಷ್ಯನಲ್ಲದೆ ಹಲವು ಸಾಕು ಪ್ರಾಣಿಗಳು, ಪಕ್ಷಿಗಳು, ಕಡೆಗೆ ಮೀನು ಸಹ ಆಕಳಿಸುತ್ತದೆ ಎನ್ನುತ್ತದೆ ಕೆಲವು ಪ್ರಯೋಗಗಳು.! ಮನಸಿಗೆ ಹೆಚ್ಚು ಆಕರ್ಷಕವಲ್ಲದ ವಿಷಯಗಳನ್ನು ತುರುಕಹೊರಟಾಗ ಆಕಳಿಕೆ ಬರುತ್ತದೆ,  ಹೆಚ್ಚು ಗಹನವಾದ ವಿಷಯಗಳನ್ನು ಕೇಳುತ್ತಿರುವಾಗ ನಮಗೆ ಏಕಾಗ್ರತೆ ಇಲ್ಲದಾಗಲು ಆಕಳಿಕೆ ಬರುತ್ತದೆ,
ಹೀಗಾಗೆ ವಿಧ್ಯಾರ್ಥಿಗಳಿಗೆ ಕ್ಲಾಸ್ ರೂಮಿನಲ್ಲಿ ಹೆಚ್ಚು ಹೆಚ್ಚು ಆಕಳಿಕೆ!
 
ಸತತವಾಗ ಆಕಳಿಸುವ ಚಿತ್ರಗಳನ್ನು ವಿಡಿಯೋಗಳನ್ನು ತೋರಿಸಿದರೆ  ಆಗಲೂ ಸಹ ಆಕಳಿಕೆ ಬರುತ್ತದೆ ಎಂದು ಪ್ರಯೋಗಸಿದ್ದವಾಗಿದೆ.

ಕೊಂಚ ಕುತೂಹಲದ ವಿಷಯ, ನಮ್ಮ ಪೌರಾಣಿಕ ಕತೆಗಳ ಪ್ರಕಾರ ಬ್ರಹ್ಮ ಆಕಳಿಸಿದಾಗ ನಾಲಕ್ಕು ವೇಧಗಳು ಕಳೆದುಹೋದವು ಅದನ್ನು ಹಿಂದೆ ತರಲು ವಿಷ್ಣು ಸಾಹಸಪಡಬೇಕಾಯಿತು.
ಆಕಳಿಕೆಯ ಬಗ್ಗೆ ಕೆಲವು ಮೂಡನಂಭಿಕೆಗಳು ಸಹ ಇವೆ. ಆಕಳಿಸುವಾಗ ಆತ್ಮ ಅಥವ ಒಳ್ಳೆಯ ಶಕ್ತಿಗಳು ಹೊರಹೋಗುವದಾಗಿ, ಕೆಟ್ಟ ಶಕ್ತಿಗಳು ದೇಹದ ಒಳ ಪ್ರವೇಶಮಾಡುವದಾಗಿ ಕೆಲವು ಕಡೆ ನಂಬುವರಂತೆ.
ಹಾಗೆ ಮಂತ್ರೋಚ್ಚಾರಣೆ , ಕೆಟ್ಟ ಶಕ್ತಿಗಳನ್ನು ಉಚ್ಚಾಟಿಸುವಾಗ ಸಹ ಆಕಳಿಕೆ ಬಂದರೆ ಅದು ಮಂತ್ರದ ಪ್ರಭಾವವೆ ಎಂದು ನಂಬುತ್ತಾರೆ. ಹೀಗೆ  ಆಕಳಿಕೆಯ ಬಗ್ಗೆ  ಅನಾದಿಕಾಲದಿಂದ ದಾಖಲಾಗಿರುವಂತಿದೆ
ಏನು ಈ ಬರಹವನ್ನು ಓದುತ್ತ ಓದುತ್ತ ನೀವು ಸಹ....
ಆ.........
ಛೇ ! ಸಾಕು ಬಿಡಿ!   ಇಲ್ಲಿಗೆ ನಿಲ್ಲಿಸುವೆ ! 

ಚಿತ್ರಗಳೆಲ್ಲ : http://2.bp.blogspot.com/-goT_gnKJT_s/UvTLMeFVzxI/AAAAAAAAE4M/XrNnE7G8Fv...(1).jpg

http://3.bp.blogspot.com/-3OLizRvf-Wc/UvTLMeSTaXI/AAAAAAAAE4Q/PX3jYUoerZ...(2).jpg

http://1.bp.blogspot.com/-dpYL-DLzvPg/UvTLO1FWBsI/AAAAAAAAE5A/tkGPVnzkwH...(3).jpg

http://2.bp.blogspot.com/-ZS74RtIIfsc/UvTLNHep9SI/AAAAAAAAE4c/zy5p2nP5BT...(4).jpg

http://3.bp.blogspot.com/-lgphDEKoAto/UvTLNCo0hnI/AAAAAAAAE4g/fhqZKwk02G...

http://2.bp.blogspot.com/-CM42Pl51CK4/UvTLNyjSzRI/AAAAAAAAE4s/1sOpG2WpLe...(1).jpg

http://4.bp.blogspot.com/-Q_jecM9IJBo/UvTLOK7K2RI/AAAAAAAAE4w/UncIV39Blw...(2).jpg

http://1.bp.blogspot.com/-FEpAgeK3N4A/UvTLOgQErII/AAAAAAAAE5E/zbq8ex8Euu...(3).jpg

http://2.bp.blogspot.com/-Ewi8UkN1Td4/UvTLO67E3QI/AAAAAAAAE5I/g7Anisy8sv...(4).jpg

http://2.bp.blogspot.com/-cGR4cTU5vD0/UvTLPnsKZ-I/AAAAAAAAE5o/SybFohGGBy...(5).jpg

http://3.bp.blogspot.com/-SmrYOYOtsZE/UvTLP0DxwuI/AAAAAAAAE5c/cfgqRxJz7D...(6).jpg

http://4.bp.blogspot.com/-hhk8Kg3Yuqo/UvTLPxEMP-I/AAAAAAAAE5Y/eCfyomB16p...

ಬ್ಲಾಗ್ ವರ್ಗಗಳು: 
Taxonomy upgrade extras: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಅಹಾಆಆಆಆಆಆಅ ಅ
ಪಾರ್ಥರೆ, ಚಿತ್ರಗಳನ್ನು ನೋಡಿದ ಮೇಲೆ ಆಕಳಿಕೆ ತಡೆಯಲಾಗುತ್ತಿಲ್ಲಾಆಆಆಆಆಆಆಆಆಆಆಆಆಆಆ...........

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ - ಆಕಳಿಕೆ ಒಂದು ರೋಗವೇನೋ ಎಂದು ಎಸ್ಟೋ ಸಾರಿ ಎಂದುಕೊಂಡಿರುವೆ ...!! ಕಾರಣ ಆಕಳಿಕೆ ಸ್ಪರ್ಧೆ ನಡೆದರೆ ಅಲ್ಲಿ ನನಗೆ ಡಿಸ್ಟಿಂಕ್ಚನ್ ,,,!! ದಿನದ ಬಹು ಹೊತ್ತು ಆಕಳಿಸೋದೆ ನಂ ಉದ್ಯೋಗ...!!
ಎದುರಿಗಿರುವವರು ಆಕಳಿಸಿದರೆ ಅದು ನೋಡುವವರಿಗೂ ಆಕಳಿಕೆ ಬರುವುದು ಎಂದು ಹಿಂದೆ ಒಮ್ಮೆ ತೆಲುಗಿನ ಮಲ್ಲಾದಿ ವೆಂಕಟಕೃಷ್ಣ ಅವರ ಕಾದಂಬರಿ ಒಂದರಲ್ಲಿ ಓದಿದ್ದೆ .. ಅದು ನಿಜ ಎಂಬುದು ಈಗ ದಿನ ನಿತ್ಯ ಅನುಭವವಾಗುತ್ತಿದೆ ಬಸ್ಸಿನಲ್ಲಿ ಎದುರು ಸೀಟಲೀ ಕೂತವರ ನೋಡ್ವಾಗ..!! ಆಕಳಿಕೆ ಚಿತ್ರಗಳು ;()))
ಪುಟ್ಟ ಮಕ್ಕಳ ಆಕಳಿಕೆ ನೋಡಲು ಭಲೇ ಸೊಗಸು ..
ಈ ಬರಹ ಓದುವಾಗ ಮಾತ್ರ ಆಕಳಿಕೆ ಬರಲಿಲ್ಲ ...!!
ಶುಭವಾಗಲಿ
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಕಳಿಕೆ ರೋಗವಲ್ಲ ವೆಂಕಟೇಶ್ ಅದು ಸೋಮಾರಿತನದ‌ ಲಕ್ಷಣ‌ :‍)
ಅಪರೂಪಕ್ಕೊಮ್ಮೆ ನಿಮ್ಮ ಪ್ರತಿಕ್ರಿಯೆ ನೋಡಿ ಖುಶಿ ಆಯಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆಂದು ನಿದ್ದೆ ಮಾಡಿ ಬಿಟ್ಟಿರಾ ?? ಗಣೇಶರೆ! :‍)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಾ ಸಾರ್,
ಆಕಳಿಕೆಯ ಬಹುರೂಪಿ ಚಿತ್ರಣ ಚೆನ್ನಾಗಿದೆ. ಮನುಷ್ಯರಿಂದ ಮನುಷ್ಯರಿಗೇನೊ ಅಂಟುರೋಗ -  ಹಾಗೆಯೆ ಪ್ರಾಣಿಗಳಿಂದ ಮನುಷ್ಯರಿಗೆ (ಅಥವಾ ಮನುಷ್ಯರಿಂದ ಪ್ರಾಣಿಗಳಿಗೆ) ಇದು ಅಂಟು ರೋಗದಂತೆ ಕೆಲಸ ಮಾಡುತ್ತದೆಯೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗೇಶ್ ನಮಸ್ಕಾರ , ಅಂಟುರೋಗ‌ ಅನ್ನುವುದು ಬಹುಶಹ ಮನಸಿಗೆ ಸಂಬಂದಿಸಿ ಇರಬಹುದು. ಹಾಗಾಗಿ ಮನುಷ್ಯರ ಆಕಳಿಕೆ ನೋಡಿದಾಗ‌ ಬರುವ‌ ಆಕಳಿಕೆ ಪ್ರಾಣಿಗಳನ್ನು ನೋಡುವಾಗ‌ ಬರುವದಿಲ್ಲ , ಪ್ರಾಣಿಗಳನ್ನು ನೋಡುವಾಗ‌ ನಿಮಗೆ ಆಕಳಿಕೆ ಕಡೆ ಗಮನ‌ ಇರುವದಿಲ್ಲ ಅನ್ನಿಸುತ್ತೆ. ಸಿಂಹವನ್ನು ನೋಡುವಾಗ‌ ನಮಗೆ ಕುತೂಹಲ‌ ಇರುತ್ತದೆ ಹಾಗಾಗಿ ಆಕಳಿಕೆ ಬರುವ‌ ಸಂಬವ‌ ಕಡಿಮೆ :‍)
ಪಾರ್ಥಸರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿ ಯವರಿಗೆ ವಂದನೆಗಳು
ಆಕಳಿಕೆ ಕುರಿತ ಲೇಖನ ಬಹಳ ಸಮೃದ್ಧವಾಗಿ ಮೂಡಿ ಬಂದಿದೆ. ವೈಜ್ಞಾನಿಕ, ಪೌರಾಣಿಕ ಮತ್ತು ನಂಬಿಕೆಗಳ ಆಧಾರದಲ್ಲಿ ಆಕಳಿಕೆ ಕುರಿತ ಮಾಹಿತಿ ಗೊತ್ತಿಲ್ಲದ ವಿಷಯಗಳನ್ನು ತಿಳಿಯುವಂತೆ ಮಾಡಿದೆ. ಚಿತ್ರಗಳ ಆಯ್ಕೆ ಲೇಖನದ ಗಹನತೆಯನ್ನು ಹೆಚ್ಸಿಸಿವೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟಿಲರಿಗೆ ವಂದನೆಗಳು :‍)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.